ಲಾಕ್'ಡೌನ್ ಎಫೆಕ್ಟ್: ಜಂಕ್ ಫುಡ್ ಸೇವನೆ ಜೊತೆಗೆ ದೈಹಿಕ ಚಟುವಟಿಕೆಗಳಿಲ್ಲದೆ ಮಕ್ಕಳಲ್ಲಿ ಹೆಚ್ಚುತ್ತಿದೆ ಬೊಜ್ಜು ಸಮಸ್ಯೆ

ಕೊರೋನಾ ಲಾಕ್'ಡೌನ್ ಪರಿಣಾಮ ಇದೀಗ ಮಕ್ಕಳ ಆರೋಗ್ಯದ ಮೇಲೂ ಕೂಡ ಗಂಭೀರ ಪರಿಣಾಮ ಬೀರುತ್ತಿದೆ. ಲಾಕ್'ಡೌನ್ ಪರಿಣಾಮ ಶಾಲೆಗಳು ಬಂದ್ ಆಗಿವೆ. ಇನ್ನು ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭೀತಿಗೊಳಗಾಗಿರುವ ಪೋಷಕರು ಮಕ್ಕಳನ್ನು ಹೊರಗೆ ಬಿಡುತ್ತಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊರೋನಾ ಲಾಕ್'ಡೌನ್ ಪರಿಣಾಮ ಇದೀಗ ಮಕ್ಕಳ ಆರೋಗ್ಯದ ಮೇಲೂ ಕೂಡ ಗಂಭೀರ ಪರಿಣಾಮ ಬೀರುತ್ತಿದೆ. ಲಾಕ್'ಡೌನ್ ಪರಿಣಾಮ ಶಾಲೆಗಳು ಬಂದ್ ಆಗಿವೆ. ಇನ್ನು ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭೀತಿಗೊಳಗಾಗಿರುವ ಪೋಷಕರು ಮಕ್ಕಳನ್ನು ಹೊರಗೆ ಬಿಡುತ್ತಿಲ್ಲ. ಇದರಿಂದ ಮನೆಯಲ್ಲಿಯೇ ಉಳಿಯುತ್ತಿರುವ ಮಕ್ಕಳು ಹೆಚ್ಚು ಹೆಚ್ಚಾಗಿ ಜಂಕ್ ಫುಡ್ ಗಳನ್ನು ಸೇವನೆ ಮಾಡುತ್ತಿದ್ದು, ದೈಹಿಕ ಚಟುವಟಿಕೆಗಳಿಲ್ಲದ ಕಾರಣ ಬೊಜ್ಜು ಸಮಸ್ಯೆಗೀಡಾಗುತ್ತಿದ್ದಾರೆ. 

ಮನೆಯಲ್ಲಿರುವ ಮಕ್ಕಳು ಈ ಹಿಂದೆ ಸೇವನೆ ಮಾಡುತ್ತಿದ್ದ ಆಹಾರ, ತಿಂಡಿಗಳಿಗಿಂತಲೂ ಇದೀಗ ಹೆಚ್ಚು ಹೆಚ್ಚಾಗಿ ಸೇವನೆ ಮಾಡಲು ಆರಂಭಿಸಿದ್ದಾರೆ. ಅಲ್ಲದೆ, ಹೆಚ್ಚು ಸಮಯಗಳ ಕಾಲ ನಿದ್ರೆ ಮಾಡುತ್ತಿದ್ದಾರೆ. ಟಿವಿ, ಮೊಬೈಲ್, ಕಂಪ್ಯೂಟರ್ ಗಳ ಮುಂದೆಯೇ ಹೆಚ್ಚು ಕಾಲ ಕಳೆಯುತ್ತಿರುವ ಮಕ್ಕಳಲ್ಲಿ ದೈಹಿಕ ಚಟುವಟಿಕೆಗಳಂತೂ ಇಲ್ಲದಂತಾಗಿದೆ. 

ಇನ್ನು ತರಕಾರಿ, ಹಣ್ಣುಗಳ ಸೇವನೆ ಕೂಡ ಕಡಿಮೆಯಾಗಿದ್ದು, ಜಂಕ್ ಫುಡ್ ಗಳ ಸೇವನೆಗಳನ್ನು ಹೆಚ್ಚು ಮಾಡಿದ್ದಾರೆ. ಈ ಎಲ್ಲದರ ಪರಿಣಾಮ ಮಕ್ಕಳಲ್ಲಿ ಇದೀಗ ಬೊಜ್ಜು ಸಮಸ್ಯೆಗಳು ಎದುರಾಗುತ್ತಿವೆ. 

ನಿರ್ಬಂದಿತ ಆಹಾರ ಕ್ರಮದಲ್ಲಿ ಇರಿಸಬೇಕೆಂದು ಯಾವುದೇ ತಜ್ಞರು ಶಿಫಾರಸು ಮಾಡುವುದಿಲ್ಲ. ಏಕೆಂದರೆ ಇದು ಅವರ ಬೆಳವಣಿಗೆ ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದರೆ, ಪ್ರಸ್ತುತ ಲಾಕ್'ಡೌನ್ ಪರಿಣಾಮ ಮನೆಯಲ್ಲಿಯೇ ಇರುವುದರಿಂದ ಆರೋಗ್ಯಕರವಾದ ಆಹಾರ ಸೇವನೆಗಿಂತಲೂ ಅನಾರೋಗ್ಯಕರ ಆಹಾರ ಸೇವನೆ ಮಾಡುವುದನ್ನೇ ಹೆಚ್ಚು ಮಾಡುತ್ತಿದ್ದಾರೆ. ಇದರಿಂದಾಗಿ ಅವರ ಬೊಜ್ಜು ಹೆಚ್ಚಾಗುವುದಲ್ಲದೆ, ಅರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ. 

  • ಮಕ್ಕಳಿಗೆ ರೆಡಿಮೇಡ್ ಫುಡ್ ಗಳನ್ನು ನೀಡುವ ಬದಲು ತರಕಾರಿ, ಕಾಳುಗಳ ಪಲ್ಯ, ಹಣ್ಣುಗಳನ್ನು ನೀಡಬೇಕು. 
  • ಸ್ಫಾಟ್ ಡ್ರಿಂಕ್ಸ್, ಕೊಬ್ಬು ಹೆಚ್ಚಾಗಿರುವ ತಿಂಡಿಗಳನ್ನು ನಿಲ್ಲಿಸಿ, ಹಣ್ಣುಗಳ ಜ್ಯೂಸ್, ಹಾಲು ಹಾಗೂ ಆರೋಗ್ಯಕವಾದ ತಿಂಡಿ, ತಿನಿಸುಗಳನ್ನು ನೀಡಿ. 
  • ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ಹಬೆಯಲ್ಲಿ ಬೇಯಿಸಿದ ಪದಾರ್ಥಗಳನ್ನು ನೀಡಿ. 
  • ಕಂಪ್ಯೂಟರ್, ಮೊಬೈಲ್ ಹಾಗೂ ಟಿವಿ ನೋಡಿಕೊಂಡು ಮಕ್ಕಳು ಆಹಾರ ಸೇವನೆ ಮಾಡುವುದಕ್ಕೆ ಕಡಿವಾಣ ಹಾಕಿ. 
  • ಪ್ರತಿನಿತ್ಯ ಬೆಳಿಗ್ಗೆ ನಿಗದಿತ ಸಮಯವನ್ನಿಟ್ಟುಕೊಂಡು ಮಕ್ಕಳನ್ನು ನಿದ್ರೆಯಿಂದ ಎಬ್ಬಿಸಬೇಕು. ಇದರಿಂದ ಮಕ್ಕಳಲ್ಲಿ ಶಿಸ್ತು ಪಾಲನೆ ಬೆಳೆಸಿದಂತಾಗುತ್ತದೆ. 
  • ಬೆಳಗಿನ ಉಪಾಹಾರ ತಪ್ಪಿಸದಂತೆ ನೋಡಿಕೊಳ್ಳಿ. ಬೆಳಿಗನ ಸಂದರ್ಭದಲ್ಲಿ ಅಪಹಾರ ಮಾಡದೇ ಹೋದಲ್ಲಿ ಬಳಿಕ ತಿನ್ನುವ ಆಹಾರವನ್ನು ಮಿತಿಮೀರಿ ತಿನ್ನುವ ಸಾಧ್ಯತೆಗಳಿವೆ. 
  • ದೈಹಿಕ ಚಟುವಟಿಕೆಗಳಿಂದ ಕೂಡಿರುವ ಹಾಗೂ ಮನೆಯಲ್ಲಿಯೇ ಕುಳಿತು ಆಡುವಂತಹ ಆಟಗಳನ್ನಾಡಿಸಿ. 

​- ಮಂಜುಳಾ. ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com