ನಿಮಗಿದು ಗೊತ್ತೇ? ನಿಮ್ಮ ಆರೋಗ್ಯ ಹೇಗಿದೆ ಎಂಬುದನ್ನು ನಿಮ್ಮ ಚರ್ಮವೇ ಹೇಳುತ್ತದೆ!

ಚರ್ಮವು ನಿಮ್ಮ ಆರೋಗ್ಯವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದ್ದು, ಒತ್ತಡದ ಬದುಕು ಕೂಡ ಚರ್ಮದ ಸಮಸ್ಯೆಯನ್ನುಂಟು ಮಾಡುತ್ತದೆ. 

Published: 05th November 2020 02:04 PM  |   Last Updated: 05th November 2020 02:40 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಚರ್ಮವು ನಿಮ್ಮ ಆರೋಗ್ಯವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದ್ದು, ಒತ್ತಡದ ಬದುಕು ಕೂಡ ಚರ್ಮದ ಸಮಸ್ಯೆಯನ್ನುಂಟು ಮಾಡುತ್ತದೆ. ಕೊರೋನಾ ಸಾಂಕ್ರಾಮಿಕ ಸಂದರ್ಭ ದಲ್ಲಿ ಆರ್ಥಿಕ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದು, ಸಾಕಷ್ಟು ಜನರು ಒತ್ತಡದಲ್ಲಿಯೇ ಜೀವನ ನಡೆಸುವಂತಾಗಿ ಹೋಗಿದೆ. 

ವ್ಯಕ್ತಿಯೊಬ್ಬ ಒತ್ತಡಕ್ಕೊಳಗಾದಾಗ ದೇಹದ ಹಾರ್ಮೋನ್ ನಲ್ಲಿಯೂ ಏರುಪೇರಾಗುತ್ತದೆ. ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಒತ್ತಡದಿಂದ ಮನುಷ್ಯನಿಗೆ ಎದುರಾಗುವ ಚರ್ಮ ಸಮಸ್ಯೆಗಳು ಈ ಕೆಳಕಂಡಂತಿವೆ...

ದದ್ದುಗಳಾಗುವುದು:
ದದ್ದುಗಳ ಲಕ್ಷಣಗಳು ಕೆಲವು ನಿಮಿಷಗಳ ಕಾಲ ಇರಬಹುದು. ದೀರ್ಘಕಾಲದ ದದ್ದುಗಳಾದರೆ ಆಗ ಲಕ್ಷಣಗಳು ತಿಂಗಳುಗಳ ಅಥವಾ ವರ್ಷಗಳ ತನಕ ಇರಬಹುದು.ಕೆಲ ಔಷಧಿಗಳು, ಆಹಾರ, ಹಾಗೂ ಒತ್ತಡದಿಂದಾಗಿ ಚರ್ಮದಲ್ಲಿ ಈ ಸಮಸ್ಯೆಯುಂಟಾಗುತ್ತದೆ. ಈ ದದ್ದು ಸಮಸ್ಯೆಗಳಾದಾಗ ನವೆಯಾಗುವುದು, ದದ್ದಾಗಿರುವ ಭಾಗದಲ್ಲಿ ಚರ್ಮ ಕೆಂಪಗಿರುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆಯು 24 ಗಂಟೆಗಳಲ್ಲಿ ವಾಸಿಯಾಗುವುದುಂಟು. ಕೆಲವೊಮ್ಮೆ ದದ್ದುಗಳು ಬಣ್ಣ ಹಾಗೂ ಗಾತ್ರಗಳನ್ನು ಬದಲಾಯಿಸುವುದುಂಟು. 

ನಿರ್ಜಲೀಕರಣ ಮತ್ತು ಕಾಂತಿಹೀನ ಚರ್ಮ:
ವಿಶ್ರಾಂತಿಯಿಲ್ಲದೆ ಸುದೀರ್ಘವಾಗಿ ಕೆಲಸ ಮಾಡುವುದು, ಸೂಕ್ತ ಸಮಯಕ್ಕೆ ನಿದ್ರೆ ಮಾಡದಿರುವುದರಿಂದ ಸಾಕಷ್ಟು ಸಮಸ್ಯೆಗಳಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಕೆಲಸದ ಒತ್ತಡದಲ್ಲಿ ದೇಹಕ್ಕೆ ಅಗತ್ಯವಿರುವ ನೀರು, ಆರೋಗ್ಯಕರ ಆಹಾರ ಹಾಗೂ ಆರೋಗ್ಯಕರ ರೀತಿಯಲ್ಲಿ ನಿದ್ರೆ ಮಾಡುವುದನ್ನೇ ಮರೆ ಹೋಗಿದ್ದಾರೆ. ಇದರಿಂದ ಚರ್ಮದ ಕಾಂತಿ ಕೂಡ ಕುಂದುತ್ತಿದೆ. 

ಈ ಸಮಸ್ಯೆಯಿಂದ ದೂರ ಉಳಿಯಲು ಹೆಚ್ಚೆಚ್ಚು ನೀರು ಹಾಗೂ ಆರೋಗ್ಯಕರ ಆಹಾರವನ್ನು ಸೇವನೆ ಮಾಡಬೇಕು. ಸೂಕ್ತ ರೀತಿಯಲ್ಲಿ ಸಮತೋಲಿತ ಆಹಾರ ಸೇವನೆಯಿಂದ ಚರ್ಮದ ಕಾಂತಿಯನ್ನು ಮತ್ತೆ ಪಡೆಯಬಹುದಾಗಿದೆ. 

ಪ್ರತಿನಿತ್ಯ 8-10 ಲೀಟರ್ ನೀರನ್ನು ಕುಡಿಯಲು ಪ್ರಯತ್ನಿಸಿ. ಪ್ರತೀ ರಾತ್ರಿ 8 ಗಂಟೆಗಳು ನಿದ್ರೆ ಮಾಡುವುದು ಆರೋಗ್ಯವನ್ನು ಉತ್ತಮವಾಗಿರುವಂತೆ ಮಾಡುತ್ತದೆ. 

ರೊಸಾಸಿಯಾ (ಮುಖದಲ್ಲಿ ಮೊಡವೆ ರೀತಿಯ ಗುಳ್ಳೆ):
ಹದಿಹರೆಯದ ವಯಸ್ಸಿನಲ್ಲಿ ಮೊಡವೆ ಸಮಸ್ಯೆಗಳು ಬರುವುದು ಸಾಮನ್ಯ. ಆದರೆ ಕೆಲವರಲ್ಲಿ ಮುಖದಲ್ಲಿ ಕೆಂಪು-ಕೆಂಪು ಗುಳ್ಳೆಗಳು ಏಳುತ್ತವೆ, ಅವುಗಳು ಕೂಡ ನೋಡಲು ಮೊಡವೆ ರೀತಿಯಲ್ಲಿ ಇರುವುದರಿಂದ ನಾವು ಅದನ್ನು ಮೊಡವೆ ಎಂದೇ ಭಾವಿಸುತ್ತೇವೆ. ಆದರೆ ಮೊಡವೆ ರೀತಿಯಲ್ಲಿ ಕಾಣುವ ಅವುಗಳು ಮೊಡವೆಯಲ್ಲ, ಬದಲಿಗೆ ಅವುಗಳು ರೊಸಾಸಿಯಾ(Rosacea) ಆಗಿರುತ್ತವೆ. 

ಇವುಗಳು ಮೊಡವೆ ಆಗಿಯೇ ಮುಖದ ತ್ವಚೆಯನ್ನು ಹಾಳು ಮಾಡುವುದು ಮಾತ್ರವಲ್ಲ ಇವುಗಳು ಬಂದರೆ ಮುಖ ತುಂಬಾ ಇರುತ್ತದೆ. ಹಣೆ, ಕೆನ್ನೆ ಭಾಗಗಳಲ್ಲಿ ರೊಸಾಸಿಯಾ ಹೆಚ್ಚಾಗಿ ಕಂಡು ಬರುತ್ತದೆ. ಇವುಗಳನ್ನು ಹೋಗಲಾಡಿಸಬಹುದು. ಕೆಲವೊಂದು ಮನೆಮದ್ದು ಹಾಗೂ ಜೀವನಶೈಲಿ ಬದಲಾವಣೆಯಿಂದ ಇವುಗಳನ್ನು ಹೋಗಲಾಡಿಸಬಹುದು.

ಇವುಗಳು ಮೊಡವೆ ಆಗಿಯೇ ಮುಖದ ತ್ವಚೆಯನ್ನು ಹಾಳು ಮಾಡುವುದು ಮಾತ್ರವಲ್ಲ ಇವುಗಳು ಬಂದರೆ ಮುಖ ತುಂಬಾ ಇರುತ್ತದೆ. ಹಣೆ, ಕೆನ್ನೆ ಭಾಗಗಳಲ್ಲಿ ರೊಸಾಸಿಯಾ ಹೆಚ್ಚಾಗಿ ಕಂಡು ಬರುತ್ತದೆ. ಇವುಗಳನ್ನು ಹೋಗಲಾಡಿಸಬಹುದು.

ಇವುಗಳು ಮೊಡವೆ ಆಗಿಯೇ ಮುಖದ ತ್ವಚೆಯನ್ನು ಹಾಳು ಮಾಡುವುದು ಮಾತ್ರವಲ್ಲ ಇವುಗಳು ಬಂದರೆ ಮುಖ ತುಂಬಾ ಇರುತ್ತದೆ. ಹಣೆ, ಕೆನ್ನೆ ಭಾಗಗಳಲ್ಲಿ ರೊಸಾಸಿಯಾ ಹೆಚ್ಚಾಗಿ ಕಂಡು ಬರುತ್ತದೆ. ಇವುಗಳನ್ನು ಕೆಲ ಮನೆಮದ್ದು ಹಾಗೂ ಜೀವನಶೈಲಿ ಬದಲಾವಣೆಯಿಂದ ಇವುಗಳನ್ನು ಹೋಗಲಾಡಿಸಬಹುದು. ಸೂರ್ಯನ ಬೆಳಕಿಗೆ ಹೆಚ್ಚು ಹೋಗದಂತೆ, ಧೂಳು ಬೀಳದಂತೆ ಹಾಗೂ ಸಂಸ್ಕರಿಸಿದ ಆಹಾರ ಸೇವನೆ ಮಾಡದೆ, ಸಾವಯವ ಆಹಾರ ಹೆಚ್ಚಾಗಿ ಸೇವನೆ ಮಾಡುವ ಮೂಲಕ ಹಾಗೂ ದಿನದಲ್ಲಿ 8 ತಾಸು ನಿದ್ದೆ, ಸಾಕಷ್ಟು ನೀರು ಕುಡಿಯುವುದರಿಂದ ಈ ಸಮಸ್ಯೆಯಿಂದ ದೂರ ಉಳಿಯಬಹುದಾಗಿದೆ. 

ಇಸುಬು (ಎಸ್ಜಿಮಾ):
ಮನುಷ್ಯನ ದೇಹದಲ್ಲಿ ಅತಿ ದೊಡ್ಡ ಅವಯವ (ಅಂಗ) ಚರ್ಮ. ಇದು ದೇಹದ ಹೊರ ಭಾಗಗಳನ್ನು ಕಾಪಾಡುವ ರಕ್ಷಣಾ ಕವಚ. ಆದರೆ ಅಂಥ ರಕ್ಷಣಾ ಕವಚಕ್ಕೆ ಅನೇಕ ರೀತಿಯ ಸೋಂಕು ಉಂಟಾಗುವುದು ಸಹಜ. ಇವುಗಳ ಪೈಕಿ ಎಸ್ಜಿಮಾ (ಇಸುಬು) ಕೂಡ ಒಂದು. ಒಂದು ಅಧ್ಯಯನದ ಪ್ರಕಾರ ಪ್ರಪಂಚದಲ್ಲಿ ಅಂದಾಜು 230 ಮಿಲಿಯನ್‌ನಷ್ಟು ಜನರು ಎಸ್ಜಿಮಾದಿಂದ ಬಳಲುತ್ತಿದ್ದಾರೆ.

ಎಸ್ಜಿಮಾ ಅಂದರೆ ಚರ್ಮವು ಉರಿಯೂತಕ್ಕೆ ಗುರಿಯಾಗುವುದರಿಂದ ಆ ಭಾಗದ ಚರ್ಮವು ಕೆಂಪು ಬಣ್ಣಕ್ಕೆ ತಿರುಗಿ ನವೆ ಶುರುವಾಗುವುದು. ಅವು ಕ್ರಮೇಣ ನೀರಿನ ಗುಳ್ಳೆಗಳಾಗಿ ಮಾರ್ಪಾಡಾಗಿ ಅವುಗಳಿಂದ ದ್ರವ ಪದಾರ್ಥ ಸೋರುತ್ತದೆ. ಆನಂತರ ಈ ಭಾಗವೆಲ್ಲ ಮಚ್ಚೆಯಾಗಿ ಕಾಣಿಸಿಕೊಳ್ಳುವುದಕ್ಕೆ ಎಸ್ಜಿಮಾ ಎನ್ನುತ್ತಾರೆ. ಎಸ್ಜಿಮಾದಲ್ಲಿ ಎಷ್ಟೋ ವಿಧಗಳಿದ್ದರೂ ಸಾಮಾನ್ಯವಾಗಿ 'ಅಟೊಪಿಕ್‌ ಡರ್ಮಟೈಟಿಸ್‌' ಸಮಸ್ಯೆ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಚಿಕ್ಕಮಕ್ಕಳಲ್ಲಿ ಶೇ.65 ಮತ್ತು ದೊಡ್ಡವರಲ್ಲಿ ಶೇ.85ರಷ್ಟು ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಜೀವನದುದ್ದಕ್ಕೂ ಇರುತ್ತದೆ.

ಮುಖ್ಯವಾಗಿ ಒಣ ಚರ್ಮವಿರುವವರಲ್ಲಿ ಎಸ್ಜಿಮಾ ಹೆಚ್ಚಾಗಿ ಕಂಡುಬರುತ್ತದೆ. ಧೂಳು, ವಾತಾವರಣದಲ್ಲಿ ಬದಲಾವಣೆ, ಹೂವಿನ ಪರಾಗ, ಸೋಪು, ಡಿಟರ್ಜೆಂಟ್‌, ಕೆಲವು ಆಹಾರ ಪದಾರ್ಥ (ಉದಾ: ಕೆಲವು ಹಣ್ಣು, ತರಕಾರಿಗಳು), ಹಾಲಿನ ಉತ್ಪನ್ನಗಳು, ಮೊಟ್ಟೆ, ಸೋಯಾ, ಸೌಂದರ್ಯ ಸಾಧನ ಸಾಮಗ್ರಿ, ಕೈಗಡಿಯಾರಗಳು, ಕೆಲವು ಆಭರಣಗಳು, ಸುಗಂಧ ದ್ರವ್ಯಗಳು, ಬೆವರು, ಉಣ್ಣೆ ಉಡುಪು ಮತ್ತು ಕೆಲವು ನವೆ ಉಂಟು ಮಾಡುವ ವಸ್ತುಗಳು ಕೂಡ ಎಸ್ಜಿಮಾವನ್ನು ಪ್ರೇರೇಪಿಸುತ್ತದೆ. ಕೆಲವು ವಿಧದ ಬ್ಯಾಕ್ಟೀರಿಯಾ, ವೈರಸ್‌, ಫಂಗಸ್‌ನಂತಹ ಅಂಶಗಳು, ಮಾನಸಿಕ ಒತ್ತಡ ಮತ್ತು ಹಾರ್ಮೋನ್‌ ವ್ಯತ್ಯಾಸ ಕೂಡ ಎಸ್ಜಿಮಾ ಸಮಸ್ಯೆಯನ್ನು ತೀವ್ರಗೊಳಿಸುತ್ತದೆ. ಇಂತಹ ಸಮಸ್ಯೆ ಎದುರಾದಾಗ ಚರ್ಮ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. 

ಸೋರಿಯಾಸಿಸ್ ಮತ್ತು ಸೆಬೊರ್ಹೆಕ್ ಡರ್ಮಟೈಟಿಸ್:
ಸೋರಿಯಾಸಿಸ್‌ ಆಗಾಗ ಉಲ್ಬಣಗೊಳ್ಳುವ ಒಂದು ದೀರ್ಘ‌ಕಾಲಿಕ ಚರ್ಮಕಾಯಿಲೆ. ಜನಸಮೂಹದಲ್ಲಿ ಸುಮಾರು ಶೇ.2ರಷ್ಟು ಮಂದಿಗೆ ಈ ತೊಂದರೆ ಉಂಟಾಗುತ್ತದೆ. ಈ ಕಾಯಿಲೆಯ ಪ್ರತೀ ಉಲ್ಬಣಾವಸ್ಥೆಗೂ ಚಿಕಿತ್ಸೆಯಿದ್ದು, ಕಳವಳಕ್ಕೆ ಕಾರಣವಿಲ್ಲ. 

ನಮ್ಮ ಚರ್ಮ, ಅಂಗಾಂಶ ಮತ್ತು ರಕ್ತದಲ್ಲಿ  ಬಿಳಿ ರಕ್ತಕಣಗಳು ಎಂಬ ರಕ್ಷಕ ಜೀವಕೋಶಗಳಿವೆ. ಟಿ ಲಿಂಫೊಸೈಟ್ಸ್‌ ಎಂಬ ರಕ್ಷಕ ಜೀವಕೋಶಗಳ ವಿವಿಧ ಉಪ ಗುಂಪುಗಳಲ್ಲಿ ಅಸಮತೋಲನವಿದ್ದಾಗ ಸೋರಿಯಾಸಿಸ್‌ ಉಂಟಾಗುತ್ತದೆ. ಇಂತಹ ಅಸಮತೋಲನ ಉಂಟಾಗುವುದಕ್ಕೆ ಖಚಿತವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಸೋರಿಯಾಸಿಸ್‌ ಒಂದು ಸಾಂಕ್ರಾಮಿಕವಲ್ಲ, ಸೋಂಕು ರೋಗವೂ ಅಲ್ಲ. ಹೀಗಾಗಿ ಸೋರಿಯಾಸಿಸ್‌ಗೆ ಚಿಕಿತ್ಸೆಯು ಕೆಲವೊಮ್ಮೆ ದೀರ್ಘಾವಧಿಯದ್ದಾಗಿರುತ್ತದೆ ಹಾಗೂ ಚರ್ಮ ಮತ್ತು ರಕ್ತನಾಳಗಳನ್ನು ಪ್ರಚೋದಿಸಿ ಚರ್ಮ ದಪ್ಪಗಟ್ಟುವಿಕೆಗೆ ಕಾರಣವಾಗುವ ಟಿ ಸೆಲ್‌ ಅಸಮತೋಲನದ ಪ್ರಕ್ರಿಯೆ ಉಂಟಾದಾಗಲೆಲ್ಲ ಸೋರಿಯಾಸಿಸ್‌ ಮರುಕಳಿಸುತ್ತದೆ. 

ಒಮ್ಮೆ ಪತ್ತೆಯಾದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟ. ಆದರೆ ವೈದ್ಯಕೀಯ ನೆರವು, ಜೀವನಶೈಲಿಯಲ್ಲಿ ಬದಲಾವಣೆ, ಉತ್ತಮ ಆಹಾರಾಭ್ಯಾಸದಿಂದ ಇದನ್ನು ನಿಯಂತ್ರಣದಲ್ಲಿ ಇಡಬಹುದು. ಚಿಕಿತ್ಸೆಯಿಂದ ಸೋರಿಯಾಸಿಸ್ ಸಂಪೂರ್ಣವಾಗಿ ಕಡಿಮೆಯಾಗಬಹುದು ಅಥವಾ ಸ್ಥಿತಿ ಉತ್ತಮವಾಗಬಹುದು.

ಚಿಕಿತ್ಸೆಯು ರೋಗದ ಪ್ರಮಾಣ, ರೋಗ ನಿರೋಧಕ ಶಕ್ತಿ ಮತ್ತು ರೋಗದ ಹಂತವನ್ನು ಅವಲಂಬಿಸಿರುತ್ತದೆ. ರೋಗಿಗೆ ಆಪ್ತಸಲಹೆ ನೀಡುವುದು ಮತ್ತು ರೋಗದ ಸ್ವರೂಪ, ಗುಣ, ಹರಡುವಿಕೆ, ಅದು ಮರುಕಳಿಸುವ ಸಾಧ್ಯತೆಗಳು ಮತ್ತು ಅದರ ಉಲ್ಬಣಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ವಿವರಿಸುವುದು ಬಹಳ ಮುಖ್ಯವಾಗುತ್ತದೆ. 


Stay up to date on all the latest ಜೀವನಶೈಲಿ news
Poll
Amarinder-Sidhu

ನವಜೋತ್ ಸಿಂಗ್ ಸಿಧುಗೆ ಅಮರೀಂದರ್ ಅವರ ಪ್ರಬಲ ವಿರೋಧವು ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಾನಿ ಮಾಡುತ್ತದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp