ಉಡುಪಿಯಲ್ಲಿ CNG ಇಂಧನ ಕೊರತೆ: ಸರತಿ ಸಾಲಿನಲ್ಲಿ ನಿಂತ ವಾಹನಗಳು!

ಕರಾವಳಿ ಪ್ರದೇಶದ ಉಡುಪಿ ಜಿಲ್ಲೆಯಲ್ಲಿ ಸಿಎನ್ ಜಿ ಇಂಧನ ಕೊರತೆಯ ಪರಿಣಾಮ ವಾಹನಗಳು ಸರಿತಿ ಸಾಲಿನಲ್ಲಿ ನಿಂತಿವೆ.
ಸಿಎನ್ ಜಿ (ಸಾಂಕೇತಿಕ ಚಿತ್ರ)
ಸಿಎನ್ ಜಿ (ಸಾಂಕೇತಿಕ ಚಿತ್ರ)online desk

ಕರಾವಳಿ ಪ್ರದೇಶದ ಉಡುಪಿ ಜಿಲ್ಲೆಯಲ್ಲಿ ಸಿಎನ್ ಜಿ ಇಂಧನ ಕೊರತೆಯ ಪರಿಣಾಮ ವಾಹನಗಳು ಸರಿತಿ ಸಾಲಿನಲ್ಲಿ ನಿಂತಿವೆ. ಉಡುಪಿ ಜಿಲ್ಲೆಯ ಭಾಗದಲ್ಲಿ ಸಿಎನ್ ಜಿ ಇಂಧನ ಆಧರಿತ ವಾಹನಗಳು ಹೆಚ್ಚುತ್ತಿದ್ದರೂ ಸಿಎನ್ ಜಿ ಇಂಧನ ಸ್ಟೇಷನ್ ಗಳು ಉಡುಪಿ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿವೆ.

ಈಗಿರುವ ಬಂಕ್ ಗಳಲ್ಲಿ ಪೂರೈಕೆ ಬೇಡಿಕೆಗೆ ಅನುಗುಣವಾಗಿಲ್ಲ. ಈ ಕಾರಣದಿಂದಾಗಿ ಆಟೋರಿಕ್ಷಾ ಚಾಲಕರು ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಿದೆ.

ಸಿಎನ್ ಜಿ (ಸಾಂಕೇತಿಕ ಚಿತ್ರ)
ಸಿಎನ್ ಜಿ, ಪೈಪ್ ಮೂಲಕ ಸರಬರಾಜು ಮಾಡುವ ಅಡುಗೆ ಅನಿಲ ಬೆಲೆ 3 ರೂ. ಏರಿಕೆ

ನಾನು ಕಳೆದ ವಾರದಿಂದ ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ಪ್ರತಿ ದಿನ 4-5 ಗಂಟೆಗಳ ಕಾಲ ಕಾಯುತ್ತೇನೆ. ಹಲವು ಸಂದರ್ಭಗಳಲ್ಲಿ ನನ್ನ ವಾಹನ ನಿಂತಲ್ಲೇ ಇರುತ್ತದೆ, ಯಾವುದೇ ಗ್ರಾಹಕರು ಲಭ್ಯವಾಗುತ್ತಿಲ್ಲ. ಇದು ನನ್ನ ಆದಾಯದ ಮೇಲೆ ಪರಿಣಾಮ ಬೀರುತ್ತಿದ್ದು, ಇದೇ ರೀತಿ ಮುಂದುವರೆದರೆ ಬ್ಯಾಂಕ್ ಸಾಲ ಮರುಪಾವತಿ ಮಾಡುವುದು ಕಷ್ಟವಾಗಲಿದೆ ಎಂದು ಆಟೋ ರಿಕ್ಷಾ ಚಾಲಕ ಸುಂದರ್ ಶೆಟ್ಟಿ ಹೇಳಿದ್ದಾರೆ.

ಈಗಿರುವ ಬಂಕ್‌ಗಳಿಗೆ ಬೇಡಿಕೆಗೆ ಅನುಗುಣವಾಗಿ ಸಿಎನ್‌ಜಿ ಇಂಧನ ಪೂರೈಕೆಯಾಗುತ್ತಿಲ್ಲ. ಮತ್ತು ಬೇಡಿಕೆ ಹೆಚ್ಚಿರುವುದರಿಂದ, ಸ್ಟಾಕ್ ತ್ವರಿತವಾಗಿ ಖಾಲಿಯಾಗುತ್ತದೆ ಮತ್ತು ಕೆಲವೊಮ್ಮೆ ರಿಕ್ಷಾಗಳು ಮುಂಜಾನೆ ಇಂಧನ ತುಂಬಲು ಸರದಿಯಲ್ಲಿ ರಾತ್ರಿಯಿಡೀ ನಿಲ್ಲುತ್ತವೆ ಎಂದು ಸಿಎನ್‌ಜಿ ಆಟೋರಿಕ್ಷಾ ಚಾಲಕರ ಸಂಘದ ಮುಖಂಡರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com