ಪ್ರತಿದಿನ ತ್ವಚೆಯ ಪೋಷಣೆಯಿಂದ ಮೊಡವೆ, ಕಲೆಗಳು ದೂರ!

ಚರ್ಮದ ತ್ವಚೆ, ಮುಖದ ಕಾಂತಿಯನ್ನು ಮೊಡವೆಯಿಂದ ಕಾಪಾಡಲು ಆಯಾ ಕಾಲ, ಹವಾಮಾನಕ್ಕೆ ಸರಿಯಾದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚರ್ಮದ ತ್ವಚೆ, ಮುಖದ ಕಾಂತಿಯನ್ನು ಕಾಪಾಡಲು ಮೊಡವೆಯಿಂದ ರಕ್ಷಿಸಲು ಆಯಾ ಕಾಲ, ಹವಾಮಾನಕ್ಕೆ ಸರಿಯಾದ ವಸ್ತುಗಳನ್ನು ಬಳಸಬೇಕಾಗುತ್ತದೆ. ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು ಮನೆಯಲ್ಲಿಯೇ ನೈಸರ್ಗಿಕ ವಸ್ತುಗಳನ್ನು ಬಳಕೆ ಮಾಡಿ ಮೊಡವೆಗೆ ಪರಿಹಾರ ಕಂಡುಕೊಳ್ಳಬಹುದು.

-ಮುಖದ ಮೇಲೆ ಸೌತೆಕಾಯಿಯ ರಸವನ್ನು ಲೇಪಿಸಿ, 15-20 ನಿಮಿಷಗಳು ಬಿಟ್ಟು ತೊಳೆಯಿರಿ. ಇಲ್ಲದಿದ್ದರೆ ಸೌತೆಕಾಯಿ ರಸ ಮತ್ತು ಗುಲಾಬಿ ನೀರು(ರೋಸ್ ವಾಟರ್), ನಿಂಬೆ ಹಣ್ಣಿನ ರಸ ಬೆರೆಸಿ ಮುಖಕ್ಕೆ ನಿಯಮಿತವಾಗಿ ಹಚ್ಚುತ್ತಿದ್ದರೆ ಮೊಡವೆಗಳು ಕ್ರಮೇಣ ಮಾಯವಾಗುತ್ತವೆ.

-ಗ್ರೀನ್ ಟೀ ಕೂಡ ಉತ್ತಮ ಫಲಿತಾಂಶ ನೀಡುತ್ತದೆ. ಗ್ರೀನ್ ಟೀಯ ಎಲೆಗಳನ್ನು ಅಥವಾ ಗ್ರೀನ್ ಟೀ ಬ್ಯಾಗನ್ನು ಬಿಸಿ ನೀರಿನಲ್ಲಿ ಅರ್ಧ ಗಂಟೆಗಳ ಕಾಲ ನೆನೆಸಿಡಿ. ನಂತರ ಅದು ತಣ್ಣಗಾದ ಮೇಲೆ ಚರ್ಮಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ.

-ಮೇಕಪ್, ಎಣ್ಣೆ ಚರ್ಮ, ಮುಖದಲ್ಲಿ ಬೆವರು ಕುಳಿತಿದ್ದು ಮಲಿನವಾಗಿರುವುದನ್ನು ತಡೆಯದಿದ್ದರೆ ಮೊಡವೆ ಮೂಡುವ ಸಾಧ್ಯತೆಯಿದೆ. ಅದಕ್ಕೆ ರಾತ್ರಿ ಹೊತ್ತು ಮುಖವನ್ನು ತೊಳೆಯಬೇಕು. ಎಣ್ಣೆ ತ್ವಚೆಯ ಕ್ರೀಮ್, ಮಾಯ್ಚ್ ರೈಸರ್ ಬಳಸಬೇಡಿ.

ಚಳಿಗಾಲದಲ್ಲಿ ತ್ವಚೆ ಒಣಗಿದಂತೆ ಅನಿಸಿದರೆ ಶುದ್ಧ ಗ್ಲಿಸರಿನ್ ನ್ನು ಸ್ವಲ್ಪ ರೋಸ್ ವಾಟರ್ ಜೊತೆ ಮಿಶ್ರ ಮಾಡಿ ಗಾಳಿಯಾಡದ ಭದ್ರ ಬಾಟಲ್ ನಲ್ಲಿ ಹಾಕಿ ಫ್ರಿಜ್ಡ್ ನಲ್ಲಿಡಿ. ಇದನ್ನು ಪ್ರತಿನಿತ್ಯ ಹಚ್ಚುತ್ತಾ ಬಂದರೆ ಚರ್ಮ ರೀತಿಯ ತ್ವಚೆ ಹೋಗಿ ಉತ್ತಮವಾಗುತ್ತದೆ.
ಮುಖಕ್ಕೆ ಶ್ರೀಗಂಧ ಲೇಪನ ಮಾಡಿದರೆ ಸಹ ಮೊಡವೆ ಮತ್ತು ಒಣತ್ವಚೆಯಿಂದ ಪರಿಹಾರ ಪಡೆಯಬಹುದು.

ದಾಲ್ಚಿನ್ನಿ ಪುಡಿ, ಮೆಂತೆ ಹುಡಿ, ನಿಂಬೆ ಹಣ್ಣು ರಸ ಮತ್ತು ಸ್ವಲ್ಪ ಜೇನುತುಪ್ಪ ಮಿಶ್ರ ಮಾಡಿ ಮುಖಕ್ಕೆ ಮೊಡವೆಗಳಿರುವ ಜಾಗದಲ್ಲಿ ಹಚ್ಚಬಹುದು.

ಬೇವಿನ ಸೊಪ್ಪನ್ನು ನೀರಲ್ಲಿ ಹಾಕಿ ಕುದಿಸಿ. ಅದನ್ನು ರಾತ್ರಿ ಹಾಗೆಯೇ ಇಟ್ಟು ಮರುದಿನ ನೀರನ್ನು ಬಸಿದು ಎಲೆಯಿಂದ ಪೇಸ್ಟ್ ಮಾಡಿಕೊಳ್ಳಿ. ನಂತರ ಮುಖದಲ್ಲಿ ಮೊಡವೆ, ಕಲೆಗಳಿರುವ ಜಾಗದಲ್ಲಿ ಲೇಪಿಸಿ. ನೀರನ್ನು ಮುಖಕ್ಕೆ ಚಿಮುಕಿಸಬಹುದು. ತುಳಸಿ ಮತ್ತು ಪುದೀನಾ ಎಲೆಗಳಿಂದ ಸಹ ಹೀಗೆ ಮಾಡಬಹುದು.

ತಲೆಗೂದಲನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ತಲೆಹೊಟ್ಟು ಬಾರದಂತೆ ನೋಡಿಕೊಳ್ಳಬೇಕು. ತಲೆಹೊಟ್ಟಿನಿಂದ ಕೂಡ ಮುಖದಲ್ಲಿ ಮೊಡವೆ ಮೂಡಬಹುದು.
ನಾವು ದಿನನಿತ್ಯ ಸೇವಿಸುವ ಆಹಾರ ಉತ್ತಮವಾಗಿರಬೇಕು. ಹೆಚ್ಚೆಚ್ಚು ಹಣ್ಣು, ತರಕಾರಿ ಸೇವನೆ ಉತ್ತಮ. ಸಾಕಷ್ಟು ನೀರು ಕುಡಿಯುತ್ತಿರಬೇಕು. ಉತ್ತಮ ಆರೋಗ್ಯದಿಂದ ಉತ್ತಮ ಚರ್ಮ ಕಾಪಾಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com