ಉಪವಾಸದ ಹಿಂದಿನ ವಿಜ್ಞಾನ: ಆರೋಗ್ಯದ ಹಲವು ಸಮಸ್ಯೆಗಳಿಗೆ ಚಿಕಿತ್ಸಾ ವಿಧಾನ!

ಲಂಘನಂ ಪರಮೌಷಧಂ ಎಂಬುದು ಪುರಾತನ ಚಿಕಿತ್ಸಾ ವಿಧಾನವಾದ ಆಯುರ್ವೇದದ ನುಡಿ. ಉಪವಾಸವೇ ಅತ್ಯಂತ ಶ್ರೇಷ್ಠ ಔಷಧವೆಂದು ಇದರ ಅರ್ಥ. ಈ ಮಾತು ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸುವಲ್ಲಿ, ಪ್ರಮುಖವಾಗಿ ಸಂದಿವಾತದಂತಹ ಸಮಸ್ಯೆಗಳಿಗೆ ಈಗಲೂ ಉಪಯುಕ್ತವೆನ್ನುವುದನ್ನು ವೈದ್ಯಕೀಯ ಕ್ಷೇತ್ರ ಅಂಗೀಕರಿಸಿದೆ. 
ಉಪವಾಸದ
ಉಪವಾಸದ

ಲಂಘನಂ ಪರಮೌಷಧಂ ಎಂಬುದು ಪುರಾತನ ಚಿಕಿತ್ಸಾ ವಿಧಾನವಾದ ಆಯುರ್ವೇದದ ನುಡಿ. ಉಪವಾಸವೇ ಅತ್ಯಂತ ಶ್ರೇಷ್ಠ ಔಷಧವೆಂದು ಇದರ ಅರ್ಥ. ಈ ಮಾತು ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸುವಲ್ಲಿ, ಪ್ರಮುಖವಾಗಿ ಸಂದಿವಾತದಂತಹ ಸಮಸ್ಯೆಗಳಿಗೆ ಈಗಲೂ ಉಪಯುಕ್ತವೆನ್ನುವುದನ್ನು ವೈದ್ಯಕೀಯ ಕ್ಷೇತ್ರ ಅಂಗೀಕರಿಸಿದೆ. 

ಈ ಉಪವಾಸದ ಹಿಂದಿನ ವಿಜ್ಞಾನ ಏನು? ಉಪವಾಸಗಳ ವಿಧಾನಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. 

ವೈದ್ಯಕೀಯ ಡಾಟಾ ಹಾಗೂ ಸಂಶೋಧಾನೆ ಆಧಾರಿತ ಅಂಶಗಳಿಂದ ಕ್ಯಾಲೊರಿಗಳಿಗೆ ಕಡಿವಾಣ ಹಾಕುವುದು ಹಾಗೂ ಉಪವಾಸ ಮಾಡುವುದರಿಂದ ಅಧಿಕ ರಕ್ತದೊತ್ತಡ, ಚಯಾಪಚಯ ಸಮಸ್ಯೆಗಳು, ಉರಿಯೂತದ ಕಾಯಿಲೆಗಳು, ಮಾನಸಿಕ ಅಸ್ವಸ್ಥತೆಗಳು ಮತ್ತು ಅಟೊಪಿಕ್ ಸಮಸ್ಯೆಗಳಿಗೆ ವೈದ್ಯಕೀಯ ಪ್ರಯೋಜನಗಳಾಗುವುದು ಸ್ಪಷ್ಟವಾಗಿದೆ.  

ಭಾರತದಲ್ಲಿ ಶೇ.61 ರಷ್ಟು ಸಾವುಗಳು ಸಾಂಕ್ರಾಮಿಕವಲ್ಲದ ಆರೋಗ್ಯ ಸಮಸ್ಯೆಗಳಿಂದ ಸಂಭವಿಸುತ್ತಿದ್ದು, ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಹಾಗೂ ತಡೆಗಟ್ಟುವುದಕ್ಕೆ ಉಪವಾಸ ವಿಧಾನ ಅತ್ಯವಶ್ಯ

ಉಪವಾಸಕ್ಕೆ ಅನುಸರಿಸಬೇಕಾದ ವಿಧಾನಗಳು 

ನಿರ್ದಿಷ್ಟ ಅವಧಿಯ ವರೆಗೆ ಘನ ಆಹಾರ, ನಿಕೋಟಿನ್ ಮತ್ತು ಕೆಫೀನ್ ನಂತಹ ಅಂಶಗಳನ್ನು ಸೇವಿಸದೇ ಇರುವುದು ಉಪವಾಸದ ಕ್ರಮ. ಇದನ್ನು ಕ್ರಮಬದ್ಧವಾಗಿ ಆಚರಿಸಿದರೆ ಹೊಸ ಚೈತನ್ಯ ಮೂಡಿ, ಬಯಕೆಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಉಪವಾಸದ ಅವಧಿಯಲ್ಲಿ ತಾಜಾ ಹಣ್ಣಿನ ಜ್ಯೂಸ್, ನಿಂಬೆ ಹಣ್ಣಿನ ರಸ, ಜೇನುತುಪ್ಪ, ವೆಜಿಟೆಬಲ್ ಸೂಪ್ ಗಳನ್ನು ಸೇವಿಸುವ ಮೂಲಕ ದಿನವೊಂದಕ್ಕೆ ಕ್ಯಾಲೋರಿಯನ್ನು ಗರಿಷ್ಠ 300ಕ್ಕೆ ಸೀಮಿತಗೊಳಿಸಬಹುದಾಗಿದ್ದು ಈ ಪ್ರಕ್ರಿಯೆ  ಪಿತ್ತಜನಕಾಂಗ, ಮೂತ್ರಪಿಂಡಗಳು, ಕರುಳುಗಳು, ಚರ್ಮ ಮತ್ತು ಶ್ವಾಸಕೋಶಗಳ ಸ್ವಾಸ್ಥ್ಯವಾಗಿರಿಸುತ್ತದೆ. ಉಪವಾಸದ ಅವಧಿಯಲ್ಲಿ ಚಟುವಟಿಕೆಗಳು ಹಾಗೂ ವಿಶ್ರಾಂತಿಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಗಮನಾರ್ಹ ಸಂಗತಿ.

ಒಮ್ಮೆ ಉಪವಾಸದ ನಂತರ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದಕ್ಕೆ ಸಾವಧಾನದಿಂದ ಘನ ಆಹಾರಗಳನ್ನು ಪುನಃ ಸೇವಿಸಬೇಕಾಗುತ್ತದೆ. ಉಪವಾಸ ಪ್ರಕ್ರಿಯೆ ಚಯಾಪಚಯ, ಹೃದಯರಕ್ತನಾಳದ ಮತ್ತು ಮಾನಸಿಕ ಪರಿಣಾಮಗಳನ್ನು ಹೊಂದಿರುತ್ತದೆಯಾದ್ದರಿಂದ ಇವುಗಳ ಬಗ್ಗೆ ಸಂಪೂರ್ಣ ನಿಗಾವಹಿಸಬೇಕಾಗುತ್ತದೆ. 

ಸಾಮಾನ್ಯವಾಗಿ ಆಚರಿಸುವ ಉಪವಾಸದ ಮೂರು ವಿಧಾನಗಳು

ನೀರನ್ನಷ್ಟೇ ಸೇವಿಸಿ ಮಾಡುವ ಉಪವಾಸ: ಬೇರೆ ಯಾವುದೇ ದ್ರವ, ಘನ ಆಹಾರಗಳನ್ನು ಸೇವಿಸದೇ ಕೇವಲ ನೀರನ್ನಷ್ಟೇ ಸೇವಿಸಿ ಮಾಡುವ ಉಪವಾಸ ಸಂಧಿವಾತ ಸಮಸ್ಯೆಗೆ ಅತ್ಯುತ್ತಮ, ಅತಿ ಪರಿಣಾಮಕಾರಿ ಚಿಕಿತ್ಸೆ ಎನ್ನುತ್ತದೆ ಲ್ಯಾನ್ಸೆಟ್ ನಲ್ಲಿ ಪ್ರಕಟವಾದ ವರದಿ. ಆದರೆ ಹಲವು ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗಳು ವೈದ್ಯಕೀಯ ಸಲಹೆ ಇಲ್ಲದೇ ಈ ರೀತಿಯ ಉಪವಾಸ ಮಾಡುವುದು ಸೂಕ್ತವಲ್ಲ. ಈ ರೀತಿಯ ಉಪವಾಸವನ್ನು ಲಘು ಉಪಹಾರ ಸೇವನೆಯ ಮೂಲಕ ಮುಕ್ತಾಯಗೊಳಿಸುವುದು ಉತ್ತಮ 

ಚಿಕಿತ್ಸಕ ಉಪವಾಸ ಅಥವಾ ಥೆರೆಪ್ಯುಟಿಕ್ ಫಾಸ್ಟಿಂಗ್: ಈ ರೀತಿಯ ಉಪವಾಸದಲ್ಲಿ, 250 ಎಂಎಲ್ ತರಕಾರಿಯ ಸಾರು, 250 ಎಂ.ಎಲ್ ತರಕಾರಿಯ ಜ್ಯೂಸ್, 30 ಗ್ರಾಮ್ ಜೇನುತುಪ್ಪ, ನೀರು ಹಾಗೂ ಗಿಡಮೂಲಿಕೆ ಚಹಾಗಳ ರೂಪದಲ್ಲಿ ನ್ 2 ಲೀಟರ್ ನಷ್ಟು ದ್ರವರೂಪದ ಆಹಾರ ಸೇವನೆ ಮಾಡುವುದರಿಂದ ದೈಹಿಕ ಉಪಯೋಗವಷ್ಟೇ ಅಲ್ಲದೇ ಮಾನಸಿಕ ಉಪಯೋಗಗಳೂ ಇದೆ 

ನಿಯಮಿತ ಉಪವಾಸ: ನಿಯಮಿತ ಉಪವಾಸ ಮಾಡುವುದರಿಂದ ಮಧುಮೇಹ, ಹೃದಯ ಸಮಸ್ಯೆಗಳ ಅಪಾಯವನ್ನು ತಡೆಗಟ್ಟಬಹುದು ಹಾಗೂ ಕ್ಯಾನ್ಸರ್ ನ ಚಿಕಿತ್ಸೆಗೆ ಇದು ಅತ್ಯಂತ ಸಹಕಾರಿ ಎನ್ನುವುದು ವೈದ್ಯಕೀಯ ಸಂಶೋಧನೆಯಿಂದ ದೃಢಪಟ್ಟಿದೆ. 

ಉಪವಾಸವನ್ನು ಪರವಾನಗಿ ಪಡೆದ ಪ್ರಕೃತಿಚಿಕಿತ್ಸಕರ ಸಲಹೆಯಂತೆ ಆಚರಿಸಿದರೆ ಅತ್ಯುತ್ತಮ ಪರಿಹಾರ ಕಂಡುಕೊಳ್ಳಬಹುದು. 

ಡಾ.ಕೆ.ಷಣ್ಮುಗಂ

ಲೇಖಕರು  ಜಿಂದಾಲ್ ನೇಚರ್ ಕೇರ್ ಇನ್ಸ್ಟಿಟ್ಯೂಟ್ ನ ಸಹಾಯಕ ಸಿಎಂಒ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com