5 ರಲ್ಲಿ ಒಬ್ಬ ಬಾಲಕನಿಗೆ 15 ವರ್ಷದೊಳಗೇ ಮದುವೆ: ಯುನಿಸೆಫ್ ವರದಿ

ಜಾಗತಿಕವಾಗಿ ಐದರಲ್ಲಿ ಒಬ್ಬರು ಅಥವಾ 23 ದಶಲಕ್ಷ ಮಕ್ಕಳು ತಮಗೆ 15 ವರ್ಷ ದಾಟುವ ಮುನ್ನವೇ ವಿವಾಹವಾಗುತ್ತಾರೆ, ವಿಶ್ವದಾದ್ಯಂತ ಸುಮಾರು 115 ದಶಲಕ್ಷ ಮಕ್ಕಳು ಬಾಲ್ಯ ವಿವಾಹವಾಗಿದ್ದಾರೆ....

Published: 08th June 2019 12:00 PM  |   Last Updated: 10th June 2019 06:51 AM   |  A+A-


Image for representation purpose only

ಸಂಗ್ರಹ ಚಿತ್ರ

Posted By : RHN RHN
Source : ANI
ಮ್ಯೂಯಾರ್ಕ್: ಜಾಗತಿಕವಾಗಿ ಐದರಲ್ಲಿ ಒಬ್ಬರು ಅಥವಾ 23 ದಶಲಕ್ಷ ಮಕ್ಕಳು ತಮಗೆ 15  ವರ್ಷ ದಾಟುವ ಮುನ್ನವೇ ವಿವಾಹವಾಗುತ್ತಾರೆ, ವಿಶ್ವದಾದ್ಯಂತ ಸುಮಾರು 115 ದಶಲಕ್ಷ  ಮಕ್ಕಳು ಬಾಲ್ಯ ವಿವಾಹವಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಬಾಲ್ಯ ವಿವಾಹ ಕುರಿರು ನಡೆಸಿದ ಸಮೀಕ್ಷೆಯೊಂದು ಹೇಳಿದೆ.

ಜಗತ್ತಿನ ನಾನಾ ಭಾಗದ 82 ದೇಶಗಳಿಂದ ಸಂಗ್ರಹಿಸಲಾದ ಅಂಕಿಅಂಶಗಳನ್ನು  ಬಳಸಿಕೊಂಡು  ನಡೆಸಲಾದ ಅಧ್ಯಯನವು ಸಹರಾ ಉಪಖಂಡ, ಆಫ್ರಿಕಾ, ಲ್ಯಾತೀನ್ ಅಮೆರಿಕಾ, ಕೆರಿಬಿಯನ್ ಪ್ರದೇಶ, ದಕ್ಷಿಣ ಏಷ್ಯಾ, ಮಧ್ಯ ಏಷ್ಯಾ, ಫೆಸಿಪಿಕ್ ದೇಶಗಳು ಸೇರಿ ಜಗತ್ತಿನ ನಾನಾ ಕಡೆ ಇಂದಿಗೂ ಬಾಲ್ಯವಿವಾಹ ಪ್ರಚಲಿತವಾಗಿದೆ ಎಂದು ಸಮೀಕ್ಷೆ ಹೇಳಿದೆ.

"ಮದುವೆ ಬಾಲ್ಯವನ್ನು ಕಸಿದುಕೊಳ್ಳುತ್ತದೆ," ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಬಾಲ್ಯ ವಿವಾಹಗಳು ವಯಸ್ಕ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಒತ್ತಾಯಿಸುತ್ತವೆ.  ಇದಕ್ಕಾಗಿ ಅವುಆಗಬಾರದು. ಅಲ್ಲದೆ ವಿವಾಹದ ಹಿಂದೆ ಹಿಂದೆಯೇ ಪಿತೃತ್ವ (ತಂದೆಯಾಗುವ ಅರ್ಹತೆ) ಯನ್ನೂ ತರುತ್ತದೆ. ಇದರೊಡನೆ ಶಿಕ್ಷಣ, ಉದ್ಯೋಗಾವಕಾಶವನ್ನು ಅವರಿಂದ ಕಸಿದುಕೊಳ್ಳಲಾಗುತ್ತದೆ.ಇದೆಲ್ಲಕ್ಕೆ ಹೆಚ್ಚು ಕುಟುಂಬದ ಜವಾಬ್ದಾರಿ ಹೊರೆ ಆ ಪುಟ್ಟ ಮಕ್ಕಳ ಮೇಲೆ ಬೀಳುತ್ತದೆ." ಅವರು ಹೇಳಿದ್ದಾರೆ.

ಮಾಹಿತಿಯ ಪ್ರಕಾರ ಮಧ್ಯ ಆಫ್ರಿಕನ್ ರಿಪಬ್ಲಿಕ್ ಗಂಡುಮಕ್ಕಳಲ್ಲಿ ಶೇಕಡ 28 ರಷ್ಟು ಬಾಲ ವಿವಾಹ ಆಗಿದ್ದಾರೆ.  ನಿಕರಾಗುವಾ (19 ಶೇಕಡಾ) ಮತ್ತು ಮಡಗಾಸ್ಕರ್ (13 ಶೇಕಡಾ).ಬಾಲ್ಯ ವಿವಾಹಗಳು ನಡೆದಿದೆ.

ಬಾಲ್ಯ ವಿವಾಹ ಹೆಚ್ಚಿರುವ ಜಾಗತಿಕ ರಾಷ್ಟ್ರಗಳ ಪಟ್ಟಿಯಲ್ಲಿ ನೇಪಾಳಕ್ಕೆ ಹತ್ತನೇ ಸ್ಥಾನ ಸಿಕ್ಕಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ಬಾಲ್ಯ ವಿವಾಹ ಚಾಲ್ತಿಯಲ್ಲಿರುವ ಏಕೈಕ ರಾಷ್ಟ್ರ ನೇಪಾಳವಾಗಿದೆ. ಹೊಸ ಅಂದಾಜಿಒನ ಅನುಸಾರ ಜಗತ್ತಿನಲ್ಲಿ ಬಾಲ ವಧು, ವ್ಬಾಲ ವರಗಳ ಸಂಖ್ಯೆ 765 ದಶಲಕ್ಷದಷ್ಟಿದೆ. ಐದರಲ್ಲಿ ಒಬ್ಬ ಯುವತಿ ತಾನು ಹದಿನೆಂಟನೇ ವರ್ಷದ ಹುಟ್ಟುಹಬ್ಬ ಆಚರಣೆಗೆ ಮುನ್ನ ವಿವಾಹವಾಗಿದ್ದರೆ ಯುವಕರಲ್ಲಿ 30ಕ್ಕೆ ಒಬ್ಬರು ಈ ಸಮಸ್ಯೆಗೆ ತುತ್ತಾಗುತ್ತಾರೆ ಎಂದು ಅಧ್ಯಯನ ಹೇಳಿದೆ.
Stay up to date on all the latest ಜೀವನಶೈಲಿ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp