ಕೋವಿಡ್-19 ನಿಂದ ಜಾಗತಿಕ ಮಟ್ಟದಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಸಿತ!

ಕೋವಿಡ್-19 ಲಾಕ್ ಡೌನ್ ಪರಿಣಾಮದಿಂದಾಗಿ ಮಕ್ಕಳ ಜನನ ಹೆಚ್ಚಾಗಲಿದೆ ಎಂದು ಈ ಹಿಂದೆ ಹಲವು ಅಧ್ಯಯನ ವರದಿಗಳಲ್ಲಿ ಅಂದಾಜಸಲಾಗಿತ್ತು. ಆದರೆ ಈಗ ಜರ್ನಲ್ ಸೈನ್ಸ್ ನಲ್ಲಿ ಪ್ರಕಟಗೊಂಡಿರುವ ವರದಿ ಬೇರೆಯದ್ದೇ ಹೇಳುತ್ತಿದೆ. 
ಕೋವಿಡ್-19 ನಿಂದ ಜಾಗತಿಕ ಮಟ್ಟದಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಸಿತ!
ಕೋವಿಡ್-19 ನಿಂದ ಜಾಗತಿಕ ಮಟ್ಟದಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಸಿತ!

ಲಂಡನ್: ಕೋವಿಡ್-19 ಲಾಕ್ ಡೌನ್ ಪರಿಣಾಮದಿಂದಾಗಿ ಮಕ್ಕಳ ಜನನ ಹೆಚ್ಚಾಗಲಿದೆ ಎಂದು ಈ ಹಿಂದೆ ಹಲವು ಅಧ್ಯಯನ ವರದಿಗಳಲ್ಲಿ ಅಂದಾಜಸಲಾಗಿತ್ತು. ಆದರೆ ಈಗ ಜರ್ನಲ್ ಸೈನ್ಸ್ ನಲ್ಲಿ ಪ್ರಕಟಗೊಂಡಿರುವ ವರದಿ ಬೇರೆಯದ್ದೇ ಹೇಳುತ್ತಿದೆ. 

ಕೋವಿಡ್-19 ನಿಂದಾಗಿ ಜಾಗತಿಕವಾಗಿ ಹೆಚ್ಚು ಆದಾಯ ಹೊಂದಿರುವ ರಾಷ್ಟ್ರಗಳಲ್ಲಿ ಮಕ್ಕಳ ಜನನ ಪ್ರಮಾಣ ಅಥವಾ ಸಂತಾನೋತ್ಪತ್ತಿ ಸಾಮರ್ಥ್ಯ ಕುಸಿತ ಕಾಣಲಿದೆ ಎಂದು ಜರ್ನಲ್ ಸೈನ್ಸ್ ನಲ್ಲಿ ಪ್ರಕಟಗೊಂಡ ವರದಿ ಹೇಳುತ್ತಿದೆ. 

ಈ ಹಿಂದೆ ಎದುರಾಗಿದ್ದ ಇದೇ ಮಾದರಿಯ ಸನ್ನಿವೇಶಗಳಿಗೆ ಇಂದಿನ ಸಾಮಾಜಿಕ, ಆರ್ಥಿಕ ಹಾಗೂ ಜನಸಂಖ್ಯೆಯ ಪರಿಸ್ಥಿತಿಗಳನ್ನು ಹೋಲಿಕೆ ಮಾಡಿ ಈ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ. 

ಈ ವಿಷಯದಲ್ಲಿ ನಿಖರವಾಗಿ ಹೇಳಲು ಸಾಧ್ಯವಾಗದೇ ಇದ್ದರೂ, ಹೆಚ್ಚು ಆದಾಯವಿರುವ ದೇಶಗಳಲ್ಲಿ ಹಾಗೂ ಕಡಿಮೆ ಆದಾಯ ಇರುವ ದೇಶಗಳಲ್ಲಿ ಸಂತಾನೋತ್ಪತ್ತಿ ಪ್ರಮಾಣ ಕುಸಿಯಲಿದೆ ಎಂಬುದನ್ನು ಅಂದಾಜಿಸಲಾಗಿದೆ ಎಂದು ಇಟಲಿಯ ಬೊಕೊನಿ ವಿಶ್ವವಿದ್ಯಾಲಯದ ಪ್ರೊಫೆಸರ್ ಹಾಗೂ ಈ ಅಧ್ಯಯನದಲ್ಲಿ ತೊಡಗಿದ್ದ ಅರ್ನ್ಸ್ಟೈನ್ ಆಸ್ವೆ ಹೇಳಿದ್ದಾರೆ.

ಕ್ಷಾಮ ಹಾಗು ಯುದ್ಧದ ಸನ್ನಿವೇಶಗಳಲ್ಲಿ ಮರಣ ಪ್ರಮಾಣ ಹೆಚ್ಚಾಗಿದ್ದಾಗ ಅದರ ನಂತರದಲ್ಲಿ ಜನನ ಪ್ರಮಾಣಗಳು ಏರಿಕೆ ಕಂಡ ನಿದರ್ಶನಗಳಿವೆ. ಸ್ಪ್ಯಾನಿಷ್ ಫ್ಲೂ ಸಂದರ್ಭದಲ್ಲಿ ಜನನದ ಏರಿಕೆ ಕಾಣುವುದಕ್ಕೂ ಮುನ್ನ ತಾತ್ಕಾಲಿಕವಾಗಿ ಸಂತಾನೋತ್ಪತ್ತಿ ಪ್ರಮಾಣ ಕುಸಿದಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಕೋವಿಡ್-19 ಪರಿಣಾಮ ಬೀರಲಿದೆ. .

ಕೋವಿಡ್-19 ಆರೋಗ್ಯ ತುರ್ತು ಪರಿಸ್ಥಿತಿಯಿಂದಾಗಿ ಸಂತಾನೋತ್ಪತ್ತಿ ಕುಸಿತ ಕಾಣಲಿದೆ. ಹೆಚ್ಚು ಆದಾಯ ಹೊಂದಿರುವ ರಾಷ್ಟ್ರಗಳಲ್ಲಿ ಕುಟುಂಬ ವ್ಯವಸ್ಥೆಯಲ್ಲಿ ಕೋವಿಡ್-19 ಲಾಕ್ ಡೌನ್ ನಿಂದ ಸಾಕಷ್ಟು ಬದಲಾವಣೆಯಾಗಲಿದೆ. ಲಾಕ್ ಡೌನ್, ಶಾಲೆಗಳ ಸ್ಥಗಿತಗಳಿಂದಾಗಿ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಮನೆಯ ಸದಸ್ಯರ ಮೇಲೆಯೇ ಬೀಳಲಿದೆ. ಇದರ ಜೊತೆಗೆ ಆರ್ಥಿಕ ಸಾಮರ್ಥ್ಯವೂ ಕುಸಿಯುತ್ತಿದ್ದು, ಈ ಎಲ್ಲಾ ಅಂಶಗಳು ಸಂತಾನೋತ್ಪತ್ತಿಯನ್ನು ತಡೆಗಟ್ಟಲಿವೆ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ. ಇದರ ದೀರ್ಘಾವಧಿಯ ಪರಿಣಾಮಗಳನ್ನೂ ಅತಿ ಹೆಚ್ಚು ಆದಾಯ ಹೊಂದಿದ ರಾಷ್ಟ್ರಗಳು ಎದುರಿಸಬೇಕಿದ್ದು ಮುಂದೊಮ್ಮೆ ವಯಸ್ಸಾದವರ ಜನಸಂಖ್ಯೆ ಏರಿಕೆಯಾಗುವಂತೆ ಹಾಗೂ ಜನಸಂಖ್ಯೆ ಕುಸಿಯುವಂತೆ ಮಾಡಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com