ಶ್ವಾಸಕೋಶ ಸಮಸ್ಯೆ ಎದುರಾದೀತು... ಮಾಸ್ಕ್ ಧರಿಸಿ ವ್ಯಾಯಾಮ ಮಾಡುವುದಕ್ಕೂ ಮುನ್ನ ಎಚ್ಚರ!

ಲಾಕ್'ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಲಾಲ್'ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವು ಉದ್ಯಾನವನಗಳಿಗೆ ಪ್ರತೀನಿತ್ಯ ಸಾವಿರಾರು ವಾಯುವಿಹಾರಿಗಳು ಮಾಸ್ಕ್ ಧರಿಸಿ ಲಗ್ಗೆಯಿಡಲು ಆರಂಭಿಸಿದ್ದಾರೆ. ಈ ನಡುವೆ ಫಿಟ್ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಮಾಸ್ಕ್ ಧರಿಸಿ ವ್ಯಾಯಾಮ ಮಾಡಿದರೆ ಅಪಾಯವನ್ನು ಹತ್ತಿರಕ್ಕೆ ಬರಮಾಡಿಕೊಂಡಂತೆ ಎಂದು ವೈದ್ಯರು ಹೇಳುತ್ತಿದ್ದಾರೆ. 
ಸಂಗ್ರಹ ಚಿತ್ರd
ಸಂಗ್ರಹ ಚಿತ್ರd

ಬೆಂಗಳೂರು: ಲಾಕ್'ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಲಾಲ್'ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವು ಉದ್ಯಾನವನಗಳಿಗೆ ಪ್ರತೀನಿತ್ಯ ಸಾವಿರಾರು ವಾಯುವಿಹಾರಿಗಳು ಮಾಸ್ಕ್ ಧರಿಸಿ ಲಗ್ಗೆಯಿಡಲು ಆರಂಭಿಸಿದ್ದಾರೆ. ಈ ನಡುವೆ ಫಿಟ್ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಮಾಸ್ಕ್ ಧರಿಸಿ ವ್ಯಾಯಾಮ ಮಾಡಿದರೆ ಅಪಾಯವನ್ನು ಹತ್ತಿರಕ್ಕೆ ಬರಮಾಡಿಕೊಂಡಂತೆ ಎಂದು ವೈದ್ಯರು ಹೇಳುತ್ತಿದ್ದಾರೆ. 

ಸಾಮಾನ್ಯವಾಗಿ ಉದ್ಯಾನವನಗಳಲ್ಲಿ ವ್ಯಾಯಾಮ ಮಾಡಲು ಬರುವ ಜನರು ರನ್ನಿಂಗ್ ಮಾಡುತ್ತಾರೆ. ಕೊರೋನಾ ಸೋಂಕು ಹರಡುವ ಭೀತಿಯಿಂದ ಸರ್ಕಾರ ಈಗಾಗಲೇ ಮಾಸ್ಕ್ ಕಡ್ಡಾಯ ಮಾಡಿದ್ದು, ಓಡುವಾಗ ಮಾಸ್ಕ್ ಧರಿಸುವುದು ಅಪಾಯಕರ ಎಂದು ವೈದ್ಯರು ತಿಳಿಸುತ್ತಿದ್ದಾರೆ. 

ಮಾಸ್ಕ್ ಧರಿಸಿ ಓಡುವುದು ಶ್ವಾಸಕೋಶಕ್ಕೆ ಹಾಳು ಮಾಡುತ್ತದೆ. ಈ ಕಾರಣದಿಂದಲೇ ಉದ್ಯಾನವನಗಳಲ್ಲಿ ಮಾಸ್ಕ್ ಧರಿಸಿ ಓಡುವುದಕ್ಕಿಂತಲೂ ಮನೆಗಳಲ್ಲಿಯೇ ವ್ಯಾಯಾಮ ಮಾಡುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ. 

ಈ ಕುರಿತು ಮಾತನಾಡಿರುವ ಮಣಿಪಾಲ ಆಸ್ಪತ್ರೆಯ ವೈದ್ಯ ಡಾ.ಮನೋಹರ್ ಅವರು, ಹೊರಾಂಗಣದಲ್ಲಿ ವ್ಯಾಯಾಮ ಮಾಡಲು ಇಚ್ಛಿಸುವವರು, ಮಾಸ್ಕ್ ಧರಿಸುವುದರಿಂದ ಉಸಿರಾಟ ಸಮಸ್ಯೆ ಎದುರಾಗುತ್ತದೆ. ಮೂರು ಲೇಯರ್ ಮಾಸ್ಕ್ ಧರಿಸುವುದರಿಂದ ವೈರಸ್ ಹರಡುವುದನ್ನು ತಪ್ಪಿಸಬಹುದು. ಆದರೆ, ಈ ಮಾಸ್ಕ್ ಗಳನ್ನು ಓಡುವಾಗ ಧರಿಸುವುದು ಉತ್ತಮವಲ್ಲ. ಇಂತಹ ಸಂದರ್ಭದಲ್ಲಿ ವ್ಯಕ್ತಿಯಲ್ಲಿ ಉಸಿರಾಟ ಸಮಸ್ಯೆ ಹಾಗೂ ತಲೆತಿರುವಂತಹ ಸಮಸ್ಯೆಗಳು ಎದುರಾಗುತ್ತವೆ. ಕೊರೋನಾ ಸೋಂಕು ಹೆಚ್ಚಾಗಿದ್ದು, ಇಂತಹ ಸಂದರ್ಭದಲ್ಲಿ ಮನೆಗಳಲ್ಲಿಯೇ ವ್ಯಾಯಾಮ ಮಾಡುವುದು ಉತ್ತಮ ಎಂದು ಹೇಳಿದ್ದಾರೆ. 

ಶ್ವಾಸಕೋಶ ತಜ್ಞ ಡಾ.ರವೀಂದ್ರ ಮೆಹ್ತಾ ಮಾತನಾಡಿ, ಮಾಸ್ಕ್ ಧರಿಸಿ ವ್ಯಾಯಾಮ ಮಾಡುವುದರಿಂದ ನ್ಯುಮೋಥೊರಾಕ್ಸ್ ಅಥವಾ ಕುಸಿದ ಶ್ವಾಸಕೋಶ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. 

ವ್ಯಕ್ತಿಯಲ್ಲಿ ಅದಾಗಲೇ ಶ್ವಾಸಕೋಶ ಸಮಸ್ಯೆಯಿದ್ದರಂತೂ ಮತ್ತಷ್ಟು ಅಪಾಯ ಕಟ್ಟಿಟ್ಟ ಬುತ್ತಿ ಎಂದೇ ಹೇಳಬಹುದು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com