ಬೇಸಿಗೆಯಲ್ಲಿ ಪೌಷ್ಟಿಕ ಮತ್ತು ಕೊಬ್ಬುರಹಿತ ಆಹಾರಕ್ಕೆ ಇರಲಿ ಆದ್ಯತೆ!

ಬೇಸಿಗೆಯಲ್ಲಿ ಪೌಷ್ಠಿಕ ಮತ್ತು ಕೊಬ್ಬು ರಹಿತ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಅಮೆರಿಕಾದ ವಿಜ್ಞಾನ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ರಾಷ್ಟ್ರೀಯ ಅಕಾಡೆಮಿಯ ತಜ್ಞರು ಸಲಹೆ ನೀಡಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೇಸಿಗೆ ಕಾಲದಲ್ಲಿ ಪೌಷ್ಠಿಕ ಮತ್ತು ಕೊಬ್ಬು ರಹಿತ ಆಹಾರ ಸೇವನೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಆಹಾರದಂತೆ ನೀರನ್ನು ಸಹ ಸೂಕ್ತ ರೀತಿಯಲ್ಲಿ ಪ್ರತಿನಿತ್ಯ ಕುಡಿಯಬೇಕು ಎಂದು ಅಮೆರಿಕಾದ ವಿಜ್ಞಾನ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ರಾಷ್ಟ್ರೀಯ ಅಕಾಡೆಮಿಯ ತಜ್ಞರು ಸಲಹೆ ನೀಡಿದ್ದಾರೆ.

ನಾವು ಆಹಾರ ಸೇವಿಸಿದ ಬಳಿಕ ಶೇ, 20 ರಷ್ಟು ನೀರನ್ನು ಕುಡಿಯಬೇಕು, ಪುರುಷರು  ಪ್ರತಿನಿತ್ಯ 3.7 ಲೀಟರ್ ಹಾಗೂ ಮಹಿಳೆಯರು 2.7 ಲೀಟರ್ ನಷ್ಟು ನೀರು ಕುಡಿಯಬೇಕೆಂದು ಅವರು ಹೇಳಿದ್ದಾರೆ.

ಪ್ರತಿನಿತ್ಯ 8 ರಿಂದ  10 ಗ್ಲಾಸ್ ಅಂದರೆ (250 ಎಂಎಲ್ ) ನೀರು ಕುಡಿಯಬೇಕೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅಂದರೆ 2 ರಿಂದ ಎರಡೂವರೆ ಲೀಟರ್ ನಷ್ಟಾಗುತ್ತದೆ. ಬೇಸಿಗೆಯಲ್ಲಿ ಬಿಸಿಯಿಂದಾಗಿ ಇನ್ನೂ ಹೆಚ್ಚಿಗೆ ನೀರನ್ನು ಆಗಾಗ್ಗೆ ಕುಡಿಯಬೇಕಾಗುತ್ತದೆ. ಇದರಿಂದಾಗಿ ದಿನದ ಬಾಯಾರಿಕೆ ತಪ್ಪುತ್ತಲ್ಲದೇ, ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದರಿಂದ ಹೆಪಟಿಟೈಸ್ , ಗ್ಯಾಸ್ಟ್ರಿಕ್ ಮತ್ತಿತರ ರೋಗಗಳು ಬೇಸಿಗೆ ಸಂದರ್ಭದಲ್ಲಿ ಬಾರದಂತೆ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೇಸಿಗೆ ಸಂದರ್ಭದಲ್ಲಿ ಅಲ್ಪ ಪ್ರಮಾಣದ ಊಟ ಸೇವಿಸಬೇಕು, ಆಗಾಗ್ಗೆ ಗುಣಮಟ್ಟದ ಲಘು ಪ್ರಮಾಣದ ಆಹಾರ ಸೇವನೆಯಿಂದ  ಕ್ಯಾಲೋರಿಯ ಪ್ರಮಾಣ ಹೆಚ್ಚಿ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಬಹುದು ಬೇಸಿಗೆ ಸಂದರ್ಭದಲ್ಲಿ ಮೊಸರು ಸೇವನೆ ಉತ್ತಮ ಎಂದಿದ್ದಾರೆ.
ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳು, ಸಾಲಡ್, ತಾಜಾ ಜ್ಯೂಸ್ ಗಳನ್ನು ಕುಡಿಯಬೇಕು ಅದರಲ್ಲೂ ಹೆಚ್ಚಿನ ನೀರಿನಾಂಶ ಇರುವ ಸೌತೆಕಾಯಿ, ಕ್ಯಾರೇಟ್, ಬೀಟ್ ರೂಟ್, ಟೋಮ್ಯಾಟೋ, ಕಲ್ಲಂಗಡಿ, ಹಾಗೂ ಹಸಿರು ತರಕಾರಿಗಳನ್ನು ತಿನ್ನಬೇಕು ಎಂದು ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com