ದಿನಕ್ಕೊಂದು ಬಾದಾಮಿ ತಿನ್ನುವುದರಿಂದ ಪರೀಕ್ಷೆಯ ಆತಂಕ ದೂರ!

ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯದ ಕಡೆ ಗಮನ ಹರಿಸುವುದು ಅತ್ಯಂತ ಕಡಿಮೆಯಾಗಿ ಹೋಗಿದೆ. ಆರೋಗ್ಯವೇ ಭಾಗ್ಯ ಎಂಬುದು ಪ್ರಚಲಿತವಾಗಿರುವ ಮಾತಾಗಿದ್ದು, ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಯೋಗ ಮಾಡುವುದರ ಜೊತೆಗೆ ಆರೋಗ್ಯಕರ ಆಹಾರ ಸೇವನೆ ಮಾಡುವುದರ ಮೂಲಕ ಕೂಡ ಸಮತೋಲನ ಕಾಪಾಡಿಕೊಳ್ಳಬೇಕು. 
ಬಾದಾಮಿ
ಬಾದಾಮಿ

ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯದ ಕಡೆ ಗಮನ ಹರಿಸುವುದು ಅತ್ಯಂತ ಕಡಿಮೆಯಾಗಿ ಹೋಗಿದೆ. ಆರೋಗ್ಯವೇ ಭಾಗ್ಯ ಎಂಬುದು ಪ್ರಚಲಿತವಾಗಿರುವ ಮಾತಾಗಿದ್ದು, ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಯೋಗ ಮಾಡುವುದರ ಜೊತೆಗೆ ಆರೋಗ್ಯಕರ ಆಹಾರ ಸೇವನೆ ಮಾಡುವುದರ ಮೂಲಕ ಕೂಡ ಸಮತೋಲನ ಕಾಪಾಡಿಕೊಳ್ಳಬೇಕು. 

ಕೇವಲ ಹೊಟ್ಟೆ ತುಂಬಿಸುವ, ಕಣ್ಣಿಗೆ ಆಕರ್ಷಕವಾಗಿ ಕಾಣುವ ಹಾಗೂ ಬಾಯಿಗೆ ರುಚಿಯಾಗಿರುವ ಆಹಾರದ ಕೆಡೆ ಹೆಚ್ಚು ಆಕರ್ಷಿತಗೊಳ್ಳುತ್ತಿರುವ ಮನುಷ್ಯರು ಆರೋಗ್ಯಕರ ಆಹಾರವನ್ನು ಮರೆತು ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಯಿಗೆ ರುಚಿ ನೀಡುವ ಆಹಾರಗಳು ಮಕ್ಕಳ ದೇಹಕ್ಕೆ ಬೇಕಾಗುವಷ್ಟು ಪ್ರೊಟೀನ್, ವಿಟಮಿನ್ ಹಾಗೂ ಮಿನರಲ್ಸ್ ಗಳನ್ನು ಪೂರೈಸುವುದಿಲ್ಲ. ಹೀಗಾಗಿ ಸೇವನೆ ಮಾಡುವ ಆಹಾರದಲ್ಲಿ ಎಷ್ಟು ಶಕ್ತಿ ಇದೆ, ಯಾವ ಆಹಾರ ಸೇವನೆ ಮಾಡಿದರೆ ಎಷ್ಟು ಪೋಷಕಾಂಶಗಳನ್ನು ಲಭ್ಯ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕಾಗಿದೆ. 

ಮಕ್ಕಳಿಗೆ ಹಣ್ಣು, ತರಕಾರಿ, ಮಾಂಸ, ಮೊಟ್ಟೆ, ಸೊಪ್ಪು, ಡ್ರೈಫ್ರೂಟ್ಸ್ ಗಳನ್ನು ಎತೇಚ್ಚವಾಗಿ ನೀಡಬೇಕು. ಮಕ್ಕಳಿಗೆ ಆಹಾರ ಸೇವನೆಯಲ್ಲಿ ಶಿಸ್ತು ಬೆಳೆಸಬೇಕು. ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಕುರುಕಲು ತಿಂಡಿಗಳ ಸೇವನೆ ಮಾಡದಂತೆ ನೋಡಿಕೊಳ್ಳುವುದೂ ಕೂಡ ಅಗತ್ಯವಾಗುತ್ತದೆ. 

ಬಾದಾಮಿ ಅತ್ಯಧಿಕ ಪೋಷಕಾಂಶ ಹಾಗೂ ವಿಟಮಿನನ್ ಇರುವ ಪದಾರ್ಥವಾಗಿದ್ದು, ಸ್ವಾಭಾವಿಕವಾಗಿ ಅತಿ ಹೆಚ್ಚಿನ ಪ್ರಮಾಣದ ಪೌಷ್ಠಿಕಾಂಶ ಪೂರೈಸುವ ತಿನಿಸಾಗಿದೆ. ಇದರಲ್ಲಿ ಕಡಿಮೆ ಪ್ರಮಾಣದ ಕೊಬ್ಬಿದ್ದು, ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಹಸಿ ಬಾದಾಮಿಯನ್ನೂ ಸೇವನೆ ಮಾಡಬಹುದಾಗಿದೆ. ಬಾದಾಮಿ ರುಚಿಕರ ಹಾಗೂ ಆರೋಗ್ಯಕರವಾಗಿದ್ದು, ನಾಲಿಗೆಗೆ ರುಚಿಕರ ಹಾಗೂ ದೇಹಾರೋಗ್ಯಕ್ಕೆ ಹಿತವನ್ನು ನೀಡುತ್ತದೆ. 

ಪ್ರತೀನಿತ್ಯ ಒಂದೊಂದು ಬಾದಾಮಿ ಸೇವನೆ ಮಾಡುವುದಂದ ಮಕ್ಕಳ ಮಿದುಳು ಆರೋಗ್ಯಕರವಾಗಿ ವೃದ್ಧಿಯಾಗುತ್ತದೆ. ಮೂಳೆಗಳು ಬಲವರ್ಧನೆಗೊಳ್ಳುತ್ತದೆ. ಅಲ್ಲದೆ, ಮಲಬದ್ಧತೆ ಕೂಡ ನಿವಾರಣೆಗೊಳ್ಳುತ್ತದೆ. ಸ್ವಾಸ್ಥ್ಯ, ಸೌಂದರ್ಯ ವರ್ಧನೆಗೂ ಸಹಕಾರಿಯಾಗಿದೆ. 

ಬಾದಾಮಿಯನ್ನು ಕಿಂಗ್ ಆಫ್ ಡ್ರೈ ಫ್ರೂರ್ಟ್ ಎಂದೂ ಕೂಡ ಕರೆಯುವುದುಂಟು. ಬಾದಾಮಿಯಲ್ಲಿ ಅನೇಕ ಪೌಷ್ಟಿಕಾಂಶಗಲಿದ್ದು, ಮಿದುಳಿನ ವಿಕಾಸ ಮತ್ತು ಆರೋಗ್ಯ ರಕ್ಷಣೆಗೆ ನೆರವಾಗುತ್ತದೆ. ವಿಶೇಷವಾಗಿ ಬೆಳೆಯುತ್ತಿರುವ ಕಮಕ್ಕಳಿಗೆ ಸಂತುಲಿತ ಪ್ರಮಾಣದಲ್ಲಿ ಬಾದಾಮಿ ನೀಡುವುದರಿಂದ ಅವರ ಮೆದುಳಿನ ಬೆಳವಣಿಗೆ ಜೊತೆಗೆ ಅವರ ಬುದ್ಧಿಮತ್ತೆಯೂ ವೃದ್ಧಿಯಾಗುತ್ತದೆ. ಇದರಲ್ಲಿ ಮಿದುಳಿನ ಕಾರ್ಯಕ್ಕೆ ಪ್ರಯೋಜನವಾಗುವ ರಿಬೋಫ್ಲಾವಿನ್ ಮತ್ತು ಎಲ್ ಕಾರಿಟೈನ್ ಎಂಬ ಪೌಷ್ಟಿಕಾಂಶಗಳಿವೆ. ಇದು ಮಿದುಳಿನ ನರಗಳ ಕ್ರಿಯಾ ಚಟುವಟಿಕೆಯನ್ನು ವೃದ್ಧಿಗೊಳಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com