ವಾಕಿಂಗ್, ಸೈಕ್ಲಿಂಗ್ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭ!

ನಡೆಯುವುದು ಹಾಗೂ ಸೈಕ್ಲಿಂಗ್ ಮಾಡುವುದರಿಂದ ದೀರ್ಘಾಯುಷ್ಯ ಹೊಂದುವುದಕ್ಕೆ ಸಾಧ್ಯವಿದೆ.
ವಾಕಿಂಗ್, ಸೈಕ್ಲಿಂಗ್ ಮಾಡುವುದರಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಲಾಭ!
ವಾಕಿಂಗ್, ಸೈಕ್ಲಿಂಗ್ ಮಾಡುವುದರಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಲಾಭ!
ಲಂಡನ್: ನಡೆಯುವುದು ಹಾಗೂ ಸೈಕ್ಲಿಂಗ್ ಮಾಡುವುದರಿಂದ ದೀರ್ಘಾಯುಷ್ಯ ಹೊಂದುವುದಕ್ಕೆ ಸಾಧ್ಯವಿದೆ. 
ಜನರು ಫಿಟ್ ಆಗಿರುವುದಕ್ಕೆ ಜಿಮ್ ಹಾಗೂ ವ್ಯಾಯಾಮ ಮಾಡಬೇಕೆಂದುಕೊಳ್ಳುತ್ತಾರೆ. ಆದರೆ ದಿನನಿತ್ಯ ನಡೆಯುವುದು, ಮೆಟ್ಟಿಲು ಹತ್ತುವುದು, ಸೈಕ್ಲಿಂಗ್ ಮಾಡುವುದರಿಂದಲೂ ಫಿಟ್ ಆಗಿರಬಹುದು ಇದು ಆರೋಗ್ಯಕ್ಕೂ ಉತ್ತಮವಾಗಿದ್ದು, ದೀರ್ಘಾಯುಷ್ಯದ ಗುಟ್ಟೂ ಆಗಿದೆ ಎಂದು ಸ್ಟಾಕ್ಹೋಮ್ ನ  ಸ್ವೀಡಿಷ್ ಸ್ಕೂಲ್ ಆಫ್ ಸ್ಪೋರ್ಟ್ ಅಂಡ್ ಹೆಲ್ತ್ ಸೈನ್ಸಸ್ ನ  ಎಲಿನ್ ಏಕ್ಲಮ್-ಬಾಕ್ ಹೇಳಿದ್ದಾರೆ. 
18-74 ವರ್ಷದ 316,137 ವಯಸ್ಕರನ್ನು ಸಮೀಕ್ಷೆಗೊಳಪಡಿಸಿ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ. ಸೈಕ್ಲಿಂಗ್ ಮಾಡುವುದರಿಂದಾಗಿ ಹೃದಯ ಹಾಗೂ ಶ್ವಾಸಕೋಶಕ್ಕೆ ಹೆಚ್ಚಿನ ಆಮ್ಲಜನಕ ಅತಿ ಹೆಚ್ಚು ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ ಎಂದು ಯುರೋ ಪ್ರಿವೆಂಟ್ 2019 ನಲ್ಲಿ ಮಂಡಿಸಲಾದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. 
ಅಷ್ಟೇ ಅಲ್ಲದೇ ವಾಕಿಂಗ್, ಸೈಕ್ಲಿಂಗ್ ನಿಂದಾಗಿ ಹೃದಯದ ಆರೋಗ್ಯವೂ ಉತ್ತಮಗೊಳ್ಳಲಿದ್ದು, ಎಲ್ಲಾ ವಯಾಸಿನವರಿಗೂ, ಮಹಿಳೆಯರು ಪುರುಷರೂ ಅನ್ವಯವಾಗುವ ಅಂಶವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com