ಯೋಗದಿಂದ ಇಷ್ಟೆಲ್ಲಾ ಆರೋಗ್ಯ ಲಾಭ! 

ದೈಹಿಕವಾಗಿ ಸಕ್ರಿಯವಾಗಿ ಮಾಡುವ ಯೋಗ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹಾಗೂ ಖಿನ್ನತೆಯ ಲಕ್ಷಣಗಳಿಗೂ ಪರಿಹಾರವಾಗಬಲ್ಲದು ಎಂದು ಇತ್ತೀಚಿನ ವರದಿಯೊಂದು ಹೇಳಿದೆ. 
ಯೋಗದಿಂದ ಇಷ್ಟೆಲ್ಲಾ ಆರೋಗ್ಯ ಲಾಭ!
ಯೋಗದಿಂದ ಇಷ್ಟೆಲ್ಲಾ ಆರೋಗ್ಯ ಲಾಭ!

ದೈಹಿಕವಾಗಿ ಸಕ್ರಿಯವಾಗಿ ಮಾಡುವ ಯೋಗ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹಾಗೂ ಖಿನ್ನತೆಯ ಲಕ್ಷಣಗಳಿಗೂ ಪರಿಹಾರವಾಗಬಲ್ಲದು ಎಂದು ಇತ್ತೀಚಿನ ವರದಿಯೊಂದು ಹೇಳಿದೆ. 

ಪ್ರಮುಖವಾಗಿ ಜಾಗತಿಕ ಆರೋಗ್ಯ ಬಿಕ್ಕಟ್ಟು ಇರುವಾಗ ಯೋಗದಿಂದ ಹೆಚ್ಚು ಆರೋಗ್ಯ ಲಾಭ ಪಡೆಯುವುದಕ್ಕೆ ಸಾಧ್ಯವಿದೆ ಎನ್ನುತ್ತಿದೆ ಈ ವರದಿ.

ಡಯಟ್ ಹಾಗೂ ಉಪವಾಸ, ವಾಕಿಂಗ್ ಗಳಿಂದ ಆರೋಗ್ಯ ಹೆಚ್ಚು ಕಾಪಾಡಿಕೊಳ್ಳಲು ಇಂದಿನ ಜನತೆ ಚಿಂತಿಸುತ್ತಾರೆ. ಆದರೆ ಮಾನಸಿಕವಾಗಿ ಒತ್ತಡ ಹೆಚ್ಚುತ್ತಲೇ ಇರುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುವುದಿಲ್ಲ. ಆದರೆ ಕೋವಿಡ್-19 ಸಾಂಕ್ರಾಮಿಕ ಎಲ್ಲರಿಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕಾಗಿ, ಆರೋಗ್ಯಪೂರ್ಣ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದಕ್ಕೆ ಎಚ್ಚರಿಕೆಯ ಗಂಟೆಯಂತೆ ಬಂದಿದೆ. ಫಿಟ್ ಆಗಿರುವುದೆಂದರೆ ಪರಿಪೂರ್ಣ ದೇಹ ಹೊಂದುವುದು ಅಥವಾ ಒಂದಷ್ಟು ಜೊತೆಯ ಆಬ್ಸ್ ನ್ನು ಪಡೆಯುವುದಷ್ಟೇ ಅಲ್ಲ ಫಿಟ್ನೆಸ್ ಎಂಬುದು ಸಾಮಾನ್ಯರ ನಂಬಿಕೆಗೆ ವಿರುದ್ಧವಾಗಿ ಆರೋಗ್ಯಕರ ಮನಸ್ಸು ದೇಹ ಮತ್ತು ಆತ್ಮಗಳ ಸಂಯೋಜನೆ, ಇದಕ್ಕೆ ಯೋಗ ಮಾಡುವುದು ಸೂಕ್ತ ಎನ್ನುತ್ತಾರೆ ಆತ್ಮಂತನ್ ವೆಲ್ನೆಸ್ ಕೇಂದ್ರದ ವೆಲ್ ನೆಸ್ ಡೈರೆಕ್ಟರ್ ಡಾ.ಮನೋಜ್ ಕುಟ್ಟೇರಿ. 

ಸುಮಾರು 4,000 ವರ್ಷ ಹಿಂದಿನ ಪದ್ಧತಿಯಾದ ಯೋಗದ ಜೊತೆ ಧ್ಯಾನ ಮಾಡುವುದರಿಂದಲೂ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ. 

ಯೋಗ ಸ್ನಾಯುಗಳಿಗೂ ಉತ್ತಮ 

ಹಲವು ಬಾರಿ ಯೋಗ ಹಾಗೂ ದೇಹದ ಫ್ಲೆಕ್ಸಿಬಲಿಟಿಯನ್ನು ಒಟ್ಟಿಗೆ ಹೇಳುವುದುಂಟು, ಅದು ಹೌದೂ ಕೂಡ. ಯೋಗ ಮಾಡುವುದರಿಂದ ಸ್ನಾಯುಸೆಳೆತ, ಕೀಲು ನೋವುಗಳು ಪರಿಹಾರವಾಗಲಿದ್ದು ಸದೃಢ ಸ್ನಾಯುಗಳನ್ನು ಹೊಂದಬಹುದಾಗಿದೆ. 

ಉತ್ತಮ ಶ್ವಾಸ

ಯೋಗಾಸನ ಮಾಡುವಾಗ ಶ್ವಾಸ ಬಹಳ ಮುಖ್ಯವಾಗುತ್ತದೆ. ಪ್ರಾಣಾಯಾಮ, ಅನುಲೋಮ, ವಿಲೋಮಗಳನ್ನು ಸಹಜವಾಗಿಯೇ ಮಾಡುವುದರಿಂದ ಉತ್ತಮ ಶ್ವಾಸವನ್ನೂ ಹೊಂದಬಹುದಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com