Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Bihar encephalitis deaths Toll Rises to 117: Govt skipped awareness drive due to LS polls

ಎನ್ಸಿಫಾಲಿಟಿಸ್ ಸೋಂಕು, ಸಾವಿನ ಸಂಖ್ಯೆ 117ಕ್ಕೆ ಏರಿಕೆ, ಜಾಗೃತಿ ಅಭಿಯಾನವನ್ನೇ ಕೈ ಬಿಟ್ಟಿದ್ದ ಬಿಹಾರ ಸರ್ಕಾರ?

Dr.G Parameshwar may elected as chairman of the Jindal Cabinet sub-committee

ಜಿಂದಾಲ್ ಸಚಿವ ಸಂಪುಟ ಉಪ ಸಮಿತಿಗೆ ಡಾ.ಜಿ.ಪರಮೇಶ್ವರ್ ಅಧ್ಯಕ್ಷರಾಗಿ ಆಯ್ಕೆ ಸಾಧ್ಯತೆ?

H.Vishwanath

ರಾಜಿನಾಮೆ ಅಂಗೀಕರಿಸಿದಿದ್ದರೇ ಶಾಸಕ ಸ್ಥಾನ ತ್ಯಜಿಸುವೆ: ದ್ವೇಷಕ್ಕಾಗಿ ನಾಯಕರ ಭವಿಷ್ಯ ಹಾಳುಮಾಡಬಾರದು; ಕಟುಕಿದ 'ಹಳ್ಳಿಹಕ್ಕಿ'

Nusrat Jahan-Nikhil Jain

ಟರ್ಕಿಯಲ್ಲಿ ವಿವಾಹವಾದ ಸಂಸತ್ ಸದಸ್ಯೆ ನುಸ್ರತ್ ಜಹಾನ್; ಪ್ರಮಾಣವಚನಕ್ಕೆ ಗೈರು

Ramya-Dr Pushpa Amaranath (File photo)

ರಮ್ಯಾ ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದಾರೆ, ಸದ್ಯ ರೆಸ್ಟ್ ನಲ್ಲಿದ್ದಾರೆ: ಡಾ ಪುಷ್ಪಾ ಅಮರನಾಥ್

ರೆಜಿನಾ ಕಸ್ಸಂದ್ರ

ಹದಿಹರೆಯದಲ್ಲೇ ಬ್ಲೂ ಫಿಲ್ಮಂಗಳನ್ನು ನೋಡಿದ್ದೇನೆ ಎಂದ ಕನ್ನಡದ ಸೂರ್ಯಕಾಂತಿ ನಟಿ, ವಿಡಿಯೋ!

Representational image

ಚಪ್ಪಲಿ ಹಾಕಿ ಗ್ರಾಮ ಪ್ರವೇಶಿಸುವಂತಿಲ್ಲ: ಸಲೂನ್ ಗೂ ಕಾಲಿಡುವಂತಿಲ್ಲ; ಸಿದ್ದು ತವರು ಜಿಲ್ಲೆಯಲ್ಲಿ ಮೇಲ್ಜಾತಿಯವರ ದರ್ಬಾರ್

Girl Allegedly Raped Inside Army

ಕೋಲ್ಕತಾ: ಸೇನಾ ತರಬೇತಿ ಕೇಂದ್ರದಲ್ಲೇ ಸಿಬ್ಬಂದಿಯಿಂದ ಬಾಲಕಿ ಮೇಲೆ ಅತ್ಯಾಚಾರ!

Most Opposition parties supported simultaneous poll, says Centre after all-party meet

'ಒಂದು ರಾಷ್ಟ್ರ ಒಂದು ಚುನಾವಣೆ'ಗೆ ಬಹುತೇಕ ಪ್ರತಿಪಕ್ಷಗಳು ಒಪ್ಪಿಗೆ ಸೂಚಿಸಿವೆ: ಕೇಂದ್ರ ಸರ್ಕಾರ

Dinesh gundurao

ರಾಜ್ಯ ಕಾಂಗ್ರೆಸ್ ಗೆ ಆಘಾತ: ಕೆಪಿಸಿಸಿ ವಿಸರ್ಜಿಸಿ ಆದೇಶ ಹೊರಡಿಸಿದ ಎಐಸಿಸಿ

Three Sex Workers Allegedly Gangraped By 9 Men At Noida Farmhouse

ವೇಶ್ಯೆಯರನ್ನೂ ಬಿಡದ ಕಾಮುಕರು; ಮೂವರ ಮೇಲೆ 9 ಮಂದಿಯಿಂದ ಸಾಮೂಹಿಕ ಅತ್ಯಾಚಾರ!

Farmer develops machine to climb arecanut trees

ಅಡಿಕೆ ಮರ ಏರುವ ಯಂತ್ರ ಆವಿಷ್ಕರಿಸಿದ ಬಂಟ್ವಾಳ ರೈತ: ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರ ಪ್ರಶಂಸೆ

Om Birla

17ನೇ ಲೋಕಸಭೆಯ ನೂತನ ಸ್ಪೀಕರ್ ಆಗಿ ಓಂ ಬಿರ್ಲಾ ಅವಿರೋಧ ಆಯ್ಕೆ

ಮುಖಪುಟ >> ರಾಜ್ಯ

ಡಿಕೆಶಿ ವಿಚಾರಣೆ ಮುಂದೂಡಿಕೆ ಮನವಿ ಪರಿಗಣಿಸಿ: ಇಡಿಗೆ ಹೈಕೋರ್ಟ್ ನಿರ್ದೇಶನ

Karnataka High Court gives liberty to Minister DK Shivakumar to seek more time from ED

ಡಿಕೆ ಶಿವಕುಮಾರ್

ಬೆಂಗಳೂರು: ನವದೆಹಲಿಯಲ್ಲಿನ ತಮ್ಮ ನಿವಾಸಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ನೀಡಿರುವ ಸಮನ್ಸ್ ನಿಂದ ವಿನಾಯಿತಿ ಕೋರಿ ಸಚಿವ ಡಿ.ಕೆ.ಶಿವಕುಮಾರ್ ಮನವಿ ಸಲ್ಲಿಸಿದಲ್ಲಿ ಅದನ್ನು ಪರಿಗಣಿಸುವಂತೆ ಹೈಕೋರ್ಟ್ ಗುರುವಾರ ಇಡಿಗೆ ನಿರ್ದೇಶನ ನೀಡಿದೆ.

ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದು ಕೋರಿ ಡಿ.ಕೆ.ಶಿವಕುಮಾರ್ ಅವರು ರಿಟ್‍ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಇತರೆ ಆರೋಪಿಗಳಾದ ಸಚಿನ್ ನಾರಾಯಣ, ಶರ್ಮಾ ಮತ್ತು ರಾಜೇಂದ್ರ ಕೂಡ ಸಮನ್ಸ್ ರದ್ದು ಕೋರಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. 

ವಿಚಾರಣೆ ಸಂದರ್ಭದಲ್ಲಿ, ಅರ್ಜಿದಾರರು ವಿನಾಯಿತಿ ಕೋರಿ ಮನವಿ ಸಲ್ಲಿಸಿದಲ್ಲಿ ಜಾರಿ ನಿರ್ದೇಶನಾಲಯ ಪರಿಶೀಲಿಸಲಿದೆ ಎಂದು  ಕೇಂದ್ರ ಸರ್ಕಾರದ ಪರ ವಕೀಲರು ಹೇಳಿಕೆ ನೀಡಿದರು. ಇದರ ಆಧಾರದ ಮೇಲೆ ನ್ಯಾಯಮೂರ್ತಿ ಸುನೀಲ್‍ ದತ್ ಯಾದವ್‍ ಅವರಿದ್ದ ಏಕಸದಸ್ಯ ಪೀಠ ವಿಚಾರಣೆಯನ್ನು ಫೆ.22ಕ್ಕೆ ಮುಂದೂಡಿತು.

ಡಿ.ಕೆ.ಶಿವಕುಮಾರ್ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಕಪಿಲ್‍ ಸಿಬಲ್, ಅರ್ಜಿದಾರರು ಯಾವುದೆ ತೆರಿಗೆ ವಂಚನೆ ಮಾಡಿಲ್ಲ. ಕಾಲಕಾಲಕ್ಕೆ ಕಾನೂನುಬದ್ಧವಾಗಿ ತೆರಿಗೆ ಪಾವತಿ ಮಾಡಿದ್ದಾರೆ. ತೆರಿಗೆ ಪಾವತಿಸುವ ಅವಧಿ ಪೂರ್ಣಗೊಳ್ಳುವ ಮುನ್ನವೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ತೆರಿಗೆ ಪಾವತಿಸದ ದಾಖಲೆಗಳು ದೊರೆತಿದ್ದು, ಅದರ ಆಧಾರದ ಮೇಲೆ ಅರ್ಜಿದಾರರನ್ನು ಬಂಧಿಸುವ ಸಾಧ್ಯತೆಯಿದೆ. ಅಲ್ಲದೆ, ಅವರು ಜನಪ್ರತಿನಿಧಿಯಾಗಿರುವುರಿಂದ  ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಅವರ ಹಾಜರಾತಿ ಅತ್ಯಗತ್ಯ.  ಈ ಹಿನ್ನೆಲೆಯಲ್ಲಿ ಅವರಿಗೆ ಜಾರಿ ಮಾಡಿರುವ ಸಮನ್ಸ್ ಅನ್ನು ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದರು.

ನವದೆಹಲಿಯ ಕೆ.ಆರ್.ಪುರಂ ಮನೆ ಹಾಗೂ ಸಫ್ದರ್ ಜಂಗ್ ಎನ್‍ಕ್ಲೇವ್ ಫ್ಲಾಟ್ ಗಳ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು 8.60 ಕೋಟಿ ರೂ. ವಶಪಡಿಸಿಕೊಂಡಿದ್ದರು. ಈ ಹಣವನ್ನು ಬೆಂಗಳೂರಿನಿಂದ ಹವಾಲಾ ಮಾರ್ಗದಲ್ಲಿ ಕಳುಹಿಸಲಾಗಿದೆ ಎಂಬ ಆರೋಪವನ್ನು ಕೂಡ ಡಿ.ಕೆ.ಶಿವಕುಮಾರ್ ಎದುರಿಸುತ್ತಿದ್ದಾರೆ. ದಾಳಿ ವೇಳೆ ವಶಪಡಿಸಿಕೊಂಡಿದ್ದ ಡೈರಿಯಲ್ಲಿ ಹಣಕ್ಕೆ ಕೆ.ಜಿ.ಎಂಬ ಸಂಕೇತಾಕ್ಷರ ಬಳಸಲಾಗಿತ್ತು.
Posted by: LSB | Source: UNI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : High Court, DK Shivakumar, ED, ಹೈಕೋರ್ಟ್, ಇಡಿ, ಡಿಕೆ ಶಿವಕುಮಾರ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS