ಕ್ರೂರ, ಹಿಂಸಾತ್ಮಕ ವಿಡಿಯೊ ಗೇಮ್ ಗಳು ಮಕ್ಕಳಿಗೆ ಅಪಾಯಕಾರಿ: ಅಧ್ಯಯನ

ಇಂದಿನ ತಂತ್ರಜ್ಞಾನ, ಗ್ಯಾಜೆಟ್ ಯುಗದಲ್ಲಿ ಮಕ್ಕಳು ಬಹುಬೇಗನೆ ವಿಡಿಯೊ ಗೇಮ್ ಗಳಿಗೆ ಮನಸೋಲುತ್ತಾರೆ. ಇಂದು ಮಕ್ಕಳಿಗೆ ಇಷ್ಟವಾಗುವ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಇಂದಿನ ತಂತ್ರಜ್ಞಾನ, ಗ್ಯಾಜೆಟ್ ಯುಗದಲ್ಲಿ ಮಕ್ಕಳು ಬಹುಬೇಗನೆ ವಿಡಿಯೊ ಗೇಮ್ ಗಳಿಗೆ ಮನಸೋಲುತ್ತಾರೆ. ಇಂದು ಮಕ್ಕಳಿಗೆ ಇಷ್ಟವಾಗುವ ಹಲವು ವಿಡಿಯೊ ಗೇಮ್ ಗಳು, ಆಪ್ ಗಳು ಸಿಗುತ್ತವೆ. ಅವುಗಳನ್ನು ಗಂಟೆಗಟ್ಟಲೆ ಆಡುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ.
ಆದರೆ ಕೆಲವು ಹಿಂಸಾತ್ಮಕ, ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ವಿಡಿಯೊ ಗೇಮ್ ಗಳು ಮಕ್ಕಳನ್ನು ನಿಜ ಜೀವನದಲ್ಲಿ ಸಂಕಷ್ಟಕ್ಕೆ ದೂಡಿದ, ಪ್ರಾಣವನ್ನು ಸಹ ಕಳೆದುಕೊಂಡ ಗೇಮ್ ಗಳ ಉದಾಹರಣೆಗಳಿವೆ.
ಜಾಮಾ ನೆಟ್ ವರ್ಕ್ ಓಪನ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಮಕ್ಕಳು ವಿಡಿಯೊ ಗೇಮ್ ನ ದಾಸರಾಗುವುದರಿಂದ ಅವರ ವರ್ತನೆ ಮತ್ತು ಮನಸ್ಸಿನ ಮೇಲೆ ಯಾವ ರೀತಿ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.
ಮಕ್ಕಳು 20 ನಿಮಿಷ ಆಟವಾಡಿದ ನಂತರ ಇನ್ನೊಂದು ಕೋಣೆಯಲ್ಲಿ ಬೇರೆ ಆಟದ ಸಾಮಾನುಗಳಲ್ಲಿ ಆಟವಾಡಿದ ಮಕ್ಕಳ ಜೊತೆಗೆ ಹೋಲಿಕೆ ಮಾಡಲಾಯಿತು. ಗನ್ ಗಳನ್ನು ಬಳಸಿ ವಿಡಿಯೊ ಗೇಮ್ ಆಟವಾಡಿದ 76 ಮಕ್ಕಳಲ್ಲಿ ಸುಮಾರು ಶೇಕಡಾ 62ರಷ್ಟು ಮಕ್ಕಳು ಆಟದ ಬಳಿಕ ಸಂಶೋಧಕರು ಪರೀಕ್ಷಿಸಲೆಂದು ಇಟ್ಟಿದ್ದ ಹ್ಯಾಂಡ್ ಗನ್ ಗಳನ್ನು ಮುಟ್ಟಿದ್ದರು. ಗದೆಯಲ್ಲಿ ವಿಡಿಯೊ ಗೇಮ್ ಆಟವಾಡಿದ ಸುಮಾರು ಶೇಕಡಾ 57ರಷ್ಟು ಮಕ್ಕಳು ಸಹ ಗನ್ ಗಳನ್ನು ಮುಟ್ಟಿದ್ದರು. ಯಾವುದೇ ಗನ್, ಗದೆ ಇಲ್ಲದೆ ಅಕ್ರೂರವಾಗಿ ವಿಡಿಯೊ ಗೇಮ್ ಆಡಿದ ಸುಮಾರು ಶೇಕಡಾ 44ರಷ್ಟು ಮಕ್ಕಳು ಗನ್ ಗಳನ್ನು ಮುಟ್ಟಿದ್ದರು. ಅಂದರೆ ಗನ್, ಗದೆ ಮುಟ್ಟಿದ ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತು.
ಅಮೆರಿಕಾದ ಒಹಿಯೊ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಸುಮಾರು 220 ಮಕ್ಕಳನ್ನು ಈ ಅಧ್ಯಯನಕ್ಕೆ ಒಳಪಡಿಸಿತ್ತು.
ಮಕ್ಕಳ ಲಿಂಗ, ವಯಸ್ಸು, ವಿಶಿಷ್ಟವಾದ ಆಕ್ರಮಣಶೀಲತೆ, ಬಂದೂಕುಗಳ ಕಡೆಗೆ ಮಕ್ಕಳ ವರ್ತನೆಗಳು, ಮಕ್ಕಳ ಮನೆಯಲ್ಲಿ ಬಂದೂಕುಗಳಿರುವ ಬಗ್ಗೆ, ಬಂದೂಕುಗಳ ಮೇಲಿನ ಆಸಕ್ತಿ ಮತ್ತು ಮಗು ಬಂದೂಕು ಬಳಸುವಾಗ ತೆಗೆದುಕೊಳ್ಳುತ್ತಿದ್ದ ಕಾಳಜಿಗಳೆಲ್ಲವೂ ವಿಡಿಯೊ ಗೇಮ್ ಆಡಿಸಿದಾಗ ಅಧ್ಯಯನಕಾರರಿಗೆ ಕಂಡುಬಂದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com