ವಿಜಯಪುರ: ಸುಣ್ಣದ ಡಬ್ಬಿ ನುಂಗಿ 9 ತಿಂಗಳ ಮಗು ಸಾವು!

Published: 11 Sep 2018 03:23 PM IST
ವಿಜಯಪುರ: ಸುಣ್ಣದ ಡಬ್ಬಿ ನುಂಗಿ 9 ತಿಂಗಳ ಮಗು ಸಾವು!
ವಿಜಯಪುರ: ಆಕಸ್ಮಿಕವಾಗಿ ಸುಣ್ಣದ ಡಬ್ಬಿಯನ್ನು ನುಂಗಿದ ಒಂಭತ್ತು ತಿಂಗಳ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. 

ವಿಜಯಪುರದ ತಿಕೋಟಾ ಪಟ್ಟಣದಲ್ಲಿ ನಡೆದ ಘಟನೆಯಲ್ಲಿ ಮಲ್ಲು ಹೆಸರಿನ ಮಗು ಸಾವನ್ನಪ್ಪಿದೆ. ತಿಕೋಟಾ ನಿವಾಸಿ ವಿಶ್ವನಾಥ ತಾಳಿಕೋಟಿ ಅವರ ಮಗುವು ಇದಾಗಿದ್ದು ಮನೆಯಲ್ಲಿ ಆಡುತ್ತಿದ್ದ ಮಗು ಆಕಸ್ಮಿಕವಾಗಿ ಸುಣ್ಣದ ಡಬ್ಬಿಯನ್ನು ಆಟವೆಂಬಂತೆ ಬಾಯಿಗೆ ಹಾಕಿಕೊಂಡು ನುಂಗಿದೆ.

ಮಗು ಡಬ್ಬಿ ನುಂಗಿದ್ದನ್ನು ಕಂಡ ಪೋಷಕರು ತಕ್ಷಣ ಆಸ್ಪತ್ರೆಗೆ ದಾಕಲಿಸಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ವೈದ್ಯರು ಮಗುವಿನ ದೇಹ ಸೇರಿದ್ದ ಡಬ್ಬಿಯನ್ನು ಹೊರತೆಗೆದರೂ ಅದರಲ್ಲಿದ್ದ ಬಹುಪಾಲು ಸುಣ್ಣ ಮಗುವಿನ ದೇಹಕ್ಕೆ ಸೇರಿದ್ದ ಕಾರಣ ಮಗು ಸಾವಿಗೀಡಾಗಿದೆ.

ತಿಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Posted by: RHN | Source: Online Desk

ಈ ವಿಭಾಗದ ಇತರ ಸುದ್ದಿ