ನಿದ್ರಾ ಹೀನತೆಯಿಂದ ವ್ಯಕ್ತಿಯ ಜೀರ್ಣಕ್ರಿಯೆಗೆ ತೊಂದರೆ: ಅಧ್ಯಯನ

ವ್ಯಕ್ತಿಯಲ್ಲಿ ನಿದ್ರಾಹೀನತೆ ಅಥವಾ ಕಡಿಮೆ ನಿದ್ದೆಯಿಂದ ಊಟ ಮಾಡಿದ ನಂತರವೂ ಹೊಟ್ಟೆ ತುಂಬದಂತೆ ಆಗುವುದು ಅಥವಾ ತಿಂದ ಆಹಾರ ಸರಿಯಾಗಿ ಜೀರ್ಣ ಆಗದಿರುವ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ಲಂಡನ್ ನ ಅಧ್ಯಯನವೊಂದು ತಿಳಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ವ್ಯಕ್ತಿಯಲ್ಲಿ ನಿದ್ರಾಹೀನತೆ ಅಥವಾ ಕಡಿಮೆ ನಿದ್ದೆಯಿಂದ ಊಟ ಮಾಡಿದ ನಂತರವೂ ಹೊಟ್ಟೆ ತುಂಬದಂತೆ ಆಗುವುದು ಅಥವಾ ತಿಂದ ಆಹಾರ ಸರಿಯಾಗಿ ಜೀರ್ಣ ಆಗದಿರುವ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ಲಂಡನ್ ನ ಅಧ್ಯಯನವೊಂದು ತಿಳಿಸಿದೆ.

ಲಿಪಿಡ್ ರಿಸರ್ಚ್ ಎಂಬ ಪತ್ರಿಕೆಯಲ್ಲಿ ಅಧ್ಯಯನ ಪ್ರಕಟಗೊಂಡಿದೆ. ಇದನ್ನು ನಡೆಸಿದ್ದು ಲಂಡನ್ ನ ಪೆನ್ನಿಸೆಲ್ವೆನಿಯಾ ವಿಶ್ವವಿದ್ಯಾಲಯ. ವಿಶ್ವವಿದ್ಯಾಲಯದ ಪ್ರೊಫೆಸರ್ ಓರ್ಫ್ಯೂ ಬಕ್ಸ್ಟನ್, ವ್ಯಕ್ತಿಯ ದೇಹಕ್ಕೆ ಎಷ್ಟು ಅಗತ್ಯವೊ ಅಷ್ಟು ನಿದ್ದೆ ಸಿಗದಿದ್ದರೆ ಸ್ಥೂಲಕಾಯ ಮತ್ತು ಸಕ್ಕರೆ ಕಾಯಿಲೆ ಕಂಡುಬರಬಹುದು.

ವ್ಯಕ್ತಿಗಳ ಜೊತೆ ಚರ್ಚೆ, ಆಟಗಳಲ್ಲಿ ಭಾಗಿಯಾಗಿ, ಅವರ ಜೊತೆ ನಿರಂತರ ಮಾತನಾಡಿ ಈ ತೀರ್ಮಾನಕ್ಕೆ ಸಂಶೋಧಕರು ಬಂದಿದ್ದಾರೆ. ಓರ್ಫ್ಯೂ ಬಕ್ಸ್ಟನ್ ಅವರಿಗೆ ಇತರರು ಅಧ್ಯಯನಕ್ಕೆ ಸಹಾಯ ಮಾಡಿದ್ದಾರೆ.

ಅಧ್ಯಯನದಲ್ಲಿ ಭಾಗಿಯಾದವರಿಗೆ ಅಧಿಕ ಕೊಬ್ಬಿನ ಅಂಶ ಇರುವ ರಾತ್ರಿಯ ಭೋಜನ ನೀಡಲಾಗಿತ್ತು. ನಂತರ ಒಂದು ಬೌಲ್ ಮೆಣಸಿನ ಪದಾರ್ಥ ನೀಡಲಾಗಿತ್ತು. ಇವರಿಗೆ ಸತತ ನಾಲ್ಕು ದಿನ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಬಿಡುತ್ತಿರಲಿಲ್ಲ.

ನಿದ್ದೆ ಸರಿಯಾಗದಿದ್ದಾಗ ಉತ್ತಮ ಕೊಬ್ಬು ಪೂರಿತ ಆಹಾರ ಕೊಟ್ಟರೂ ಅಧ್ಯಯನಕ್ಕೊಳಪಟ್ಟವರಿಗೆ ಹೊಟ್ಟೆ ತುಂಬಿದಂತೆ ಅನಿಸುತ್ತಿರಲಿಲ್ಲ. ನಂತರ ಅವರ ರಕ್ತದ ಮಾದರಿಯನ್ನು ಪರೀಕ್ಷಿಸಲಾಯಿತು.ಸರಿಯಾಗಿ ಆಹಾರ ಜೀರ್ಣವಾಗುತ್ತಿರಲಿಲ್ಲ, ಇದು ಸಹಜವಾಗಿ ದೇಹದಲ್ಲಿ ಕೊಬ್ಬು ಉತ್ಪತ್ತಿ ಮಾಡುತ್ತಿತ್ತು. ಅಧ್ಯಯನದಲ್ಲಿ ಪುರುಷರು ಮಾತ್ರ ಭಾಗಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com