ಕೊರೋನಾ ವೈರಸ್ ಸೋಂಕು: ಈ ಸಮಯದಲ್ಲಿ ನಿಮ್ಮ ಮೊಬೈಲ್, ಗ್ಯಾಜೆಟ್ ಸ್ವಚ್ಛತೆ ಹೇಗೆ? 

ಕೊರೋನಾ ವೈರಸ್ ಸೋಂಕು ತಗುಲದಂತೆ ತಡೆಗಟ್ಟಲು ನಿಮ್ಮ ಕೈಗಳನ್ನು ಆಗಾಗ ತೊಳೆಯುತ್ತಿರಿ ಎಂದು ಹೇಳುವುದನ್ನು ಕೇಳಿದ್ದೇವೆ. ಕೈಗಳನ್ನೇನೋ ಆಗಾಗ ತೊಳೆದು ಶುಚಿ ಮಾಡುತ್ತಿರಬಹುದು. ಆದರೆ ಕೀಟಾಣು ಹುಟ್ಟಿಕೊಂಡು ಬೆಳೆಯುವ ಮೊಬೈಲ್ ಗಳನ್ನೇನು ಮಾಡುವುದು?

Published: 16th March 2020 01:53 PM  |   Last Updated: 16th March 2020 02:39 PM   |  A+A-


Posted By : Sumana Upadhyaya
Source : The New Indian Express

ಕೊರೋನಾ ವೈರಸ್ ಸೋಂಕು ತಗುಲದಂತೆ ತಡೆಗಟ್ಟಲು ನಿಮ್ಮ ಕೈಗಳನ್ನು ಆಗಾಗ ತೊಳೆಯುತ್ತಿರಿ ಎಂದು ಹೇಳುವುದನ್ನು ಕೇಳಿದ್ದೇವೆ. ಕೈಗಳನ್ನೇನೋ ಆಗಾಗ ತೊಳೆದು ಶುಚಿ ಮಾಡುತ್ತಿರಬಹುದು. ಆದರೆ ಕೀಟಾಣು ಹುಟ್ಟಿಕೊಂಡು ಬೆಳೆಯುವ ಮೊಬೈಲ್ ಗಳನ್ನೇನು ಮಾಡುವುದು?


ವಿಜ್ಞಾನಿಗಳು ಮಾಡಿರುವ ಪರೀಕ್ಷೆ ಪ್ರಕಾರ ವೈರಸ್ ಪ್ಲಾಸ್ಟಿಕ್ ಮತ್ತು ಸ್ಟೈನ್ ಲೆಸ್ ಸ್ಟೀಲ್ ಗಳಲ್ಲಿ ಎರಡರಿಂದ ಮೂರು ದಿನಗಳ ಕಾಲ ಇರುತ್ತದೆ. ಕೊರೋನಾ ಒಂದು ಜಾಗತಿಕ ಮಟ್ಟದ ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿರುವ ಬೆನ್ನಲ್ಲೇ ಕೈಗಳ ಜೊತೆ ಉದ್ಯೋಗಿಗಳು, ಜನರು ತಮ್ಮ ದಿನನಿತ್ಯ ಜೀವನದಲ್ಲಿ ಬಳಸುವ ಮೊಬೈಲ್, ಕೀ ಬೋರ್ಡ್ ಮತ್ತು ಟ್ಯಾಬ್ ಕಂಪ್ಯೂಟರ್ ಗಳನ್ನು ಸಹ ಆಗಾಗ ಶುಚಿ ಮಾಡುತ್ತಿರಬೇಕು ಎಂದು ವಿಜ್ಞಾನಿಗಳು ಹೇಳುತ್ತಾರೆ.


ಹಾಗೆಂದು ಬೇಕಾಬಿಟ್ಟಿ ಮೊಬೈಲ್ ನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಅದರಿಂದ ಮೊಬೈಲ್ ಹಾಳಾಗಬಹುದು. ಮೊಬೈಲ್ ನ ಕವರ್ ಒಳಗೆ ತೇವಾಂಶ ಬರದಂತೆ, ಮೇಲ್ಮೈಯನ್ನು ಗೀಚದಂತೆ ನೋಡಿಕೊಳ್ಳಬೇಕು. 


ಹಾಗಾದರೆ ಈ ಕೊರೋನಾ ವೈರಸ್ ಸಂದರ್ಭದಲ್ಲಿ ಮೊಬೈಲ್ ಸ್ವಚ್ಛ ಮಾಡುವುದು ಹೇಗೆ: ಫೋನ್ ಮೇಲೆ ಕ್ಲೀನರ್ ನ್ನು ನೇರವಾಗಿ ಸಿಂಪಡಿಸಬೇಡಿ. ಸ್ವಚ್ಛಗೊಳಿಸಲೆಂದು ದ್ರಾವಣದಲ್ಲಿ ಮುಳುಗಿಸಬೇಡಿ, ಅನಗತ್ಯ ವಸ್ತುಗಳಿಂದ ಕೀಬೋರ್ಡ್, ಮೊಬೈಲ್ , ಲ್ಯಾಪ್ ಟಾಪ್ ಗಳನ್ನು ಉಜ್ಜಬೇಡಿ.


ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ನ್ನು ಸ್ವಚ್ಛಗೊಳಿಸುವ ಮುನ್ನ ಸ್ವಿಚ್ಛ್ ಆಫ್ ಮಾಡಿಕೊಳ್ಳಿ. ಎಲ್ಲಾ ಕೇಬಲ್ ಗಳ ಸಂಪರ್ಕ ತೆಗೆಯಿರಿ. ಫೋನ್ ಚಾರ್ಜಿಂಗ್ ನಲ್ಲಿ ಇಟ್ಟಿರಬಾರದು.


ಔಷಧಾಲಯಗಳಲ್ಲಿ ಸಿಗುವ ಕ್ಲೊರೊಕ್ಸ್ ವೈಪ್ಸ್ ನಿಂದ ಮೊಬೈಲ್, ಗೆಜೆಟ್ ಗಳನ್ನು ಸ್ವಚ್ಛ ಮಾಡಬಹುದು. ಗೃಹೋಪಕರಣ ವಸ್ತುಗಳನ್ನು ಸ್ವಚ್ಛಗೊಳಿಸುವ ವಸ್ತುಗಳನ್ನು ಗ್ಯಾಜೆಟ್, ಎಲೆಕ್ಟ್ರಾನಿಕ್ ವಸ್ತುಗಳ ಸ್ವಚ್ಛತೆಗೆ ಬಳಸಬಾರದು ಎಂದು ಹೇಳುತ್ತದೆ. ಮೃದು ಬಟ್ಟೆಯಿಂದ ಫೋನನ್ನು ಸ್ವಚ್ಛ ಮಾಡಿ.ನೀರು ಮತ್ತು ಸೋಪ್ ನಲ್ಲಿ ಬಟ್ಟೆಯನ್ನು ಅದ್ದಿ ತೆಗೆದು ಸ್ವಚ್ಛಗೊಳಿಸಿ. ಪೇಪರ್ ಟವಲ್ ಕೂಡ ಬಳಸಬಹುದು. 


ವಿಶ್ವದ ಅತಿದೊಡ್ಡ ಫೋನ್ ತಯಾರಕರಾದ ಸ್ಯಾಮ್‌ಸಂಗ್ ಮುಂದಿನ ಕೆಲವು ವಾರಗಳಲ್ಲಿ ಭಾರತದ ಸ್ಯಾಮ್‌ಸಂಗ್ ಮಳಿಗೆಗಳು ಮತ್ತು ಸೇವಾ ಕೇಂದ್ರಗಳಲ್ಲಿ ಯುವಿ ಬೆಳಕನ್ನು ಒಳಗೊಂಡ ಉಚಿತ ಫೋನ್-ನೈರ್ಮಲ್ಯ ಸೇವೆಯನ್ನು ನೀಡಲಿದೆ ಎಂದು ಹೇಳಿದೆ.


ವೈರಸ್ ಹರಡುವುದನ್ನು ನಿಧಾನಗೊಳಿಸಲು  ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಶಿಫಾರಸು ಮಾಡುತ್ತಿರುವ ಹಲವು ಕ್ರಮಗಳಲ್ಲಿ ಫೋನ್ ಸ್ವಚ್ಛಗೊಳಿಸುವ ಹಂತವು ಒಂದು, ಇದು ವಿಶ್ವದಾದ್ಯಂತ ಕೊರೋನಾ ವೈರಸ್ ಸುಮಾರು 1,50,000 ಜನರಿಗೆ ಮತ್ತು ಭಾರತದಲ್ಲಿ ಸುಮಾರು 100 ಜನರಿಗೆ ಸೋಂಕು ತಗುಲಿದೆ. 5,000 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 

Stay up to date on all the latest ಜೀವನಶೈಲಿ news with The Kannadaprabha App. Download now
facebook twitter whatsapp