Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Narendra Modi

ಮಹಾಘಟಬಂಧನ್ ಗೆ ಮರ್ಮಾಘಾತ: ಮೋದಿ ಸುನಾಮಿಗೆ ಪ್ರತಿಪಕ್ಷಗಳು ಧೂಳಿಪಟ: ಬಿಜೆಪಿಗೆ ಬಹುಮತ!

Narendra Modi-Mamata Banerjee

ಮಮತಾ ಬ್ಯಾನರ್ಜಿಯ ಭದ್ರಕೋಟೆಯನ್ನೇ ಅಲುಗಾಡಿಸಿದ ಮೋದಿ ಸುನಾಮಿ! ದೀದಿ ಕೋಟೆ ಕೆಡವಿದ್ದೇಗೆ?

LK Advani

ಬಿಜೆಪಿಗೆ ಜಯಮಾಲೆ: ನರೇಂದ್ರ ಮೋದಿ, ಶಾಗೆ ಅಡ್ವಾಣಿ ಶುಭ ಹಾರೈಕೆ

ಸಂಗ್ರಹ ಚಿತ್ರ

ಎನ್‌ಡಿಎಗೆ ಭಾರೀ ಮುನ್ನಡೆ: ಮೋದಿ ಹವಾ; ಷೇರು ಮಾರುಕಟ್ಟೆಯಲ್ಲಿ ದಾಖಲೆ ಏರಿಕೆ!

Lok Sabha Election Results 219; World Leaders Congratulate PM modi

ಲೋಕಸಭಾ ಚುನಾವಣೆ ಫಲಿತಾಂಶ; ಪ್ರಧಾನಿ ಮೋದಿ ವಿಶ್ವ ನಾಯಕರಿಂದ ಶುಭಾಶಯಗಳ ಮಹಾಪೂರ

Ratan Singh

ಮಧ್ಯಪ್ರದೇಶ: ಮತಎಣಿಕೆ ಕೇಂದ್ರದಲ್ಲಿ ಹೃದಯಾಘಾತವಾಗಿ ಕಾಂಗ್ರೆಸ್ ನಾಯಕ ಸಾವು

Congress President Rahul Gandhi leading with over 7,90,000 votes from Kerala

ಅಮಿತ್ ಶಾ ದಾಖಲೆ ಹಿಂದಿಕ್ಕಿದ ರಾಹುಲ್ ಗಾಂಧಿ, ವಯನಾಡ್ ನಲ್ಲಿ 7.90 ಲಕ್ಷ ಮತಗಳ ಭರ್ಜರಿ ಮುನ್ನಡೆ

Manohar Parrikar

ಗೋವಾ ಉಪಚುನಾವಣೆ: ಮನೋಹರ್ ಪರಿಕ್ಕರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಜಯ

Israel PM Benjamin Netanyahu congratulates Prime Minister NarendraModi

ಲೋಕಾ ದಿಗ್ವಿಜಯ; ಪ್ರಧಾನಿ ಮೋದಿಗೆ ಆಪ್ತ ಗೆಳೆಯ ಇಸ್ರೇಲ್ ಪ್ರಧಾನಿ ನೆತಾನ್ಯಾಹು ಶುಭಾಶಯ

Priyanka meets Rahul as Cong stares at defeat

ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲಿನ ಕಹಿ: ರಾಹುಲ್ ಗಾಂಧಿ-ಪ್ರಿಯಾಂಕಾ ವಾದ್ರಾ ಭೇಟಿ

Kusuma Shivalli

ಕುಂದಗೋಳ ವಿಧಾನಸಭೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಕುಸುಮ ಶಿವಳ್ಳಿ ಗೆಲುವು

Jaganmohan Reddy to take oath as CM on May 30, says YSRCP

ಮೇ.30 ರಂದು ತಿರುಪತಿಯಲ್ಲಿ ಜಗನ್ ಮೋಹನ್ ರೆಡ್ಡಿ ಸಿಎಂ ಆಗಿ ಪ್ರಮಾಣ ವಚನ

H D Kumaraswamy took oath as CM in front of Vidhana Saudha last year

ಭಿನ್ನಮತ, ಅಸಮಾಧಾನ, ಟೀಕೆಗಳ ಮಧ್ಯೆ ಒಂದು ವರ್ಷ ಪೂರೈಸಿದ ಸಮ್ಮಿಶ್ರ ಸರ್ಕಾರ!

ಮುಖಪುಟ >> ರಾಜ್ಯ

ಹಣ,ಉಡುಗೊರೆ ತಪಾಸಣೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಸಂಜೀವ್ ಕುಮಾರ್

SanjeevKumar

ಸಂಜೀವ್ ಕುಮಾರ್

ಬೆಂಗಳೂರು: ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಕ್ರಮ ತಡೆಗಟ್ಟಲು ವ್ಯಾಪಕ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಹಣ, ಉಡುಗೊರೆ ಪತ್ತೆಗಾಗಿ ತಪಾಸಣೆ ನಡೆಸುವ ವೇಳೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಪ್ರಯಾಣದ ವೇಳೆಯಲ್ಲಿ ದಾಖಲೆಗಳಿಲ್ಲದೆ 50 ಸಾವಿರ ರೂಪಾಯಿಗೂ  ಮೇಲ್ಪಟ್ಟು ಹಣ ಇಟ್ಟುಕೊಳ್ಳುವಂತಿಲ್ಲ.10 ಸಾವಿರ ರೂಪಾಯಿಗೂ ಹೆಚ್ಚಿನ ಮೌಲ್ಯದ  ಉಡುಗೊರೆಗಳನ್ನು ತೆಗೆದುಕೊಂಡು ಹೋಗಲು ಅಗತ್ಯ ದಾಖಲೆ ಒದಗಿಸಬೇಕು ಎಂದರು.

ನಗದು ಸಾಗಿಸುವಾಗ ಬ್ಯಾಂಕುಗಳು ನಗದು ಹಣವನ್ನು ಹೊರಗುತ್ತಿಗೆಯ ಏಜೆನ್ಸಿ ಅಥವಾ ಕಂಪೆನಿ ವಾಹನಗಳಲ್ಲಿ ಸಾಗಿಸಬಾರದು.ಹೊರಗುತ್ತಿಗೆಯ ಏಜೆನ್ಸಿಗಳು ಕಂಪೆನಿಗಳು ಬ್ಯಾಂಕಿನ ಎಟಿಎಂಗಳಿಗೆ ಹಣ ತುಂಬಿಸಲು ಮತ್ತು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ನಗದು ಸಾಗಿಸುವ ಸಂದರ್ಭದಲ್ಲಿ ಬ್ಯಾಂಕಿನಿಂದ ಅಧಿಕೃತ ಪತ್ರ ಅಥವಾ ದಾಖಲೆಗಳನ್ನು ಹೊಂದಿರಬೇಕು. ಹಣಸಾಗಿಸುವ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು ಎಂದು ಸ್ಪಷ್ಟಪಡಿಸಿದರು.

ಚೆಕ್ ಪೋಸ್ಟ್ ಗಳು ಮತ್ತಿತರ ಕಡೆಗಳಲ್ಲಿ ಜನ ಸಾಮಾನ್ಯರಿಗೆ ಸಣ್ಣಪುಟ್ಟ ಕಿರಿಕಿರಿ ಎದುರಾಗಬಹುದು.ಹಾಗೊಂದು ವೇಳೆ ಅನಗತ್ಯ ತೊಂದರೆ ಹಾಗೂ ನಿಯಮಬಾಹಿರವಾಗಿ ತಪಾಸಣೆ ಮಾಡಿರುವ ಬಗೆಗಿನ ದೂರುಗಳನ್ನು ಪರಿಶೀಲಿಸಲು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯ ಮುಂದೆ ಬಾಧಿತರು ದೂರು ಸಲ್ಲಿಸಬಹುದು ಎಂದು ಸಂಜೀವ್ ಕುಮಾರ್ ಹೇಳಿದರು.

ಮದುವೆ, ಹುಟ್ಟುಹಬ್ಬ ಸೇರಿದಂತೆ ಇನ್ನಿತರೆ ರಾಜಕೀಯೇತರ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಆಯೋಗದ ಅನುಮತಿ ಅಗತ್ಯವಿಲ್ಲ. ರಾಜಕೀಯ ವ್ಯಕ್ತಿಗಳಿಂದ ಉಡುಗೊರೆ ಹಂಚಿಕೆ , ಊಟದ ವ್ಯವಸ್ಥೆ ಸೇರಿದಂತೆ ಮತದಾರರ ಓಲೈಸಲು ಆಮಿಷ ಒಡ್ಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈವರೆಗೆ ರಾಜ್ಯದಲ್ಲಿ ಗೋಡೆಬರಹ, ಪೋಸ್ಟರ್, ಬ್ಯಾನರ್ ಸೇರಿಸಿ ಸಾರ್ವಜನಿಕ ಆಸ್ತಿಗೆ ಸಂಬಂಧಿಸಿದಂತೆ ಒಟ್ಟು 1,91,810 ಹಾಗೂ ಖಾಸಗಿ ವಲಯದಡಿ ಒಟ್ಟು 75,087 ದೂರುಗಳು ದಾಖಲಾಗಿವೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಚುನಾವಣೆ ಸಂದರ್ಭದಲ್ಲಿ ನಡೆಯಬಹುದಾದ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ 1512 ಫ್ಲೈಯಿಂಗ್ ಸ್ಕ್ವಾಡ್ ಮತ್ತು 1837 ಸರ್ವೆಲೆನ್ಸ್ ತಂಡಗಳನ್ನು ರಚಿಸಲಾಗಿದೆ ಎಂದರು ಸಂಜೀವ್ ಕುಮಾರ್ ಮಾಹಿತಿ ನೀಡಿದರು.

Posted by: ABN | Source: UNI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Loksabha Poll, Karnataka CEC Sanjeev Kumar, Code of Conduct, Election Process, People co-operation ಲೋಕಸಭಾ ಚುನಾವಣೆ, ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ನೀತಿ ಸಂಹಿತೆ, ಚುನಾವಣಾ ಪ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS