ಮಹಿಳೆಯರು ತನ್ನ ಸಂಗಾತಿಗೆ ವಂಚಿಸಲು ಐದು ಕಾರಣಗಳು

ವಿವಿಧ ಕಾರಣಗಳಿಗಾಗಿ ಮಹಿಳೆಯರು ತಮ್ಮ ಸಂಗಾತಿಯನ್ನು ವಂಚಿಸುವುದು ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿದೆ. ಮಹಿಳೆಯರು ವಂಚಿಸಲು ಕೆಳವೊಂದು ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ''ಮೀನಿನ ಹೆಜ್ಜೆ ಬೇಕಾದರೂ ಗುರುತಿಸಬಹುದು ಆದರೆ, ಹೆಣ್ಣಿನ ಮನಸ್ಸಲ್ಲಿ ಏನಿದೆ ಎಂಬುದನ್ನು ಗುರುತಿಸಲು ಅಸಾಧ್ಯ'' ಎಂಬ ಮಾತಿದೆ. ಈ ಮಾತಿಗೆ ಅನುಗುಣವಾಗಿ  ಹೆಣ್ಣು ತನ್ನ  ಸಂಗಾತಿಗೆ ವಂಚಿಸುವುದು ಸಮಾಜದಲ್ಲಿ ನಡೆದುಕೊಂಡು ಬಂದಿದೆ. ಅಧ್ಯಯನವೊಂದರ ಪ್ರಕಾರ 10 ಮಹಿಳೆಯರಲ್ಲಿ 7 ಮಂದಿ ತಮ್ಮ ಸಂಗಾತಿಗಳಿಗೆ ವಂಚಿಸುತ್ತಾರೆ ಎಂಬುದು  ದೃಢಪಟ್ಟಿದೆ. 
ಹಾಗೆಯೇ ಗಂಡು ಹಾಗೂ ಹೆಣ್ಣು ಸಮಾನ ರೀತಿಯಲ್ಲಿ ವಂಚಿಸುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ಆದರೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲಿಗೆ ಏಕೆ ಈ ರೀತಿ ವಂಚನೆ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ.  
ಮಹಿಳೆಯರು ವಂಚಿಸಲು ಕೆಲವೊಂದು ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.
1. ಕಡಿಮೆ ಸ್ವಾಭಿಮಾನ:  ಉದ್ಯೋಗದಲ್ಲಿ ಅಸಂತೋಷ,  ಕೆಲಸದ ಸ್ಥಳದಲ್ಲಿ ಕಿರಿಕಿರಿ, ಲೈಂಗಿಕ ಜೀವನದಲ್ಲಿ ಅತೃಪ್ತಿ,  ಕಡಿಮೆ ಅಂದ, ಇಂತಹ ಪರಿಸ್ಥಿತಿಗಳು ಮಹಿಳೆಯರಲ್ಲಿ ಕಡಿಮೆ ಸ್ವಾಭಿಮಾನದ ಗುಣವನ್ನು ವೃದ್ದಿಸುತ್ತವೆ. ಸಂಗಾತಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಅನ್ನಿಸಿದಾಗ, ಹೆಚ್ಚು ಹಣ ಬೇಕೆಂದಾಗ ಸಹಜವಾಗಿಯೇ ಬೇರೆಯವರ ಕಡೆಗೆ ಆಕರ್ಷಣೆಗೆ ಒಳಗಾಗುತ್ತಾರೆ. ಆಕೆಯನ್ನು ಇಷ್ಟಪಡುವ, ಆಕೆಯ ಬೇಕು, ಬೇಡಗಳನ್ನು ಪೂರೈಸುವವರ ಕಡೆ ಆಕರ್ಷಿತರಾಗಿ ಸಂಗಾತಿಗೆ ವಂಚಿಸುತ್ತಾರೆ.
2. ಲೈಂಗಿಕ ಸುಖ ಸಿಗದಿದ್ದಾಗ :  ಪತಿ ಹಾಗೂ ಪತ್ನಿ ನಡುವೆ ಉತ್ತಮ ಸಂಬಂಧವೇರ್ಪಡಿಸುವಲ್ಲಿ ದೈಹಿಕ ಸಂಬಂಧಗಳು ಕೂಡಾ ಮಹತ್ವದ ಭಾಗವಾಗಿದೆ. ಪ್ರತಿಯೊಬ್ಬ ಮಹಿಳೆಯರೂ ಕೂಡಾ ಲೈಂಗಿಕತೆಯಲ್ಲಿ ಭಿನ್ನತೆ ಇಷ್ಟಪಡುತ್ತಾರೆ.  ದೈಹಿಕ ಬಯಕೆ ಆಕೆಯನ್ನು ಹುಚ್ಚಿಯನ್ನಾಗಿ ಮಾಡಬಿಡಬಹುದು ಅಥವಾ  ಸಂಗಾತಿಯೊಂದಿಗೆ ಆತ್ಮೀಯ ಸಂಬಂಧವನ್ನು ಬೆಳೆಸುವಲ್ಲಿ  ನಿರಾಸಕ್ತಿ ಮೂಡಿಸಬಹುದು.
3. ಏಕಾಂಗಿ ಅನ್ನಿಸಿದಾಗ:  ಕೆಲಸದ ಸ್ಥಳದಲ್ಲಿ ಅಹಿತಕರ ವಾತಾವರಣ, ಸಂಗಾತಿ ಅಲಭ್ಯತೆ ಮತ್ತಿತರ ವಿವಿಧ ಕಾರಣಗಳಿಂದಾಗಿ ಭಾವನೆಗಳನ್ನು ಹಂಚಿಕೊಳ್ಳಲು ಯಾರು ಇಲ್ಲದೆ ಏಕಾಂಗಿ ಅನ್ನಿಸಿದಾಗ ಮಹಿಳೆಯರು ಮಾನಸಿಕ ಖಿನ್ನತೆಗೊಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ಬೇರೆಯವರ ಕಡೆಗೆ ಮನಸ್ಸು ತಿರುಗುವ ಸಾಧ್ಯತೆ ಹೆಚ್ಚಿರುತ್ತದೆ. 
4. ಸಂಬಂಧದಿಂದ ಆದರ್ಶವಾದ ನಿರೀಕ್ಷೆಗಳು:  ಕೆಲವು ಮಹಿಳೆಯರು ವಾಸ್ತವಿಕತೆಯ ಮಿತಿಗಳನ್ನು ಮೀರಿ ಅತಿರೇಕಗೊಳಿಸುತ್ತಾರೆ, ಅದು ಅವರ ಸಂಗಾತಿಯೊಂದಿಗಿನ ಸಂಬಂಧದಲ್ಲಿ ತೀವ್ರ ನಿರಾಶೆಯನ್ನುಂಟುಮಾಡುತ್ತದೆ. ಕೆಲವು ಮಹಿಳೆಯರು ತಮ್ಮ ಸಂಗಾತಿ ಎಲ್ಲಾ ದಿನ ತನ್ನೊಂದಿಗೆ ಇರಬೇಕೆಂಬ ಮನೋಸ್ಥಿತಿಯನ್ನು ಹೊಂದಿರುತ್ತಾರೆ. ಆದರೆ, ಇಂತಹ ನಿರೀಕ್ಷೆಗಳು ಸಿಗದಿದಾಗ್ಗ ಸಹಜವಾಗಿಯೇ  ತನ್ನ ಸಂಗಾತಿಗೆ ವಂಚಿಸುತ್ತಾರೆ.
5. ಕಣ್ಣಿಗೆ ಕಾಣುವುದೆಲ್ಲಾ ಬೇಕೆಂಬ ಹಂಬಲ : ಕೆಲ ಮಹಿಳೆಯರ ಕಣ್ಣಿಗೆ ಕಾಣುವುದೆಲ್ಲಾ ಬೇಕು ಬೇಕೆಂಬ ಹಂಬಲ ಕೂಡಾ ತನ್ನ ಸಂಗಾತಿಗೆ ವಂಚಿಸಲು ಕಾರಣವಾಗಬಹುದು. ಖುಷಿಯಿಂದ  ಮದುವೆಯಾದ ಸಂಗಾತಿ ಮತ್ತು ಕುಟುಂಬವನ್ನು ಪ್ರೀತಿಸುವ ಮಹಿಳೆಯರು ಸಹ ತಮ್ಮ ಸಂಗಾತಿಗೆ ಮೋಸ ಮಾಡುತ್ತಾರೆ.  ಕೆಲವರು ಲೈಂಗಿಕ ಕ್ರಿಯೆಯಿಂದ ವೈಯಕ್ತಿಕ ತೃಪ್ತಿಯ ಮತ್ತೊಂದು ಹಂತಕ್ಕೆ ಕೊಂಡೊಯ್ಯಬಹುದು ಎಂದು ಭಾವಿಸುತ್ತಾರೆ. 
ವಿಪರ್ಯಾಸವೆಂದರೆ ಅನೇಕ ಕಾರಣಗಳಿಂದಾಗಿ ಮಹಿಳೆಯರು ತಮ್ಮ ಸಂಗಾತಿಯನ್ನು ಮೋಸಗೊಳಿಸುತ್ತಾರೆ ಆದರೆ,  ಸಾಕಷ್ಟು ರೀತಿಯಲ್ಲಿ ವಿಶ್ವಾಸ ದ್ರೋಹಿಯಾಗಲು ಇಷ್ಟಪಡುವುದಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com