Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಸಂಗ್ರಹ ಚಿತ್ರ

ಉಗ್ರರ ದಮನಕ್ಕೆ ಬ್ರಹ್ಮಾಸ್ತ್ರ: ರಿಸ್ಯಾಟ್-2ಬಿ ರೇಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆ ಯಶಸ್ವಿ!

Udit Raj

ಚುನಾವಣಾ ಅಕ್ರಮದಲ್ಲಿ ಸುಪ್ರೀಂ ಕೋರ್ಟ್ ಕೂಡ ಭಾಗಿಯೇ?: ಕಾಂಗ್ರೆಸ್ ನಾಯಕ ಗಂಭೀರ ಆರೋಪ

Mohith Mor

ಬೆಚ್ಚಿ ಬಿದ್ದ ರಾಷ್ಟ್ರ ರಾಜಧಾನಿ! ಟಿಕ್ ಟಾಕ್ ಸ್ಟಾರ್ ಮೇಲೆ ಅಪರಿಚಿತರಿಂದ ಗುಂಡಿನ ಸುರಿಮಳೆಗೈದು ಹತ್ಯೆ

JF-17

ಪಾಕ್ ವಾಯುಪಡೆಗೆ ಚೀನಾ ಶಕ್ತಿ: ಮೊದಲ ಜೆಎಫ್ -17 ಫೈಟರ್ ಜೆಟ್ ಹಸ್ತಾಂತರ

Representatiional image

ರಾಜ್ಯ ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚ: ಮರುಪಾವತಿ ಮಿತಿ 3 ಲಕ್ಷ ರೂಗೆ ಹೆಚ್ಚಳ

Mary Kom wins first bout at India Open boxing tournament, assured of medal

ಇಂಡಿಯಾ ಓಪನ್ ಬಾಕ್ಸಿಂಗ್: ಸೆಮಿಫೈನ್ಲ್ ಪ್ರವೇಶಿಸಿ ಪದಕ ಖಾತ್ರಿಪಡಿಸಿದ ಮೇರಿ ಕೋಂ

H. Vishwanath

ಮೈತ್ರಿ ಸರ್ಕಾರದಿಂದ ಪಕ್ಷಗಳಿಗಿಂತ ಜನರಿಗೆ ಆಗುವ ಲಾಭ ಮುಖ್ಯ: ಎಚ್‌ ವಿಶ್ವನಾಥ್‌

Azam Khan

3 ಲಕ್ಷ ಮತಗಳ ಅಂತರದಿಂದ ನಾನು ಗೆಲ್ಲದಿದ್ದರೆ ಚುನಾವಣೆ ನ್ಯಾಯ ಸಮ್ಮತವಾಗಿಲ್ಲ ಎಂದರ್ಥ: ಅಜಂ ಖಾನ್

ಸಂಗ್ರಹ ಚಿತ್ರ

ಬೆಂಗಳೂರು: ಪತ್ನಿ ಮೇಲೆ ಶಂಕೆ, ಮನೆಯಲ್ಲಿ 22 ಸ್ಪೈ ಕ್ಯಾಮೆರಾ ಇಟ್ಟ ಪತಿ; ಆತನ ತಲೆ ಒಡೆದ ಪತ್ನಿ!

Shriya Saran

ಬಿಕಿನಿ ತೊಟ್ಟು ಮ್ಯೂಸಿಯಂನಲ್ಲಿ ಡ್ಯಾನ್ಸ್ ಮಾಡಿ ನಗೆಗೀಡಾದ ನಟಿ ಶ್ರೇಯ ಶರಣ್, ವಿಡಿಯೋ ವೈರಲ್!

ಸಂಗ್ರಹ ಚಿತ್ರ

'ಚೌಕಿದಾರ್' ಆದ ಎಸ್‌ಪಿ, ಬಿಎಸ್‌ಪಿ ಕಾರ್ಯಕರ್ತರು: ಇದೇನು ಮೋದಿ ಪ್ರೇಮವೇ? ಇಲ್ಲಿದೆ ರೋಜಕ ಸಂಗತಿ!

Malaprabha dam has been a source of water to several villages since 1973

ಬರಿದಾಗುತ್ತಿದೆ ಮಲಪ್ರಭಾ ಒಡಲು: ರಾಜ್ಯಕ್ಕೆ ಕಾದಿದೆಯೇ ಭಾರಿ ಜಲಕ್ಷಾಮ?

File Image

ಕಾಶ್ಮೀರದಲ್ಲಿ ಉಗ್ರರ ಹುಟ್ಟಡಗಿಸಲು ಸೇನೆ ಪಣ, ಕುಲ್ಗಾಂ ನಲ್ಲಿ ಭದ್ರತಾ ಪಡೆ ಗುಂಡಿಗೆ ಇಬ್ಬರು ಉಗ್ರರು ಫಿನಿಷ್

ಮುಖಪುಟ >> ರಾಜ್ಯ

ಗದಗ ಜಿಲ್ಲೆಯಲ್ಲಿ '10 ರೂಪಾಯಿ ಡಾಕ್ಟರ್' ಎಂದೇ ಫೇಮಸ್ಸಾಗಿರುವ ಮಾದರಿ ವೈದ್ಯ

Dr Kallesh Murashillin attending to a patient at his clinic in Mallasamudra village near Gadag

ರೋಗಿಯನ್ನು ಪರೀಕ್ಷಿಸುತ್ತಿರುವ ಡಾ.ಕಲ್ಲೇಶ್

ಗದಗ: ಇವರು 10 ರೂಪಾಯಿ ಡಾಕ್ಟರ್ ಎಂದೇ ಗ್ರಾಮದಲ್ಲಿ ಜನಪ್ರಿಯ. ಅದಕ್ಕೆ ಕಾರಣ ಅವರ ನಿಸ್ವಾರ್ಥ ಸೇವೆ, ತಮ್ಮ ವೈದ್ಯಕೀಯ ಸೇವೆಗೆ ರೋಗಿಗಳಿಂದ ಪಡೆಯುವ ಶುಲ್ಕದ ಮೊತ್ತ. ವೈದ್ಯ ಡಾ. ಕಲ್ಲೇಶ್ ಮುರಾಶಿಲಿನ್ ಸಮಾಲೋಚನೆಗೆ ಬಂದ ವೈದ್ಯರ ಬಳಿಯಿಂದ ತೆಗೆದುಕೊಳ್ಳುವ ಮೊತ್ತ ಕೇವಲ 10 ರೂಪಾಯಿ, ಕೆಲವೊಮ್ಮೆ ಅಷ್ಟೂ ತೆಗೆದುಕೊಳ್ಳುವುದಿಲ್ಲ.

ಗದಗ ಜಿಲ್ಲೆಯ ಮಲ್ಲಸಮುದ್ರ ಗ್ರಾಮದ ಕಲ್ಲೇಶ್ ಮುರಾಶಿಲಿನ್ ಕಳೆದ 22 ವರ್ಷಗಳಿಂದ ವೈದ್ಯಕೀಯ ಸೇವೆಯಲ್ಲಿ ತೊಡಗಿದ್ದಾರೆ. ಅವರು ವೈದ್ಯಕೀಯ ವೃತ್ತಿ ಮಾಡುವುದು ಹಣ ಸಂಪಾದನೆಗೆ ಅಲ್ಲ, ಬದಲಿಗೆ ಬಡ ಜನರ ಸೇವೆಗೆ. ಆಯುರ್ವೇದ ವೈದ್ಯಕೀಯ ಪದವಿ ಪಡೆದ ಕಲ್ಲೇಶ್ ತಾವು ಓದುತ್ತಿರುವಾಗಲೇ ಬಡ ಜನತೆಯ ಸೇವೆ ಮಾಡುವ ಗುರಿ ಹೊಂದಿದ್ದರು. ಬಡ ಕುಟುಂಬದಲ್ಲಿ ಹುಟ್ಟಿ ಹಾಲು ಮಾರಾಟ ಮಾಡಿ ಅರೆಕಾಲಿಕ ಉದ್ಯೋಗ ಮಾಡಿ ಓದಿ ತೇರ್ಗಡೆ ಹೊಂದಿದ್ದರು.

ನಾನು ಶಾಲಾ ಕಾಲೇಜು ದಿನಗಳಲ್ಲಿ ಕಷ್ಟದಲ್ಲಿಯೇ ಕಳೆದೆ. ನಮಗೊಂದು ಸಣ್ಣ ತೋಟವಿತ್ತು. ಹಸುಗಳನ್ನು ಸಾಕಿ ಹಾಲು ಮಾರಾಟ ಮಾಡಿ ವೈದ್ಯಕೀಯ ಪದವಿ  ವಿದ್ಯಾಭ್ಯಾಸ ಮುಗಿಸಿದೆ. ಆ ಸಂದರ್ಭದಲ್ಲಿ ಅನೇಕ ಮಂದಿ ಕಾಯಿಲೆಗಳಿಂದ ಹಣವಿಲ್ಲದೆ ಬಳಲುತ್ತಿದ್ದುದನ್ನು ನೋಡುತ್ತಿದ್ದೆ. ಆಗಲೇ ಬಡವರ ಆರೋಗ್ಯ ಸೇವೆ ಮಾಡಬೇಕೆಂದು ನಿರ್ಧಾರ ಮಾಡಿದ್ದೆ ಎನ್ನುತ್ತಾರೆ ಕಲ್ಲೇಶ್.

ಡಾ.ಕಲ್ಲೇಶ್ ತಮ್ಮ ಮನೆಯಿಂದ ಕ್ಲಿನಿಕ್ ಗೆ ಪ್ರತಿದಿನ ಸೈಕಲ್ ನಲ್ಲಿ ಹೋಗುತ್ತಾರೆ. ಅಗತ್ಯವಿದ್ದರೆ ಮಾತ್ರ ಬೈಕ್ ಅಥವಾ ಕಾರು ಬಳಸುವುದು. ಆರೋಗ್ಯಕರ ಜೀವನಶೈಲಿಗೆ ಸೈಕಲ್ ಒಳ್ಳೆಯದು ಎನ್ನುವುದು ಅವರ ಅಭಿಪ್ರಾಯ. ಬೆಳಗ್ಗೆ 8.30ಕ್ಕೆ ಕ್ಲಿನಿಕ್ ತೆರೆಯುತ್ತಾರೆ. ಅದಾಗಲೇ ರೋಗಿಗಳು ಕ್ಲಿನಿಕ್ ನ ಹೊರಗೆ ಬಂದು ಸಾಲಿನಲ್ಲಿ ನಿಂತು ಕಾಯುತ್ತಿರುತ್ತಾರೆ. ಅಗತ್ಯಬಿದ್ದರೆ ಕಲ್ಲೇಶ್ ಅವರು ರೋಗಿಗಳ ಮನೆಗೆ ಹೋಗಿ ಚಿಕಿತ್ಸೆ ನೀಡುವುದೂ ಇದೆ. ವೃದ್ಧರ ಮತ್ತು ಅಶಕ್ತರ ಮನೆಗೆ ಹೋಗಿ ಚಿಕಿತ್ಸೆ ನೀಡುತ್ತಾರೆ. ಆದರೆ ಅವರಿಂದ ಶುಲ್ಕ ತೆಗೆದುಕೊಳ್ಳುವುದಿಲ್ಲ ಎಂದು ಗ್ರಾಮದ ನಿವಾಸಿಗಳು ಹೇಳುತ್ತಾರೆ.

ಮಲ್ಲಸಮುದ್ರ ಗ್ರಾಮದ ನಿವಾಸಿಗಳಿಗೆ ಕಲ್ಲೇಶ್ ಡಾಕ್ಟರ್ ಉಚಿತವಾಗಿ ಮದ್ದನ್ನು ಪೂರೈಸುವುದು ಕೂಡ ಉಂಟು. ಅವರು ನಮಗೆ ಒಬ್ಬ ಮಾದರಿ ವ್ಯಕ್ತಿ. ರೋಗಿಗಳು ಹಣ ತೆಗೆದುಕೊಳ್ಳಿ ಎಂದು ಕೇಳಿಕೊಂಡರು ಸಹ ಕಲ್ಲೇಶ್ ಡಾಕ್ಟರ್ ಹಣ ಪಡೆಯುವುದಿಲ್ಲ ಎನ್ನುತ್ತಾರೆ ಸ್ಥಳೀಯರು. ಕಲ್ಲೇಶ್ ಡಾಕ್ಟರ ನಿಸ್ವಾರ್ಥ ಸೇವೆ ಕಂಡು ನೆರೆ ಹೊರೆಯ ಗ್ರಾಮಗಳ ಜನರು ಕೂಡ ಅವರ ಬಳಿ ಬರುತ್ತಾರಂತೆ. ಅವರು ನೀಡುವ ಔಷಧ ರೋಗಿಗಳನ್ನು ಬೇಗ ಗುಣಮುಖ ಮಾಡುತ್ತದೆ ಎನ್ನುವ ನಂಬಿಕೆಯಿದೆ.ಡಾ. ಕಲ್ಲೇಶ್ ಅವರ ಈ ಸಮಾಜ ಸೇವೆಗೆ ಅವರ ಕುಟುಂಬದವರ ಬೆಂಬಲವಿದೆ. ಅವರ ಪತ್ನಿ ಕೂಡ ವೈದ್ಯೆ, ಡಾ ದೀಪ ಗದಗ ಪಟ್ಟಣದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಕಲ್ಲೇಶ್ ಅವರು ಮದುವೆಗೆ ಮುಂಚೆ ರೋಗಿಗಳಿಂದ 5 ರೂಪಾಯಿ ತೆಗೆದುಕೊಳ್ಳುತ್ತಿದ್ದರು, ಮದುವೆಯಾದ ನಂತರ 10 ರೂಪಾಯಿಗೆ ಶುಲ್ಕ ಹೆಚ್ಚಿಸಿದ್ದಾರೆ.

Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Dr. Kallesh Murashillin, Gadag, Patients, Village, Mallasamudra, ಡಾ ಕಲ್ಲೇಶ್ ಮುರಶಿಲ್ಲಿನ್, ಗದಗ, ವೈದ್ಯ, ರೋಗಿಗಳು, ಮಲ್ಲಸಮುದ್ರ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS