ಊಟಕ್ಕೆ, ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ಉಪ್ಪಿನಕಾಯಿ...!

ಅನ್ನ, ರಸ, ಬೇಳೆ ಸಾರು, ಮೊಸರನ್ನ, ಚಿತ್ರಾರನ್ನ, ಸೊಪ್ಪಿನ ಸಾಕು ಹೀಗೆ ಸಾಕಷ್ಟು ಅಡುಗೆಗಳಿಗೆ ನೆಂಚಿಕೊಳ್ಳಲು ಉಪ್ಪಿನಕಾಯಿ ಬಳಕೆ ಮಾಡುವುದು ಭಾರತದಲ್ಲಿ ರೂಢಿಯಾಗಿ ಹೋಗಿದೆ.

Published: 05th January 2021 01:32 PM  |   Last Updated: 11th February 2021 05:58 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ಅನ್ನ, ರಸ, ಬೇಳೆ ಸಾರು, ಮೊಸರನ್ನ, ಚಿತ್ರಾರನ್ನ, ಸೊಪ್ಪಿನ ಸಾಕು ಹೀಗೆ ಸಾಕಷ್ಟು ಅಡುಗೆಗಳಿಗೆ ನೆಂಚಿಕೊಳ್ಳಲು ಉಪ್ಪಿನಕಾಯಿ ಬಳಕೆ ಮಾಡುವುದು ಭಾರತದಲ್ಲಿ ರೂಢಿಯಾಗಿ ಹೋಗಿದೆ. ಮದುವೆ ಮನೆಯಲ್ಲಿ ಊಟಕ್ಕೆ ಹೋದರೆ ಎಳೆಯಲ್ಲಿ ಏನೇ ಪಂಚಮಪಮಾನ್ನ ಭಕ್ಷ್ಯಗಳು ತುಂಬಿದ್ದರೂ ಕೂಡ ಮೊದಲು ಕೈ ಹೋಗುವುದು ಉಪ್ಪಿಕಾಯಿಯ ಬಳಿಯೇ. ಊಟವನ್ನು ಉಪ್ಪಿನಕಾಯಿ ಇಲ್ಲದೆಯೂ ಮಾಡಬಹುದು. ಆದರೆ, ಊಟದ ರಸ, ರುಚಿ ಆಸ್ವಾದಿಸಬೇಕೆಂದರೆ ಉಪ್ಪಿನಕಾಯಿ ಬೇಕೇಬೇಕು. ಹೀಗೆ ನೆಂಚಿಕೊಳ್ಳಲು ಉಪಯೋಗಿಸುವ ಉಪ್ಪಿನಕಾಯಿಯಲ್ಲಿ ಸಾಕಷ್ಟು ಆರೋಗ್ಯಕರವಾದ ಪ್ರಯೋಜನಗಳಿವೆ. 

ನಾವು ಸೇವನೆ ಮಾಡುವ ಉಪ್ಪಿನಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಹೇರಳವಾಗಿರಲಿದ್ದು, ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತವೆ. 

ಕೆಲವರಿಗೆ ಹುಳಿ ಎಂದರೆ ಇಷ್ಟವಾಗುವುದಿಲ್ಲ. ಅಂತಹವರಿಗೆ ಉಪ್ಪಿನಕಾಯಿ ಎಂದರೆ, ಮುಖವನ್ನು ಕಿವುಚುವುದುಂಟು. ಇಷ್ಟ ಪಡುವವರಿಗೆ ಉಪ್ಪಿನಕಾಯಿ ಅಮೃತವಿದ್ದಂತೆ. 

ಉಪ್ಪಿನಕಾಯಿಯಲ್ಲಿ ಸಾಕಷ್ಟು ವಿಧಗಳುಂಟು ಮಾವಿನ ಕಾಯಿ, ನೆಲ್ಲಿಕಾಯಿ, ನಿಂಬೆಹಣ್ಣಿನ, ಎಳ್ಳಿಕಾಯಿ, ಟೊಮೆಟೋ ಹೀಗೆ ನಾನಾ ಬಗೆಯಲ್ಲಿ ಉಪ್ಪಿನಕಾಯಿ ಮಾಡುವುದುಂಟು. ಈ ನಾನಾ ಬಗೆಯ ಉಪ್ಪಿನಕಾಯಿಯಲ್ಲೂ ಒಂದೊಂದು ಪ್ರಯೋಜನಗಳಿವೆ. 

ಉಪ್ಪಿನಕಾಯಿ ತಯಾರಿಸುವ ಸಾಂಪ್ರದಾಯಿಕ ಅಭ್ಯಾಸ ಹಣ್ಣು, ತರಕಾರಿ ಮತ್ತು ಮಾಂಸಗಳನ್ನು ಫರ್ಮೆಂಟ್ ಮಾಡುವುದನ್ನು ಒಳಗೊಂಡಿದೆ, ಇದು ಉಪ್ಪಿನಕಾಯಿಯಲ್ಲಿ ಲ್ಯಾಕ್ಟಿಕ್ ಆಮ್ಲ, ಸಿಟ್ರಿಕ್ ಆಮ್ಲ ಮತ್ತು ಅಸೆಟಿಕ್ ಆಮ್ಲವನ್ನು ಉತ್ಪಾದಿಸುತ್ತದೆ. 

ಈ ಆಮ್ಲಗಳು ನಿಮ್ಮ ಕರುಳಿನ ಆರೋಗ್ಯಕರ ಸೂಕ್ಷ್ಮಾಣುಗಳನ್ನು ದೃಢಗೊಳಿಸಿ, ಆರೋಗ್ಯವಾಗಿಸುತ್ತದೆ. ಎಂದರೆ ಸಾಂಪ್ರದಾಯಿಕವಾಗಿ ಫರ್ಮೆಂಟ್ ಮಾಡಿದ ಉಪ್ಪಿನಕಾಯಿ ಸೇವಿಸುವುದರಿಂದ, ಜೀರ್ಣ ಉತ್ತಮವಾಗುತ್ತದೆ, ಚಯಾಪಚಯಕ್ಕೆ ನೆರವಾಗುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟ ಸಹ ನಿಯಂತ್ರಿಸುತ್ತದೆ.

ಮಸಾಲೆಗಳನ್ನು ಸೇರಿಸುವುದರಿಂದ ಉಪ್ಪಿನಕಾಯಿಯ ಸೂಕ್ಷಪೋಷಕಾಂಶಗಳು ಮತ್ತು ಆಂಟಿಆಕ್ಸಿಡೆಂಟ್ ಗಳು ಹೆಚ್ಚಾಗಿ, ಪೋಷಕಾಂಶ ಹೆಚ್ಚುತ್ತದೆ ಮತ್ತು ಅಲ್ಪ ಪ್ರಮಾಣದಲ್ಲಿ ಪರಿಣಾಮಕಾರಿಯಾಗುತ್ತದೆ. ಅಧ್ಯಯನಗಳು ಉಪ್ಪಿನಕಾಯಿ ಸೇವನೆ ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಪ್ರಚೋದಿಸುವುದಷ್ಟೇ ಅಲ್ಲದೇ ಮುಕ್ತ ಕಣಗಳ ವಿರುದ್ಧ ಹೋರಾಡುತ್ತದೆ ಎಂದು ತಿಳಿಸುತ್ತವೆ.

ಇವೆಲ್ಲವೂ ಪ್ರತಿದಿನ ಉಪ್ಪಿನಕಾಯಿ ಸೇವನೆ ನಮ್ಮ ಆಹಾರ ಅಭ್ಯಾಸಗಳು ಆರೋಗ್ಯಕರವಾಗಲು ನೆರವಗುತ್ತವೆ. ಉಪ್ಪಿನಕಾಯಿಯನ್ನು ನಿಮ್ಮದೇ ರೀತಿಯಲ್ಲಿ ಸೇವಿಸುವುದು ಉಪ್ಪಿನಕಾಯಿಯನ್ನು ಸೇವಿಸುವುದರಿಂದ ಅನೇಕ ಪಾರ್ಶ್ವ ಪರಿಣಾಮಗಳಿದ್ದರೂ, ಆರೋಗ್ಯಕ್ಕೆ ಪ್ರಯೋಜನಕಾರಿಯೆಂದು ಅಧ್ಯಯನಗಳು ತಿಳಿಸುತ್ತವೆ.

ಆಹಾರ ಸೇವನೆಯ ಪ್ರಮಾಣ ಹೆಚ್ಚಿಸುವುದಷ್ಟೇ ಅಲ್ಲದೇ ಆಹಾರ ರುಚಿಕರವಾಗಿದ್ದರೂ, ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ ಮತ್ತು ಕೊಬ್ಬಿನ ಅನಾರೋಗ್ಯಕರ ಸಂಯೋಜನೆಯ ಆಹಾರ ಸೇವಿಸುವ ಬಯಕೆಯನ್ನು ಹೆಚ್ಚಿಸುತ್ತದೆ. ಈ ಹೆಚ್ಚಿನ ಪ್ರಮಾಣದ ಆಹಾರ ಸೇವನೆ ಅಧಿಕ ರಕ್ತದೊತ್ತಡ ಅಪಾಯ ಹೆಚ್ಚಿಸುತ್ತದೆ ಏಕೆಂದರೆ ಉಪ್ಪಿನಕಾಯಿ ತಯಾರಿಸುವ ಪ್ರಕ್ರಿಯೆಯಿಂದ ಅದರಲ್ಲಿ ಸೋಡಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

ಇತ್ತೀಚಿನ ಆಧುನಿಕ ಉಪ್ಪಿನಕಾಯಿ ಕಥೆಯಲ್ಲಿ ಅನಾರೋಗ್ಯಕರ ಪಾತ್ರವಿದ್ದು, ಇದರ ಸೇವನೆ ಮಿತಿಗೊಳಿಸುವುದರಿಂದ ಆರೋಗ್ಯಕ್ಕೆ ಉತ್ತಮವಾಗಿದೆ, ಏಕೆಂದರೆ ಇದು ಅಧಿಕರಕ್ತದೊತ್ತಡ ಮತ್ತು ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. 

ಅಂಗಡಿಗಳಲ್ಲಿ ದೊರೆಯುವ ಉಪ್ಪಿನಕಾಯಿಗಳು ಹೆಚ್ಚು ಮಸಾಲೆ, ಎಣ್ಣೆ ಹಾಗೂ ಕೃತಕ ಪ್ರಿಸರ್ವೇಟೀವ್ ಗಳನ್ನು ಹೊಂದಿರುವುದರಿಂದ, ಉಪ್ಪಿನಕಾಯಿ ಸೇವನೆ ಉದರಕರುಳಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ರೋಗನಿರೋಧಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.

ಆದ್ದರಿಂದ, ನೀವು ಉಪ್ಪಿನಕಾಯಿ ಸೇವಿಸಲು ಬಯಸಿದರೆ, ಮನೆಯಲ್ಲೇ ತಯಾರಿಸಿದ, ಪ್ರಾಕೃತಿಕ ಮತ್ತು ಉಪ್ಪು ಹಾಗೂ ಮಸಾಲೆಯ ಸಂತುಲಿತ ಪ್ರಮಾಣ ಹೊಂದಿರುವ ಉಪ್ಪಿನಕಾಯಿಗೆ ಆದ್ಯತೆ ನೀಡಿ. ಇಲ್ಲದಿದ್ದಲ್ಲಿ, ಸೇವನೆಯನ್ನು ಮಿತಿಗೊಳಿಸಿ, ಇದು ನಿಮ್ಮ ಆರೋಗ್ಯ ನಿರ್ವಹಿಸಲು ನೆರವಾಗುತ್ತದೆ.

Stay up to date on all the latest ಜೀವನಶೈಲಿ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp