Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಸಂಗ್ರಹ ಚಿತ್ರ

ಉಗ್ರರ ದಮನಕ್ಕೆ ಬ್ರಹ್ಮಾಸ್ತ್ರ: ರಿಸ್ಯಾಟ್-2ಬಿ ರೇಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆ ಯಶಸ್ವಿ!

Mohith Mor

ಬೆಚ್ಚಿ ಬಿದ್ದ ರಾಷ್ಟ್ರ ರಾಜಧಾನಿ! ಟಿಕ್ ಟಾಕ್ ಸ್ಟಾರ್ ಮೇಲೆ ಅಪರಿಚಿತರಿಂದ ಗುಂಡಿನ ಸುರಿಮಳೆಗೈದು ಹತ್ಯೆ

JF-17

ಪಾಕ್ ವಾಯುಪಡೆಗೆ ಚೀನಾ ಶಕ್ತಿ: ಮೊದಲ ಜೆಎಫ್ -17 ಫೈಟರ್ ಜೆಟ್ ಹಸ್ತಾಂತರ

ಸಂಗ್ರಹ ಚಿತ್ರ

'ಚೌಕಿದಾರ್' ಆದ ಎಸ್‌ಪಿ, ಬಿಎಸ್‌ಪಿ ಕಾರ್ಯಕರ್ತರು: ಇದೇನು ಮೋದಿ ಪ್ರೇಮವೇ? ಇಲ್ಲಿದೆ ರೋಜಕ ಸಂಗತಿ!

Malaprabha dam has been a source of water to several villages since 1973

ಬರಿದಾಗುತ್ತಿದೆ ಮಲಪ್ರಭಾ ಒಡಲು: ರಾಜ್ಯಕ್ಕೆ ಕಾದಿದೆಯೇ ಭಾರಿ ಜಲಕ್ಷಾಮ?

Shriya Saran

ಬಿಕಿನಿ ತೊಟ್ಟು ಮ್ಯೂಸಿಯಂನಲ್ಲಿ ಡ್ಯಾನ್ಸ್ ಮಾಡಿ ನಗೆಗೀಡಾದ ನಟಿ ಶ್ರೇಯ ಶರಣ್, ವಿಡಿಯೋ ವೈರಲ್!

File Image

ಕಾಶ್ಮೀರದಲ್ಲಿ ಉಗ್ರರ ಹುಟ್ಟಡಗಿಸಲು ಸೇನೆ ಪಣ, ಕುಲ್ಗಾಂ ನಲ್ಲಿ ಭದ್ರತಾ ಪಡೆ ಗುಂಡಿಗೆ ಇಬ್ಬರು ಉಗ್ರರು ಫಿನಿಷ್

Representational image

ಬ್ಯಾಂಕ್ ಗೆ ಸಾಲ ಹಿಂತಿರುಗಿಸದ ರೈತರಿಗೆ ಕೋರ್ಟ್ ನೊಟೀಸ್, ಕಂಗಾಲಾದ ರೈತರು

PM Modi likens his LokSabha campaign to pilgrimage at meeting with ministers

ಬಿಜೆಪಿ ಔತಣಕೂಟದಲ್ಲಿ ಲೋಕಸಭೆ ಚುನಾವಣಾ ಪ್ರಚಾರವನ್ನು ತೀರ್ಥಯಾತ್ರೆಗೆ ಹೋಲಿಸಿದ ಪ್ರಧಾನಿ ಮೋದಿ!

TDP Chief N Chandrababu Naidu met Karnataka CM HD Kumaraswamy and JDS Supremo HD Deve Gowda

ದೊಡ್ಡ ಗೌಡರ ನಿವಾಸಕ್ಕೆ ಆಂಧ್ರ ಸಿಎಂ ನಾಯ್ಡು ಭೇಟಿ, ಮಹತ್ವದ ಚರ್ಚೆ!

Lamb Gives Milk

ಬಾಗಲಕೋಟೆ: ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುತ್ತಿರುವ ಮೇಕೆ ಮರಿ!

Abhinaya

ಏಳು ವರ್ಷದ ನಂತರ ಬೆಳ್ಳಿತೆರೆಗೆ ಮರಳಿದ ಅಭಿನಯ

Prabhas confirms Saaho release date in the new poster

ಸಾಹೋ ಫರ್ಸ್ಟ್ ಲುಕ್ ಮತ್ತು ರಿಲೀಸ್ ಡೇಟ್ ರಿವೀಲ್ ಮಾಡಿದ ಪ್ರಭಾಸ್

ಮುಖಪುಟ >> ರಾಜ್ಯ

ಪಿಯು ಉಪನ್ಯಾಸಕರಿಂದ ಮೌಲ್ಯಮಾಪನ ಬಹಿಷ್ಕಾರ ಬೆದರಿಕೆ: ಸರ್ಕಾರದಿಂದ ಎಸ್ಮಾ ಜಾರಿಗೆ ಚಿಂತನೆ

Representational image

ಸಾಂದರ್ಭಿಕ ಚಿತ್ರ

ಬೆಂಗಳೂರು: ಮೌಲ್ಯಮಾಪನ ಬಹಿಷ್ಕರಿಸುತ್ತೇವೆ ಎಂದು ಬೆದರಿಕೆ ಹಾಕಿದ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವಿರುದ್ಧ ಎಸ್ಮಾ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಮಾರ್ಚ್ 22ರಂದು ದ್ವಿತೀಯ ಪಿಯುಸಿ ಪರೀಕ್ಷೆ ಮೌಲ್ಯಮಾಪನ ನಡೆಯಬೇಕಿದ್ದು ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಪದವಿಪೂರ್ವ ಕಾಲೇಜು ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಮೌಲ್ಯಮಾಪನ ಬಹಿಷ್ಕರಿಸಿದರೆ ನಿಗದಿತ ಸಮಯಕ್ಕೆ ಫಲಿತಾಂಶ ಬರುವುದಿಲ್ಲ.

ಕರ್ನಾಟಕ ಪದವಿಪೂರ್ವ ಕಾಲೇಜು ಶಿಕ್ಷಕರ ಸಂಘ ಇತ್ತೀಚೆಗೆ ಸಭೆ ನಡೆಸಿ ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಹೇಳಿ ಮಾರ್ಚ್ 21ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಿಳಿಸಿತ್ತು.

ಅದಕ್ಕೆ ಪ್ರತಿಯಾಗಿ ಶಿಕ್ಷಣ ಇಲಾಖೆ ಎಸ್ಮಾ ಜಾರಿಗೆ ತರಲು ಮುಂದಾಗಿದೆ. ಈ ಮಧ್ಯೆ ಮೌಲ್ಯಮಾಪನ ಬಹಿಷ್ಕರಿಸದಂತೆ ಉಪನ್ಯಾಸಕರ ಮನವೊಲಿಸಲು ಇಲಾಖೆ ಪ್ರಯತ್ನಿಸಲಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರದಿಂದ ಯಾವುದನ್ನೂ ಘೋಷಣೆ ಮಾಡಲು ಸಾಧ್ಯವಾಗುವುದಿಲ್ಲವೆಂದು ಉಪನ್ಯಾಸಕರ ಮನವೊಲಿಸುತ್ತೇವೆ. ಮುಖ್ಯಮಂತ್ರಿಗಳ ಮುಂದೆ ವಿಷಯವನ್ನು ಪ್ರಸ್ತಾಪಿಸುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಎಸ್ಮಾ ಜಾರಿಗೆ ತಂದು ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ. ಇದು ನಮಗೆ ಹೊಸದಲ್ಲ, ನಾವು ಈ ಹಿಂದೆ ಎಸ್ಮಾ ಜಾರಿಯಿಂದ ಬಂಧನಕ್ಕೊಳಗಾಗಿದ್ದೆವು. ನಾವು ಜೈಲಿಗೆ ಬೇಕಾದರೆ ಹೋಗಲು ಸಿದ್ಧವಿದ್ದೇವೆ, ಆದರೆ ನಮ್ಮ ಬೇಡಿಕೆ ಈಡೇರುವವರೆಗೆ ನಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಕರ್ನಾಟಕ ಪದವಿಪೂರ್ವ ಉಪನ್ಯಾಸಕರ ಸಂಘಟ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ.

ಇತಿಹಾಸ ಪುನರಾವರ್ತನೆ: 2016ರಲ್ಲಿ ಕೂಡ ಪದವಿಪೂರ್ವ ಇಲಾಖೆ ಉಪನ್ಯಾಸಕರು ಸ್ವಾತಂತ್ರ್ಯ ಉದ್ಯಾನವನದಲ್ಲಿ 18 ದಿನಗಳ ಪ್ರತಿಭಟನೆ ನಡೆಸಿದ್ದರು. ಕೊನೆಗೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಉಪನ್ಯಾಸಕರ ಜೊತೆ ಸಂಧಾನ ಮಾತುಕತೆ ನಡೆಸಿ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದರು.

Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : PUC teachers, Boycott, Evaluation, Karnataka government, ESMA, ಪಿಯುಸಿ ಉಪನ್ಯಾಸಕರು, ಮೌಲ್ಯಮಾಪನ, ಬಹಿಷ್ಕಾರ, ಕರ್ನಾಟಕ ಸರ್ಕಾರ, ಎಸ್ಮಾ ಜಾರಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS