ಹೀಗಿರಲಿ ಉತ್ತಮ ಆರೋಗ್ಯಕ್ಕಾಗಿ ನೀಲನಕ್ಷೆ

ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯ ಕಾಪಾಡಿಕೊಳ್ಳುವುದು ಇಂದಿನ ಅತ್ಯವಶ್ಯಕ ಸಂಗತಿಯಾಗಿದ್ದು, ಆರೋಗ್ಯವಂತರಾಗಿರುವುದಕ್ಕೆ ಇಲ್ಲಿ ಸಲಹೆಗಳನ್ನು ನೀಡಲಾಗಿದೆ. 
ಹೀಗಿರಲಿ ಉತ್ತಮ ಆರೋಗ್ಯಕ್ಕಾಗಿ ನೀಲನಕ್ಷೆ
ಹೀಗಿರಲಿ ಉತ್ತಮ ಆರೋಗ್ಯಕ್ಕಾಗಿ ನೀಲನಕ್ಷೆ

ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯ ಕಾಪಾಡಿಕೊಳ್ಳುವುದು ಇಂದಿನ ಅತ್ಯವಶ್ಯಕ ಸಂಗತಿಯಾಗಿದ್ದು, ಆರೋಗ್ಯವಂತರಾಗಿರುವುದಕ್ಕೆ ಇಲ್ಲಿ ಸಲಹೆಗಳನ್ನು ನೀಡಲಾಗಿದೆ. 

ಪೌಷ್ಟಿಕಾಂಶ: ಓರ್ವ ವ್ಯಕ್ತಿ ಆರೋಗ್ಯವಾಗಿರುವುದಕ್ಕೆ ಪೌಷ್ಟಿಕಾಂಶ ಅತ್ಯಗತ್ಯ. ಊಟ ಹಾಗೂ ತಾಜಾ ಆಹಾರಗಳ ಸಮತೋಲನದ ಮೂಲಕ ನಮ್ಮ ದೇಹವನ್ನು ಪೋಷಣೆ ಮಾಡಬೇಕಾಗಿದೆ. ನಮ್ಮ ದೇಹಕ್ಕೆ ವಿವಿಧ ಆಹಾರ ಮೂಲಗಳಿಂದ ವಿವಿಧ ರೀತಿಯ ಪೌಷ್ಟಿಕಾಂಶಗಳು ದೊರೆಯುತ್ತವೆ. ನಮ್ಮ ಜೀವನ ಶೈಲಿ ಹಾಗೂ ದೈಹಿಕ ಚಟುವಟಿಕೆ ಮೇಲೆ ಪೌಷ್ಟಿಕಾಂಶ ಎಷ್ಟು ಬೇಕೆಂಬುದು ನಿರ್ಧಾರಿತವಾಗುತ್ತದೆ. 

ಹೈಡ್ರೇಷನ್: ದೇಹಕ್ಕೆ ದೊರೆತ ಪೌಷ್ಟಿಕಾಂಶಗಳು ಸೂಕ್ತ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಆಹಾರವನ್ನು ಚಯಾಪಚಯಗೊಳಿಸುವ ಅಂಗಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ತಿಳಿಯಲು ಹೈಡ್ರೇಷನ್ ಅತ್ಯಗತ್ಯವಾಗಿದೆ. 

ನಮ್ಮ ದೇಹಕ್ಕೆ ನೀರು ಹೆಚ್ಚಿನ ಪ್ರಮಾಣದಲ್ಲಿ ಬೇಕಿ, ಕಿಡ್ನಿಯಂತಹ ಅಂಗಗಳಿಗೆ ದೇಹದಲ್ಲಿರುವ ತ್ಯಾಜ್ಯವನ್ನು ಹೊರ ಹಾಕಲು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದೆ. 

ವಯಸ್ಕ ಪುರುಷನಿಗೆ ಪ್ರತಿ ದಿನ 3-4 ಲೀಟರ್ ನೀರಿನ ಅಗತ್ಯವಿದೆ. 
ವಯಸ್ಕ ಮಹಿಳೆಗೆ ಪ್ರತಿ ದಿನ 2-3 ಲೀಟರ್ ನೀರಿನ ಅಗತ್ಯವಿದೆ. 
ಮಕ್ಕಳಿಗೆ 1-2 ಲೀಟರ್ ನೀರಿನ ಅಗತ್ಯವಿದೆ. 

ದೈಹಿಕ ವ್ಯಾಯಾಮ: ಆರೋಗ್ಯ ಉತ್ತಮವಾಗಿರಬೇಕೆಂದರೆ ದೈಹಿಕ ಆರೋಗ್ಯ ಮುಖ್ಯವಾದದ್ದು, ಎಲ್ಲಾ ವಯಸ್ಸಿನವರಿಗೂ ದೈಹಿಕ ವ್ಯಾಯಾಮ ಅತ್ಯಗತ್ಯ. ಮೂಳೆಗಳ ಆರೋಗ್ಯ, ಚಯಾಪಚಯ ಕ್ರಿಯೆ ಸರಿಯಾಗಿದ್ದು, ಶಕ್ತಿ ಹೆಚ್ಚಿಸಿಕೊಳ್ಳಲು ಮಕ್ಕಳು ಪ್ರತಿ ದಿನ 2 ಗಂಟೆಗಳ ಕಾಲ ವಿವಿಧ ರೀತಿಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು

ವಯಸ್ಕರು ವಾರದಲ್ಲಿ 3 ದಿನ ವ್ಯಾಯಾಮ ಹಾಗೂ ಪ್ರತಿ ದಿನ 30 ನಿಮಿಷಗಳ ವಾಕಿಂಗ್ ಮಾಡುವುದರಿಂದ ಆರೋಗ್ಯ ಉತ್ತಮಗೊಳ್ಳಲಿದೆ. 

ನಿದ್ದೆ: ಇಂದಿನ ಒತ್ತಡದ ಜೀವನದಲ್ಲಿ ನಿದ್ರಾಹೀನತೆ ಸಮಸ್ಯೆ ಹೆಚ್ಚು. ಆದ್ದರಿಂದ ಆರೋಗ್ಯ ಉತ್ತಮವಾಗಿರಬೇಕಾದರೆ 6-8 ಗಂಟೆಗಳ ಕಾಲ ನಿದ್ದೆ ಮಾಡುವುದು ಅತ್ಯವಶ್ಯಕವಾಗಿದೆ. ಕೊನೆಯದಾಗಿ ಧ್ಯಾನ ಆರೋಗ್ಯ ಉತ್ತಮವಾಗಿರುವುದಕ್ಕೆ ಅತ್ಯಂತ ಸಹಕಾರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com