ನಿಮ್ಮ ಫೇಸ್ ಬುಕ್ ಸ್ನೇಹಿತರೇ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದೆಂದು ನಿಮಗೆ ಗೊತ್ತೆ?

ಇಂದು ನಮ್ಮ ನಿರೀಕ್ಷೆಗೆ ಮೀರಿ ಸಾಮಾಜಿಕ ತಾಣಗಳು ಬೆಳೆದು ನಿಂತಿದೆ.ತಂತ್ರಜ್ಞಾನದ ಪ್ರಪಂಚದಲ್ಲಿ ರಚನಾತ್ಮಕ ಅಭಿವೃದ್ಧಿ ವಿಚಾರ ಬಂದಾಗ ಸಾಮಾಜಿಕ ಮಾಧ್ಯಮದ ಬಳಕೆಯು.....
ನಿಮ್ಮ ಫೇಸ್ ಬುಕ್ ಸ್ನೇಹಿತರೇ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದೆಂದು ನಿಮಗೆ ಗೊತ್ತೆ?
ನಿಮ್ಮ ಫೇಸ್ ಬುಕ್ ಸ್ನೇಹಿತರೇ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದೆಂದು ನಿಮಗೆ ಗೊತ್ತೆ?
ವಾಷಿಂಗ್ಟನ್: ಇಂದು ನಮ್ಮ ನಿರೀಕ್ಷೆಗೆ ಮೀರಿ ಸಾಮಾಜಿಕ ತಾಣಗಳು ಬೆಳೆದು ನಿಂತಿದೆ.ತಂತ್ರಜ್ಞಾನದ ಪ್ರಪಂಚದಲ್ಲಿ ರಚನಾತ್ಮಕ ಅಭಿವೃದ್ಧಿ ವಿಚಾರ ಬಂದಾಗ ಸಾಮಾಜಿಕ ಮಾಧ್ಯಮದ ಬಳಕೆಯು ಬಗ್ಗೆ ಅನೇಕ ಪ್ರಶ್ನೆಗಳು ಏಳುತ್ತಿದೆ.
ಇದೀಗ ಹೆಲಿಯೊನ್  ಎಂಬ ಪತ್ರಿಕೆ ಪ್ರಕಟಿಸಿರುವ ಅದ್ಯಯನವೊಂದು ಫೇಸ್ ಬುಕ್ ಬಳಕೆದಾರರು ತಮ್ಮ ಸ್ನೇಹಿತರ ಕಾರಣದಿಂಡ ದೈಹಿಕ ಆರೋಗ್ಯ ಹದಗೆಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
"ಹೆಚ್ಚಿನ ಜನರು ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಸಮಯ ಕಳೆಯುತ್ತಾರೆ. ಇದು ಅವರ ಜೀವನ ಮಟ್ಟ, ದೈಹಿಕ ಆರೋಗ್ಯ ದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ಅರಿವು ಮೂಡಿಸುವ ಅಗತ್ಯವಿದೆ." ಅದ್ಯಯನ ತಂಡದ ನೇತೃತ್ವ ವಹಿಸಿದ್ದ ಬ್ರಿಡ್ಗೆಟ್ ಡಿಬ್ಬ್ ಹೇಳಿದ್ದಾರೆ.
"ನಮ್ಮ ಅತ್ಯಂತ ಪ್ರಮುಖವಾದ ಸಂಶೋಧನೆಯೆಂದರೆ, ಫೇಸ್ ಬುಕ್ ನ್ನು ಹೆಚ್ಚಾಗಿ ಬಳಸುವುದೈಂಡ ದೈಹಿಕ ಆರೋಗ್ಯದ ಮೇಲೆ ಸಾಮಾಜಿಕ ತಾಣಗಳ ಪರಿಣಾಮವನ್ನು ಕಂಡುಕೊಳ್ಳುವುದಾಗಿತ್ತು. ಹೆಚ್ಚು ಹೆಚ್ಚು ಫೇಸ್ ಬುಕ್ ಬಳಕೆಯು ದೈಹಿಕ ರೋಗಗಳಿಗೆ ಆಮಂತ್ರಣ ನಿಡುತ್ತದೆ, ಇದಾಗಲೇ ರೋಗಿಗಳಾದವರು ಫೇಸ್ ಬುಕ್ ಬಳಕೆ ಮಾಡುವುದರಿಂದ ರೋಗ ಲಕ್ಷಣಗಳು ಹೆಚ್ಚುವ ಸಾಧ್ಯತೆ ಇದೆ"
ಸಾಮಾಜಿಕ ಹೋಲಿಕೆ ಎನ್ನುವುದು ನಮ್ಮನ್ನು ಮೌಲ್ಯಮಾಪನ ಮಾಡುವ ಸಲುವಾಗಿ ನಾವು ಇತರರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವ ಪ್ರಕ್ರಿಯೆ.ನಾವು ನಮ್ಮನ್ನು ಹೆಚ್ಚು "ಉತ್ತಮ" ಎಂದು ಗ್ರಹಿಸುವ ಯಾರೊಬ್ಬರೊಂದಿಗೆ ಹೋಲಿಸಿಕೊಂಡಾಗ ಅದು ಉತ್ತಮವಾಗಿದ್ದರೆ ಸರಿ ಒಂದೊಮ್ಮೆ ಕಳಪೆಯಾಗಿದ್ದರೆ ನಮ್ಮನ್ನು ನಾವು ಕೀಳೆಂದು ಭಾವಿಸಿಕೊಳ್ಳುವ ಸಂಭವವುಂಟು.ದೆ. ಸಾಮಾಜಿಕ ಮಾಧ್ಯಮದ ಮೂಲಕ ಸಾಮಾಜಿಕ ಹೋಲಿಕೆಯು ಸಾಮಾನ್ಯವಾಗಿ  ಉತ್ತಮರೊಡನೆ ಹೋಲಿಸಿಕೊಳ್ಲಲು ಬಯಸುತ್ತೇವೆ.ಏಕೆಂದರೆ ಜನರು ತಮ್ಮ ಅತ್ಯಂತ ಆಕರ್ಷಕವಾದ ಛಾಯಾಚಿತ್ರಗಳನ್ನು ಪೋಸ್ಟ್ ಮಾಡುವುದು ಸೇರಿದಂತೆ ಅತ್ಯುತ್ತಮ ಟಿಪ್ಪಣಿ, ಸಂದೇಶಗಳನ್ನು ಹಂಚಿಕೊಳ್ಳುವುದು ಇಲ್ಲಿ ನಡೆಯುತದೆ.
165 ಜನರ ನಿಯಂತ್ರಿತ ಗುಂಪಿನಲ್ಲಿ ನಡೆಸಿದ ಈ ಅದ್ಯಯನದಲ್ಲಿ ಭಾಗಿಗಳಾದವರು ಫೇಸ್ ಬುಕ್ ಬಳಕೆ, ಫೇಸ್ ಬುಕ್  ಸಾಮಾಜಿಕ ಹೋಲಿಕೆ, ಸ್ವಾಭಿಮಾನ, ಖಿನ್ನತೆ, ಆತಂಕ, ಜೀವನ ತೃಪ್ತಿ ಮತ್ತು ದೈಹಿಕ ಆರೋಗ್ಯದ ಮೇಲಿನ ಅಡ್ಡ ಪರಿಣಾಮ ಈ ಎಲ್ಲದರ ಕುರಿತು ನೀಡಲಾದ  ಎಲೆಕ್ಟ್ರಾನಿಕ್ ಪ್ರಶ್ನಾವಳಿಗೆ ಉತ್ತರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com