ನಿಮ್ಮ ದೇಹದಲ್ಲಿರುವ 'ರಿಂಗ್ ಮಾಸ್ಟರ್' ಕರುಳಿನ ಬಗ್ಗೆ ನಿಮಗೆಷ್ಟು ಗೊತ್ತು?

ಈ ಭೂಮಿ ಮೇಲಿನ ಪ್ರತಿ ಜೀವಿಯಲ್ಲಿಯೂ ಹಲವಾರು ವೈಶಿಷ್ಟ್ಯಗಳನ್ನು ಹೊಂದಿವೆ. ಇದರಲ್ಲಿ ಮಾನವನ ದೇಹ ರಚನೆ ಅಪ್ರತಿಮವಾಗಿವೆ. ನಮ್ಮ ದೇಹ ಸ್ಪಂದಿಸುವ ಅಥವಾ ಬದಲಾವಣೆ ಪಡೆಯುವ ಪರಿಯಂತೂ ಒಂದು ವಿಸ್ಮಯವೇ ಹೌದು.

Published: 06th February 2021 01:48 PM  |   Last Updated: 06th February 2021 02:13 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಈ ಭೂಮಿ ಮೇಲಿನ ಪ್ರತಿ ಜೀವಿಯಲ್ಲಿಯೂ ಹಲವಾರು ವೈಶಿಷ್ಟ್ಯಗಳನ್ನು ಹೊಂದಿವೆ. ಇದರಲ್ಲಿ ಮಾನವನ ದೇಹ ರಚನೆ ಅಪ್ರತಿಮವಾಗಿವೆ. ನಮ್ಮ ದೇಹ ಸ್ಪಂದಿಸುವ ಅಥವಾ ಬದಲಾವಣೆ ಪಡೆಯುವ ಪರಿಯಂತೂ ಒಂದು ವಿಸ್ಮಯವೇ ಹೌದು. ಮಾನವನ ದೇಹದ ವಿವಿಧ ಅಂಗಗಳು ಹಾಗೂ ಅಂಗವ್ಯೂಹಗಳಿಂದ ರಚಿತಗೊಂಡಿದ್ದು, ಪ್ರತಿಯೊಂದು ಅಂಗವೂ ಮುಖ್ಯವಾಗಿದೆ. ಅವುಗಳಲ್ಲಿ ಪ್ರಮುಖವಾದದ್ದು ಕರುಳು. ಕರುಳಿನ ಆರೋಗ್ಯ ಉತ್ತಮವಾಗಿಟ್ಟುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ನಮ್ಮ ದೇಹದಲ್ಲಿ ಕರುಳನ್ನು ರಿಂಗ್ ಮಾಸ್ಟರ್ ಎಂದೇ ಕರೆಯಲಾಗುತ್ತದೆ.

ಈ ರಿಂಗ್ ಮಾಸ್ಟರ್ ದೇಹದಲ್ಲಿನ ಜೀರ್ಣಕ್ರಿಯೆ, ರೋಗ ನಿರೋಧಕ ಶಕ್ತಿ, ನಿಮ್ಮ ಮಿದುಳು, ತೂಕ, ಆರೋಗ್ಯ ಹಾಗೂ ಇತರೆ ಕಾರ್ಯಗಳನ್ನು ನಿಯಂತ್ರಿಸುತ್ತದೆ.

ಆಧುನಿಕ ಯುಗದಲ್ಲಿ ಲಭ್ಯವಾಗುತ್ತಿರುವ ಆಹಾರ ಪದಾರ್ಥಗಳಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದಿವೆ. ಬೆಳೆಗಳನ್ನು ಬೆಳೆಯುವ ರೀತಿ, ಗುಣಮಟ್ಟದಲ್ಲಿನ ವ್ಯತ್ಯಾಸ, ಅಡುಗೆ ಮಾಡುವ ರೀತಿ, ಪಾಕ ಪದ್ಧತಿಗಳು ಬದಲಾಗಿದ್ದು, ಅಸಂಖ್ಯಾತ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿದೆ. ಆದರೆ, ಸಾಕಷ್ಟು ಜನರು ಅಗತ್ಯವಿಲ್ಲದಿದ್ದರೂ ಹೆಚ್ಚೆಚ್ಚು ಆಹಾರ ಸೇವನೆ ಮಾಡುತ್ತಾರೆ. ಇದರಿಂದ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಅನಾರೋಗ್ಯಕ್ಕೀಡಾಗುವುದು, ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳನ್ನು ಅನುಭವಿಸುವಂತಾಗುತ್ತಿದೆ.

ಅನಾರೋಗ್ಯದಿಂದ ದೂರ ಇರಲು ಕರುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ. ಪ್ರಮುಖವಾಗಿ ರೆಡಿ ಫುಡ್ ಹಾಗೂ ಕುರುಕಲು ತಿಂಡಿ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವನೆ ಮಾಡುವವರು ಕರುಳಿನ ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚು ಗಮನ ಹರಿಸಬೇಕಾಗುತ್ತದೆ.

ಕರುಳಿನಿಂದ ಎದುರಾಗುವ ಅನಾರೋಗ್ಯದಿಂದ ದೂರ ಇರಲು ನಾವು ಮೊದಲು ಆಹಾರ ಪದ್ಧತಿಯನ್ನು ಅರ್ಥಮಾಡಿಕೊಳ್ಳಬೇಕು.

ಸಾಮಾನ್ಯವಾಗಿ ನಾವು ಸೇವನೆ ಮಾಡುವ ಆಹಾರವನ್ನು ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಮತ್ತು ಮೈಕ್ರೋನ್ಯೂಟ್ರಿಯೆಂಟ್ಸ್ ಎಂದು ಎರಡು ವಿಭಾಗಗಳಾಗಿ ವಿಂಗಡನೆ ಮಾಡಲಾಗುತ್ತದೆ.

ದೇಹಕ್ಕೆ ಶಕ್ತಿ ನೀಡಲು ನಮಗೆ ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಅಗತ್ಯವಿದೆ. ಅದೇ ರೀತಿ ದೇಹವು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಲು ಹಾಗೂ ಮ್ಯಾಕ್ರೋನ್ಯೂಟ್ರಿಯಂಟ್‌ಗಳನ್ನು ಜೀರ್ಣಿಸಿಕೊಳ್ಳಲು ಮೈಕ್ರೋನ್ಯೂಟ್ರಿಯೆಂಟ್ಸ್ ಬೇಕಾಗುತ್ತದೆ.

ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಮತ್ತು ಮೈಕ್ರೋನ್ಯೂಟ್ರಿಯೆಂಟ್ಸ್ ಎರಡೂ ದೇಹಕ್ಕೆ ಅತ್ಯಂತ ಪ್ರಮುಖವಾಗಿದೆ. ಆದರೆ, ಸೇವಿಸಬೇಕಾದ ಪ್ರಮಾಣವನ್ನು ನಾವು ಚೆನ್ನಾಗಿ ತಿಳಿದುಕೊಳ್ಳಬೇಕು.

ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳ ಅಗತ್ಯವಿದೆ. ಈ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳು ಕೊಬ್ಬು, ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿರುತ್ತವೆ. ಇವು ನಮ್ಮ ಆಹಾರದ ಬಹುಭಾಗದಲ್ಲಿ ಇದು ಇದ್ದೇ ಇರುತ್ತವೆ. ಪ್ರತಿ ಮ್ಯಾಕ್ರೋನ್ಯೂಟ್ರಿಯೆಂಟ್ ದೇಹಕ್ಕೆ ವಿಭಿನ್ನ ಅಗತ್ಯವನ್ನು ಪೂರೈಸುತ್ತದೆ.

ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಬಹುಬೇಗ ಶಕ್ತಿಯನ್ನು ನೀಡುತ್ತವೆ. ಇದು ನಾವು ಸೇವನೆ ಮಾಡುವ ಆಹಾರವನ್ನು ಶೀಘ್ರಗತಿಯಲ್ಲಿ ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ಬಳಿಕ ಇದರಿಂದ ಸ್ನಾಯುಗಳು ಕಾರ್ಯನಿರ್ವಹಿಸಲು ಆರಂಭಿಸುತ್ತವೆ. ಈ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳು ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿ, ಮೀನು, ದ್ವಿದಳ ಧಾನ್ಯಗಳು, ಮೊಟ್ಟೆ, ಅವಕಾಡೋಗಳಲ್ಲಿ ಗಳಲ್ಲಿ ಕಾಣಬಹುದಾಗಿದೆ.

ಮ್ಯಾಕ್ರೋನ್ಯೂಟ್ರಿಯೆಂಟ್‌ಗಳ ಅಮೈನೋ ಆ್ಯಸಿಡ್ ನಿಂದ ಕೂಡಿರುತ್ತದೆ. ಅಮೈನೋ ಆ್ಯಸಿಡ್ ಗಳ ಪ್ರಮಾಣವು ಅದರ ಪೌಷ್ಟಿಕಾಂಶದ ಮೌಲ್ಯವನ್ನು ನಿರ್ಧರಿಸುತ್ತದೆ.

ಮೈಕ್ರೋನ್ಯೂಟ್ರಿಯೆಂಟ್ಸ್ ಕಬ್ಬಿಣ, ಸತು, ಕ್ಯಾಲ್ಸಿಯಂ, ಅಯೋಡಿನ್, ವಿಟಮಿನ್ ಎ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಒಳಗೊಂಡಿದ್ದು, ದೇಹದ ಸರಿಯಾದ ಬೆಳವಣಿಗೆಗೆ ಅಗತ್ಯವಾದ ಕಿಣ್ವಗಳು, ಹಾರ್ಮೋನುಗಳು ಮತ್ತು ಇತರ ವಸ್ತುಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಮೈಕ್ರೋನ್ಯೂಟ್ರಿಯೆಂಟ್ಸ್ ತರಕಾರಿ, ಬೆರ್ರಿ ಹಣ್ಣುಗಳು, ಕೆಲವು ಮೀನುಗಳ ಸೇವನೆಯಲ್ಲಿ ಸಿಗುತ್ತದೆ.

ದೇಹ ಆರೋಗ್ಯಕರವಾಗಿರಲು ನಾವು ಸೇವನೆ ಮಾಡುವ ಆಹಾರದಲ್ಲಿ ಎಷ್ಟು ಪ್ರಮಾಣದ ಕೊಬ್ಬು, ಕಾರ್ಬೊಹೈಡ್ರೇಟ್ಸ್ ಗಳಿವೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಇವುಗಳನ್ನು ನಾವು ಮರೆತಿದ್ದೇ ಆದರೆ, ಅನಾರೋಗ್ಯವನ್ನು ಆಹ್ವಾನ ಮಾಡಿದಂತಾಗುತ್ತದೆ.

ಆಹಾರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು, ಈ ಸಂದರ್ಭದಲ್ಲಿ ಮೈಕ್ರೋ ಹಾಗೂ ಮ್ಯಾಕ್ರೋ ನ್ಯೂಟ್ರಿಯೆಂಟ್‌ಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ನಾವು ಸೇವನೆ ಮಾಡುವ ಆಹಾರದಲ್ಲಿ ಹೆಚ್ಚೆಚ್ಚು ಹಣ್ಣು ಹಾಗೂ ತರಕಾರಿಗಳಿರುವಂತೆ ನೋಡಿಕೊಳ್ಳಬೇಕು. ಆಹಾರದಲ್ಲಿ ಸಾಧ್ಯವಾದಷ್ಟು ಎಣ್ಣೆ ಹಾಗೂ ಸಕ್ಕರೆ ಅಂಶ ಕಡಿಮೆಯಿರುವಂತೆ ನೋಡಿಕೊಳ್ಳುವುದು ಉತ್ತಮ.

Stay up to date on all the latest ಜೀವನಶೈಲಿ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp