ಧ್ಯಾನ ಎಲ್ಲರಿಗೂ ಆಹ್ಲಾದಕರವಲ್ಲ: ಅಧ್ಯಯನ ವರದಿ

ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಧ್ಯಾನ ಪರಿಹಾರ, ಅಂಥವರಿಗೆ ಧ್ಯಾನದಿಂದ ಆಹ್ಲಾದಕರ ಅನುಭವ ಸಿಗುತ್ತದೆ ಎಂಬುದನ್ನು ವ್ಯಾಪಕವಾಗಿ ನಂಬಲಾಗಿದೆ.

Published: 14th May 2019 12:00 PM  |   Last Updated: 14th May 2019 07:35 AM   |  A+A-


Meditation not pleasant for everyone: Study

ಧ್ಯಾನ ಎಲ್ಲರಿಗೂ ಆಹ್ಲಾದಕರವಾಗಿರುವುದಿಲ್ಲ: ಅಧ್ಯಯನ ವರದಿ

Posted By : SBV SBV
Source : The New Indian Express
ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಧ್ಯಾನ ಪರಿಹಾರ, ಅಂಥವರಿಗೆ ಧ್ಯಾನದಿಂದ ಆಹ್ಲಾದಕರ ಅನುಭವ ಸಿಗುತ್ತದೆ ಎಂಬುದನ್ನು ವ್ಯಾಪಕವಾಗಿ ನಂಬಲಾಗಿದೆ. ಆದರೆ ಈ ನಂಬಿಕೆ ಶೇ.100 ರಷ್ಟು ನಿಜವಲ್ಲ ಎನ್ನುತ್ತಿದೆ ಈ ಅಧ್ಯಯನ ವರದಿ 

ಧ್ಯಾನ ಮಾಡುವುದು ಮಾನಸಿಕ ಆರೋಗ್ಯ ಎದುರಿಸುತ್ತಿರುವ ಎಲ್ಲರಿಗೂ ಆಹ್ಲಾದಕರ ಅನುಭವ ಸಿಗುವುದಿಲ್ಲ ಎನ್ನುತ್ತಿದ್ದಾರೆ ಸಂಶೋಧನೆ ನಡೆಸಿರುವ ಯುನಿವರ್ಸಿಟಿ ಕಾಲೇಜ್ ಲಂಡನ್ ನ ವಿಜ್ಞಾನಿಗಳು. 

ನಿಯಮಿತವಾಗಿ ಧ್ಯಾನ ಮಾಡುವವರ ಪೈಕಿ ಕಾಲುಭಾಗದಷ್ಟು ಜನರಿಗೆ ಧ್ಯಾನದಲ್ಲಿ ಭಯ ಮತ್ತು ವಿಕೃತ ಭಾವನೆಗಳ ಭಾವನೆಗಳು ಸೇರಿದಂತೆ ಮಾನಸಿಕವಾಗಿ ಅಹಿತಕರ ಅನುಭವ ಆಗಿದೆ ಎಂದು ತಿಳಿದುಬಂದಿದೆ. 

PLOS ONE ಜರ್ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದ್ದು, ಮೆಡಿಟೇಷನ್ ರಿಟ್ರೀಟ್, ವಿಪಸನ, ಕೋನ್ ಅಭ್ಯಾಸ (ಝೆನ್ ಬುದ್ಧಿಸಂ ನಲ್ಲಿ ಉಪಯೋಗಿಸುವ ಯೋಗ) ಮಾಡುವವರು ಹಾಗೂ ಹೆಚ್ಚಿನ ಮಟ್ಟದಲ್ಲಿ ಪದೇ ಪದೇ ನಕಾರಾತ್ಮಕ ಯೋಚನೆಗಳನ್ನು ಹೊಂದಿರುವವರಿಗೆ ಧ್ಯಾನ ಮಾಡುವಾಗ ಅಹಿತಕರ ಅನುಭವ ಆಗಿದೆ ಎಂದು ಸಂಶೋಧಕರು ಹೇಳಿದ್ದಾರೆ. 

ಕನಿಷ್ಟ 2 ತಿಂಗಳ ಕಾಲ ಧ್ಯಾನದಲ್ಲಿ ಅನುಭವ ಹೊಂದಿರುವ 1,232 ಜನರನ್ನು ಆನ್ ಲೈನ್ ಸಂಶೋಧನೆಗೆ ಒಳಪಡಿಸಲಾಗಿದ್ದಾರೆ. ಈ ಪೈಕಿ ಮಹಿಳೆಯರು ಹಾಗೂ ಧಾರ್ಮಿಕ ನಂಬಿಕೆಯುಳ್ಳವರಿಗೆ ಮಾತ್ರ ಧ್ಯಾನ ಮಾಡುವಾಗ ನಕರಾತ್ಮಕ ಅನುಭವ ಆಗಿರುವ ಉದಾಹರಣೆಗಳು ಕಡಿಮೆ ಇದೆ ಎನ್ನುವುದನ್ನೂ ಸಂಶೋಧಕರು ಕಂಡುಕೊಂಡಿದ್ದಾರೆ. 

ಧ್ಯಾನ ಮಾಡುವುದು ಮಾನಸಿಕ ಆರೋಗ್ಯ ಎದುರಿಸುತ್ತಿರುವ ಎಲ್ಲರಿಗೂ ಆಹ್ಲಾದಕರ ಅನುಭವ ಸಿಗದೇ ಇರುವುದಕ್ಕೆ ಕಾರಣ ಏನಿರಬಹುದೆಂಬುದನ್ನು ಕಂಡುಕೊಳ್ಳಲು ಮತ್ತಷ್ಟು ಆಳವಾದ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ. 
Stay up to date on all the latest ಜೀವನಶೈಲಿ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp