ಮಳೆಗಾಲದಲ್ಲಿ ಕೀಟಗಳ ಕಾಟವೇ? ಇಲ್ಲಿದೆ ಮನೆ ಮದ್ದು!

ಮಳೆಗಾಲ ಬಂತು...ಇನ್ನು ಮನೆ ಬಾಗಿಲಿಗೆ ಕೀಟಗಳ ದಾಳಿ ಆರಂಭವಾಗಲಿದ್ದು, ನೊಣ, ಸೊಳ್ಳೆ, ಜಿರಳೆ, ಶತಪದಿಯಂತಹ ಕೀಟಗಳು ಮನೆಗಳಿಗೆ ನುಗ್ಗುವ ಸಾಧ್ಯತೆ ಇದೆ. ಹೀಗಾಗಿ ಕೀಟಗಳ ಭಾಧೆಯಿಂದ ತಪ್ಪಿಸಿಕೊಳ್ಳಲು ಒಂದಷ್ಟು ಮನೆ ಮದ್ದು ಇಲ್ಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಳೆಗಾಲ ಬಂತು...ಇನ್ನು ಮನೆ ಬಾಗಿಲಿಗೆ ಕೀಟಗಳ ದಾಳಿ ಆರಂಭವಾಗಲಿದ್ದು, ನೊಣ, ಸೊಳ್ಳೆ, ಜಿರಳೆ, ಶತಪದಿಯಂತಹ ಕೀಟಗಳು ಮನೆಗಳಿಗೆ ನುಗ್ಗುವ ಸಾಧ್ಯತೆ ಇದೆ. ಹೀಗಾಗಿ ಕೀಟಗಳ ಭಾಧೆಯಿಂದ ತಪ್ಪಿಸಿಕೊಳ್ಳಲು ಒಂದಷ್ಟು ಮನೆ ಮದ್ದು ಇಲ್ಲಿದೆ.

ಕೀಟಗಳನ್ನು ತಡೆಯಲು ಮಹಿಳೆಯರು ಸ್ಪ್ರೇಗಳು, ಲಕ್ಷ್ಮಣ ರೇಖಾ ಮತ್ತು ಕೇಕ್ ನಂತಹ ವಸ್ತುಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ಆದರೆ ಮನೆಯಲ್ಲಿ ಪುಟ್ಟ-ಪುಟ್ಟ ಮಕ್ಕಳಿದ್ದರೆ ಇವುಗಳಲ್ಲಿನ ರಾಸಾಯನಿಕಗಳು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ನಮ್ಮ ಮನೆಯಲ್ಲೇ ಇರುವ ವಸ್ತುಗಳಿಂದ ಈ ಕೀಟ ಭಾದೆಯನ್ನು ನಿಯಂತ್ರಿಸಬಹುದು. 

ಇಂತಹ ಕೆಲ ಮನೆ ಮದ್ದುಗಳು ಇಲ್ಲಿವೆ.

ಸೊಳ್ಳೆಗಳು


ಕಿಟಕಿಗಳ  ಬಳಿ ಚೆಂಡು ಹೂಗಳ ಕುಂಡವನ್ನು ಇಡಿ. ಹೂಗಳು ಸೊಳ್ಳೆಗಳನ್ನು ನಿಯಂತ್ರಿಸುತ್ತವೆ. 6ರಿಂದ7 ಬೆಳ್ಳುಳ್ಳಿಯನ್ನು ಜಜ್ಜಿ ನೀರಿನಲ್ಲಿ ಕುದಿಸಬೇಕು. ಹೀಗೆ ಕುದಿಸಿದ ನೀರಿನಲ್ಲಿ ಬೆಳ್ಳುಳ್ಳಿ ವಾಸನೆ ಗಾಢವಾಗಿರುತ್ತದೆ. ಈ ನೀರಿಗೆ ಯಾವುದಾದರೂ ಸಾರಭೂತ ತೈಲ (Essential oil)ದ ಎರಡು-ಮೂರು  ಹನಿಗಳನ್ನು ಸೇರಿಸಿ. ಉದಾಹರಣೆಗೆ ಲ್ಯಾವೆಂಡರ್ ಎಸೆನ್ಷಿಯಲ್ ಆಯಿಲ್.. ಹೀಗೆ ತಯಾರಿಸಿದ ದ್ರಾವಣವನ್ನು ಮನೆತುಂಬ ಸ್ಪ್ರೇ ಮಾಡಿ. ಇದರ ಗಾಢವಾಸನೆಗೆ ಸೊಳ್ಳೆಗಳು ಮನೆ ಪ್ರವೇಶ ಮಾಡಲಾರವು. ಆದರೆ ಇದಕ್ಕೆ ಎಸೆನ್ಷಿಯಲ್ ಆಯಿಲ್ ಸೇರಿಸುವುದರಿಂದ ನಮಗೆ ಇದರ ವಾಸನೆ ಯಾವುದೇ ರೀತಿಯ ಪರಿಣಾಮ ಬೀರದು. ಸೊಳ್ಳೆಕಾಟದಿಂದ ಮುಕ್ತರಾಗಲು ಮತ್ತೊಂದು ವಿಧಾನ ಎಂದರೆ ಅದು ಕರ್ಪೂರ. ಸೊಳ್ಳೆ ಕಾಟ ಅಧಿಕವಿದ್ದ ಸಂದರ್ಭದಲ್ಲಿ ಕರ್ಪೂರವನ್ನು 15 ರಿಂದ 20 ನಿಮಿಷ ಉರಿಸಿದರೆ ಸೊಳ್ಳೆಗಳು ಹತ್ತಿರಕ್ಕೆ ಬರುವುದಿಲ್ಲ.

ನೊಣಗಳು


ನೊಣಗಳ ಕಾಟದಲ್ಲಿ ನೀಲಗಿರಿ ಎಣ್ಣೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಒಂದಷ್ಟು ಹನಿಗಳ ನೀಲಗಿರಿ ಎಣ್ಣೆಯನ್ನು ನೆಲ ಒರೆಸುವ ಬಟ್ಟೆ ಮೇಲೆ ಹಾಕಿಕೊಂಡು ನೋಣಗಳು ಅಧಿಕವಾಗಿರುವ ಜಾಗದಲ್ಲಿ ಒರೆಸಿದರೆ ಮತ್ತೆ ಆ ಜಾಗದಲ್ಲಿ ನೊಣಗಳು ಕೂರುವುದಿಲ್ಲ. ಇನ್ನು ಸಾಮಾನ್ಯವಾಗಿ ನಾವು ಪಲಾವ್ ಗೆ ಬಳಸುವ ಪಲಾವ್ ಎಲೆ ಅಥವಾ ಕೊಲ್ಲಿ ಎಲೆಗಳು (Bay leaves) ಕೂಡ ನೋಣಗಳ ನಿಯಂತ್ರಣದಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಪಲಾವ್ ಎಲೆ, ಲವಂಗ ನೀಲಗಿರಿ ಎಲೆಗಳನ್ನು ಕಿಟಕಿಗೆ ಕಟ್ಟಿದರೆ ಇದರ ವಾಸನೆಗೆ ನೋಣಗಳು ಮನೆ ಪ್ರವೇಶ ಮಾಡಲಾರವು. ಇನ್ನು ಮಾರುಕಟ್ಟೆಯಲ್ಲಿ ಸಾಕಷ್ಟು ರೀತಿಯ ನೋಣ ನಿಯಂತ್ರಕ ಉಪಕರಣಗಳು ದೊರೆಯುತ್ತವೆ. ಅದರಿಂದಲೂ ನೋಣಗಳ ನಿಯಂತ್ರಣ ಸಾಧ್ಯ. ಒಂದು ವೇಳೆ ಉಪಕರಣ ಇರುವ ಕಡೆ ನೋಣಗಳು ಹೋಗುತ್ತಿಲ್ಲ ಎನ್ನುವುದಾದರೆ ನೀರಿ ಸಕ್ಕರೆ ಮಿಶ್ರಣ ಮಾಡಿ ಉಪಕರಣದ ಬಳಿ ಇಡಿ. ಸಿಹಿ ದ್ರವಕ್ಕೆ ನೋಣಗಳು ಆಕರ್ಷಿತವಾಗಿ ಉಪರಕರಣದತ್ತ ಮುಖ ಮಾಡುತ್ತವೆ.

ಜಿರಳೆ


ಒಂದು ಪಾತ್ರೆ ಯಾವುದಾದರೂ ಒಂದು ತಿನ್ನುವ ಪಾದರ್ಥಕ್ಕೆ ಸಮ ಪ್ರಮಾಣದಲ್ಲಿ ಸಕ್ಕರೆ ಮತ್ತು ಸೋಡಾ (ಬೋರಿಕ್ ಆ್ಯಸಿಡ್)ವನ್ನು ಮಿಶ್ರಣ ಮಾಡಿ ಇಡಿ. ಈ ಮಿಶ್ರಣವನ್ನು ಜಿರಲೆಗಳಿರುವ ಮೂಲೆಗಳಲ್ಲಿ ಇರಿಸಿ. ವಿಶೇಷವಾಗಿ ಹೆಚ್ಚು ಕತ್ತಲೆ ಮತ್ತು ತೇವಾಂಶ ಇರುವ ಸ್ಥಳಗಳಲ್ಲಿ ಈ ಮಿಶ್ರಣವನ್ನು ಹಾಕಿದರೆ ಜಿರಲೆಗಳು ಓಡಿ ಹೋಗುತ್ತವೆ. ಜಿರಳೆಗಳು ಎಲ್ಲೆಲ್ಲಿ ಅವಿತಿವೆಯೋ ಅಲ್ಲೇಲ್ಲಾ ಈ ಮಿಶ್ರಣವನ್ನು ಸಿಂಪಡಿಸಿ. ಸಕ್ಕರೆ ಜಿರಳೆಗಳನ್ನು ಆಕರ್ಷಿಸಿದರೆ, ಬೋರಿಕ್ ಆ್ಯಸಿಡ್ ಜಿರಳೆಗಳನ್ನು ಕೊಲ್ಲುತ್ತವೆ. ಅಂತೆಯೇ ಬೇವು ಮತ್ತು ಅದರ ಎಲೆಗಳು ಕೂಡ ಜಿರಳೆ ಸಮಸ್ಯೆಯಲ್ಲಿ ರಾಮಬಾಣ. ಜೆರಳನ್ನು ಕೊಲ್ಲಲು ಬೇವಿನ ಎಣ್ಣೆ ಅಥವಾ ಪುಡಿ ಎರಡನ್ನೂ ಬಳಸಬಹುದು. ರಾತ್ರಿಯ ವೇಳೆ ಅಡುಗೆಮನೆಯಲ್ಲಿ ಮತ್ತು ಒದ್ದೆಯಾದ ಸ್ಥಳದಲ್ಲಿ ಬೇವಿನ ಎಣ್ಣೆ ಅಥವಾ ಪುಡಿಯನ್ನು ಹಾಕಿದರೆ ಜಿರಲೆಗಳು ಬರುವುದಿಲ್ಲ. ದಿನ ಕಳೆದಂತೆ ಇದೇ ಕ್ರಮವನ್ನು ಪುನರಾವರ್ತಿಸುತ್ತಿದ್ದರೆ ಜಿರಳೆ ಸಮಸ್ಯೆ ಮಾಯವಾಗುತ್ತವೆ.

ಶತಪದಿ ಅಥವಾ ಜರಿ


25 ಹನಿ ಪುದೀನ ತೈಲವನ್ನು ಒಂದು ಕಪ್ ನೀರಿಗೆ ಹಾಕಿ ಚೆನ್ನಾಗಿ ಕಲಕಿ, ಒಂದು ಸ್ಪ್ರೇ ಬಾಟಲಿಗೆ ಹಾಕಿಡಿ. ಈ ಮಿಶ್ರಣವನ್ನು ನಿಮ್ಮ ಮನೆಯ ಬಾಗಿಲು, ಕಿಟಕಿ ಸೇರಿದಂತೆ ಕೀಟಗಳು ಪ್ರವೇಶ ಮಾಡುವ ಪ್ರತೀಯೊಂದು ಜಾಗದಲ್ಲೂ ಸ್ಪ್ರೇ ಮಾಡಿ. ಮುಖ್ಯವಾಗಿ ಕತ್ತಲೆ ಇರುವ ಮೂಲೆಗಳಲ್ಲಿ ಇದನ್ನು ಸ್ಪ್ರೇ ಮಾಡಿ. ಒಂದು ಕಪ್ ನೀರಿಗೆ ಒಂದು ಕಪ್ ರಬ್ಬಿಂಗ್ ಆಲ್ಕೋಹಾಲ್ ಮತ್ತು ಒಂದು ಚಮಚ ವೆಜಿಟೇಬಲ್ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ ಇದನ್ನೂ ಕೂಡ ಎಲ್ಲ ಮೂಲಗಳಲ್ಲಿ ಸ್ಪ್ರೇ ಮಾಡಿ. ಮುಖ್ಯವಾಗಿ ಹೂವಿನ ಕುಂಡ, ಗಿಡಗಳ ತಳಭಾಗ, ಸಜ್ಜೆ, ಪೀಠೋಪಕರಣಗಳ ಸಂಧಿಯಲ್ಲಿ ಸ್ಪ್ರೇ ಮಾಡಿ. ಶತಪದಿಯೊಂದಿಗೆ ಇತರೆ ಕೀಟಗಳು ಕೂಡ ಸಾಯುತ್ತವೆ. ಮನೆಗಳಲ್ಲಿನ ಮೂಲೆಗಳಲ್ಲಿ ಸಣ್ಣ ಸಣ್ಣ ರಂದ್ರಗಳಿದ್ದರೆ, ಒಂದು ಕಪ್ ನೀರಿಗೆ ಜೊಳದ ಸಿರಪ್ ಹಾಗಿ  ಚೆನ್ನಾಗಿ ಬೇಯಿಸಿ. ಈ ಪೇಸ್ಟ್ ಅನ್ನು ರಂದ್ರಗಳಿಗೆ ಲೇಪಿಸಿ. ಇದರಿಂದ ರಂದ್ರಗಳು ಮುಚ್ಚಿಕೊಂಡು ಅದರಿಂದ ಶತಪದಿಗಳು ಹೊರಗೆ ಬರುವುದಿಲ್ಲ. ಅವು ಅಲ್ಲಿಯೇ ಸಾಯುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com