77 ಸ್ಟಾರ್ಟ್ ಅಪ್ ಗಳು ರಾಜ್ಯ ಸರ್ಕಾರದ ಅನುದಾನಕ್ಕೆ ಆಯ್ಕೆ

Published: 12 Sep 2018 01:39 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಹೊಸ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕತೆ ಬೆಳವಣಿಗೆಗೆ ಸಹಕಾರಿ ಎನಿಸಿರುವ ನವೋದ್ಯಮ (ಸ್ಟಾರ್ಟ್‌ಅಪ್‌)ಗಳಿಗೆ ಉತ್ತೇಜನ ನೀಡುವ ಸಲುವಾಗಿ ರಾಜ್ಯ ಸರ್ಕಾರ ಆರಂಭಿಸಿರುವ "ಎಲಿವೇಟ್‌ 2018' ಕಾರ್ಯಕ್ರಮದಡಿ 77 ಕ್ರಿಯಾಶೀಲ ಸ್ಟಾರ್ಟ್‌ಅಪ್‌ಗಳು ಅನುದಾನಕ್ಕೆ ಆಯ್ಕೆಯಾಗಿವೆ.

ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ "ಎಲಿವೇಟ್‌- 2018'ರಡಿ ಅನುದಾನಕ್ಕಾಗಿ ಅರ್ಹ ಸ್ಟಾರ್ಟ್‌ಅಪ್‌ಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸರ್ಕಾರದಿಂದ ಅನುದಾನಕ್ಕಾಗಿ ಸುಮಾರು 600ಕ್ಕೂ ಹೆಚ್ಚು ಸ್ಟಾಟ್‌ ಅಪ್‌ ಅರ್ಜಿ ಸಲ್ಲಿಸಿದ್ದವು. ತಜ್ಞರನ್ನು ಒಳಗೊಂಡ ಆಯ್ಕೆ ಸಮಿತಿಯು ಅಂತಿಮವಾಗಿ 77 ಸ್ಟಾರ್ಟ್‌ಅಪ್‌ಗ್ಳನ್ನು ಅನುದಾನಕ್ಕೆ ಆಯ್ಕೆ ಮಾಡಿತು.

ಆಯ್ಕೆಯಾದ ಸ್ಟಾರ್ಟ್‌ಅಪ್‌ಗಳಿಗೆ 50 ಲಕ್ಷ ರೂ. ವರೆಗೆ ಅನುದಾನ ನೀಡಲಾಗುವುದು. ಇದಕ್ಕಾಗಿ 24 ಕೋಟಿ ರು ಹಣ ನಿಗದಿ ಪಡಿಸಲಾಗಿದೆ. ಸ್ಟಾರ್ಟ್‌ಅಪ್‌ಗ್ಳು ಸಲ್ಲಿಸುವ ಯೋಜನಾ ವಿವರಕ್ಕೆ ಪೂರಕವಾಗಿ 2- 3 ಹಂತಗಳಲ್ಲಿ ಅನುದಾನ ನೀಡಲಾಗುತ್ತದೆ.. ಹೈದರಾಬಾದ್‌ ಕರ್ನಾಟಕ ಭಾಗದ ಸ್ಟಾರ್ಟ್‌ಅಪ್‌ ಗಳಿಗೆ ಉತ್ತೇಜಿಸಲು 2 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ.. 
Posted by: SD | Source: The New Indian Express

ಈ ವಿಭಾಗದ ಇತರ ಸುದ್ದಿ