ಕೊರೋನಾ ವೈರಸ್, ಲಾಕ್ ಡೌನ್ ಮಧ್ಯೆ ಮಾವಿನ ಹಣ್ಣನ್ನು ಸವಿಯಿರಿ, ಆರೋಗ್ಯ ಕಾಪಾಡಿಕೊಳ್ಳಿ

ಕೊರೋನಾ ವೈರಸ್ ಲಾಕ್ ಡೌನ್ ನಡುವೆ ಇದು ಬೇಸಗೆ ಸಮಯ. ಹೊರಗೆ ಬಿಸಿಲು, ಸೆಖೆ, ಉರಿ. ಆದರೆ ಬೇಸಿಗೆ ಸಮಯದಲ್ಲಿ ಖುಷಿಯ ವಿಚಾರ ಹಣ್ಣುಗಳ ರಾಜ ಮಾವಿನ ಹಣ್ಣಿನ ಬೆಳೆಯ ಸಮಯ. ಮಾವಿನ ಹಣ್ಣು ಮಾರುಕಟ್ಟೆ ಪ್ರವೇಶಿಸಿದೆ.
ಕೊರೋನಾ ವೈರಸ್, ಲಾಕ್ ಡೌನ್ ಮಧ್ಯೆ ಮಾವಿನ ಹಣ್ಣನ್ನು ಸವಿಯಿರಿ, ಆರೋಗ್ಯ ಕಾಪಾಡಿಕೊಳ್ಳಿ

ಕೊರೋನಾ ವೈರಸ್ ಲಾಕ್ ಡೌನ್ ನಡುವೆ ಇದು ಬೇಸಗೆ ಸಮಯ. ಹೊರಗೆ ಬಿಸಿಲು, ಸೆಖೆ, ಉರಿ. ಆದರೆ ಬೇಸಿಗೆ ಸಮಯದಲ್ಲಿ ಖುಷಿಯ ವಿಚಾರ ಹಣ್ಣುಗಳ ರಾಜ ಮಾವಿನ ಹಣ್ಣಿನ ಬೆಳೆಯ ಸಮಯ. ಮಾವಿನ ಹಣ್ಣು ಮಾರುಕಟ್ಟೆ ಪ್ರವೇಶಿಸಿದೆ.

ಮಾವಿನ ಹಣ್ಣು ಸಿಹಿಯಾಗಿರುತ್ತದೆ, ಇದನ್ನು ಹೆಚ್ಚು ಸೇವಿಸಿದರೆ ಕೊಬ್ಬು ಹೆಚ್ಚಾಗಬಹುದು, ರಕ್ತದೊತ್ತಡ ಜಾಸ್ತಿಯಾಗಬಹುದು, ಈಗ ಕ್ವಾರಂಟೈನ್ ಸಮಯ ಬೇರೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು ಭಾವನೆ.

ತಾಜಾ ಮಾವಿನ ಹಣ್ಣು ತಿಂದರೆ ಯಾವುದೇ ತೊಂದರೆಯಿಲ್ಲ, ಇದರಿಂದ ಸಕ್ಕರೆ ಪ್ರಮಾಣ ಹೆಚ್ಚುವುದಾಗಲಿ, ಕೊಬ್ಬು ಬರುವುದಾಗಲಿ ಆಗುವುದಿಲ್ಲ.ಕೆಟ್ಟ ಜೀವಶೈಲಿ, ಜಂಕ್ ಫುಡ್ ಗಳಿಂದ , ಕಡಿಮೆ ನಿದ್ದೆ, ಒತ್ತಡಗಳಿಂದಾಗಿ.

ಹಣ್ಣುಗಳನ್ನು, ನಿರ್ದಿಷ್ಟ ಆಹಾರಗಳು ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಿಸುತ್ತದೆ ಎಂದು ಅಂದುಕೊಳ್ಳುವ ಬದಲು ನಿಮ್ಮ ಜೀವನಶೈಲಿ ಹೇಗಿದೆ ಎಂದು ನೋಡಿಕೊಳ್ಳಿ.

ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ, ಎ, ಇ, ಕೆ ಮತ್ತು ವಿಟಮಿನ್ ಬಿ6 ಹೇರಳವಾಗಿರುತ್ತದೆ. ಅದರಲ್ಲಿ ಕ್ಯಾಲ್ಸಿಯಂ, ಕಬ್ಬಿಣದ ಅಂಶ, ಮೆಗ್ನೇಷಿಯಂ, ಪೊಟ್ಯಾಷಿಯಂ ಮತ್ತು ಕ್ವೆರ್ಸೆಟಿನ್, ಅಸ್ಟ್ರಾಗಾಲಿನ್ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಕೆಲವು ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳು ಇರುತ್ತವೆ.

ಆರೋಗ್ಯ ಲಾಭಗಳು: ಮಾವಿನಹಣ್ಣಿನಲ್ಲಿ ಹೆಚ್ಚಿನ ನಾರಿನಂಶವಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಬಿಡದ ನಾರಿನಂಶವಾಗಿದೆ.ಇವುಗಳ ಜೊತೆ ಬೀಜಗಳನ್ನು ಸೇರಿಸಿ ತಿಂದರೆ ಸಕ್ಕರೆ ಪ್ರಮಾಣ ಹೆಚ್ಚುವುದಿಲ್ಲ.

ಮಾವಿನಹಣ್ಣಿನಲ್ಲಿ ಮೆಗ್ನೇಷಿಯಂ ಮತ್ತು ಪೊಟ್ಯಾಷಿಯಂಗಳು ಹೇರಳವಾಗಿದ್ದು ಸೋಡಿಯಂ ಕಡಿಮೆಯಾಗಿರವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

ಮಾವಿನಹಣ್ಣಿನಲ್ಲಿ ವಿಟಮಿನ್ ಬಿ 6 ಯಥೇಚ್ಛವಾಗಿ ಇದೆ.ಇದು ಮೆದುಳಿನ ಆರೋಗ್ಯಕರ ಕಾರ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ. ಆರೋಗ್ಯಕರ ಮೆದುಳಿನ ನರಗಳನ್ನು ಕಾಪಾಡಲು ವಿಟಮಿನ್ ಬಿ 6 ಮತ್ತು ಇತರ ಬಿ ಜೀವಸತ್ವಗಳು ಅತ್ಯಗತ್ಯ. ಮನಸ್ಥಿತಿಯನ್ನು ಸಮತೋಲನಗೊಳಿಸಲು ಮತ್ತು ಆರೋಗ್ಯಕರ ನಿದ್ರೆಗೆ ಸಹ ಸಹಕಾರಿ.

ಮಾವಿನಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಕೆ ಇರುತ್ತದೆ, ಮೂಳೆ ಬಲಿಷ್ಠವಾಗಿ ಬೆಳೆಯಲು ವಿಟಮಿನ್ ಕೆ ಬೇಕಾಗುತ್ತದೆ. ಹೃದ್ರೋಗವನ್ನು ತಡೆಗಟ್ಟಲು, ರಕ್ತ ಹೆಪ್ಪುಗಟ್ಟಲು ವಿಟಮಿನ್ ಕೆ ಅತ್ಯಗತ್ಯ ಮತ್ತು ಇತರ ದೈಹಿಕ ಪ್ರಕ್ರಿಯೆಗಳಲ್ಲಿ ಇದು ನಿರ್ಣಾಯಕ ಭಾಗವಾಗಿದೆ.

ಮಾವಿನಹಣ್ಣಿನಲ್ಲಿ ಪೆಕ್ಟಿನ್ ಕೂಡ ಸಮೃದ್ಧವಾಗಿದೆ, ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಕ್ಯಾನ್ಸರ್ ನಿಂದ ರಕ್ಷಿಸುವ ಗುಣವನ್ನು ಹೊಂದಿದೆ.

ಮಾವಿನಹಣ್ಣಿನಲ್ಲಿರುವ ವಿಶೇಷ ವಸ್ತುವೆಂದರೆ ಮ್ಯಾಂಗಿಫೆರಿನ್, ಇದು ದೇಹದ ಮೇಲೆ ಆಂಟಿ-ವೈರಲ್ ಮತ್ತು ಉರಿಯೂತದ ಪರಿಣಾಮವನ್ನು ಬೀರುತ್ತದೆ. ಇದು ಯಕೃತ್ತಿನಿಂದ ಕೊಬ್ಬಿನಾಮ್ಲಗಳನ್ನು ತೆಗೆದುಹಾಕುತ್ತದೆ.

ಬಿ ಜೀವಸತ್ವಗಳು ಮತ್ತು ವಿವಿಧ ಪೋಷಕಾಂಶಗಳು ಮಳೆಯಾಗುವ ಮುನ್ನವೇ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಮಾವಿನ ಹಣ್ಣು ಹೇರಳವಾಗಿ ಬೆಳೆದು ಜನರಿಗೆ ಸಿಗುವಂತೆ ಪ್ರಕೃತಿಯೇ ನಮಗೆ ವರದಾನ ನೀಡಿದೆ.

ಕೊರೋನಾ ವೈರಸ, ಲಾಕ್ ಡೌನ್ ನಡುವೆ ನಿರ್ಭೀತಿಯಿಂದ ಖುಷಿಯಾಗಿ ನೆಮ್ಮದಿಯಾಗಿ ಮಾವಿನ ಹಣ್ಣನ್ನು ಆನಂದಿಸಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com