"ಹೆಜ್ಜೆ 'ತಂಡ ಪ್ರಸ್ತುತಿ ಪಡಿಸುತ್ತಿದೆ ‘ಶಬ್ದಗುಚ್ಛ’ ತಂಡದ 'ಮಾಯಾವಿ ಸರೋವರ'

ರಂಗಭೂಮಿಯ ವಿಶಿಷ್ಟ ಪ್ರಯೋಗಗಳ ಆಶಯ ಹೊಂದಿದ ಬೆಂಗಳೂರಿನ ನಮ್ಮ ‘ಹೆಜ್ಜೆ’ ತಂಡವು, ಮುಂಬಯಿನ ...

Published: 19th June 2014 02:00 AM  |   Last Updated: 19th June 2014 02:37 AM   |  A+A-


Posted By : Rashmi
ಬೆಂಗಳೂರು :ರಂಗಭೂಮಿಯ ವಿಶಿಷ್ಟ ಪ್ರಯೋಗಗಳ ಆಶಯ ಹೊಂದಿದ ಬೆಂಗಳೂರಿನ ನಮ್ಮ ‘ಹೆಜ್ಜೆ’ ತಂಡವು, ಮುಂಬಯಿನ ‘ಶಬ್ದಗುಚ್ಛ’ ತಂಡದ "ಮಾಯಾವಿ ಸರೋವರ" ನಾಟಕವನ್ನು ಇದೇ ಶನಿವಾರ, ದಿನಾಂಕ 21.06.2014 ರಂದು ನಗರದ ಕೆ.ಹೆಚ್.ಕಲಾಸೌಧ ರಂಗಮಂದಿರದಲ್ಲಿ, ಸಂಜೆ 7.00 ಗಂಟೆಗೆ ಪ್ರಸ್ತುತ ಪಡಿಸುತ್ತಿದೆ.
ಮುಂಬಯಿನ ಖ್ಯಾತ ಅಭಿನೇತ್ರಿ ಅಹಲ್ಯಾ ಬಲ್ಲಾಳ್ ಅವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ.
ಮೂಲ ಹಿಂದಿ ನಾಟಕವನ್ನು ಡಾ.ಶಂಕರ ಶೇಷ ರಚಿಸಿದ್ದು, ಡಾ. ಮೈ ಶ್ರೀ.ನಟರಾಜ್ ಕನ್ನಡಕ್ಕೆ ಅನುವಾದಿಸಿದ್ದಾರೆ.

"ಮಾಯಾವಿ ಸರೋವರ’
ಉತ್ತರ ಭಾರತದ 'ನೌಟಂಕಿ' ಶೈಲಿಯಲ್ಲಿ ಬರೆಯಲ್ಪಟ್ಟಿರುವ ಈ ನಾಟಕ ಅನೇಕ ಕಾರಣಗಳಿಂದಾಗಿ ವಿಶಿಷ್ಟವೆನಿಸುತ್ತದೆ. ಗಂಡು ಹೆಣ್ಣುಗಳ ಮೂಲತಃ ವಿಭಿನ್ನ ವ್ಯಕ್ತಿತ್ವದಲ್ಲಿರುವ ಅನನ್ಯತೆಯನ್ನು  ಶೋಧಿಸವ ನಾಟಕದ ವಸ್ತು ಕಾಲ-ದೇಶಗಳನ್ನು  ಮೀರುತ್ತದೆ. ಗಂಡು ಹೆಣ್ಣಿನ ನಡುವೆ ಪರಸ್ಪರ ಸ್ಪರ್ಧಾತ್ಮಕ  ವೈರುದ್ಧ್ಯಗಳಿರುವಂತೆ ತೋರಿದರೂ ಅವರೀರ್ವರ ನಡುವೆ ಆಕರ್ಷಣೆ, ಅರ್ಪಣೆ ಮತ್ತು ಅವಲಂಬನೆ ಇರುತ್ತದೆ ಎಂಬುದನ್ನು ಅಲ್ಲಗಳೆಯಲಾಗದು. ಅಂತೆಯೇ ಪ್ರತಿ ಗಂಡಿನಲ್ಲಿ ಓರ್ವ ಹೆಣ್ಣು  ಮತ್ತು ಪ್ರತಿ  ಹೆಣ್ಣಿನಲ್ಲೂ ಒಬ್ಬ ಗಂಡು ಇರುವುದು ಅನುಭವವೇದ್ಯವೇ. ಇದು ಮೇಲ್ನೋಟಕ್ಕೆ ಪ್ರಹಸನವೆನಿಸಿದರೂ ಇಲ್ಲಿ ವ್ಯವಸ್ಥೆ, ಆಡಳಿತ, ಗಂಡು -ಹೆಣ್ಣಿನ ಪರಸ್ಪರ ಸಂಬಂಧ  ಹಾಗೂ ಲಿಂಗಾಧಾರಿತ ಕಾರ್ಯವಿಭಜನೆ, ಮೌಲ್ಯಗಳಂತಹ ಗಂಭೀರ ವಿಷಯಗಳನ್ನು ವಿಡಂಬನೆಯ ಮೂಲಕ ಚರ್ಚಿಸಲಾಗಿದೆ .
 

ರಂಗದ ಮೇಲೆ

ಸೂತ್ರಧಾರ: ಸುರೇಂದ್ರಕುಮಾರ್ ಮಾರ್ನಾಡ್
ರಾಜ: ಮೋಹನ್ ಮಾರ್ನಾಡ್
ರಾಣಿ: ಅಹಲ್ಯ ಬಲ್ಲಾಳ್
ಸ್ತ್ರೀ: ಗೀತಾ ಶಂಕರ್
ಮಂತ್ರಿ: ಹರ್ಷಕುಮಾರ್ ಉಡುಪಿ
ಪತ್ರಿಕೆಯ ಎಡಿಟರ್: ಮನೋಹರ್ ನಾಯಕ್
ವಿಶ್ವವಿದ್ಯಾಲಯದ ಡೈರೆಕ್ಟರ್: ಪ್ರವೀಣ್ ಸುವರ್ಣ, ಬೈಕಂಪಾಡಿ
ಡೇರಿ ಬೋರ್ಡ್ ಅಧ್ಯಕ್ಷೆ: ಕೃಪಾ ಪೂಜಾರಿ
ನ್ಯಾಯಾಧೀಶ: ರಾಘವೇಂದ್ರ ಐತಾಳ್
ಕುಮಾರ: ಶಂತನು ಬಲ್ಲಾಳ್
ರಾಜಕುಮಾರ: ಭೀಮರಾವ್ ಚಿಲ್ಕಾ
ನರ್ತಕಿ: ರಕ್ಷಿತಾ ನಾಯಕ್
ಋಷಿ: ಅವಿನಾಶ್ ಕಾಮತ್

ರಂಗದ ಹಿಂದೆ

ಬೆಳಕು: ಚಂದ್ರಶೇಖರ್ ಹೆಗ್ಡೆ
ಸಂಗೀತ: ಜ್ಯೋತಿ ಭಟ್ ಹಾಗೂ ಶಂತನು
ಗಾಯನ: ಜ್ಯೋತಿ, ಅವಿನಾಶ್ ಹಾಗೂ ಶಂತನು
ತಬಲಾ ಹಾಗೂ ಢೋಲಕ್: ಮನೋಜ್ ರಾವ್
ಪರಿಕರ: ಗಣೇಶಕುಮಾರ್
ವಿನ್ಯಾಸ ಹಾಗೂ ನಿರ್ದೇಶನ: ಅಹಲ್ಯಾ ಬಲ್ಲಾಳ್
ಮೂಲ ಹಿಂದಿ: ಡಾ. ಶಂಕರ್ ಶೇಷ್, ಕನ್ನಡಕ್ಕೆ: ಡಾ.ಮೈ.ಶ್ರೀ.ನಟರಾಜ್

ದಿನಾಂಕ: 21.06.2014
ಸಮಯ: ಸಂಜೆ 7.00 ಗಂಟೆ

ಸ್ಥಳ: ಕೆ.ಹೆಚ್.ಕಲಾಸೌಧ ರಂಗಮಂದಿರ, ಹನುಮಂತನಗರ, ಬೆಂಗಳೂರು.
ಆಯೋಜನೆ ಹಾಗೂ ನಿರ್ವಹಣೆ: ‘ಹೆಜ್ಜೆ’ ಬೆಂಗಳೂರು.

ಮುಂಗಡ ಬುಕಿಂಗ್, ಟಿಕೆಟ್ ಗಳಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: +919900196591
ಟಿಕೆಟ್ ಮಾರಾಟದಿಂದ ಸಂಗ್ರಹವಾದ ಹಣದ ಒಂದು ಭಾಗವನ್ನು ಪಿಯುಸಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಗೆ ದೇಣಿಗೆಯಾಗಿ ನೀಡಲಾಗುತ್ತಿದೆ.

Stay up to date on all the latest ಈಗಿನ ಸುದ್ದಿ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp