ಕೋಪ ಮತ್ತು ಆಕ್ರಮಣಶೀಲತೆ: ವ್ಯತ್ಯಾಸ ಮತ್ತು ಕಾರಣಗಳು

ಕೋಪ, ಒಂದು ಭಾವನಾತ್ಮಕ ವಿಚಾರ. ಅನೇಕ ಸಂದರ್ಭಗಳಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ನಮಗೂ ಕೋಪ ಬಂದಿರುತ್ತದೆ. ವರ್ತನೆಯಿಂದ ಕೋಪವು ವ್ಯಕ್ತವಾದಾಗ, ಅದನ್ನು ಆಕ್ರಮಣಶೀಲತೆ ಎಂದು ಕರೆಯಲಾಗುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೋಪ, ಒಂದು ಭಾವನಾತ್ಮಕ  ವಿಚಾರ. ಅನೇಕ ಸಂದರ್ಭಗಳಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ನಮಗೂ ಕೋಪ ಬಂದಿರುತ್ತದೆ. ಆದರೆ, ಇದು ಅತಿಯಾದರೆ ತುಂಬಾ ಅಪಾಯಕಾರಿ. ಕೆಲವರು ಕೋಪ ಬಂದ ಕೆಲ ನಿಮಿಷಗಳ ನಂತರ ತಣ್ಣಗಾಗುತ್ತಾರೆ, ಆದರೆ, ಇನ್ನು ಕೆಲವರಿಗೆ ಕೋಪ ನಿಲ್ಲಿಸಲು ಬಹಳ ಕಷ್ಟಪಡಬೇಕಾಗುತ್ತದೆ.
ಕೋಪ, ಯಾವುದೋ ವಿಷಯಕ್ಕೆ ಸಣ್ಣ ಕಿರಿಕಿರಿಯಾಗಿರುತ್ತದೆ. ಮತ್ತೊಂದೆಡೆ ಇದರಿಂದ ದೊಡ್ಡ ಜಗಳ, ಹೊಡೆದಾಟ, ರಕ್ತದೋಕುಳಿಯೂ ನಡೆಯುವ ಅಪಾಯವಿರುತ್ತದೆ. ಇದು ಸಂಬಂಧ ಹಾಗೂ ಕೆಲಸಗಳಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಮ್ಮ ಬಗ್ಗೆ ಆಲೋಚಿಸುವ ದಾರಿಯನ್ನು ಸಹ ಇದು ಬದಲಾವಣೆ ಮಾಡಿಬಿಡುತ್ತದೆ.
 ಕೋಪಕ್ಕೆ ನಾವು ಇತರರನ್ನು  ಅಥವಾ ನಿರ್ದಿಷ್ಟ ಪರಿಸ್ಥಿತಿಯನ್ನು ದೂಷಿಸುವ ಪ್ರವೃತ್ತಿಯನ್ನು ಹೊಂದಿರಬಹುದು. ಕೆಲವು ರೀತಿಯಲ್ಲಿ ನಿರಾಸೆ ಅನುಭವಿಸಿದಾಗ ಅಥವಾ ನಮಗೆ ಅರ್ಹತೆ ಇದ್ದರೂ ಅವಕಾಶ ವಂಚಿತರಾದಾಗಲೂ  ನಾವು ಕೋಪಗೊಳ್ಳುತ್ತೇವೆ
ಆಕ್ರಮಣಶೀಲತೆ ಅಂದರೆ ಏನು?
ವರ್ತನೆಯಿಂದ ಕೋಪವು ವ್ಯಕ್ತವಾದಾಗ, ಅದನ್ನು ಆಕ್ರಮಣಶೀಲತೆ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ಕೋಪ ಮತ್ತು ಆಕ್ರಮಣಶೀಲತೆಯನ್ನು ಸಮಾನಾರ್ಥಕವಾಗಿ ಬಳಸಲಾಗುತ್ತದೆ.
ಕೋಪ ಏಲ್ಲಿಂದ ಬರುತ್ತದೆ ?
ಕೋಪವು ಸರ್ವತ್ರ ಭಾವನೆಯಾಗಿದೆ. ನಮ್ಮಲ್ಲಿ ಕೆಲವರಲ್ಲಿ ವ್ಯಕ್ತವಾಗುವ ಅನುಚಿತ ಮತ್ತು ಅಸಹಜ ಕೋಪವು ನಮ್ಮ ವ್ಯಕ್ತಿತ್ವ, ನಾವು ಇರುವ ಪರಿಸ್ಥಿತಿ ಮತ್ತು ನಾವು ವಾಸಿಸುವ ಸಾಮಾನ್ಯ ಸಂಸ್ಕೃತಿ ಸೇರಿದಂತೆ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ತೀವ್ರ ಒತ್ತಡದ ಕೆಲಸ , ಶ್ರಮ ವಿಲ್ಲದ ಕೆಲಸ, ಬೇರೆಯವರು ನಮ್ಮನ್ನು ಹೀಯಾಳಿಸುವುದು, ರೇಗಿಸುವುದು, ನಿಂದಿಸುವುದು ಮತ್ತಿತರ ವೈಯಕ್ತಿಕ ಕಾರಣಕ್ಕೆ ಕೋಪ ಬರುತ್ತದೆ.
ಅನೇಕ ರೀತಿಯ ಆಕ್ರಮಣಶೀಲತೆ  ಚಟುವಟಿಕೆಗಳು ಜನರ ಮನಸ್ಸಿನ ಮೇಲೆ ಪರಿಣಾಮ  ಬೀರುತ್ತವೆ. ಇದು ಅಪಾಯಕಾರಿಯಾಗಿ ಪ್ರಭಾವ ಬೀರುತ್ತದೆ. 
ಮಾಧ್ಯಮ ಮತ್ತು ಸಂಸ್ಕೃತಿಯಿಂದಲೂ ಕೋಪ ಉಂಟಾಗುತ್ತದೆ.ಇದಕ್ಕೆ ಇತ್ತೀಚಿಗೆ ಬಿಡುಗಡೆಯಾದ ಬಾಲಿವುಡ್ ಚಿತ್ರ ಕಬೀರ್ ಸಿಂಗ್ ಸ್ಪಷ್ಟ ಉದಾಹರಣೆಯಂತಿದೆ.ಇದರಲ್ಲಿ ನಾಯಕನು ಸ್ವಯಂ ಕೇಂದ್ರಿತತೆಯ ಸಾಕಾರವಾಗಿದ್ದು, ಚಿತ್ರದುದ್ದಕ್ಕೂ ನಾನೇ ಎಲ್ಲಾ ಎಂಬಂತೆ ವರ್ತಿಸುತ್ತಾನೆ.ಇಂತಹ ಸಂದರ್ಭಗಳಲ್ಲಿ  ಕೋಪ ಸಹಜವಾಗಿಯೇ ಬರುತ್ತದೆ. ಅಂತಹ ಸಂದರ್ಭದಲ್ಲಿ ಮದ್ಯ , ಮಾದಕ ವಸ್ತು ಮತ್ತಿತರ ವಸ್ತುಗಳ ಸೇವನೆಯಿಂದಾಗಿ ಆಕ್ರಮಣಶೀಲತೆ  ಸ್ಪೋಟಗೊಳ್ಳುತ್ತದೆ. ಇದನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
ಕೋಪವನ್ನು ನಿರ್ವಹಣೆ ಮಾಡುವುದು ಹೇಗೆ 
ಕೆಲವೊಂದು ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಕೋಪವನ್ನು ಕಡಿಮೆಮಾಡಿಕೊಳ್ಳಬಹುದು.  ಕೌನ್ಸಿಲಿಂಗ್, ಧ್ಯಾನ, ಥೆರಪಿಗಳಿಂದ ಕೋಪ ನಿಯಂತ್ರಿಸಬಹುದಾಗಿದೆ. 
ಒತ್ತಡಕ್ಕೆ ಕಾರಣ ಕಂಡುಕೊಂಡು ಪರಿಹರಿಸಿಕೊಳ್ಳುವುದು, ಅಗತ್ಯವಿದ್ದರೆ ನಾವು ಪ್ರೀತಿಸುವವರಿಗೆ ನೆರವು ನೀಡುವ ಮೂಲಕ ಕೋಪವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದಾಗಿದೆ.ವಿರಾಮ, ವ್ಯಾಯಾಮಾದೊಂದಿಗೆ ಉತ್ತಮ ಆರೋಗ್ಯದ ಕಡೆಗೆ ಎಚ್ಚರ ವಹಿಸುವುದರಿಂದಲೂ ಕೋಪ ಬಾರದಂತೆ ತಡೆಗಟ್ಟಬುಹುದು ಎಂದು ಎಂಪವರ್ ಸಂಟರ್  ಮನೋಶಾಸ್ತ್ರಜ್ಞರು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com