ಭಾರತದ ಸುಸಜ್ಜಿತ ಮನೆಗಳೂ ಧೂಳು, ಜಿರಳೆಯಿಂದ ಮುಕ್ತವಾಗಿಲ್ಲ: ಸಮೀಕ್ಷೆ

ಬೆಂಗಳೂರು ಸೇರಿದಂತೆ ದೇಶದದ ಬಹುದೊಡ್ಡ ನಗರಗಳ ವೈಭವಯುತ ಮನೆಗಳು ಕೂಡ ಧೂಳಿನ ಕಣಗಳು ಹಾಗೂ ಜಿರಳೆಗಳ ಲಾವರಸದಿಂದ ಮುಕ್ತವಾಗಿಲ್ಲ ಎಂದು ‘ಭಾರತೀಯ ಮನೆಗಳಲ್ಲಿ ಹಿಡಿದಿರುವ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ಸೇರಿದಂತೆ ದೇಶದದ ಬಹುದೊಡ್ಡ ನಗರಗಳ ವೈಭವಯುತ ಮನೆಗಳು ಕೂಡ ಧೂಳಿನ ಕಣಗಳು ಹಾಗೂ ಜಿರಳೆಗಳ ಲಾವರಸದಿಂದ ಮುಕ್ತವಾಗಿಲ್ಲ ಎಂದು ‘ಭಾರತೀಯ ಮನೆಗಳಲ್ಲಿ ಹಿಡಿದಿರುವ ಧೂಳಿನ ಅಧ್ಯಯನ 2018’ ಬಹಿರಂಗಪಡಿಸಿದೆ.

ಬ್ರಿಟನ್ ಮೂಲದ ಡೈಸನ್ ಸಂಸ್ಥೆಯ ಸಹಯೋಗದೊಂದಿಗೆ ಫಿಕಿ ಸಂಶೋಧನೆ ಮತ್ತು ವಿಶ್ಲೇಷಣಾ ಕೇಂದ್ರ (ಫ್ರಾಕ್ ) ಬೆಂಗಳೂರು, ದೆಹಲಿ ಹಾಗೂ ಮುಂಬೈ ನಗರಗಳಲ್ಲಿ ಸಮೀಕ್ಷೆ ನಡೆಸಿದ್ದು, ಅತ್ಯಂತ ಸಿರಿವಂತ, ಸ್ವಚ್ಛ ಹಾಗೂ ಸುಸಜ್ಜಿತ ಮನೆಗಳಲ್ಲಿ ಕೂಡ ಜಿರಳೆ, ಧೂಳು, ಸಾಕು ಪ್ರಾಣಿಗಳ ಸತ್ತ ಚರ್ಮಗಳ ಕಣಗಳು ಅತ್ಯಂತ ಸಹಜವಾಗಿ ಕಂಡುಬಂದಿವೆ.

ತಾವು ಸಮೀಕ್ಷೆ ನಡೆಸುವ ಮುನ್ನ ಶೇ, 60ರಷ್ಟು ಜನರು ತಮ್ಮ ಮನೆ ಸ್ವಚ್ಛವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಫಲಿತಾಂಶ ನೋಡಿ ಅಚ್ಚರಿಗೊಂಡರು ಎಂದು ಫಿಕಿ ಕೇಂದ್ರದ ಕುಮುದ್ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಈ ವರದಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ಸಮೀಕ್ಷೆ ನಡೆದದ್ದು, ಈ ಮನೆಗಳಲ್ಲಿ ದಿನ ನಿತ್ಯ ನಡೆಯುವ ಸ್ವಚ್ಛತಾ ಕಾರ್ಯ ಪೂರ್ಣಗೊಂಡ ನಂತರ. ಇದರರ್ಥ, ಪ್ರತಿನಿತ್ಯ ಸ್ವಚ್ಛಗೊಳಿಸಿದ ನಂತರವೂ ಅನೇಕ ಧೂಳಿನ ಕಣಗಳು ಇನ್ನೂ ಉಳಿದಿದ್ದವು. ಅನೇಕರು ಈ ಸಮೀಕ್ಷೆಯ ಫಲಿತಾಂಶದ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದರು. 
  
ಇವುಗಳನ್ನು ಉಸಿರಿನೊಂದಿಗೆ ಒಳತೆಗೆದುಕೊಳ್ಳುವುದರಿಂದ ಮನೆಯ ಮಕ್ಕಳು ಹಾಗೂ ಇತರರು ಸಾಮಾನ್ಯವಾಗಿ ಅಲರ್ಜಿಗಳಿಗೆ ಗುರಿಯಾಗುತ್ತಿದ್ದಾರೆ. ಇದು ವಿಪರೀತಕ್ಕೆ ತಿರುಗಿ ಅಸ್ತಮಾಕ್ಕೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು. ದೇಶದಲ್ಲಿ ಅಸ್ತಮಾಕ್ಕೆ ಗುರಿಯಾಗುವ ಮಕ್ಕಳ ಸಂಖ್ಯೆ ಶೇ. 15ರಷ್ಟಿದೆ ಎಂದು ದೆಹಲಿಯ ಅಸ್ತಮಾ ರೋಗದ ತಜ್ಞ ವೈದ್ಯ ಡಾ. ವಿಕ್ರಂ ಜಗ್ಗಿ ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com