ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಭಾರತದ ಕೈವಶ

ಕಾನ್ಪೂರದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಮಂಗಳವಾರ ಭಾರತ 5 ವಿಕೆಟ್‌ಗಳ ಭರ್ಜರಿ...

Published: 27th November 2013 02:00 AM  |   Last Updated: 27th November 2013 08:00 AM   |  A+A-


Posted By : Vishwanath
ಕಾನ್ಪೂರ್: ಕಾನ್ಪೂರದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಮಂಗಳವಾರ ಭಾರತ 5 ವಿಕೆಟ್‌ಗಳ ಭರ್ಜರಿ ಜಯ ಗಳಿಸುವ ಮೂಲಕ 2-1 ಅಂತರದಲ್ಲಿ ಏಕದಿನ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ.

264 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ, ಆರಂಭಿಕ ಆಟಗಾರ ಶಿಖರ್ ಧವನ್‌ರ ಅಮೋಘ ಶತಕ ಮತ್ತು ಯುವರಾಜ್ ಸಿಂಗ್ ಅವರ ಅರ್ಧ ಶತಕ ನೆರವಿನೊಂದಿಗೆ ಭಾರತ ಭರ್ಜರಿ ಜಯ ದಾಖಲಿಸಿತು.

ಆರಂಭಿಕ ಆಟಗಾರನಾದ ರೋಹಿತ್ ಶರ್ಮಾ 4 ರನ್‌ಗಳಿಸಿ ರಾಮ್‌ಪಾಲ್ ಬೌಲಿಂಗ್‌ನಲ್ಲಿ ಬ್ರಾಹೊಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅವರ ಹಿಂದೆಯೆ 19 ರನ್ ಗಳಿಸಿದ್ದ, ವಿರಾಟ್ ಕೊಹ್ಲಿ ಅವರು ರಾಮ್‌ಪಾಲ್‌ರ ಮಾರಕ ದಾಳಿಗೆ ತುತ್ತಾದರು. ಇದರೊಂದಿಗೆ ಭಾರತಕ್ಕೆ ಆರಂಭಿಕ ಹೊಡೆತ ಬಿದ್ದಿತ್ತು.

ಆದರೆ ನಂತರ ಯುವರಾಜ್ ಸಿಂಗ್ ಹಾಗೂ ಶಿಖರ್ ಧವನ್ ಉತ್ತಮ ಬ್ಯಾಟಿಂಗ್ ಮಾಡಿ ಭಾರತದ ಗೆಲುವಿಗೆ ಕಾರಣರಾದರು. 74 ಎಸೆತಗಳಲ್ಲಿ 55ರನ್ ಗಳಿಸಿದ್ದ ಸಿಂಗ್, ನರೈನ್ ಎಸೆತಕ್ಕೆ ಕೀಪರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆನಂತರ ಶಿಖರ್ ಧವನ್ 95 ಎಸೆತಗಳಲ್ಲಿ 119ರನ್ ಗಳಿಸಿ ಬ್ರಾಹೊಗೆ ಕ್ಯಾಚ್ ನೀಡಿದರು.

ನಂತರ ಬಂದ ರೈನಾ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಉತ್ತಮ ಜತೆಯಾಟದಿಂದಾಗಿ ಭಾರತ 46 ಓವರ್‌ನಲ್ಲಿ 266ರನ್ ಗಳಿಸಿ ಜಯದ ನಗೆ ಬೀರಿತು.

ಕಾನ್ಪೂರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 50 ಓವರ್‌ಗಳಲ್ಲಿ 264 ರನ್ನುಗಳ ಗುರಿ ನೀಡಿತ್ತು.

ಟಾಸ್ ಸೋತು ಬ್ಯಾಟಿಂಗಿಗೆ ಇಳಿದ ವಿಂಡೀಸ್ ಪರವಾಗಿ ಪೊವೆಲ್ 81 ಎಸೆತದಲ್ಲಿ 70ರನ್ ಗಳಿಸಿದರು. ಮೂರು ಪಂದ್ಯಗಳ ಸರಣಿಯಲ್ಲಿ ಎರಡನೇ ಅರ್ಧ ಶತಕ ಬಾರಿಸಿದರು. ಸ್ಯಾಮ್ಯುಯೆಲ್ಸ್ 91 ಎಸೆತಗಳಲ್ಲಿ 71ರನ್ ಜತೆ ಸೇರಿಕೊಂಡು ಎರಡನೇ ವಿಕೆಟಿಗೆ 117ರನ್ ಕಲೆ ಹಾಕಿದರು. ಬಳಿಕ ಕೊನೆಯಲ್ಲಿ ಬ್ರಾವೋ ಅವರು ಅಜೇಯ 51 ರನ್ನುಗಳ ಕಾಣಿಕೆ ನೀಡುವುದರೊಂದಿಗೆ ನಿಗದಿತ 50 ಓವರ್‌ಗಳಲ್ಲಿ ವೀಂಡೀಸ್ 5 ವಿಕೆಟ್ ನಷ್ಟಕ್ಕೆ 263 ರನ್ ದಾಖಲಿಸಿತು.

Stay up to date on all the latest ಈಗಿನ ಸುದ್ದಿ news with The Kannadaprabha App. Download now
facebook twitter whatsapp