ಸೆಲ್ಫೀ ಗೀಳಿನಿಂದ ಬಳಲುತ್ತಿದ್ದೀರಾ?

ಸ್ಮಾರ್ಟ್ ಫೋನ್ ಗಳು ಬಂದ ಮೇಲೆ ಸೆಲ್ಫಿ ತೆಗೆಯುವ ಗೀಳು ಹೆಚ್ಚಾಗುತ್ತಿದೆ. ಸೆಲ್ಫಿಗಳು ಸ್ವಯಂ ಅಭಿವ್ಯಕ್ತಿಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸ್ಮಾರ್ಟ್ ಫೋನ್ ಗಳು ಬಂದ ಮೇಲೆ ಸೆಲ್ಫಿ ತೆಗೆಯುವ ಗೀಳು ಹೆಚ್ಚಾಗುತ್ತಿದೆ. ಸೆಲ್ಫಿಗಳು ಸ್ವಯಂ ಅಭಿವ್ಯಕ್ತಿಯ ಒಂದು ರೂಪ. ತಮಗೆ ತಾವೇ ಪ್ರಾಮುಖ್ಯತೆ ಕೊಟ್ಟುಕೊಳ್ಳಲು, ಸಂಭ್ರಮಪಟ್ಟುಕೊಳ್ಳಲು ಜನರು ಸೆಲ್ಫಿ ತೆಗೆಯುವುದಕ್ಕೆ ಹೋಗುತ್ತಾರೆ. ಸೆಲ್ಫಿ ತೆಗೆಯುವಾಗ ಮನಸ್ಸಿನ ಭಾವನೆಗಳು ಕೂಡ ವಿಸ್ತಾರವಾಗುತ್ತದೆ, ಖುಷಿ ನೀಡುತ್ತದೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಸಂಭ್ರಮಿಸುವವರ ಸಂಖ್ಯೆಗಂತೂ ಲೆಕ್ಕವೇ ಇಲ್ಲ.
ಸೆಲ್ಫಿ ತೆಗೆಯುವ ಗೀಳು ನಿಮ್ಮಲ್ಲಿದೆ ಎಂದಾದರೆ ನೀವು ಸೆಲ್ಫಿಟಿಸ್ ಗೆ ಒಳಗಾಗಿದ್ದೀರಿ ಎಂದರ್ಥ. ಸೆಲ್ಫಿಟಿಸ್ ಒಂದು ರೀತಿಯ ಮಾನಸಿಕ ಪರಿಸ್ಥಿತಿಯಾಗಿದ್ದು ಒಬ್ಬ ವ್ಯಕ್ತಿ ನಿರಂತರವಾಗಿ ತನ್ನ ಫೋಟೋಗಳನ್ನು ತೆಗೆಯುತ್ತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುವುದು ಎಂದರ್ಥ. ಕೆಲ ವರ್ಷಗಳ ಹಿಂದೆ ಈ ಸೆಲ್ಫಿಟಿಸ್ ನ್ನು ಒಂದು ಮಾನಸಿಕ ಅಸ್ವಸ್ಥತೆ ಎಂದು ಪರಿಗಣಿಸಬೇಕೆಂದು ಅಮೆರಿಕಾದ ಮನೋಶಾಸ್ತ್ರ ಸಂಘಟನೆ ಮನವಿ ಮಾಡಿಕೊಂಡಿತ್ತು ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.
ವಯಸ್ಕರು ಮತ್ತು ಯುವಕ-ಯುವತಿಯರು ಇಂದು ಹೆಚ್ಚಾಗಿ ಸೆಲ್ಫಿಟಿಸ್ ಗೆ ಒಳಗಾಗುತ್ತಿದ್ದು ಅದು ಅವರ ವರ್ತನೆ ಮೇಲೆ ಕೂಡ ಪ್ರಭಾವ ಬೀರುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸೆಲ್ಫಿ ಮತ್ತು ಗುಂಪು ಸೆಲ್ಫಿ ತೆಗೆಯುವುದು ಹೆಚ್ಚು. ಇದೊಂದು ತೀವ್ರ ಮಾನಸಿಕ ಖಾಯಿಲೆ ಅಲ್ಲವಾದರೂ ಕೂಡ ನಿರಂತರವಾಗಿ ಸೆಲ್ಫಿಗಳನ್ನು ತೆಗೆಯುತ್ತಾ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿ ತಮ್ಮ ಫೋಟೋಗಳಿಗೆ ಹೆಚ್ಚೆಚ್ಚು ಲೈಕ್  ಸಿಗುತ್ತಿರಬೇಕೆಂದು ಭಾವಿಸುವುದು ಅಪಾಯಕಾರಿ ಗುಣಗಳು. ವ್ಯಕ್ತಿಗತ ಗುಣಲಕ್ಷಣಗಳು ಮತ್ತು ಸಾಮಾಜಿಕ ಪ್ರದರ್ಶನದಂತಹ ಲಕ್ಷಣಗಳು ಸ್ವಯಂ ಸ್ವಾಧೀನತೆಯ ವರ್ತನೆಗಳನ್ನು ಹೆಚ್ಚಿಸುತ್ತವೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ.
ಭಾರತ ದೇಶದಲ್ಲಿ 30 ವರ್ಷಕ್ಕಿಂತ ಕೆಳಗಿನ ಶೇಕಡಾ 30ಕ್ಕೂ ಹೆಚ್ಚಿನ ಜನರು ಯುವಕ-ಯುವತಿಯರು. ಇವರಲ್ಲಿ ಇಂಟರ್ನೆಟ್ ಮತ್ತು ಸ್ಮಾರ್ಟ್ ಫೋನ್ ಬಳಕೆ ಮಾಡುವವರು ಸೋಷಿಯಲ್ ಮೀಡಿಯಾವನ್ನು ಕೂಡ ಅಪಾರವಾಗಿ ಬಳಸುತ್ತಾರೆ. ಹಾಗೆಯೇ ಸೆಲ್ಫಿಯ ಗೀಳಿಗೆ ಪ್ರಾಣವನ್ನು ಕಳೆದುಕೊಂಡವರು ಕೂಡ ಸಾಕಷ್ಟು ಜನರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com