ಚಳಿಗಾಲದಲ್ಲಿ ಒಣಗುವ ತುಟಿಗಳು, ಕೈಗಳ ರಕ್ಷಣೆಗೆ ಇಲ್ಲಿದೆ ಕೆಲ ಸರಳ ಪರಿಹಾರಗಳು

ಚಳಿಗಾಲ ಆರಂಭವಾಗಿದ್ದು, ಈ ಸಮಯದಲ್ಲಿ ತುಟಿಗಳು ಹಾಗೂ ಚರ್ಮದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ. ಚಳಿಗಾಲ ಬಂತೆಂದರೆ ಸೌಂದರ್ಯ ಪ್ರಿಯರಿಗೆ ತಲೆನೋವು ಶುರುವಾಗುತ್ತದೆ. ಚಳಿಗಾಲದಲ್ಲಿ ಚರ್ಮ ಒಡೆಯುವುದು ಹೆಚ್ಚು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚಳಿಗಾಲ ಆರಂಭವಾಗಿದ್ದು, ಈ ಸಮಯದಲ್ಲಿ ತುಟಿಗಳು ಹಾಗೂ ಚರ್ಮದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ. ಚಳಿಗಾಲ ಬಂತೆಂದರೆ ಸೌಂದರ್ಯ ಪ್ರಿಯರಿಗೆ ತಲೆನೋವು ಶುರುವಾಗುತ್ತದೆ. ಚಳಿಗಾಲದಲ್ಲಿ ಚರ್ಮ ಒಡೆಯುವುದು ಹೆಚ್ಚು. ಇಂತಹ ಸಂದರ್ಭದಲ್ಲಿ ಚರ್ಮ ಹಾಗೂ ಒಣಗುವ ತುಟಿಗಳ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. 
ಚಳಿಗಾಲದಲ್ಲಿ ತುಟಿ ಒಣಗುವುದು ಹಾಗೂ ಕೈಗಳ ಚರ್ಮ ಒಣಗುವುದು ಸಾಮಾನ್ಯ. ಇಂತಹ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು.
ಒಣಗುವ ತುಟಿಗಳು ಹಾಗೂ ಕೈಗಳ ರಕ್ಷಣೆಗೆ ಇಲ್ಲಿದೆ ಕೆಲ ಪರಿಹಾರಗಳು...
  • ತುಟಿ ಒಣಗಿದ ಕೂಡಲೇ ಸಾಮಾನ್ಯವಾಗಿ ಎಲ್ಲರೂ ಎಂಜಲು ಹಾಕುತ್ತಾರೆ. ಇನ್ನೂ ಕೆಲವರು ಹಲ್ಲು, ಬೆರಳುಗಳಿಂದ ಉಜ್ಜುತ್ತಾರೆ. ಈ ರೀತಿ ಎಂದಿಗೂ ಮಾಡಬಾರದು. ತುಟಿಗಳು ಮೃದುವಾಗಿರಬೇಕಿದ್ದರೆ, ಆರ್ಗನ್ ಪ್ಯೂರ್ ಕೋಲ್ಡ್ ಆಯಿಲ್ ನೊಂದಿಗೆ ಒಂದು ಚಮಚ ಬ್ರೌನ್ ಶುಗರ್ ಮಿಕ್ಸ್ ಮಾಡಿಕೊಂಡು ತುಟಿಗಳಿಗೆ ಹಚ್ಚಬೇಕು. 
  • ತುಟಿಗಳ ಆರೈಕೆಗೆ ಜೇನುತುಪ್ಪ ಉತ್ತಮ ಮಾಯಿಶ್ಚರೈಸರ್ ಇದ್ದಂತೆ. ತುಟಿಗಳ ಮೇಲೆ ಜೇನುತುಪ್ಪವನ್ನು ನೇರವಾಗಿ ಹಚ್ಚಬಹುದು. ಇಲ್ಲದೇ ಹೋದರೆ, ಮಲಗುವುದಕ್ಕೂ ಮುನ್ನ ಗ್ಲಿಸರಿನ್ ಜೊತೆಗೆ ಜೇನುತುಪ್ಪ ಸೇರಿಸಿ ಹಚ್ಚಿದರೆ, ಫಲಿತಾಂಶ ಅತ್ಯುತ್ತಮವಾಗಿರುತ್ತದೆ. 
  • ಹಾಲಿನ ಕೆನೆಯನ್ನು ತುಟಿಗಳಿಗೆ ಹಚ್ಚಿ 10 ನಿಮಿಷಗಳ ಕಾಲ ಬಿಡಬೇಕು. ನಂತರ ಬೆಚ್ಚಗಿನ ನೀರಿನಲ್ಲಿ ಹತ್ತಿಯನ್ನು ಅದ್ದಿ ತುಟಿಗಳನ್ನು ನಯವಾಗಿ ಒರೆಸಬೇಕು. ಪ್ರತಿನಿತ್ಯ ಹೀಗೆ ಮಾಡುವುದರಿಂದ ತುಟಿಗಳ ಬಣ್ಣ ಕೂಡ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. 
  • ತುಟಿಗಳು ಒಣಗಿದ ಕೂಡಲೇ ಕೆಲವರು ತುಟಿಗಳಿಗೆ ಎಂಜಲು ಹಾಕುತ್ತಾರೆ. ಇದರಿಂದ ತುಟಿಗಳು ಒಡೆಯುತ್ತವೆ. ಎಂಜಲು ಹಾಕುವುದರಿಂದ ತುಟಿಗಳು ಮತ್ತಷ್ಟು ಒಣಗುತ್ತವೆ. ತುಟಿಗಳು ಒಣಗುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಹೆಚ್ಚೆಚ್ಚು ನೀರು ಕುಡಿಯಬೇಕು. 
  • ಸದಾಕಾಲ ಲಿಪ್ ಬಾಲ್ಮ್ ಇಟ್ಟುಕೊಂಡಿರಿ. ತುಟಿಗಳು ಒಡೆಯದಂತೆ ನೋಡಿಕೊಳ್ಳಲು ತುಪ್ಪ, ಬಾದಾಮಿ ಎಣ್ಣೆ, ಕೊಬ್ಬರಿ ಎಣ್ಣೆ ಅತ್ಯಂತ ಉಪಯೋಗಕಾರಿಯಾಗಿದೆ. ಇದರಿಂದ ತುಟಿಗಳನ್ನು ಉತ್ತಮವಾಗಿ ರಕ್ಷಣೆ ಮಾಡಿಕೊಳ್ಳಬಹುದು. 
  • ಚಳಿಗಾಲದಲ್ಲಿ ತುಟಿಗಳ ರಕ್ಷಣೆಗೆ ಲಿಪ್'ಸ್ಟಿಕ್ ಗಳು ಪ್ರಮುಖವಾಗಿರುತ್ತವೆ. ಚಳಿಗಾಲದಲ್ಲಿ ಗುಲಾಬಿ ಬಣ್ಣದ ಲಿಪ್ ಸ್ಟಿಕ್ ಗಳನ್ನು ಬಳಕೆ ಮಾಡುವುದು ಉತ್ತಮವಾಗಿರುತ್ತದೆ. 
ಇವಿಷ್ಟೂ ತುಟಿಗಳ ರಕ್ಷಣೆಗೆ ಪರಿಹಾರವಾದರೆ, ಇನ್ನು ಕೈಗಳ ರಕ್ಷಣೆಗೂ ಪರಿಹಾರವಿದೆ... ಅವುಗಳು ಈ ಕೆಳಗಿನಂತಿವೆ. 
  • ಚಳಿಗಾಲದಲ್ಲಿ ಕೈಗಳ ರಕ್ಷಣೆಗೆ ರಬ್ಬರ್ ಗ್ಲೌಸ್ ಗಳನ್ನು ಬಳಕೆ ಮಾಡಬೇಕು. ಕೈಗಳನ್ನು ಸ್ವಚ್ಛವಾಗಿ ತೊಳೆದು ಗ್ಲೌಸ್ ಗಳನ್ನು ತೊಡಬೇಕು. ಕೈಗಳನ್ನು ತೊಳೆದ ಕೂಡಲೇ ಕ್ರೀಮ್ ಹಚ್ಚುವುದನ್ನು ಮರೆಯಬಾರದು. 
  • ರಾತ್ರಿ ವೇಳೆ ಕೈಗಳನ್ನು ಸ್ವಚ್ಛವಾಗಿ ತೊಳೆದು ಕ್ರೀಮ್ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ಇದೇ ವೇಳೆ ಉಗುರುಗಳಿಗು ಮಸಾಜ್ ಮಾಡಿಕೊಳ್ಳಬೇಕು. 
  • ಸ್ನಾನಕ್ಕೆ ಹೋಗುವುದಕ್ಕೂ ಮುನ್ನ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಚರ್ಮ ಮೃದುವಾಗಿರುತ್ತದೆ. 
  • ಸ್ನಾನ ಮಾಡಿದ ಕೂಡಲೇ ಕ್ರೀಮ್'ನ್ನು ಹಚ್ಚಿ. ಸ್ನಾನ ಮಾಡಿದ ಬಳಿಕ ಚರ್ಮ ತೇವವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕ್ರೀಮ್ ಗಳನ್ನು ಹಚ್ಚುವುದರಿಂದ ಚರ್ಮ ಮಾಯಿಶ್ಚರ್ ಆಗಿರುವಂತೆ ನೋಡಿಕೊಳ್ಳುತ್ತದೆ. 
  • ಚಳಿಗಾಲದಲ್ಲಿ ಗ್ಲಿಸರಿನ್ ಹಾಗೂ ಜೆಲ್ ಗಳು ಇರುವಂತಹ ಸೋಪ್ ಗಳನ್ನೇ ಹೆಚ್ಚು ಬಳಕೆ ಮಾಡಿ. 
  • ಬೆಣ್ಣೆಹಣ್ಣಿನ (ಆವಕಾಡೋ) ಎಣ್ಣೆ 1 ಚಮಚ ತೆಗೆದುಕೊಂಡು ಅದಕ್ಕೆ 1 ಚಮಚ ಜೇನುತುಪ್ಪ, 1 ಚಮಚ ಮೊಸರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಕೈಗಳಿಗೆ ಮಸಾಜ್ ಮಾಡಿ. 10 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಕೈಗಳ ಚರ್ಮ ಒಣಗಿರುವುದು ಕಡಿಮೆಯಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com