ಆರೋಗ್ಯಕರ ಜೀವನಶೈಲಿ ಪಾಲಿಸಿ: ಹೃದ್ರೋಗಗಳಿಂದ ದೂರವಿರಿ 

ಹೃದ್ರೋಗ ಇತ್ತೀಚಿನ ದಿನಗಳಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ಜನರ ಸಾವಿಗೆ ಪ್ರಮುಖ ಕಾರಣವಾಗಿದೆ. ಹೃದಯ ಖಾಯಿಲೆಗೆ ತುತ್ತಾಗುತ್ತಿರುವವರಲ್ಲಿ ಭಾರತೀಯರು ಹೆಚ್ಚಾಗಿದ್ದಾರೆ. ಜೀವನಶೈಲಿಯಲ್ಲಿ ಪ್ರಮುಖ ಬದಲಾವಣೆ, ಶಾರೀರಿಕ ಚಟುವಟಿಕೆ ಕಡಿಮೆಯಾಗುವುದು, ಸಕ್ಕರೆ, ಉಪ್ಪು, ಕೊಬ್ಬು ಪದಾರ್ಥಗಳ ಅತಿಯಾದ ಸೇವನೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೃದ್ರೋಗ ಇತ್ತೀಚಿನ ದಿನಗಳಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ಜನರ ಸಾವಿಗೆ ಪ್ರಮುಖ ಕಾರಣವಾಗಿದೆ. ಹೃದಯ ಖಾಯಿಲೆಗೆ ತುತ್ತಾಗುತ್ತಿರುವವರಲ್ಲಿ ಭಾರತೀಯರು ಹೆಚ್ಚಾಗಿದ್ದಾರೆ. ಜೀವನಶೈಲಿಯಲ್ಲಿ ಪ್ರಮುಖ ಬದಲಾವಣೆ, ಶಾರೀರಿಕ ಚಟುವಟಿಕೆ ಕಡಿಮೆಯಾಗುವುದು, ಸಕ್ಕರೆ, ಉಪ್ಪು, ಕೊಬ್ಬು ಪದಾರ್ಥಗಳ ಅತಿಯಾದ ಸೇವನೆ.


ಈ ಹೃದ್ರೋಗ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು, ಉತ್ತಮ ಆರೋಗ್ಯ ಹೇಗೆ ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಈ ಅಂಶಗಳನ್ನು ಪಾಲಿಸಬಹುದು.


ನೀವು ಏನು ತಿನ್ನುತ್ತಿದ್ದೀರಿ ಎಂಬುದರ ಮೇಲೆ ಗಮನವಿರಲಿ: ದೇಹವೇ ದೇಗುಲ ಎಂದು ಹಿರಿಯರು ಹೇಳುತ್ತಾರೆ. ದೇಹವನ್ನು ಗೌರವಿಸಲು ಕಲಿಯಿರಿ ಎಂದು. ಅಂದರೆ ನಮ್ಮ ದೇಹ ಯಾವ ರೀತಿ ಇರಬೇಕು ಎಂದು ನಾವು ನೋಡಿಕೊಳ್ಳಬೇಕು. ನೀವು ಏನು ಸೇವಿಸುತ್ತಿದ್ದೀರಿ, ನಿಮ್ಮ ಕುಟುಂಬ ಸದಸ್ಯರು ಏನು ತಿನ್ನುತ್ತಿದ್ದಾರೆ ಎಂದು ಯೋಚನೆ ಮಾಡಬೇಕು. 


ವ್ಯಾಯಾಮ, ಯೋಗ ಮಾಡಿ: ವೈದ್ಯರು, ಶಾರೀರಿಕ ತರಬೇತುದಾರರ ಸಲಹೆ ಪಡೆದು ನಿಮ್ಮ ದಿನನಿತ್ಯ ಜೀವನದಲ್ಲಿ ವ್ಯಾಯಾಮ ಮಾಡಿ. ಆರೋಗ್ಯಕರ ಜೀವನಶೈಲಿ ಕಂಡುಕೊಳ್ಳಿ. ನಗರ ಮತ್ತು ಹಳ್ಳಿಪ್ರದೇಶಗಳಲ್ಲಿ ವಾಸಿಸುತ್ತಿರುವವರು ಯಾವ ರೀತಿಯಲ್ಲಿಯಾದರೂ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು ಯಾವುದಾದರೊಂದು ಮಾರ್ಗ ಕಂಡುಕೊಳ್ಳಿ.


ದೇಹದ ಕೊಲೆಸ್ಟ್ರಾಲ್ ಮಟ್ಟ ನೋಡಿಕೊಳ್ಳಿ:
ಭಾರತದಲ್ಲಿ ನಿಧನವಾಗುತ್ತಿರುವವರಲ್ಲಿ ಶೇಕಡಾ 28ರಷ್ಟು ಪ್ರಮಾಣ ಹೃದ್ರೋಗ ಸಮಸ್ಯೆಯಿಂದಲೇ ಇರುತ್ತದೆ. ಹೃದ್ರೋಗಕ್ಕೆ ಪ್ರಮುಖ ಕಾರಣ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಜಾಸ್ತಿಯಾಗಿರುವುದು. ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂಬುದಿರುತ್ತದೆ. 


ತೂಕದ ಮೇಲೆ ಗಮನವಿರಲಿ: ಕಿಬ್ಬೊಟ್ಟೆಯ ಕೊಬ್ಬು ರಕ್ತದಲ್ಲಿನ ಸಕ್ಕರೆ ಮಟ್ಟಗಳು, ಅಧಿಕ ರಕ್ತದೊತ್ತಡ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟಗಳನ್ನು ಹೊಂದಿದ್ದು ಇವು ಹೃದಯ ಕಾಯಿಲೆಗಳಿಗೆ ಕಾರಣವಾಗುವ ಅಪಾಯಕಾರಿ ಅಂಶಗಳಾಗಿವೆ. ಹೊಟ್ಟೆಯ ಸುತ್ತ ಕೊಬ್ಬು ಸಂಗ್ರಹಣೆಯಾಗದಂತೆ ನೋಡಿಕೊಳ್ಳಿ.


ನಿಮ್ಮ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ: ಇಂದು ಬಹುತೇಕ ಭಾರತೀಯರಲ್ಲಿ ಒತ್ತಡ ಜೀವನದ ಭಾಗವಾಗಿದೆ. ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆ ಪ್ರಕಾರ, ಶೇಕಡಾ 89ರಷ್ಟು ಭಾರತೀಯರು ಒತ್ತಡವನ್ನು ಎದುರಿಸುತ್ತಿದ್ದಾರೆ. ಒತ್ತಡ ಭಾವನಾತ್ಮಕ ಅಥವಾ ಒತ್ತಡದಿಂದ ಆಹಾರ ಸೇವಿಸುವುದರ ಮೇಲೆ ಸಹ ಪರಿಣಾಮ ಬೀರುತ್ತದೆ. ದೇಹಕ್ಕೆ ಅಗತ್ಯವಿಲ್ಲದಿದ್ದರೂ ಮಾನಸಿಕ ಒತ್ತಡ ನಿಯಂತ್ರಿಸಲು ಆಹಾರ ಸೇವಿಸುತ್ತಿರುತ್ತಾರೆ. 


ಹೀಗಾಗಿ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಬೇಕು. ನಿಮಗೆ ಇಷ್ಟವಾದ ವಿಷಯಗಳನ್ನು ಮಾಡುತ್ತಾ ಹೋಗಬೇಕು. ಪ್ರತಿನಿತ್ಯ ನಿಮಗೆ ಇಷ್ಟವಾದವರ ಜೊತೆ ಕಳೆಯುವುದು, ಧ್ಯಾನ, ಚಿತ್ರಕಲೆ, ಪುಸ್ತಕ ಓದುವುದು, ಸಂಗೀತ ಕೇಳುವುದು, ಪ್ರವಾಸ ಹೋಗುವುದು ಇತ್ಯಾದಿಗಳನ್ನು ಮಾಡುತ್ತಿರಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com