ಆರೋಗ್ಯ, ಒತ್ತಡ ಹೇಗೇ ಇರಲಿ, ವಯಸ್ಸಾದರೂ ಉತ್ಸಾಹದಿಂದ ಇರಲು ಈ ಅಂಶಗಳು ಮುಖ್ಯ!

ಇಳಿ ವಯಸ್ಸಿನಲ್ಲಿ ವೃದ್ಧರು ತಮ್ಮ ದಿನನಿತ್ಯದ ಜೀವನದಲ್ಲಿ ಹೆಚ್ಚು ಹತೋಟಿ ಹೊಂದಿದ್ದರೆ ಯುವ ...

Published: 26th March 2019 12:00 PM  |   Last Updated: 26th March 2019 02:53 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : IANS
ನ್ಯೂಯಾರ್ಕ್: ಇಳಿ ವಯಸ್ಸಿನಲ್ಲಿ ವೃದ್ಧರು ತಮ್ಮ ದಿನನಿತ್ಯದ ಜೀವನದಲ್ಲಿ ಹೆಚ್ಚು ಹತೋಟಿ ಹೊಂದಿದ್ದರೆ, ತಾವು ಅಂದುಕೊಂಡಂತೆ ನಡೆದರೆ ಹೆಚ್ಚು ಉಲ್ಲಾಸ ಮತ್ತು ಉತ್ಸಾಹವಾಗಿರುತ್ತಾರೆ, ಅನಾರೋಗ್ಯದಿಂದ ತೊಂದರೆ ಬರುವುದಿಲ್ಲ ಎಂದು ಅಧ್ಯಯನವೊಂದು ಹೇಳುತ್ತದೆ.

ಆದರೆ ಯುವ ವಯಸ್ಕರಲ್ಲಿ ಅನಾರೋಗ್ಯ ಮತ್ತು ಒತ್ತಡ ಜೀವನ  ಹೆಚ್ಚು ಪರಿಣಾಮ ಬೀರುತ್ತದೆಯೇ ಹೊರತು ದಿನ ನಿತ್ಯದ ಜೀವನವಲ್ಲ ಎಂದು ಜೆರೊಂಟೊಲಜಿ: ಸೈಕಲಾಜಿಕಲ್ ಸೈನ್ಸಸ್ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ಹೇಳುತ್ತದೆ.

ಇಳಿ ವಯಸ್ಸಿನಲ್ಲಿ ದಿನನಿತ್ಯ ಜೀವನದಲ್ಲಿ ಹೆಚ್ಚು ಹತೋಟಿ ಹೊಂದಿದ್ದರೆ ಅವರು ಹೇಳಿದಂತೆ ನಡೆದರೆ ಅವರು ಯುವಕರಂತೆ ಕಂಡುಬರುತ್ತಾರೆ, ಅವರಲ್ಲಿ ಉತ್ಸಾಹ ಇರುತ್ತದೆ ಎಂದು ಅಮೆರಿಕಾದ ನಾರ್ಥ್ ಕ್ಯಾರೊಲಿನಾ ವಿಶ್ವವಿದ್ಯಾಲಯದ ಪ್ರೊಫೆಸರ್ ಹಾಗೂ ಅಧ್ಯಯನದ ಸಹ ಲೇಖಕ ಶೆವಾನ್ ನ್ಯೂಪರ್ಟ್ ಹೇಳಿದ್ದಾರೆ.

ಇದಕ್ಕಾಗಿ ಸಂಶೋಧಕರು 60ರಿಂದ 90 ವರ್ಷದೊಳಗಿನ 116 ವಯೋವೃದ್ಧರು ಮತ್ತು 18ರಿಂದ 36 ವರ್ಷದೊಳಗಿನ 107 ಮಂದಿ ಯುವ ವಯಸ್ಕರನ್ನು ಅಧ್ಯಯನಕ್ಕೊಳಪಡಿಸಿದರು.  ಸತತ ಎಂಟು ದಿನ ಸಮೀಕ್ಷೆ ನಡೆಸಲಾಯಿತು. ತಮ್ಮ ದಿನ ನಿತ್ಯದ ಜೀವನಶೈಲಿ, ಒತ್ತಡ, ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಹತೋಟಿ ಮೊದಲಾದ ವಿಷಯಗಳ ಕುರಿತು ಅಧ್ಯಯನ ನಡೆಸಲಾಯಿತು. ಪ್ರತಿಯೊಬ್ಬರ ಹತೋಟಿ ದಿನದಿಂದ ದಿನಕ್ಕೆ ವ್ಯತ್ಯಾಸವಾಗುತ್ತಿತ್ತು.

ವೃದ್ಧರಲ್ಲಿ ಹೆಚ್ಚು ಹತೋಟಿಯಿದ್ದರೆ ಅವರು ಯುವಕರಂತೆ ಕಂಡುಬರುತ್ತಿದ್ದರು. ಅದು ಒತ್ತಡ ಮತ್ತು ಶಾರೀರಿಕ ಸಮಸ್ಯೆಗಳನ್ನು ಕೂಡ ಯುವ ವಯಸ್ಸಿನವರಲ್ಲಿ ಪ್ರಭಾವ ಬೀರುತ್ತಿತ್ತು. ಆದರೆ ಇಳಿವಯಸ್ಸಿನವರಲ್ಲಿ ಅದು ಕಂಡುಬರಲಿಲ್ಲ. ವೃದ್ಧಾಪ್ಯ ಜೀವನದಲ್ಲಿ ಕೆಲವು ಸ್ವಾತಂತ್ರ್ಯ, ಜೀವನದಲ್ಲಿ ಹತೋಟಿ ಹೊಂದಿರುವುದು ಮುಖ್ಯ ಎಂದು ತಿಳಿದುಬಂತು ಎನ್ನುತ್ತಾರೆ ನ್ಯೂಪರ್ಟ್.
Stay up to date on all the latest ಜೀವನಶೈಲಿ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp