ಮೈಸೂರು ಅರಮನೆಯಲ್ಲಿ ಗೌರಿ ಹಬ್ಬದ ಸಡಗರ: ರಾಣಿ ತ್ರಿಷಿಕಾ ದೇವಿ ವಿಶೇಷ ಪೂಜೆ

Published: 12 Sep 2018 07:10 PM IST
ಮೈಸೂರು ಅರಮನೆಯಲ್ಲಿ ಗೌರಿ ಹಬ್ಬದ ಸಡಗರ
ಮೈಸೂರು: ಇಂದು (ಬುಧವಾರ) ನಾಡಿನಾದ್ಯಂತ ಗೌರಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಅಂತೆಯೇ ಮೈಸೂರು ಅರಮನೆಯಲ್ಲಿ ಸಹ ಗೌರಿ ಹಬ್ಬಕ್ಕೆ ವಿಶೇಷ ಪೂಜೆ ನಡೆದಿದೆ. ರಾಣಿ ತ್ರಿಷಿಕಾ ದೇವಿ ಒಡೆಯರ್ ಗೌರಿ ಪೂಜೆಯನ್ನು ನೆರವೇರಿಸಿದ್ದಾರೆ.

ಯದುವಂಶದ ಅರಸರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪಟ್ಟದ ಅರಸಿ ತ್ರಿಷಿಕಾ ದೇವಿ ಒಡೆಯರ್ ಸಾಂಪ್ರದಾಯಿಕ ಗೌರಿ ಪೂಜೆ ನೆರವೇರಿಸಿದ್ದಾರೆ. ಅರಮನೆಯ ಒಳಾಂಗಣದಲ್ಲಿ ನಡೆದ  ವಿಶೇಷ ಪೂಜೆಯ ಬಳಿಕ ರಾಣಿ ಮುತ್ತೈದೆಯರಿಗೆ ಬಾಗಿನ ನೀಡಿ ಶುಭ ಹಾರೈಸಿದ್ದಾರೆ.

ತ್ರಿಷಿಕಾ ಅವರ ಪೂಜಾ ಕೈಂಕರ್ಯಗಳನ್ನು ಮಹಾರಾಜ ಯದುವೀರ್ ತಮ್ಮ ಫೇಸ್ ಬುಕ್, ಹಾಗೂ ಇನ್ ಸ್ಟಾಗ್ರಾಂ ಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ನಾಡಿನ ಜನತೆಗೆ ಗೌರಿ-ಗಣೇಶ ಹಬ್ಬದ ಶುಬಾಶಯ ಕೋರಿದ್ದಾರೆ.
Posted by: RHN | Source: Online Desk

ಈ ವಿಭಾಗದ ಇತರ ಸುದ್ದಿ