ಮಗು, ವೃತ್ತಿ ಹಾಗು ಜೀವನ: ಸಂಘರ್ಷದಲ್ಲಿ ನವ ವಿವಾಹಿತರು; ಒತ್ತಡ, ಆತಂಕ ನಿವಾರಣೆ ಹೇಗೆ? 

ಮಗು ಹೊಂದುವುದು ದಂಪತಿಯ ಬಾಳಿನಲ್ಲಿ ಅತ್ಯಂತ ಖುಷಿಯ ಗಳಿಗೆಯಾದರೂ ಕೂಡ ಯಾವಾಗ ಮಗು ಪಡೆಯಬೇಕೆಂಬ ತೀರ್ಮಾನ ಅವರಿಗೇ ಬಿಟ್ಟ ವಿಚಾರವಾಗಿರುತ್ತದೆ. 

Published: 23rd October 2019 02:21 PM  |   Last Updated: 23rd October 2019 06:19 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ಮಗು ಹೊಂದುವುದು ದಂಪತಿಯ ಬಾಳಿನಲ್ಲಿ ಅತ್ಯಂತ ಖುಷಿಯ ಗಳಿಗೆಯಾದರೂ ಕೂಡ ಯಾವಾಗ ಮಗು ಪಡೆಯಬೇಕೆಂಬ ತೀರ್ಮಾನ ಅವರಿಗೇ ಬಿಟ್ಟ ವಿಚಾರವಾಗಿರುತ್ತದೆ. ಇದರಲ್ಲಿ ಮತ್ತೊಬ್ಬರು ಮಧ್ಯೆ ಪ್ರವೇಶಿಸಿ ಸಲಹೆ ನೀಡಿದರೆ ಅದು ಮುಂದಿನ ದಿನಗಳಲ್ಲಿ ತೊಂದರೆಗೀಡುಮಾಡಬಹುದು. ಎಷ್ಟರ ಮಟ್ಟಿಗೆ ಎಂದರೆ ಮಹಿಳೆಯರಿಗೆ ಇದರಿಂದ ಮಾನಸಿಕ ಅನಾರೋಗ್ಯ ಕೂಡ ಉಂಟಾಗಬಹುದು. 


ಇಂದಿನ ಜೀವನಶೈಲಿಯಲ್ಲಿ ಬಹುತೇಕ ಯುವತಿಯರು ನಗರಶೈಲಿಯ ಜೀವನವನ್ನು ಇಷ್ಟಪಡುತ್ತಾರೆ, ಮದುವೆಯಾದ ಬಳಿಕ ಸಹ ಉದ್ಯೋಗಕ್ಕೆ ಹೋಗಬೇಕೆಂದು ಬಯಸುತ್ತಾರೆ. ಹೀಗೆ ಮದುವೆಯಾದ ನಂತರ ಹೆಣ್ಣು ಮಕ್ಕಳು ಹೆಚ್ಚಾಗಿ ತಾವು ನಿಭಾಯಿಸುವ ಪಾತ್ರದ ಬಗ್ಗೆ ಸಂಘರ್ಷ, ಕೆಲಸದ ಒತ್ತಡ, ಮಾನಸಿಕ ಆಯಾಸ, ಖಿನ್ನತೆ, ಭಯ ಮತ್ತು ಇತರ ಸಾಮಾಜಿಕ ಮತ್ತು ಭಾವನಾತ್ಮಕ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಇವೆಲ್ಲದರ ಮಧ್ಯೆ ಮಹಿಳೆ ತನಗಿರುವ ಸಮಸ್ಯೆಗಳನ್ನು ಹೇಳಿಕೊಳ್ಳುವುದೇ ಇಲ್ಲ, ಮಾನಸಿಕ ತಜ್ಞರ ಬಳಿ ಹೋಗಿ ಕೂಡ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಿಂದೇಟು ಹಾಕುತ್ತಾರೆ.


ಮಗು ಹೊಂದುವುದು ಮಹಿಳೆಯ ಜೀವನದಲ್ಲಿ ಅತ್ಯಂತ ಪ್ರಮುಖ ಸುಮಧುರ ಘಟ್ಟ, ಆದರೆ ಇತ್ತೀಚಿನ ವರ್ಷಗಳಲ್ಲಿ ಹೊಸದಾಗಿ ಮದುವೆಯಾದವರು ಜೀವನಶೈಲಿಯಿಂದ ಹೆಚ್ಚಿನ ಒತ್ತಡ, ಮಾನಸಿಕ ಖಿನ್ನತೆ, ಆತಂಕಗಳಿಂದ ಬಳಲುತ್ತಿರುತ್ತಾರೆ. ಮಗು ಹೊಂದಬೇಕೆಂದು ಮನೆಯವರು ಮತ್ತು ಸಮಾಜದವರಿಂದ ತೀವ್ರ ಒತ್ತಡವಿರುತ್ತದೆ, ಆದರೆ ದಂಪತಿ ಮಾತ್ರ ಬೇಗ ಮಗು ಹೊಂದಲು ಬಯಸುವುದಿಲ್ಲ ಎನ್ನುತ್ತಾರೆ ಹಿರಿಯ ಸಲಹೆಗಾರ್ತಿ, ಸ್ತ್ರೀ ರೋಗ ತಜ್ಞೆ ಡಾ ಸಾಧನಾ ಶರ್ಮ.


ಕಳೆದೊಂದು ವರ್ಷದಲ್ಲಿ ಸಾಕಷ್ಟು ಮಹಿಳೆಯರು ಮಾನಸಿಕ ಆರೋಗ್ಯ ಅಷ್ಟು ಉತ್ತಮವಾಗಿಲ್ಲ ಎಂದು ಹೇಳಿಕೊಂಡು ಬಂದವರು ಸಾಕಷ್ಟು ಮಂದಿ ಇದ್ದಾರೆ. ವಯಸ್ಸಾದ ಮೇಲೆ ಮಗು ಹೊಂದುವುದು ಮತ್ತು ಮಗು ಹೊಂದಿದ ಬಳಿಕ ಮನೆ, ಉದ್ಯೋಗ ಮತ್ತು ಜೀವನವನ್ನು ಹೇಗೆ ಸಮತೋಲನ ಮಾಡಿಕೊಳ್ಳುವುದು ಎಂದು ಆತಂಕದಲ್ಲಿರುವವರೇ ಹೆಚ್ಚಿನ ಮಂದಿ.


ಮಾನಸಿಕ ಆರೋಗ್ಯ ತಜ್ಞ ಡಾ ಪ್ರಕೃತಿ ಪೊದ್ದರ್, ಕೇವಲ ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಈ ರೀತಿ ಒತ್ತಡ, ಗೊಂದಲ, ಗಾಬರಿಯಿಂದ ಬಳಲುತ್ತಿರುತ್ತಾರೆ. ಇದು ದಂಪತಿಯ ಸುಖ ದಾಂಪತ್ಯ ಜೀವನಕ್ಕೆ ಸಹ ಅಡ್ಡಿಯುಂಟುಮಾಡುತ್ತದೆ ಎನ್ನುತ್ತಾರೆ.


ಇದಕ್ಕೆಲ್ಲಾ ಪರಿಹಾರ ನಿಮ್ಮನ್ನು ನೀವು ಚೆನ್ನಾಗಿ ಅರ್ಥ ಮಾಡಿಕೊಂಡು ನಿಮ್ಮ ಜೀವನದಲ್ಲಿ ಏನು ಮಾಡಬೇಕೆಂದು ಅರ್ಥ ಮಾಡಿಕೊಳ್ಳುವುದು. ಸಾಮಾಜಿಕ ನಿರೀಕ್ಷೆಯಿಂದ ಹೊರೆ ಎನಿಸುತ್ತಿದ್ದರೆ ಮನೋತಜ್ಞರ ಸಹಾಯ ಪಡೆಯುವುದು ಒಳಿತು. ಮಕ್ಕಳನ್ನು ಯಾವಾಗ ಹೊಂದಬೇಕು, ಮಕ್ಕಳನ್ನು ಪಡೆದುಕೊಳ್ಳಬೇಕೊ, ಬೇಡವೊ ಎಂದು ಮೊದಲು ಜೀವನದ ಆದ್ಯತೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಕುಟುಂಬದವರ ಒತ್ತಡವನ್ನು ನಿಭಾಯಿಸುವುದು ಹೇಗೆ ಎಂದು ಅಭ್ಯಾಸ ಮಾಡಿಕೊಳ್ಳಬೇಕು ಎನ್ನುತ್ತಾರೆ ಡಾ ಶರ್ಮ.

Stay up to date on all the latest ಜೀವನಶೈಲಿ news with The Kannadaprabha App. Download now
facebook twitter whatsapp