ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಂದಿದೆ ಮಳೆಗಾಲ: ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಚರ್ಮ ಸಮಸ್ಯೆಗಳಿಗಿಲ್ಲಿದೆ ಸೂಕ್ತ ಪರಿಹಾರ!

ಮಳೆಗಾಲ ಬಂದ ಕೂಡಲೇ ಆರೋಗ್ಯ, ಚರ್ಮ ಸಮಸ್ಯೆಗಳು ಹೆಚ್ಚು ತಲೆದೂರುತ್ತವೆ. ಡ್ರೈಸ್ಕಿನ್, ತ್ವಚೆಯ ಕಾಂತಿ ಕುಂದುವುದು, ಕೂದಲು ಒಣಗುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ನಿಭಾಯಿಸಬೇಕಾಗುತ್ತದೆ.

ಮಳೆಗಾಲ ಬಂದ ಕೂಡಲೇ ಆರೋಗ್ಯ, ಚರ್ಮ ಸಮಸ್ಯೆಗಳು ಹೆಚ್ಚು ತಲೆದೂರುತ್ತವೆ. ಡ್ರೈಸ್ಕಿನ್, ತ್ವಚೆಯ ಕಾಂತಿ ಕುಂದುವುದು, ಕೂದಲು ಒಣಗುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ನಿಭಾಯಿಸಬೇಕಾಗುತ್ತದೆ. ಇದರ ಜೊತೆಗೆ ಪಾದದ ಬಿರುಕು, ತುಟಿ ಒಡೆಯುವುದು ಸೇರಿಕೊಂಡರಂತೂ ಮುಗಿದೇ ಹೋಯಿತು. 

ಮಳೆಗಾಲ ಜೊತೆಜೊತೆಗೆ ಕೊರೋನಾ ಎಂಬ ಸಾಂಕ್ರಾಮಿಕ ರೋಗ ಮನುಕುಲವನ್ನು ತಬ್ಬಿಬ್ಬಾಗುವಂತೆ ಮಾಡಿದೆ. ಕೊರೋನಾದಿಂದ ರಕ್ಷಿಸಿಕೊಳ್ಳಲು, ಆಗಾಗ ಕೈಗಳನ್ನು ತೊಳೆಯುವುದು, ಸ್ನಾನ ಮಾಡುವುದು, ಸ್ಯಾನಿಟೈಸರ್ ಬಳಕೆ ಮಾಡುವುದು, ಪಿಪಿಇ ಕಿಟ್ ಗಳನ್ನು ದರಿಸುವುದು, ಗ್ಲೌಸ್ ಧರಿಸುವುದು ಸೋಪನ್ನು ಹೆಚ್ಚಾಗಿ ಬಳಕ ಮಾಡಲಾಗುತ್ತಿದೆ. ಇದರಿಂದ ಚರ್ಮ ಸಮಸ್ಯೆಗಳು ಎದುರಾಗುತ್ತಿವೆ. 

ಈಗಾಗಲೇ ಮಳೆಗಾಲ ಶುರುವಾಗಿದ್ದು, ಇನ್ನೂ 2-3 ತಿಂಗಳು ಕಾಲ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಹೋಗುತ್ತದೆ. ಈ ನಡುವಲ್ಲೇ ಕೊರೋನಾ ವೈರಸ್ ಕೂಡ ತಲೆದೋರಿದ್ದು, ಮಳೆಗಾಲ ಹಾಗೂ ಕೊರೋನಾ ಸಾಂಕ್ರಾಮಿಕ ರೋಗದ ನಡುವಲ್ಲೇ ಎದುರಾಗುವ ಚರ್ಮದ ಸಮಸ್ಯೆಗಳಿಗೆ ಚರ್ಮ ರೋಗ ತಜ್ಞರು ನೀಡಿರುವ ಕೆಲ ಸಲಹೆಗಳು ಇಂತಿವೆ...

ನಿರಂತರವಾಗಿ ಮಾಸ್ಕ್ ಗಳನ್ನು ಬಳಕೆ ಮಾಡುವುದರಿಂದ ಚರ್ಮದ ಮೇಲೆ ಒತ್ತಡ ಹೆಚ್ಚಾಗಲಿದ್ದು, ಗಾಳಿಯಾಡುವುದು ಕಡಿಮೆಯಾಗುತ್ತದೆ. ಇದರಿಂದ ಮುಖ ಎಣ್ಣೆಯುಕ್ತವಾಗಲಿದ್ದು, ಬೆವರುವಿಕೆ ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದ ಚರ್ಮದ ಅಲರ್ಜಿ ಹೆಚ್ಚಾಗುತ್ತದೆ. ಮೊಡವೆಗಳು ಹೆಚ್ಚಾಗುವುದು, ದದ್ದುಗಳಾಗುವುದು ಹೀಗೆ ಚರ್ಮ ಸಮಸ್ಯೆಗಳು ಹೆಚ್ಚಾಗುತ್ತದೆ. ಇದರಿಂದ ದೂರ ಉಳಿಯರು ಫೇಸ್ ಫ್ರೆಂಡ್ಲಿ ಆಂಟಿಬ್ಯಾಕ್ಟೀರಿಯಲ್ ವೈಪ್ಸ್ ಗಳನ್ನು ಬಳಕೆ ಮಾಡಬೇಕು. ಇದರಿಂದ ಒಮ್ಮೆಯಾದರೂ ಮುಖವನ್ನು ಒರೆಸುವುದರಿಂದ ಸಮಸ್ಯೆಘಲು ದೂರಾಗುತ್ತವೆ. ಮಾಸ್ಕ್ ಗಳಿಂದ ಅಲರ್ಜಿ ಸಮಸ್ಯೆ ಎದುರಿಸುವವರು ಬಟ್ಟೆಗಳಿಂದ ಮಾಡಿದ ಮಾಸ್ಕ್ ಧರಿಸುವುದು ಉತ್ತಮ. ಮೊಡವೆಗಳಿದ ದೂರ ಉಳಿಯರು ವಾಟರ್ ಬೇಸ್ಡ್ ಮಾಯಿಶ್ಚರೈಸರ್ ಬಳಸುವುದು ಉತ್ತಮ ಎಂದು ಡಾ.ಮಿಕ್ಕಿ ಸಿಂಗ್ ಅವರು ಹೇಳಿದ್ದಾರೆ. 

ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಜನರು ತಾವು ಧರಿಸುವ ಮಾಸ್ಕ್ ಗಳು ಸಂಪೂರ್ಣವಾಗಿ ಒಳಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಒದ್ದೆಯಿರುವ ಮಾಸ್ಕ್ ಗಳಿಂದ ಸೋಂಕು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಮುಖವನ್ನು ಮೈಲ್ಡ್ ಕ್ಲೆನ್ಸರ್ ಗಳಿಂದ ತೊಳೆದುಕೊಂಡು, ಮೃದು ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಗಳನ್ನು ಧರಿಸಬೇಕು. ಚರ್ಮದ ಸಮಸ್ಯೆ ಎದುರಾದ ಕೂಡಲೇ ಜನರು ಸ್ಟೀರಾಯ್ಡ್ ಹೊಂದಿರುವ ಆಂಟಿಫಂಗಲ್ ಕ್ರೀಮ್‌ಗಳ ಬಳಕೆ ಮಾಡುತ್ತಾರೆ. ಈ ಕ್ರೀಮ್ ಗಳು ಸೋಂಕಿನ ಅವಧಿಯನ್ನು ಹೆಚ್ಚಿಸುವುದಲ್ಲದೆ, ಅವಲಂಬನೆಯ ಮತ್ತು ಕ್ರೀಮ್ ಹಚ್ಚಿದ ಸ್ಥಳದಲ್ಲಿ ಚರ್ಮ ತೆಳುವಾಗುವಂತೆ ಮಾಡುತ್ತದೆ ಎಂದು ಆಸ್ಟರ್ ಸಿಎಮ್ಐ ಆಸ್ಪತ್ರೆಯ ಚರ್ಮರೋಗ ವೈದ್ಯ ಡಾ.ಶಿರೀನ್ ಫುರ್ಟಾಡೊ ಅವರು ಹೇಳಿದ್ದಾರೆ. 

ಟಿವಿ ಪರದೆಗಳ ಮುಂದೆ ಲೆಕ್ಕವಿಲ್ಲದಷ್ಟು ಕಾಲ ಕಳೆಯುವುದು ಕೂಡ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಹೀಗಾಗಿಯೇ ಚರ್ಮದ ರಕ್ಷಣೆಯ ಉತ್ಪನ್ನಗಳಲ್ಲಿ (ವಿಟಮಿನ್ ಇ ಮತ್ತು ವಿಟಮಿನ್ ಸಿ) ಆಂಟಿಆಕ್ಸಿಡೆಂಟ್‌ಗಳಿರುವುದನ್ನು ನೋಡಿಕೊಳ್ಳಬೇಕೆಂದು ಪ್ಯೂರ್‌ಪ್ಲೇ ಸ್ಕಿನ್ ಸೈನ್ಸಸ್‌ನ ಸಂಸ್ಥಾಪಕ ಶಂಕರ್ ಪ್ರಸಾದ್ ಅವರು ಸಲಹೆ ನೀಡಿದ್ದಾರೆ. 

ಪ್ರತಿನಿತ್ಯ ಸೂರ್ಯನ ಕಿರಣಗಳು ಚರ್ಮದ ಮೇಲೆ 15-20 ನಿಮಿಷ ಬೀಳುವಂತೆ ನೋಡಿಕೊಳ್ಳಬೇಕು. ಸಾಕಷ್ಟು ನೀರು ಕುಡಿಯುವುದು ಕೂಡ ಅತ್ಯಗತ್ಯ. ಪುರುಷರಿಗೆ ಗಡ್ಡದ ಪ್ರದೇಶದಲ್ಲಿ ಚರ್ಮದ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಹೀಗಾಗಿ ಗಡ್ಡದ ಪ್ರದೇಶದಲ್ಲಿ ನೀರಿನಲ್ಲಿ ಸೌಮ್ಯವಾಗಿ ತೊಳೆಯುವುದು, ಕೆನೆ ಅಥವಾ ಎಣ್ಣೆಯನ್ನು ಹಚ್ಚುವುದರಿಂದ ಚರ್ಮ ಸಮಸ್ಯೆಯಿಂದ ದೂರ ಉಳಿಯಬಹುದು ಎಂದು ತಿಳಿಸಿದ್ದಾರೆ. 

ಚರ್ಮ ಆರೈಕೆಗೆ ಏನನ್ನು ಮಾಡಬೇಕು...? 

  • ಸೂಕ್ತ ಉತ್ಪನ್ನವನ್ನು ಬಳಕೆ ಮಾಡುವುದರಿಂದ ಚರ್ಮ ತೇವಯುತವಾಗಿರುವಂತೆ ನೋಡಿಕೊಳ್ಳಬೇಕು. 
  • ಸೂರ್ಯನಕಿರಣಗಳು ಬಟ್ಟೆಯನ್ನೂ ಭೇದಿಸಿ ಚರ್ಮದ ಮೇಲೆ ತಾಕುವುದರಿಂದ ಮಾಸ್ಕ್ ಧಾರಣೆ ಹೊರತಾಗಿಯೂ ಸನ್‌ಸ್ಕ್ರೀನ್ ಬಳಕೆ ಮಾಡುವುದು ಅತ್ಯಗತ್ಯ.
  • ಪಾದರಕ್ಷೆಗಳನ್ನು ಧರಿಸುವುದಕ್ಕೂ ಮೊದಲು ನಿಮ್ಮ ಪಾದಗಳನ್ನು ಸಂಪೂರ್ಣವಾಗಿ ಒಣಗಿಸಿ ಮತ್ತು ಮೈಮೇಲೆ ಧರಿಸುವುದಕ್ಕೂ ಮೊದಲು ನಿಮ್ಮ ಬಟ್ಟೆಗಳು ಸಂಪೂರ್ಣವಾಗಿ ಒಣಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
  • ಚರ್ಮದ ಸೋಂಕುಗಳಾಗುತ್ತಿವೆಯೇ ಎಂಬುದನ್ನು ಆಗಾಗ ಗಮನಿಸುತ್ತಿರಿ. ಮುಖ್ಯವಾಗಿ ನಿಮ್ಮ ಕಾಲುಗಳ ಮೇಲೆ ಹೆಚ್ಚಿನ ಗಮನಹರಿಸಿ. ಮಲಗುವ ಮುನ್ನ ಪ್ರತಿ ರಾತ್ರಿ ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಿ ಒಣಗಿಸಿ. ನೀವು ಮಧುಮೇಹದಿಂದ ಬಳಲುತ್ತಿದ್ದರೆ, ಪಾದಗಳ ಆರೈಕೆ ಅತ್ಯಂತ ಮುಖ್ಯವಾಗುತ್ತದೆ. 

ಯಾವುದನ್ನು ಮಾಡಬಾರದು...? 

  • ಸ್ನಾನ ಮಾಡುವಾಗ ಅತವಾ ಮುಖ ತೊಳೆಯುವಾದ ಅತಿಯಾದ ಬಿಸಿನೀರನ್ನು ಬಳಕೆ ಮಾಡದಿರಿ. ಇದು ಚರ್ಮದಲ್ಲಿರುವ ಎಣ್ಣೆಯುಕ್ತವನ್ನು ಹೊರಹಾಕುತ್ತದೆ. ಅಲ್ಲದೆ, ಚರ್ಮ ಒಣಗುವಂತೆ ಮಾಡುತ್ತದೆ. 
  • ಸ್ವಚಿಕಿತ್ಸೆ ನಿಲ್ಲಿಸಿ, ಯಾವುದೇ ಔಷಧಿ ಬಳಕೆಗೂ ಮುನ್ನ ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ.
  • ಚರ್ಮ ಸಮಸ್ಯೆಗಳಿಂದ ದೂರ ಇರಲು ನೀವು ಬಳಸುವ ಉತ್ಪನ್ನಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರಿ.

Related Stories

No stories found.

Advertisement

X
Kannada Prabha
www.kannadaprabha.com