ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಮನುಷ್ಯನ ದೇಹಕ್ಕೆ ವಿಟಮಿನ್ 'ಡಿ' ಎಷ್ಟು ಮುಖ್ಯ? ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ...

ಮಾನವನ ದೇಹದ ಸರಿಯಾದ ಬೆಳವಣಿಗೆಗೆ ವಿಟಮಿನ್ ಡಿ ಬಹಳ ಮುಖ್ಯ. ನಮ್ಮ ದೇಹ ಆರೋಗ್ಯಕರವಾಗಿರಲು ವಿಟಮಿನ್ ಡಿ ಅಗತ್ಯವಿರುವ ಪೌಷ್ಟಿಕತೆಗಳಲ್ಲಿ ಒಂದಾಗಿದೆ. ದೇಹದ ಆಂತರಿಕ ಕಾರ್ಯದಲ್ಲಿ ಈ ಜೀವಸತ್ವ ಬಹಳ ಮುಖ್ಯ ಕಾರ್ಯನಿರ್ವಹಿಸುತ್ತದೆ. ಕ್ಯಾಲ್ಸಿಯಂನಂತೆಯೇ ವಿಟಮಿನ್ ಡಿ ಕೂಡ ಮೂಳೆಗಳು ಹಾಗೂ ಹಲ್ಲುಗಳನ್ನು ಬಲವಾಗಿರುವಂತೆ ನೋಡಿಕೊಳ್ಳುತ್ತದೆ. 

Published: 10th September 2020 02:57 PM  |   Last Updated: 10th September 2020 02:57 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ಮಾನವನ ದೇಹದ ಸರಿಯಾದ ಬೆಳವಣಿಗೆಗೆ ವಿಟಮಿನ್ ಡಿ ಬಹಳ ಮುಖ್ಯ. ನಮ್ಮ ದೇಹ ಆರೋಗ್ಯಕರವಾಗಿರಲು ವಿಟಮಿನ್ ಡಿ ಅಗತ್ಯವಿರುವ ಪೌಷ್ಟಿಕತೆಗಳಲ್ಲಿ ಒಂದಾಗಿದೆ. ದೇಹದ ಆಂತರಿಕ ಕಾರ್ಯದಲ್ಲಿ ಈ ಜೀವಸತ್ವ ಬಹಳ ಮುಖ್ಯ ಕಾರ್ಯನಿರ್ವಹಿಸುತ್ತದೆ. ಕ್ಯಾಲ್ಸಿಯಂನಂತೆಯೇ ವಿಟಮಿನ್ ಡಿ ಕೂಡ ಮೂಳೆಗಳು ಹಾಗೂ ಹಲ್ಲುಗಳನ್ನು ಬಲವಾಗಿರುವಂತೆ ನೋಡಿಕೊಳ್ಳುತ್ತದೆ. 

ವಿಟಮಿನ್ ಡಿಯನ್ನು ನಮ್ಮ ದೇಹ ಉತ್ಪಾದಿಸಲಾಗದೆ ಇರುವುದರಿಂದ ಅದನ್ನು ನಾವು ಆಹಾರಗಳ ಮೂಲಕವೇ ಸೇವನೆ ಮಾಡುವುದು ಅಗತ್ಯವಾಗಿರುತ್ತದೆ. ನಮ್ಮ ದೇಹ ಈ ವಿಟಮಿನ್ ನ್ನು ಉತ್ಪಾದಿಸದೆ ಇದ್ದರೂ, ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದರಿಂದ ದೇಹವು ಈ ಕಿರಣಗಳ ಸಹಾಯದಿಂದ ನೈಸರ್ಗಿಕವಾಗಿ ಉತ್ಪಾದಿಸುತ್ತದೆ. ಇದೇ ಕಾರಣದಿಂದಲೇ ಈ ವಿಟಮಿನ್'ನ್ನು ಸನ್ ಶೈನ್ ವಿಟಮಿನ್ ಎಂದೂ ಕೂಡ ಕರೆಯುತ್ತಾರೆ. 

100%

ಚರ್ಮವನ್ನು ಸೂರ್ಯನ ಕಿರಣಗಳಿಗೆ ವಾರದಲ್ಲಿ 2-3 ಬಾರಿ 5-10 ನಿಮಿಷ ಒಡ್ಡಿದರೆ, ದೇಹಕ್ಕೆ ಅಗತ್ಯವಿರುವ ವಿಟಮಿನ್ ಡಿ ಉತ್ಪಾದಿಸುವಲ್ಲಿ ಸಹಾಯ ಮಾಡುತ್ತದೆ. 

ವಿಟಮಿನ್ ಡಿ ಕಾರ್ಯಗಳೇನು? 
ಕ್ಯಾಲ್ಸಿಯಂ ಹೀರಲು ವಿಟಮಿನ್ ಡಿ ಅತ್ಯಗತ್ಯ. ಇದು ವಿಟಮಿನ್ ಡಿಯ ಅತ್ಯಮೂಲ್ಯ ಪ್ರಯೋಜನಗಳಲ್ಲಿ ಒಂದಾಗಿದೆ. ವಿಟಮಿನ್ ಡಿ ಕೊರತೆಯಿಂದ ಮೂಳಗಳು ಮೃದುವಾಗುವಂತೆ ಮಾಡುತ್ತದೆ. ಮಕ್ಕಳಲ್ಲಿ ರಿಕೆಟ್ಸ್ ತೊಂದರೆಗಳನ್ನುಂಟು ಮಾಡುತ್ತದೆ. ದೊಡ್ಡವರಲ್ಲಿ ಒಸ್ಟಿಯೊಮ್ಯಾಲ್ಸಿಯ ಉಂಟು ಮಾಡುತ್ತದೆ.

100%

ವಿಟಮಿನ್ ಡಿ ಮನುಷ್ಯನ ಮೂಳೆಗಳು ಹಾಗೂ ಹಲ್ಲುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ಕೊರೋನಾ ಸಾಂಕ್ರಾಮಿಕವಾಗಿರುವ ಈ ಸಂದರ್ಭದಲ್ಲಿ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಕಾರ್ಯಾಚರಣೆಯನ್ನು ಉತ್ತಮಗೊಳಿಸಲು ಸಹಾಯಕ ಮಾಡುತ್ತದೆ. ವಿವಿಧ ಬಗೆಯ ಕ್ಯಾನ್ಸರ್ ಗಳನ್ನು ತಡೆಗಟ್ಟುತ್ತದೆ. ರಕ್ತದೊತ್ತಡವನ್ನು ಮತ್ತು ಹೃದಯ ಸಂಬಂಧಿತ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

100%

ವಿಟಮಿನ್ ಡಿ ಕೊರತೆಯ ಲಕ್ಷಣಗಳೇನು?
ಯಾವ ವ್ಯಕ್ತಿಯಲ್ಲಿ ವಿಟಮಿನ್ ಡಿ ಕೊರತೆಯಿರುತ್ತದೆಯೋ ಅವರಲ್ಲಿ ಅಸ್ಥಿರಂಧ್ರತೆ, ನರಗಳ ದೌರ್ಬಲ್ಯ, ಅತಿಯಾದ ರಕ್ತದೊತ್ತಡ, ದಣಿವು, ಸುಸ್ತು, ಕರುಳಿನ ಸಮಸ್ಯೆ, ಕೂದಲು ಉದುರುವಿಕೆ, ಮಾನಸಿಕ ಒತ್ತಡ ಹಾಗೂ ಖಿನ್ನತೆಯಂತಹ ಸಮಸ್ಯೆಗಳು ಕಂಡು ಬರುತ್ತದೆ. 

ವಿಟಮಿನ್ ಡಿ ಪಡೆಯುವುದು ಹೇಗೆ? 
ಸೂರ್ಯನ ಕಿರಣಗಳಿಂದ ವಿಟಮಿನ್ ಡಿಯನ್ನು ದೇಹಕ್ಕೆ ಸುಲಭವಾಗಿ ಪಡೆಯಬಹುದಾಗಿದೆ. ಆದರೂ ಈ ಆಧುನಿಕ ಯುಗದಲ್ಲಿರುವ ನಮ್ಮ ಜೀವನಶೈಲಿಯಲ್ಲಿ ಅದು ಕಷ್ಟವಾಗಿ ಹೋಗಿದೆ. ನಾವು ದಿನದಲ್ಲಿ ಸಾಕಷ್ಟು ಸಮಯೆ ಮನೆಯ ಒಳಗೆ ಅಥವಾ ಆಫೀಸ್ ಗಳಲ್ಲಿಯೇ ಕಳೆಯುತ್ತೇವೆ.

100%

ಹೊರಗೆ ಹೋಗುವ ಸನ್ ಸ್ಕ್ರೀನ್ ಗಳನ್ನು ಹಚ್ಚಿಕೊಳ್ಳುತ್ತೇವೆ. ಇದರ ಕಾರಣದಿಂದ ಅಗತ್ಯವಿರುವ ಸೂರ್ಯನ ಕಿರಣಗಳು ನಮ್ಮ ದೇಹಕ್ಕೆ ದೊರೆಯದಂತಾಗಿದೆ. ವಾತಾವರಣ ಬದಲಾವಣೆಯಿಂದಲೂ ಕೂಡ ಕೆಲವೊಮ್ಮೆ ವಿಟಮಿನ್ ಡಿ ದೊರಯದೇ ಹೋಗಬಹುದು. ಇಂತಹ ಸಂದರ್ಭದಲ್ಲಿ ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರ ಸೇವನೆ ಮಾಡುವುದು ಅತ್ಯಗತ್ಯವಾಗಿರುತ್ತದೆ. 

ಹಾಗಾದರೆ ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳಾವುವು? 
ಮೊಸರು


ಮೊಸರು ಕೇವಲ ಕರುಳಿನ ಆರೋಗ್ಯಕ್ಕಷ್ಟೇ ಅಲ್ಲದೇ, ವಿಟಮಿನ್ ಡಿಯ ಒಳ್ಳೆಯ ಮೂಲವಾಗಿದೆ. ಇದು ನಿಮ್ಮ ದೇಹದ ಪ್ರತಿನಿತ್ಯದ ವಿಟಮಿನ್ ಡಿ ಅಗತ್ಯತೆಯ ಶೇ.10ರಿಂದ 20ರಷ್ಟು ಅಂಶವನ್ನು ನಿಮ್ಮ ದೇಹಕ್ಕೆ ನೀಡುತ್ತದೆ. 

ಕಿತ್ತಳೆ ಹಣ್ಣು
ಒಂದು ಲೋಟದಷ್ಟು ಕಿತ್ತಳೆ ಹಣ್ಣಿನ ರಸ ಉತ್ತಮ ಮಟ್ಟದ ವಿಟಮಿನ್ ಡಿ ನೀಡುತ್ತದೆ.

100%

ಕೆಲವು ಬ್ರಾಂಡ್ ಗಳ ಕಿತ್ತಳೆ ರಸ ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಹಾಗಾಗಿ ಮಧುಮೇಹದಿಂದ ಬಳಲುತ್ತಿರುವವರು ಮಿಟಮಿನ್ ಡಿ ಪಡೆಯಲು ಕಿತ್ತಳೆ ರಸ ಸೇವಿಸುವ ಮುನ್ನ ಕೊಂಚ ಎಚ್ಚರಿಂದ ಇರುವುದು ಅಗತ್ಯ.

ಅಣಬೆ
ಅಣಬೆ ಬೆಳೆಯುವಾಗ ಸೂರ್ಯನ ಕಿರಣಗಳಿಗೆ ಒಡ್ಡಲಾಗುತ್ತದೆ. ಇದರಿಂದ ಅದರಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಡಿ ಅಂಶ ಇರುತ್ತದೆ.

100%

ಎಲ್ಲಾ ವಿಧದ ಅಣಬೆಗಳಲ್ಲಿ ಬಟನ್ ಅಣಬೆಗಳು ಹೆಚ್ಚಿನ ವಿಟಮಿನ್ ಡಿ ಹೊಂದಿರುತ್ತದೆ. ಅಣಬೆಯನ್ನು ಸೇವಿಸುವ ಮುನ್ನ ಒಂದು ತಾಸು ಸೂರ್ಯನ ಕಿರಣಗಳಿಗೆ ಒಡ್ಡಿದರೆ, ಅದು ಇನ್ನೂ ಹೆಚ್ಚು ವಿಟಮಿನ್ ಡಿ ನಿಮ್ಮ ದೇಹಕ್ಕೆ ನೀಡುತ್ತದೆ. 

ಮೊಟ್ಟೆಯ ಹಳದಿ

100%
ಮೊಟ್ಟೆ ಕೂಡ ವಿಟಮಿನ್ ಡಿಯ ಮತ್ತೊಂದು ಅತ್ಯುತ್ತಮ ಮೂಲವಾಗಿದೆ. ಮೊಟ್ಟೆಯ ಹಳದಿ ಲೋಳೆಯಲ್ಲಿ ವಿಟಮಿನ್ ಡಿ ಸಮೃದ್ಧವಾಗಿರುತ್ತದೆ. ಮೊಟ್ಟೆಗಳು ನಿಮಗೆ ಇತರೆ ಅಗತ್ಯ ಪೋಷಕಾಂಶಗಳನ್ನು ಕೂಡ ಒದಗಿಸುತ್ತದೆ. 

ಮೀನು ಹಾಗೂ ಸಮುದ್ರ ಆಹಾರಗಳ ಸೇವನೆ
ಮೀನು ಹಾಗೂ ಸಮುದ್ರ ಆಹಾರಗಳಲ್ಲಿ ವಿಟಮಿನ್ ಡಿ ಹೇರವಾಗಿರುತ್ತದೆ. ತುನ, ಬೂತಾಯಿ, ಮೃದ್ವಂಗಿಗಳು, ಸಿಗಡಿ, ಬಂಗುಡೆ ಈ ಮೀನುಗಳಲ್ಲಿ ವಿಟಮಿನ್ ಡಿ ಅಂಶವಿರುತ್ತದೆ.

100%

ಇನ್ನು ದನದ ಹಾಲು, ಸೋಯಾ ಹಾಲು, ಓಟ್ ಮೀಲ್ ಹಾಗೂ ಧಾನ್ಯಗಳಲ್ಲಿಯೂ ಕೂಡ ಮಿಟಮಿನ್ ಡಿ ಇರುತ್ತದೆ. ಹೀಗಾಗಿ ಇವುಗಳನ್ನು ಹೆಚ್ಚಾಗಿ ಸೇವನೆ ಮಾಡುವ ಮೂಲಕ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು. 

Stay up to date on all the latest ಜೀವನಶೈಲಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp