ಬೇಸಿಗೆ ಕಾಲದಲ್ಲಿ ಎದುರಾಗುವ 'ಹೊಟ್ಟೆ ಸಮಸ್ಯೆ'ಗಳಿಂದ ದೂರವಿರುವುದು ಹೇಗೆ?

ಬೇಸಿಗೆಯ ಕಾಲ ಆರಂಭವಾಗಿದೆ, ಸೂರ್ಯ ತನ್ನ ಪ್ರಖರಣ ಕಿರಣಗಳಿಂದ ನೆತ್ತಿ ಸುಡಲು ಆರಂಭಿಸಿದ್ದಾನೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುವ ಪರಿಣಾಮದಿಂದ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಮುಖ್ಯವಾಗಿ ಬೇಸಿಗೆ ವೇಳೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ. 

Published: 01st April 2021 12:26 PM  |   Last Updated: 01st April 2021 12:57 PM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೇಸಿಗೆಯ ಕಾಲ ಆರಂಭವಾಗಿದೆ, ಸೂರ್ಯ ತನ್ನ ಪ್ರಖರಣ ಕಿರಣಗಳಿಂದ ನೆತ್ತಿ ಸುಡಲು ಆರಂಭಿಸಿದ್ದಾನೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುವ ಪರಿಣಾಮದಿಂದ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಮುಖ್ಯವಾಗಿ ಬೇಸಿಗೆ ವೇಳೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ. 

ಬೇಸಿಕೆ ವೇಳೆ ಸಾಮಾನ್ಯವಾಗಿ ಅಜೀರ್ಣ, ಹೊಟ್ಟೆ ಹಾಗೂ ಎಲೆಯಲ್ಲಿ ಉರಿ, ಮಲಬದ್ಧತೆ, ಕಿರಿಕಿರಿಯಾಗುವುದು, ಫುಡ್ ಪಾಯಿಸನಿಂಗ್ ಸೇರಿದಂತೆ ನಾನಾ ರೀತಿಯ ಹೊಟ್ಟೆ ಸಂಬಂಧಿತ ಸಮಸ್ಯೆಗಳು ಎದುರಾಗುತ್ತವೆ. 

ಫುಡ್ ಪಾಯಿಸನ್ ಆದಾಗ ವಾಂತಿ, ಅತೀವ್ರ ಹೊಟ್ಟೆ ನೋವು, ಅತಿಸಾರ, ಜ್ವರ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಸಮಸ್ಯೆಗಳಿಂದ ದೂರ ಉಳಿಯಲು ಈ ಕೆಳಕಂಡ ಕೆಲವು ಸಲಹೆಗಳನ್ನು ಪಾಲಿಸಿ....

ಹೆಚ್ಚಾಗಿ ನೀರು ಕುಡಿಯಿರಿ
ಬೇಸಿಗೆ ವೇಳೆ ಹೆಚ್ಚಾಗಿ ನೀರನ್ನು ಕುಡಿಯಬೇಕು. ಬಿಸಿಲಿನ ದಗೆಯಿಂದ ದೇಹ ಹೆಚ್ಚಾಗಿ ಬೆವರುತ್ತದೆ. ಇದರಿಂದ ನೀರಿನ ಅಂಶ ಕಡಿಮೆಯಾಗಲಿದ್ದು, ಪ್ರತೀನಿತ್ಯ 8-10 ಲೋಟ ನೀರನ್ನು ಕುಡಿಯಬೇಕು. ಮಜ್ಜಿಗೆ, ಹಣ್ಣಿನ ಜ್ಯೂಸ್ ಗಳನ್ನು ಹೆಚ್ಚಾಗಿ ಕುಡಿಯುವುದು ಉತ್ತಮ. 

ಪೋಷಕಾಂಶ ಭರಿತ ಆಹಾರ ಸೇವನೆ
ಬೇಸಿಗೆ ವೇಳೆ ಪೋಷಕಾಂಶ ಭರಿತ ಆಹಾರ ಸೇವನೆ ಮಾಡುವುದು ಉತ್ತಮ. ಮೊಸರು, ಬೆಣ್ಣೆ, ಹಾಲನ್ನು ಪ್ರತೀನಿತ್ಯ ಸೇವನೆ ಮಾಡಿ. 

ಸ್ವಚ್ಛತೆ ಕಾಪಾಡಿ
ಬೇಸಿಗೆ ವೇಳೆ ಸ್ವಚ್ಛತೆ ಕಾಪಾಡುವುದು ಅತ್ಯಂತ ಮುಖ್ಯ. ಅಡುಗೆ ಮಾಡುವುದಕ್ಕೂ ಮುನ್ನ, ಆಹಾರ ಸೇವನೆ ಮಾಡುವುದಕ್ಕೂ ಮುನ್ನ ಕೈಗಳನ್ನು ಸ್ವಚ್ಛಗೊಳಿಸಬೇಕು. ಜ್ವರ ಹಾಗೂ ಇತರೆ ಆರೋಗ್ಯ ಸಮಸ್ಯೆಯುಳ್ಳ ವ್ಯಕ್ತಿಗಳು ಅಡುಗೆ ಮಾಡುವುದನ್ನು ಸಾಕಷ್ಟು ನಿಯಂತ್ರಿಸಿ. ಶೌಚಾಲಯಕ್ಕೆ ತೆರಳಿದಾಗ, ಪ್ರಾಣಿಗಲನ್ನು ಮುಟ್ಟಿದಾಗ ಸಾಕಷ್ಟು ಎಚ್ಚರಿಕೆಯಿಂದಿರಿ. ಸ್ವಚ್ಛತೆ ಕಾಪಾಡಿ. 

ದೇಹಕ್ಕೆ ವಿಶ್ರಾಂತಿ ನೀಡಿ
ದಣಿವಾಗಿದೆ ಎನಿಸಿದಾಗ ದೇಹಕ್ಕೆ ಹೆಚ್ಚು ಒತ್ತಡ ನೀಡದಿರಿ. ವಿಶ್ರಾಂತಿ ಪಡೆದುಕೊಳ್ಳಿ. ಇದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. 

ಆಹಾರ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ನೀಡಿ
ಪಾಶ್ಚರೀಕರಿಸದ ಹಾಲು ಅಥವಾ ಅದರಿಂದ ತಯಾರಿಸಿದ ಆಹಾರವನ್ನು ಸೇವನೆ ಮಾಡದಿರಿ. ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದಕ್ಕೂ ಮೊದಲು ಚೆನ್ನಾಗಿ ತೊಳೆಯಿರಿ. ಫ್ರಿಡ್ಜ್ ನಲ್ಲಿಟ್ಟ ಆಹಾರ ಹೆಚ್ಚು ತಂಪಾಗಿದ್ದರೆ ಸೇವನೆ ಮಾಡದಿರಿ. ಮಾಂಸ ಹಾಗೂ ಮೀನು, ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವನೆ ಮಾಡಿ. ಇದರಿಂದ ಫುಡ್ ಪಾಯಿಸನ್ ಆಗುವುದನ್ನು ತಪ್ಪಿಸಬಹುದು. 

Stay up to date on all the latest ಜೀವನಶೈಲಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp