ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ಬೇಕೇಬೇಕು ಯೋಗಾಭ್ಯಾಸ!

ಮುಂದಿನ ಪೀಳಿಗೆಯ ಮಕ್ಕಳಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಬೆಳವಣಿಗೆಗೆ ಸಹಕಾರಿಯಾಗಲು ಪಾರಂಪರಿಕ ವೈದ್ಯ ಪದ್ಧತಿ ಯೋಗಾಭ್ಯಾಸ ಅನೀವಾರ್ಯವಾಗಿದೆ

Published: 20th June 2019 12:00 PM  |   Last Updated: 20th June 2019 07:08 AM   |  A+A-


Casual Photo

ಸಾಂದರ್ಭಿಕ ಚಿತ್ರ

Posted By : ABN ABN
Source : The New Indian Express
ಬೆಂಗಳೂರು: ಇಂದಿನ ಡಿಜಿಟಲ್  ಯುಗದಲ್ಲಿ  ಮಕ್ಕಳಲ್ಲಿ ಲಕ್ಷ್ಯ ಕೊಡುವುದು, ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದ್ದು, ಜಂಕ್ ಪುಡ್ ಗಳ ಬಯಕೆ ಹಾಗೂ ಬೊಜ್ಜು ಹೆಚ್ಚಾಗುತ್ತಿದೆ. 

ಎಲ್ಲವನ್ನೂ ತ್ವರಿತಗತಿಯಲ್ಲಿ ತಲುಪಿಸಿದರೂ ಕೂಡಾ ಮಕ್ಕಳು ಅಸಂತೋಷವಾಗಿರುವುದು ಮುಂದುವರೆದರೆ ಅದು ಅವರ ಮನಸ್ಸು ಮತ್ತು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ವಿಷಯೇತರ ಮನೋಭಾವವು ಪ್ರಾಮುಖ್ಯತೆ ಇಲ್ಲದ  ವಿಷಯಗಳ ಮೇಲೆ ಅವರ ಗಮನವನ್ನು ತಿರುಗಿಸುತ್ತದೆ, ಅವರ ನಿಧಾನಗತಿಯ ದೈಹಿಕತೆ, ಸ್ಪರ್ಧಾ ಮನೋಭಾವಕ್ಕೆ ಕಾರಣವಾಗಿ ವಾತಾವರಣದ ಬಗ್ಗೆಯೇ ಅತೃಪ್ತಿ ಉಂಟುಮಾಡುವ ಅಪಾಯವಿರುತ್ತದೆ. 

ಮುಂದಿನ ಪೀಳಿಗೆಯನ್ನುಇಂತಹ ಮನೋಭಾವದಿಂದ ತಪ್ಪಿಸಲು ಮಾನಸಿಕ ಹಾಗೂ ದೈಹಿಕ ಆರೋಗ್ಯ ಬೆಳವಣಿಗೆಗೆ  ಸಹಕಾರಿಯಾಗಲು ಪಾರಂಪರಿಕ ವೈದ್ಯ ಪದ್ಧತಿಯಾದ ಯೋಗಾಭ್ಯಾಸ ಅನೀವಾರ್ಯವಾಗಿದೆ. ಮುಸ್ಸಂಜೆಯಲ್ಲಿ ನಮ್ಮ ಮಕ್ಕಳು ಸೂರ್ಯನಮಸ್ಕಾರ ಹಾಗೂ ಚಂದ್ರನಮಸ್ಕಾರ ಮಾಡುವುದರಿಂದ  ವಿಶೇಷವಾದ ಶಕ್ತಿಯನ್ನು ಪಡೆಯುವಂತಾಗುತ್ತದೆ.

ಎಂಟು ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ಮಕ್ಕಳು ಪ್ರತಿದಿನ ಒಂದು ಬಾರಿ ಈ ನಮಸ್ಕಾರ ಮಾಡಬೇಕು, ಮೊದಲಿಗೆ ನಿಧಾನವಾಗಿ ನಂತರ  ಪದೇ ಪದೇ ಮೂರರಿಂದ ಐದು ಬಾರಿ  ಮಾಡುವುದರಿಂದ ಮಾನಸಿಕ ಶಕ್ತಿ ವೃದ್ಧಿಸುತ್ತದೆ. ನಂತರ ವೇಗವಾಗಿ  10 ರಿಂದ 15 ಬಾರಿ  ಮಾಡುವುದರಿಂದ ಹೃದಯದ ಸದೃಢತೆ ಹೆಚ್ಚಾಗುತ್ತದೆ.

ನಮಸ್ಕಾರ ಮಾಡುವುದರಿಂದ ಮಕ್ಕಳಲ್ಲಿ ಯೋಚನಾ ಲಹರಿ, ಕ್ರಿಯಾ ಚಟುವಟಿಕೆಗಳು ವೃದ್ಧಿಸುತ್ತವೆ. ನರವ್ಯೂಹ ವ್ಯವಸ್ಥೆ ಶಾಂತವಾಗಿರುತ್ತದೆ. ಸ್ವಯಂ ಅರಿವು, ವಿಶ್ವಾಸಾರ್ಹತೆ, ಮನೋಬಲವನ್ನು ಹೆಚ್ಚಿಸುತ್ತದೆ ಎಂದು ಆರ್ ವಿ ಆಸ್ಪತ್ರೆಯ ಯೋಗಾ ಥೆರಪಿಸ್ಟ್ ಆಸ್ಟರ್ ಹೇಳುತ್ತಾರೆ.

ಯೋಗಾಭ್ಯಾಸದಿಂದ ಮಕ್ಕಳಿಗಾಗುವ ಪ್ರಯೋಜನಗಳು 

ಜ್ಞಾಪಕ ಶಕ್ತಿ  ಹಾಗೂ ಲಕ್ಷ್ಯದ  ವೃದ್ಧಿ: ಮಕ್ಕಳಲ್ಲಿ ಯೋಗಾಭ್ಯಾಸಕ್ಕೆ ಪ್ರೋತ್ಸಾಹಿಸುವುದರಿಂದ ಅವರ ಶೈಕ್ಷಣಿಕ ಹಾಗೂ ಇನ್ನಿತರ ಚಟುವಟಿಕೆಗಳು ವೃದ್ದಿಸುತ್ತವೆ.  ಲಕ್ಷ್ಯ ಕೊಡುವಲ್ಲಿ ಅನಾಸಕ್ತಿ ಮತ್ತಿತರ ಕೊರತೆಯನ್ನು ನಿವಾರಿಸುತ್ತದೆ. 

ಮಕ್ಕಳಲ್ಲಿ ಆರೋಗ್ಯಕರ  ಆಹಾರ ಪದ್ಧತಿ ಬೆಳವಣಿಗೆ : ಯೋಗದಿಂದ ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿ ಬೆಳವಣಿಗೆಯಾಗುತ್ತದೆ. ಇದು ಮನಸ್ಸನ್ನು ಶಾಂತವಾಗಿಡುತ್ತದೆ. ಯೋಗ ತರಬೇತಿಯಿಂದ ವಿಶ್ವಾಸಾರ್ಹತೆ ಹಾಗೂ ಆತ್ಮಸ್ಱೈರ್ಯ ಹೆಚ್ಚುತ್ತದೆ. ಕೀಳರಿಮೆಯಿಂದ ಹೊರಬರಲು ನೆರವಾಗುತ್ತದೆ.

ಮನಸಿನ ಸಮತೋಲನವನ್ನು ಹೆಚ್ಚಿಸುತ್ತದೆ. ವ್ಯವಸ್ಥಿತ ಉಸಿರಾಟ ಯೋಗದ ಒಂದು ಆಂತರಿಕ ಭಾಗವಾಗಿದ್ದು, ಮನಸ್ಸಿನ ಸ್ಥಿತಿಯನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಲು ನೆರವಾಗುತ್ತದೆ. 

ರೋಗ ನಿರೋಧಕ ಶಕ್ತಿ ವೃದ್ಧಿ: ಮಕ್ಕಳಲ್ಲಿ ರೋಗ  ನಿರೋಧಕ ಶಕ್ತಿ ಕುಂಠಿತಗೊಂಡಾಗ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಯೋಗಾಭ್ಯಾಸದಿಂದ ನರಗಳು, ಜೀರ್ಣಕ್ರಿಯೆ ಹಾಗೂ ರಕ್ತ ಪರಿಚಲನಾ ವ್ಯವಸ್ಥೆ ಉತ್ತಮಗೊಂಡು ಅವುಗಳ ಕಾರ್ಯವನ್ನು ಹೆಚ್ಚಿಸುತ್ತದೆ. ಧೀರ್ಘವಾಗಿ ಉಸಿರನ್ನು ಒಳ ತೆಗೆದುಕೊಳ್ಳುವುದು ಹಾಗೂ ಕೆಲ ಆಸನಗಳಿಂದ ಅನೇಕ ಕಾಯಿಲೆಗಳು ಮಕ್ಕಳತ್ತ ನುಸುಳದ್ದಂತೆ  ಮಾಡಬಹುದು. 
Stay up to date on all the latest ಜೀವನಶೈಲಿ news with The Kannadaprabha App. Download now
facebook twitter whatsapp