ಶೀಘ್ರದಲ್ಲೇ ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಿವಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ

ಲಕ್ಷ್ಮೇಶ್ವರದ ಮುಕ್ತಿ ಮಂದಿರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆ ನನೆಗುದಿಗೆ ಬಿದ್ದಿದೆ. ಇದಕ್ಕೆ ಎಲ್ಲಾ ಕಾರಣ ದುಡ್ಡೇ ದೊಡ್ಡಪ್ಪ. ಲಿಂಗ ಸ್ಥಾಪನೆಗೆ ಸುಮಾರು 15 ಕೋಟಿ ರೂ. ಹಣ ಬೇಕು ಎಂದರು.
Dk Shivakumar
ಡಿ.ಕೆ ಶಿವಕುಮಾರ್
Updated on

ಗದಗ: ಆದಷ್ಟು ಬೇಗ ಡಿಸಿಎಂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ. ಅವರನ್ನು ಸಿಎಂ ಮಾಡಿ ಈ ಮುಕ್ತಿಮಂದಿರ ಜಾಗಕ್ಕೆ ಕರೆದುಕೊಂಡು ಬಂದು ತ್ರಿಕೋಟಿ ಲಿಂಗ ಸ್ಥಾಪನೆ ಮಾಡಿದರು ಎಂದು ನಾಡಿಗೆ ತೋರಿಸೋಣ ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ರಾಜದೇಶಿಕೇಂದ್ರ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮಿಜೀ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯ ಲಕ್ಷ್ಮೇಶ್ವರದ ಮುಕ್ತಿ ಮಂದಿರದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಬದಲಾವಣೆ ತೀವ್ರ ಚರ್ಚೆ ಸಂದಿಗ್ಧ ಸಂದರ್ಭದಲ್ಲಿ ಸ್ವಾಮಿಜಿ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಲಕ್ಷ್ಮೇಶ್ವರದ ಮುಕ್ತಿ ಮಂದಿರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆ ನನೆಗುದಿಗೆ ಬಿದ್ದಿದೆ. ಇದಕ್ಕೆ ಎಲ್ಲಾ ಕಾರಣ ದುಡ್ಡೇ ದೊಡ್ಡಪ್ಪ. ಲಿಂಗ ಸ್ಥಾಪನೆಗೆ ಸುಮಾರು 15 ಕೋಟಿ ರೂ. ಹಣ ಬೇಕು ಎಂದರು.

ರಾಜಕೀಯ ಮುತ್ಸದ್ಧಿ, ಶ್ರೀಮಠ ಮಗನಾದ ಗಂಗಾಧರ ಶಿವಾಚಾರ್ಯರ ಆಶಿರ್ವಾದ ಪಡೆದ ಡಿಸಿಎಂ ಡಿಕೆಶಿ ಗಮನಕ್ಕೆ ತ್ರಿಕೋಟಿ ಲಿಂಗ ಸ್ಥಾಪನೆ ಬಗ್ಗೆ ಹೇಳಲಾಗಿದೆ. ವೀರಗಂಗಾಧರ ಜಗದ್ಗುರುಗಳ ಮೇಲೆ ಡಿಕೆಶಿ ಅಪಾರವಾದ ಭಕ್ತಿ ನಂಬಿಕೆ ಹೊಂದಿದ್ದಾರೆ. ಲಿಂಗ ಸ್ಥಾಪನೆಗೆ ಬೇಕಾಗುವ ಕೋಟ್ಯಂತರ ರೂಪಾಯಿ ಅನುದಾನ ಕಲ್ಪಿಸುವುದಾಗಿ ಹೇಳಿದ್ದರು. ಕಾರಣಾಂತರಗಳಿಂದ ಕೊಂಚ ತಡವಾಗಿದೆ. ಈಗ ಮೊದಲ ಹಂತದಲ್ಲಿ ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದಾರೆ. ಆದಷ್ಟು ಬೇಗ ಜಗದ್ಗುರುಗಳ ಸಂಕಲ್ಪ ಪೂರ್ಣಗೊಳಿಸೋಣ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

Dk Shivakumar
'ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್': ರೈತರು, ಸಿದ್ದರಾಮಯ್ಯ ರಾಜಕೀಯ ಭವಿಷ್ಯದ ಬಗ್ಗೆ ಗೊರವಯ್ಯ ಕಾರ್ಣಿಕ?

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com