ನಕಾರಾತ್ಮಕ ಆಲೋಚನೆಗಳಿಂದ ಹೊರಬರುವುದು ಹೇಗೆ? 

ಮನುಷ್ಯನ ಬೆಳವಣಿಗೆ ಅವನು ಮಾಡುವ ಕೆಲಸ, ಗುಣ-ನಡತೆ, ವರ್ತನೆ ಮತ್ತು ಯೋಚಿಸುವ ರೀತಿಯ ಮೇಲೆ ಅವಲಂಬಿಸಿರುತ್ತದೆ. ನಕಾರಾತ್ಮಕ ಆಲೋಚನೆಗಳು ಮನುಷ್ಯನ ಬೆಳವಣಿಗೆಯನ್ನು ತಡೆಯುತ್ತವೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮನುಷ್ಯನ ಬೆಳವಣಿಗೆ ಅವನು ಮಾಡುವ ಕೆಲಸ, ಗುಣ-ನಡತೆ, ವರ್ತನೆ ಮತ್ತು ಯೋಚಿಸುವ ರೀತಿಯ ಮೇಲೆ ಅವಲಂಬಿಸಿರುತ್ತದೆ. ನಕಾರಾತ್ಮಕ ಆಲೋಚನೆಗಳು ಮನುಷ್ಯನ ಬೆಳವಣಿಗೆಯನ್ನು ತಡೆಯುತ್ತವೆ.

 
ಒಬ್ಬ ಮನುಷ್ಯನ ಆಲೋಚನೆಗಳಲ್ಲಿ ನಕಾರಾತ್ಮಕ ಯೋಚನೆಗಳೇ ಹೆಚ್ಚಾದರೆ ಆತನಿಗೆ ಸ್ನೇಹಿತರು ಇರುವುದಿಲ್ಲ. ಮನುಷ್ಯನ ಸಂಬಂಧಗಳಲ್ಲಿ ಅನುಮಾನಗಳನ್ನು ಉಂಟುಮಾಡಬಹುದು, ಉದ್ಯೋಗ ಸಂದರ್ಶನಕ್ಕೆ ಹೋದರೆ ಯಶಸ್ಸು ಸಿಗದಿರಬಹುದು, ಮಾಡುವ ಕೆಲಸ ಮತ್ತು ಮನೆಯಲ್ಲಿ ಎಲ್ಲದರಲ್ಲಿಯೂ ವೈಫಲ್ಯ ಕಾಣಬಹುದು. 


ಜೀವನದಲ್ಲಿ ಯಶಸ್ಸು ಸಿಗಬೇಕೆಂದರೆ ನಮ್ಮ ಆಲೋಚನಾ ವಿಧಾನದಲ್ಲಿ ಬದಲಾವಣೆ ತರಬೇಕು. ಸಕಾರಾತ್ಮಕವಾಗಿ ಯೋಚಿಸುವುದನ್ನು ರೂಢಿಸಿಕೊಳ್ಳಬೇಕು. ಅನಗತ್ಯ ಯೋಚಿಸುವುದನ್ನು ನಿಲ್ಲಿಸಬೇಕು, ಇವುಗಳನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರೆ ಏನು ಮಾಡಬೇಕು ಎಂಬುದಕ್ಕೆ ವಿಸ್ಕಾನ್ಸಿನ್-ಮ್ಯಾಡಿಸನ್ ಯೂನಿವರ್ಸಿಟಿಯ ಸಂಶೋಧಕರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. 


ನಕಾರಾತ್ಮಕ ಯೋಚನೆಯನ್ನು ನಿಲ್ಲಿಸಲು ಸಾಧ್ಯವೇ?: ನಿಮ್ಮ ಮನಸ್ಸಿನಲ್ಲಿ ಬೇಡದಿರುವ ಆಲೋಚನೆಗಳು ಹುಟ್ಟಿಕೊಳ್ಳಲು ಆರಂಭವಾದಾಗ ಕೂಡಲೇ ಅದನ್ನು ನಿಲ್ಲಿಸುವಂತೆ ಗಟ್ಟಿ ಮನಸ್ಸು ಮಾಡಿ. ನಿಲ್ಲಿಸು ಎಂದು ನಿಮಗೆ ನೀವೇ ಗಟ್ಟಿಯಾಗಿ ಹೇಳಿಕೊಳ್ಳಿ. ಆರಂಭದಲ್ಲಿ ಇದು ಕಷ್ಟವೆನಿಸಬಹುದು, ಆದರೆ ದಿನಕಳೆಯುತ್ತಾ ಹೋದರೆ ಈ ವಿಧಾನ ಸಹಾಯವಾಗುತ್ತದೆ. ಈ ಪ್ರಕ್ರಿಯೆ ಕೆಳಗಿನ ಕ್ರಮಗಳನ್ನು ಹೊಂದಿರುತ್ತದೆ:


1. ಕೆಟ್ಟ ಆಲೋಚನೆಗಳನ್ನು ಅದರ ತೀವ್ರತೆಯ ಕ್ರಮದಲ್ಲಿ ಪಟ್ಟಿ ಮಾಡಿ. ನಿಮ್ಮ ಆಲೋಚನೆಗಳು ವಿಚಲಿತವಾಗುವುದನ್ನು ನೀವು ನಿಲ್ಲಿಸಲು ಬಯಸುತ್ತಿದ್ದರೂ ನಿಮಗೆ ಸಾಧ್ಯವಾಗುತ್ತಿಲ್ಲ.  ನಿಮ್ಮ ನಿತ್ಯ ಜೀವನದಲ್ಲಿ ಹೆಚ್ಚು ಒತ್ತಡ ನೀಡುವ ಮತ್ತು ಕಡಿಮೆ ಒತ್ತಡ ನೀಡುವ ವಿಷಯಗಳನ್ನು ಬರೆದಿಟ್ಟುಕೊಳ್ಳಿ. ಕಡಿಮೆ ಒತ್ತಡ ಬೀರುವ ಆಲೋಚನೆಗಳನ್ನು ನಿಲ್ಲಿಸಲು ಮೊದಲು ಪ್ರಯತ್ನಿಸಿ. ಅತಿ ಹೆಚ್ಚು ಒತ್ತಡ ಬೀರುವ ಆಲೋಚನೆಗಳು ಹೀಗಿವೆ, ಉದಾಹರಣೆಗೆ:


-ನನಗೆ ಯಾವಾಗಲೂ ನನ್ನ ಆರೋಗ್ಯದ ಬಗ್ಗೆ ಆತಂಕವಾಗುತ್ತದೆ. ಶೀತವಾದರೆ ಅದು ಶ್ವಾಸಕೋಶದ ಕ್ಯಾನ್ಸರ್ ಎಂದು ಭಾವಿಸಿಕೊಳ್ಳುವುದು ನಕಾರಾತ್ಮಕ ಆಲೋಚನೆ
 -ದೇಶದ ಆರ್ಥಿಕತೆ ಇಳಿಮುಖವಾಗಿದೆ ಎಂದು ನನ್ನನ್ನು ಕೆಲಸದಿಂದ ತೆಗೆದುಹಾಕುತ್ತಾರೆ.


2. ಆಲೋಚನೆಗಳನ್ನು ಕಣ್ಣಿಗೆ ಕಾಣಿಸುವಂತೆ ಮಾಡಿ: ನೀವು ಸ್ವಲ್ಪ ಹೊತ್ತು ಒಬ್ಬರೇ ಕುಳಿತುಕೊಳ್ಳಿ ಅಥವಾ ಮಲಗಿ ನೋಡಿ. ಸ್ವಪ್ರಜ್ಞೆಯನ್ನು ಯೋಚಿಸದೆ ಗಟ್ಟಿಯಾಗಿ ನಿಲ್ಸಿ ಎಂದು ಹೇಳಿ. ನಿಮ್ಮ ಕಣ್ಣುಗಳನ್ನು ಮುಚ್ಚಿ ಸಂದರ್ಭವನ್ನು ನೆನೆಸಿಕೊಂಡು ಅದು ಒತ್ತಡಕ್ಕೆ ಎಡೆಮಾಡಿಕೊಡುವುದನ್ನು ನೋಡಿ, ಆಲೋಚನೆ ಮೇಲೆ ಗಮನ ಕೇಂದ್ರೀಕರಿಸಿ.


3.ಸ್ಟಾಪ್ ಎಂದು ಹೇಳಿ: 
-ಮೂರು ನಿಮಿಷಕ್ಕೆ ಟೈಮ್ ಸೆಟ್ ಮಾಡಿಟ್ಟುಕೊಳ್ಳಿ. ಮಲಗಿ ಅಥವಾ ಕುಳಿತುಕೊಳ್ಳಿ. ಬೇಡದಿರುವ ಆಲೋಚನೆಗಳತ್ತ ಒಮ್ಮೆ ಗಮನ ಕೇಂದ್ರೀಕರಿಸಿ. ಅಲರಾಂ ಹೊಡೆದಾಗ ಮತ್ತೊಮ್ಮೆ ಗಟ್ಟಿಯಾಗಿ ನಿಲ್ಲಿಸಿ ಎಂದು ಕೂಗಿ. ನಿಮ್ಮ ಕೈಯಲ್ಲಿ ಚಪ್ಪಾಳೆ ಹೊಡೆಯಬಹುದು, ಕೈಗಳನ್ನು ಉಜ್ಜಬಹುದು. ಹೀಗೆ ನೀವು ಕೆಟ್ಟ ಆಲೋಚನೆಗಳು ಬರಲು ಆರಂಭಿಸಿದಾಗ ಈ ಪ್ರಕ್ರಿಯೆಗಳನ್ನು ಮಾಡುತ್ತಿದ್ದರೆ ನಿಧಾನವಾಗಿ ಹೋಗುತ್ತದೆ. ಇದಕ್ಕೆ ಇಂಗ್ಲಿಷ್ ನಲ್ಲಿ thought-stopping excercise ಎನ್ನುತ್ತಾರೆ. 


4. ನಿಮ್ಮ ಆಜ್ಞೆಯಂತೆ ಕೆಟ್ಟ ಆಲೋಚನೆಗಳು ಹೊರಟುಹೋಗುವವರೆಗೆ ಅದನ್ನು ಅಭ್ಯಾಸ ಮಾಡುತ್ತಾ ಇರಿ. ಈ ಚಟುವಟಿಕೆಯನ್ನು ಪುನರಾವರ್ತಿಸಿ, 


5. ನಿಮ್ಮ ಸಹಜ ಧ್ವನಿಯಲ್ಲಿ ಕೆಟ್ಟ ಆಲೋಚನೆಗಳು ಬಂದ ತಕ್ಷಣ ನಿಲ್ಲಿಸು ಎಂದು ಹೇಳಲು ಆರಂಭಿಸಿದಾಗ ನಂತರ ಮೆಲು ಧ್ವನಿಯಲ್ಲಿ ಹೇಳಿ, ನಂತರ ನಿಧಾನವಾಗಿ ನಿಮ್ಮ ಮನಸ್ಸಿನಲ್ಲಿಯೇ ಹೇಳಲು ಆರಂಭಿಸಿ. 


6. ಕಳೆದ ಬಾರಿಗಿಂತ ಹೆಚ್ಚು ಕೆಟ್ಟದಾಗಿರುವ ಆಲೋಚನೆಗಳಿಗೆ ಆಲೋಚನೆ-ನಿಲ್ಲಿಸುವ ತಂತ್ರವನ್ನು ಹೇಳುವುದನ್ನು ಮುಂದುವರಿಸಿ.


7. ಕಣ್ಣನ್ನು ಮುಚ್ಚಿ ದೀರ್ಘ ಉಸಿರು ತೆಗೆದುಕೊಳ್ಳಿ. ನೀವು ನಿಮ್ಮ ಕಾರಲ್ಲಿ ಅಥವಾ ಬೇರೆ ವಾಹನದಲ್ಲಿ ಕುಳಿತಿದ್ದೀರಿ ಎಂದು ಯೋಚಿಸಿ. ಕೆಂಪು ಬಣ್ಣದ ಮೇಲೆ ಬಿಳಿ ಬಣ್ಣದಲ್ಲಿ ಸ್ಟಾಪ್ ಎಂಬ ಸನ್ನೆ ಬರೆದದ್ದನ್ನು ಯೋಚಿಸಿ. ನಿಮ್ಮ ಮನಸ್ಸಿನಲ್ಲೀಗ ಸ್ಟಾಪ್ ಸೂಚನೆಯಲ್ಲಿ ಸರದಿಯಲ್ಲಿ ನಿಂತ ಕಾರುಗಳ ಸಾಲಿನಲ್ಲಿ ನೀವು ನಿಂತಿದ್ದೀರಿ. ನಿಮ್ಮ ಸರದಿ ಬಂದಾಗ ದೀರ್ಘ ಉಸಿರು ತೆಗೆದುಕೊಂಡು ಚಾಲನೆ ಆರಂಭಿಸಿ. ಅನಗತ್ಯ, ಬೇಡದಿರುವ ಆಲೋಚನೆಗಳು ತಕ್ಷಣಕ್ಕೆ ಮನಸ್ಸಿನಿಂದ ಹೊರಟುಹೋಗುವುದಿಲ್ಲ, ಸಮಯ ಕಳೆದಂತೆ ಅಭ್ಯಾಸ ಮಾಡುತ್ತಾ ಹೋದರೆ ನಿಮ್ಮ ಮೆದುಳು ಸಹಜವಾಗಿ ಅನಗತ್ಯ ಆಲೋಚನೆಗಳನ್ನು ಮಾಡುವುದನ್ನು ನಿಲ್ಲಿಸಿಬಿಡುತ್ತದೆ.


8. ಮಧ್ಯಾಹ್ನ ನಂತರ ನಿಮಗೆ ಪರೀಕ್ಷೆ ಇದೆ. ನೀವು ಪರೀಕ್ಷೆಗೆ ಚೆನ್ನಾಗಿ ಅಭ್ಯಾಸ ಮಾಡಿರುತ್ತೀರಿ. ಆದರೆ ನಿಮಗೆ ನನಗೆ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಲು ಸಾಧ್ಯವಿಲ್ಲ, ಫೈಲ್ ಆಗುತ್ತೇನೆ ಎಂಬ ಭಯ ಕಾಡುತ್ತಿರುತ್ತದೆ ಎಂದಿಟ್ಟುಕೊಳ್ಳಿ. ಪರೀಕ್ಷೆಯಲ್ಲಿ ಬರೆಯುವಾಗ ಉತ್ತರಕ್ಕಾಗಿ ಪರದಾಡುತ್ತಿದ್ದರೆ ಕೂಡಲೇ ಮನಸ್ಸಿನಲ್ಲಿ ಸ್ಟಾಪ್ ಎಂದು ಹೇಳಿ. ಒಮ್ಮೆ ಎದ್ದು ಅತ್ತಿಂದಿತ್ತ ಓಡಾಡಿ. ಬೆರಳಲ್ಲಿ ರಬ್ಬರ್ ಬ್ಯಾಂಡನ್ನು ಮುರಿಯಿರಿ. ಹೀಗೆ ಮಾಡುವುದರಿಂದ ಮನಸ್ಸು ಒಮ್ಮೆ ಫ್ರೆಶ್ ಆಗುತ್ತದೆ.


9. ನಿಮಗೆ ಆಫೀಸಿನಲ್ಲಿ ಕೆಲಸದಿಂದ ವಜಾ ಮಾಡುತ್ತಾರೆ ಎಂದು ಯೋಚನೆ ಬರುತ್ತಿದ್ದರೆ ಅದು ಕೇವಲ ಯೋಚನೆ ಮಾತ್ರ, ನಿಜವಾಗಿಯೂ ನಡೆಯುವುದಿಲ್ಲ ಎಂದು ನಿಮಗೆ ಅರಿವಾಗಲು ಆರಂಭವಾಗುತ್ತದೆ.


10.ಮನಸ್ಸಿನಲ್ಲಿ ಋಣಾತ್ಮಕ ಆಲೋಚನೆಗಳು ಹೊರಟು ಹೋಗುತ್ತಿದ್ದರೆ ನಂತರ ಶಾಂತ ಆಲೋಚನೆಗಳು ಹುಟ್ಟಿಕೊಳ್ಳಲು ಆರಂಭವಾಗುತ್ತದೆ. ನೆನಪುಶಕ್ತಿ ಮತ್ತು ಒಳ್ಳೊಳ್ಳೆಯ ಭಾವನೆಗಳು ಮೂಡುತ್ತಿರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com