ಬಿಎಂಟಿಸಿ ಬಸ್-ಕಾರು ನಡುವೆ ಭೀಕರ ಅಪಘಾತ, ನಾಲ್ವರ ದುರ್ಮರಣ

Published: 12 Sep 2018 07:31 PM IST | Updated: 12 Sep 2018 08:05 PM IST
ಸಂಗ್ರಹ ಚಿತ್ರ
ಬೆಂಗಳೂರು: ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಮರಳುವಾಗ ಬಿಎಂಟಿಸಿ ಬಸ್ ಗೆ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿರುವ ಘಟನೆ ನಗರದ ದೊಡ್ಡನಕ್ಕುಂದಿ ಬಳಿ ಸಂಭವಿಸಿದೆ. 

ಮಾರತ್ ಹಳ್ಳಿ ಮೂಲದ ಚಾಲಕ ನವೀನ್, ರೀನಾ, ಎಲ್ಲಸಮ್ಮ ಹಾಗೂ ನಿರ್ಮಲ ಮೃತ ದುರ್ದೈವಿಗಳಾಗಿದ್ದು ಶೀಜಾ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಹಳೆಯ ವಿಮಾನ ನಿಲ್ದಾಣ ರಸ್ತೆ ಬಳಿ ಈ ದುರ್ಘಟನೆ ಸಂಭವಿಸಿದೆ. ನವೀನ್ ಸೇರಿದಂತೆ ಐವರು ಸ್ಯಾಂಟ್ರೋ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಎದುರಿಗೆ ಬರುತ್ತಿದ್ದ ವೋಲ್ವೋ ಬಸ್ ಗೆ ಡಿಕ್ಕಿ ಹೊಡೆದಿದೆ. 

ಭೀಕರ ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದೆ. ಇನ್ನು ಕಾರಿನಲ್ಲಿದ್ದ ಐವರ ಪೈಕಿ ನಾಲ್ವರು ಮೃತಪಟ್ಟಿದ್ದು ಗಾಯಾಳು ಮಹಿಳೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಎಂದು ಸಂಚಾರಿ ವಿಭಾಗದ ಡಿಸಿಪಿ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. 
Posted by: VS | Source: Online Desk

ಈ ವಿಭಾಗದ ಇತರ ಸುದ್ದಿ