ಹಲವು ಔಷಧೀಯ ಗುಣಗಳಿರುವ, ಎಲ್ಲರ ಅಚ್ಚುಮೆಚ್ಚಿನ ತರಕಾರಿ ಮೂಲಂಗಿ!

ಮೂಲಂಗಿ ಸಕಲ ರೋಗಗಳಿಗೂ ದಿವ್ಯ ಔಷಧಿ ಎಂದೇ ಹೇಳಲಾಗುತ್ತಿದೆ. ಬಹುತೇಕ ಜನರು ಹಸಿ ಮೂಲಂಗಿಯನ್ನೇ ಸೇವನೆ ಮಾಡಲು ಇಷ್ಟ ಪಡುತ್ತಾರೆ.

Published: 12th February 2021 02:04 PM  |   Last Updated: 12th February 2021 03:16 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಮೂಲಂಗಿ ಸಕಲ ರೋಗಗಳಿಗೂ ದಿವ್ಯ ಔಷಧಿ ಎಂದೇ ಹೇಳಲಾಗುತ್ತಿದೆ. ಬಹುತೇಕ ಜನರು ಹಸಿ ಮೂಲಂಗಿಯನ್ನೇ ಸೇವನೆ ಮಾಡಲು ಇಷ್ಟ ಪಡುತ್ತಾರೆ.

ಮೂಲಂಗಿಯಲ್ಲಿ ಫೈಟೋ ಕೆಮಿಕಲ್ಸ್ ಮತ್ತು ಅಂಥೋಸಯಾನಿನ್ ಎಂದು ಕರೆಯಲ್ಪಡುವ ಅಂಶಗಳಿವೆ. ಮೂಲಂಗಿ ಮಧುಮೇಹ ಸೇರಿದಂತೆ ಕ್ಯಾನ್ಸರ್ ಮಾರಕ ರೋಗಗಳನ್ನೂ ದೂರವಿರಿಸುತ್ತದೆ. ಅಲ್ಲದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಶೀತ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರೆ, ಚಳಿಗಾಲದಲ್ಲಿ ಮೂಲಂಗಿ ಸೇವನೆ ಬಹಳ ಪ್ರಯೋಜನಗಳನ್ನು ನೀಡಲಿದೆ.

ಮೂಲಂಗಿಯಲ್ಲಿ ಅಧಿಕ ಮಟ್ಟದಲ್ಲಿ ಪೋಟ್ಯಾಶಿಯಂ ಅಂಶವಿರುತ್ತದೆ. ನಿಮ್ಮ ಡಯೆಟ್ ನಲ್ಲಿ ಮೂಲಂಗಿ ಬಳಸುವುದರಿಂದ ದೇಹದಲ್ಲಿ ಸೋಡಿಯಂ ಹಾಗೂ ಪೋಟ್ಯಾಶಿಯಂ ನಿಯಂತ್ರಣದಲ್ಲಿರುತ್ತದೆ. ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದರೆ ಮೂಲಂಗಿ ತಪ್ಪದೇ ಸೇವಿಸುವುದು ಉತ್ತಮವಾಗಿರುತ್ತದೆ.

ಮೂಲಂಗಿ ಬಳಸುವುದರಿಂದ ಜೀರ್ಣಕ್ರಿಯೆ ಹೆಚ್ಚಿನ ಸಹಕಾರಿಯಾಗಿದೆ. ಇದರಲ್ಲಿ ಅತ್ಯಧಿಕ ಫೈಬರ್ ಇರುವುದರಿಂದ ಸುಲಭವಾಗಿ ಪಚನ ಕ್ರಿಯೆ ಯಾಗುತ್ತದೆ.

ಮೂಲಂಗಿಯಲ್ಲಿ ಮೂತ್ರಪಿಂಡದ ಡಿಟಾಕ್ಸ್ ಗೆ ಕಾರಣವಾಗುವ ಮೂತ್ರವರ್ಧಕ ಗುಣಗಳಿವೆ. ಮೂಲಂಗಿ ನಿಮ್ಮ ಮೂತ್ರಪಿಂಡಕ್ಕೂ ಸಹ ಪ್ರಯೋಜನಕಾರಿಯಾಗಿದ್ದು, ಇದನ್ನು ಸೇವಿಸುವುದರಿಂದ ದೇಹದಲ್ಲಿ ವಿಷವನ್ನು ಸಂಗ್ರಹಿಸಲು ಸಾಧ್ಯಾವಾಗುವುದಿಲ್ಲ. ಮೂಲಂಗಿ ರಂಜಕ ಹಾಗೂ ಸತು ಅಂಶ ಹೊಂದಿರುವುದರಿಂದ ಆರೋಗ್ಯ ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಮೂಲಂಗಿ ತಿನ್ನುವುದರಿಂದ ಶುಷ್ಕತೆ ಮತ್ತು ಮೊಡವೆಗಳನ್ನು ಸಹ ಗುಣಪಡಿಸುತ್ತದೆ.

ಮೂಲಂಗಿಯ ಪ್ರಯೋಜನಗಳನ್ನು ಈ ಕೆಳಕಂಡಂತೆ ತಿಳಿಯಬಹುದು...

ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ...
ಮೂಲಂಗಿಯಲ್ಲಿ ರಾಸಾಯನಿಕ ಸಂಯುಕ್ತಗಳಿವೆ. ಅವು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುವುದು. ಗಣನೀಯವಾಗಿ ಮೂಲಂಗಿಯನ್ನು ಸೇವಿಸುವುದರಿಂದ ನೈಸರ್ಗಿಕ ಅಡಿಪೋನೆಕ್ಟಿನ್ ಅನ್ನು ಉತ್ಪಾದಿಸುವುದು. ಇದು ಇನ್ಸುಲಿನ್‍ಅನ್ನು ಪ್ರಚೋದಿಸುವುದರ ಮೂಲಕ ಮಧುಮೇಹದ ರಚನೆಯನ್ನು ನಿಯಂತ್ರಿಸತ್ತದೆ.

​ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ...
ಮೂಲಂಗಿಯಲ್ಲಿ ಆಂಟಿಆಕ್ಸಿಡೆಂಟ್‍ಗಳು, ಕ್ಯಾಲ್ಸಿಯಮ್, ಪೊಟ್ಯಾಸಿಯಮ್ ಸೇರಿದಂತೆ ಇನ್ನಿತರ ಖನಿಜಾಂಶಗಳು ಸಮೃದ್ಧವಾಗಿರುತ್ತವೆ. ಈ ಪೋಷಕಾಂಶಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಹೃದಯ ಸಂಬಂಧಿ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ಮೂಲಂಗಿ ರಕ್ತದ ಹರಿವನ್ನು ಸುಧಾರಿಸುವ ನೈಸರ್ಗಿಕ ನೈಟ್ರೇಟ್‍ಗಳ ಉತ್ತಮ ಮೂಲವಾಗಿದೆ.

​ಪಿತ್ತಜನಕಾಂಗದ ಕಾರ್ಯವನ್ನು ಹೆಚ್ಚಿಸುತ್ತದೆ...
ಮೂಲಂಗಿಯಲ್ಲಿರುವ ಪೋಷಕಾಂಶಗಳು ಯಕೃತ್ತನ್ನು ನಿರ್ವಿಷಗೊಳಿಸುವುದು. ಯಾವುದೇ ಬಗೆಯ ಹಾನಿಯಾದರೂ ಅದರ ವಿರುದ್ಧ ಹೋರಾಡಲು ಪ್ರಚೋದನೆ ನೀಡುವುದು. ಮೂಲಂಗಿಯಲ್ಲಿರುವ ಕೆಲವು ಸಂಯುಕ್ತಗಳು ಯಕೃತ್ ಮತ್ತು ಮೂತ್ರಪಿಂಡದಲ್ಲಿ ಇರುವ ವಿಷಕಾರಿ ಅಂಶವನ್ನು ಸುಲಭವಾಗಿ ನಿವಾರಿಸುತ್ತದೆ.

​ಕ್ಯಾನ್ಸರ್ ವಿರೋಧಿ ಗುಣವನ್ನು ಹೊಂದಿದೆ...
ಮೂಲಂಗಿಯಲ್ಲಿ ಸಾಕಷ್ಟು ಪ್ರಮಾಣದ ಗ್ಲುಕೋಸಿನೊಲೇಟ್‍ಗಳು ಮತ್ತು ಸಲ್ಫರ್ ಸಂಯುಕ್ತಗಳಿವೆ. ಇದು ಕ್ಯಾನ್ಸರ್ ಉಂಟುಮಾಡುವ ಆನುವಂಶಿಕ ರೂಪಾಂತರಗಳಿಂದ ಕೋಶಗಳನ್ನು ರಕ್ಷಿಸುವ ಸಾಮಥ್ರ್ಯವನ್ನು ಪಡೆದಿದೆ. ಇದು ಕ್ಯಾನ್ಸರ್ ಗಡ್ಡೆ ಬೆಳೆಯಲು ಪ್ರಚೋದಿಸುವ ಕೋಶಗಳ ಬೆಳವಣಿಗೆಯನ್ನು ತಡೆಯುವುದು. ಕ್ಯಾನ್ಸರ್‍ಗೆ ಕಾರಣವಾಗುವ ಅಂಶಗಳನ್ನು ದೇಹದಿಂದ ತೆಗೆದುಹಾಕಲು ಸಹಾಯ ಮಾಡುತ್ತದೆ.

​ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ...
ಮೂಲಂಗಿಯಲ್ಲಿ ನೈಸರ್ಗಿಕವಾಗಿಯೇ ಅಧಿಕ ನಾರಿನಂಶವಿದೆ. ಇದು ಜೀರ್ಣಕ್ರಿಯೆಯನ್ನು ಸುಲಭವಾಗಿಸುವುದು. ಜೊತೆಗೆ ದೇಹದಲ್ಲಿ ಇರುವ ತ್ಯಾಜ್ಯವನ್ನು ಕರುಳಿನ ಮೂಲಕ ಹೊರ ಹಾಕಲು ಸಹಾಯ ಮಾಡುವುದು. ಇದರ ಸೇವನೆಯು ಮಲಬದ್ಧತೆಯನ್ನು ನಿವಾರಿಸುವುದು. ಪಿತ್ತಕೋಶದಿಂದ ಪಿತ್ತರಸವನ್ನು ಸಮತೋಲನದಲ್ಲಿ ಸ್ರವಿಸುವಂತೆ ಮಾಡುವುದು. ಹಕೃತ್‍ನ ರೋಗ್ಯವನ್ನು ಕಾಪಾಡುವುದು.

​ಮೂತ್ರ ಪಿಂಡದ ಸಮಸ್ಯೆಗಳ ನಿವಾರಿಸುತ್ತದೆ...
ಮೂಲಂಗಿಯ ರಸವು ಉರಿಯೂತದ ಸಮಸ್ಯೆಯನ್ನು ನಿವಾರಿಸುವುದು. ಮೂತ್ರನಾಳದ ಕಾಯಿಲೆಗೆ ಸಂಬಂಧಿಸಿದಂತೆ ಸುಡುವ ಸಂವೇದನೆಗಳನ್ನು ನಿವಾರಿಸಲು ಸಹಾಯ ಮಾಡುವುದು. ಉರಿಯೂತಕ್ಕೆ ಸಂಬಂಧಿಸಿದ ಜೀವಾಣುಗಳನ್ನು ಹೊರಹಾಕಲು ಇದು ಪರಿಣಾಮಕಾರಿಯಾಗಿದೆ. ಮೂತ್ರ ಪಿಂಡ ಮತ್ತು ಮೂತ್ರಕೋಶದಲ್ಲಿ ಉಂಟಾಗುವ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

ಚರ್ಮ ಸಮಸ್ಯೆಗಳನ್ನು ದೂರಾಗಿಸುತ್ತದೆ...
ತಿನ್ನಲು ಖಾರವಾಗಿ ನಮ್ಮ ಬಾಯಿ ರುಚಿಗೆ ಅಷ್ಟೇನೂ ಇಷ್ಟವಾಗದ ಮೂಲಂಗಿ ಆರೋಗ್ಯದ ಪರಿಣಾಮಗಳನ್ನು ಒದಗಿಸುವಲ್ಲಿ ಮಾತ್ರ ಮುಂಚೂಣಿಯಲ್ಲಿರುತ್ತದೆ. ನಮ್ಮ ದೇಹದ ರಕ್ಷಣಾ ಕವಚ ಎನಿಸಿರುವ ನಮ್ಮ ಚರ್ಮವನ್ನು ಮಳೆಗಾಲದಲ್ಲಿ ನಾವು ಕಾಪಾಡಿಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ. ಏಕೆಂದರೆ ಈ ಸಮಯದಲ್ಲಿ ಚರ್ಮದ ಒಣಗುವಿಕೆ, ಚರ್ಮದ ಮೇಲೆ ಅಲ್ಲಲ್ಲಿ ಗುಳ್ಳೆಗಳು ಮತ್ತು ಕಲೆಗಳು ಉಂಟಾಗುವುದು ಸಾಮಾನ್ಯ. ನಮ್ಮ ಸುಂದರ ಕೋಮಲ ತ್ವಚೆಯಲ್ಲಿ ನೀರಿನ ಅಂಶ ಕಡಿಮೆಯಾಗುತ್ತಿದ್ದಂತೆ ಈ ಎಲ್ಲಾ ಸಮಸ್ಯೆಗಳು ಒಂದಾದ ಮೇಲೊಂದರಂತೆ ಕಂಡು ಬರಲು ಪ್ರಾರಂಭ ಆಗುತ್ತವೆ. ಆದರೆ ಮೂಲಂಗಿಗಳಲ್ಲಿ ಹೆಚ್ಚಿನ ನೀರಿನ ಅಂಶ ಕೂಡ ಇರುವುದರಿಂದ ಇದು ಚರ್ಮ ಸಮಸ್ಯೆಗಳನ್ನು ದೂರಾಗಿಸುತ್ತದೆ.

​ಶಿಲೀಂಧ್ರಗಳ ಸೋಂಕಗಳನ್ನು ತಡೆಯುತ್ತದೆ...
ಮೂಲಂಗಿ ನೈಸರ್ಗಿಕವಾಗಿ ಆಂಟಿಫಂಗಲ್ ವಿರೋಧಿ ಗುಣಲಕ್ಷಣವನ್ನು ಹೊಂದಿದೆ. ಮೂಲಂಗಿಯ ಆಹಾರವನ್ನು ಗಣನೀಯವಾಗಿ ಸೇವಿಸುವುದರಿಂದ ಸಾಮಾನ್ಯವಾದ ಶಿಲೀಂಧ್ರ ಸೋಂಕಿಗೆ ಒಳಗಾದ ಜೀವಕೋಶಗಳು ನಾಶವಾಗುತ್ತವೆ. ಆರೋಗ್ಯಕರ ಜೀವಕೋಶಗಳ ಬೆಳವಣಿಗೆಗೆ ಪ್ರಚೋದನೆ ನೀಡುತ್ತದೆ.

Stay up to date on all the latest ಜೀವನಶೈಲಿ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp