ಕೂಲ್ ಇರುವುದೆಲ್ಲಾ ತಂಪಲ್ಲ: ಬೇಸಿಗೆ ಬಂತು, ಸೌಂದರ್ಯ ಪ್ರಿಯರೇ ಎಸಿ ಬಳಸುವುದಕ್ಕೂ ಮುನ್ನ ಎಚ್ಚರ...

ಬಿರು ಬೇಸಿಗೆ ಸಮಯದಲ್ಲಿ ತಂಪಾದ ವಾತಾವರಣ ಸಿಕ್ಕರೆ ಅಮೃತ ಸಿಕ್ಕಷ್ಟೇ ಖುಷಿಯಾಗುತ್ತದೆ. ಅದರಲ್ಲೂ ಮನೆ ಅಥವಾ ಕಚೇರಿಯೊಳಗೆ ಎಸಿಯಿದ್ದರೆ ಖುಷಿ ಹೇಳತೀರದು. ಸೂರ್ಯನ ಶಾಖ ಹೆಚ್ಚಾದಂತೆ ಎಸಿಯ ತಂಪನ್ನೂ ಹೆಚ್ಚು ಮಾಡುತ್ತೇವೆ. ಬೇಸಿಗೆಯಲ್ಲಿ ನಗರದ ಬಹುತೇಕ ಕಟ್ಟಡಗಳು ಮತ್ತು ಮನೆಗಳಲ್ಲಿ ಎಸಿ ಬಳಕೆ ಹೆಚ್ಚಾಗುತ್ತಲೇ ಇರುತ್ತದೆ.

Published: 27th February 2020 01:16 PM  |   Last Updated: 27th February 2020 01:17 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬಿರು ಬೇಸಿಗೆ ಸಮಯದಲ್ಲಿ ತಂಪಾದ ವಾತಾವರಣ ಸಿಕ್ಕರೆ ಅಮೃತ ಸಿಕ್ಕಷ್ಟೇ ಖುಷಿಯಾಗುತ್ತದೆ. ಅದರಲ್ಲೂ ಮನೆ ಅಥವಾ ಕಚೇರಿಯೊಳಗೆ ಎಸಿಯಿದ್ದರೆ ಖುಷಿ ಹೇಳತೀರದು. ಸೂರ್ಯನ ಶಾಖ ಹೆಚ್ಚಾದಂತೆ ಎಸಿಯ ತಂಪನ್ನೂ ಹೆಚ್ಚು ಮಾಡುತ್ತೇವೆ. ಬೇಸಿಗೆಯಲ್ಲಿ ನಗರದ ಬಹುತೇಕ ಕಟ್ಟಡಗಳು ಮತ್ತು ಮನೆಗಳಲ್ಲಿ ಎಸಿ ಬಳಕೆ ಹೆಚ್ಚಾಗುತ್ತಲೇ ಇರುತ್ತದೆ. 

ಏರ್ ಕಂಡೀಶನ್ ರೂಮ್ ಅಂದ್ರೆ ಹಿಮಾಲಯದ ಸುಖ ಅಂತ ಅಂದುಕೊಳ್ಳುವವರ ಸಂಖ್ಯೆಯೇ ಹೆಚ್ಚು. ಆದರೆ ಅದು ಸುಳ್ಳು. ಈ ಎಸಿ ನಮ್ಮ ದೇಹವನ್ನೇನೋ ತಂಪಾಗಿಡುತ್ತೆ. ಜೊತೆಜೊತೆಗೆ ಬಿಸಿಬಿಸಿ ಅನಾರೋಗ್ಯಗಳನ್ನೂ ನಮ್ಮ ದೇಹದೊಳಗೇ ಬಚ್ಚಿಟ್ಟಿರುತ್ತದೆ. ಏರ್ ಕಂಡೀಶನರಿಂದ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. 

ಏರ್ ಕಂಡೀಶನ್ ರೂಮ್ ಅಂದ್ರೆ ಹಿಮಾಲಯದ ಸುಖ ಅಂತ ಅಂದುಕೊಂಡಿದ್ದೀರಿ. ಆದರೆ ಅದು ಸುಳ್ಳು. ಈ ಎಸಿ ನಮ್ಮ ದೇಹವನ್ನೇನೋ ತಂಪಾಗಿಡುತ್ತೆ. ಜೊತೆಜೊತೆಗೆ ಬಿಸಿಬಿಸಿ ಅನಾರೋಗ್ಯಗಳನ್ನೂ ನಮ್ಮ ದೇಹದೊಳಗೇ ಬಚ್ಚಿಟ್ಟಿರುತ್ತದೆ. ಏರ್ ಕಂಡೀಶನರಿಂದ ಆಗುವ ಅಂಥ ಅಪಾಯಗಳು ಇವು...

ಬಳಲಿಕೆ, ತಲೆನೋವು, ನಿರ್ಜಲೀಕರಣ
ನೀವು ಎಸಿ ರೂಮಿಗೆ ಹೊಸಬರಾದರೆ ಆರಂಭದಲ್ಲಿ ಕಾಣಿಸಿಕೊಳ್ಳುವ ಅನಾರೋಗ್ಯಗಳಿವು. ನಿಮ್ಮ ಶ್ವಾಸಕೋಶಕ್ಕೆ ಈ ತಣ್ಣನೆ ಹವಾ ಕಿರಿಕಿರಿ ಎನಿಸಿದರೆ, ಉಸಿರಾಟಕ್ಕೂ ಸಮಸ್ಯೆ ಆದೀತು. ಎಸಿರೂಮಿ ನಲ್ಲಿದ್ದವರು ಹೆಚ್ಚು ನೀರು ಕುಡಿದರೆ ಆಗಾಗ್ಗೆ ಕಾಣಿಸಿಕೊಳ್ಳುವ ಬಳಲಿಕೆ ದೂರವಾಗುತ್ತದೆ. ಇನ್ನು ನಮ್ಮ ದೇಹ ಆಯಾ ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳುವುದರಿಂದ ಎಸಿ ರೂಮಿನಲ್ಲಿ ತಂಪಾದ ವಾತಾವರಣದಿಂದಾಗಿ ನೀರು ಕುಡಿಯುವುದನ್ನು ಮರೆಯುತ್ತೇವೆ. ಇದರಿಂದ ನಿರ್ಜಲೀಕರಣ ಸಂಸ್ಯೆ ಎದುರಾಗುವ ಸಾಧ್ಯತೆಗಳಿರುತ್ತವೆ.

ವಂಶವಾಹಿ ರೋಗಗಳು
ಏರ್ ಕಂಡೀಶನರ್ ಕೆಲವು ವಂಶವಾಹಿ ರೋಗಗಳಿಗೆ ಪ್ರಚೋದಕ ಎಂಬುದೂ ಸಾಬೀತಾಗಿದೆ. ನಿಮ್ಮ ಪೂರ್ವಜರಲ್ಲಿ ಕಡಿಮೆ ರಕ್ತದೊತ್ತಡ, ವಾತರೋಗವಿದ್ದರೆ ಅದು ನಿಮಗೂ ವರ್ಗಾವಣೆಯಾದಂತೆ.

ಡ್ರೈ ಸ್ಕಿನ್
ನೀವು ಕೈಯನ್ನು ಎಷ್ಟೇ ಒದ್ದೆಮಾಡಿಕೊಳ್ಳಿ. 1 ತಾಸಿನ ನಂತರ ಮತ್ತೆ ಅದು ತೀರಾ ಒರಟಾಗುತ್ತದೆ. ಕೃತಕ ತಂಪನ್ನು ಚರ್ಮ ಸ್ವೀಕರಿಸಲು ನಿರಾಕರಿಸುವುದೇ ಇದಕ್ಕೆ ಕಾರಣ. ಸದಾಕಾಲ ಎಸಿಯಲ್ಲಿರುವ ಜನರಿಗೆ ಹೊರಕಿನ ಸೂರ್ಯನ ಕಿರಣಗಳನ್ನು ಸಹಿಸಿಕೊಳ್ಳುವ ಶಕ್ತಿಯಿರುವುದಿಲ್ಲ. ಸ್ವಲ್ಪ ಬಿಸಿಲು ಬೀಳುತ್ತಿದ್ದಂತೆಯೇ ನರಕದಲ್ಲಿರುವಂತೆ ಭಾಸವಾಗುತ್ತದೆ. ಸುದೀರ್ಘವಾಗಿ ಎಸಿ ರೂಮಿನಲ್ಲಿ ಕೆಲಸ ಮಾಡಿದವರು ಬಿಸಿಲಿಗೆ ಅಂಜುತ್ತಾರೆ. ಚರ್ಮಕ್ಕೆ ಅಗತ್ಯವಾದ ವಿಟಮಿನ್‍ಗಳು ಸೂರ್ಯನ ಕಿರಣದಿಂದ ಸಿಕ್ಕರೂ, ಅದರ ಪ್ರಯೋಜನ ಪಡೆಯಲು ಹಿಂಜರಿಯುತ್ತಾರೆ.

ಅಲರ್ಜಿ, ಸೋಂಕು
ಬಳಕೆ ಮಾಡುವ ಎಸಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೇ ಹೋದಲ್ಲಿ ಇದರಿಂದ ಅಲರ್ಜಿ ಹಾಗೂ ಚರ್ಮದ ಕಾಯಿಲೆ ಸೃಷ್ಟಿಸುವ ಸೋಂಕುಗಳು ಆರಂಭವಾಗುತ್ತದೆ. 

ಸಾಂಕ್ರಾಮಿಕ ರೋಗ
ಎಸಿ ಕೋಣೆಯಲ್ಲಿ ಹಲವರೊಟ್ಟಿಗೆ ಕೆಲಸ ಮಾಡುತ್ತಿದ್ದರೆ ಪಕ್ಕದವರ ಶೀತಜ್ವರದಂಥ ಸಾಂಕ್ರಾಮಿಕ ರೋಗಗಳೂ ಬಹುಬೇಗನೆ ನಿಮಗೂ ಅಟ್ಯಾಕ್ ಆಗುತ್ತವೆ.

ಎಸಿಯಿಂದ ಎದುರಾಗುವ ಸಮಸ್ಯೆಗಳಿಂದ ದೂರ ಇರಲು ಈ ಸಲಹೆಗಳನ್ನು ಅನುಸರಿಸಿ...

  • ದಿನಕ್ಕೆ 8-10 ಗ್ಲಾಸ್ ಗಳಷ್ಟು ನೀರನ್ನು ಕುಡಿಯಿರಿ. ಇದರಿಂದ ದೇಹಕ್ಕೆ ಎದುರಾಗುವ ನಿರ್ಜಲೀಕರಣ ಸಮಸ್ಯೆ ದೂರಾಗುತ್ತದೆ. 
  • ಹೆಚ್ಚು ಬಿಸಿ ಇರುವ ನೀರಿನ ಬಳಕೆಯನ್ನು ಕಡಿಮೆ ಮಾಡಿ. ಕಠಿಣ ಸಾಬೂನು ಬಳಕೆ ನಿಲ್ಲಿಸಿ. ಇಂತಹ ಸೋಪುಗಳು ಚರ್ಮವನ್ನು ಒಣಗುವಂತೆ ಮಾಡುತ್ತವೆ. 
  • ಗ್ಲಿಸರಿನ್ ಅಂಶ ಅರುವ ಸೋಪುಗಳ ಬಳಕೆ ಮಾಡಿ. ಈ ಬಗ್ಗೆ ವೈದ್ಯರ ಸಲಹೆಗಳನ್ನು ಪಡೆಯುವುದು ಉತ್ತಮ. 
  • ಅಗತ್ಯವಿಲ್ಲದಿರುವಾಗ ಎಸಿ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಎಸಿಗೆ ಹೆಚ್ಚು ಅವಲಂಬಿತರಾಗಬೇಡಿ. ಯಾವಾಗ ತಂಪಿನ ಅಗತ್ಯವಿದೆ ಎಂಬುದನ್ನು ನಿಮ್ಮ ದೇಹಕ್ಕೆ ತಿಳಿಯುತ್ತದೆ. ನೈಸರ್ಗಿಕವಾಗಿ ಬಾರದ ವಸ್ತುಗಳ ಬಳಕೆ ನಿಯಂತ್ರಿಸಿ. 
  • 4-6 ವಾರಗಳಿಗೊಮ್ಮೆ ಎಸಿಗಳ ಫಿಲ್ಟರ್ ಬದಲಾಯಿಸುತ್ತಿರಿ. ಫಿಲ್ಟರ್ ಗಳನ್ನು ಆಗಾಗ ಸ್ವಚ್ಛಗೊಳಿಸಿ, ಇದರಿಂತ ಎದುರಾಗುವ ಸೋಂಕುಗಳನ್ನು ತಡೆಗಟ್ಟಬಹುದು.
Stay up to date on all the latest ಜೀವನಶೈಲಿ news with The Kannadaprabha App. Download now
facebook twitter whatsapp