ಕೊರೋನೋತ್ತರ ಸವಾಲುಗಳು: ಕೆಲಸ, ಮಾನಸಿಕ ಸ್ಥಿತಿಗತಿ, ಉತ್ಪಾದಕತೆ ಮೇಲೆ ಪರಿಣಾಮ!

ಕೋವಿಡ್ ನಿಂದ ಗುಣಮುಖರಾದವರು ನಿಮ್ಹಾನ್ಸ್ ನ ಸಹಾಯವಾಣಿ (080-46110007)ಗೆ ಕರೆ ಮಾಡುತ್ತಾರೆ. ತಿಂಗಳಿಗೆ ಕನಿಷ್ಠ 500 ಕರೆಗಳು ಬರುತ್ತಿವೆ, ಜನರು ಹಲವು ಸಮಸ್ಯೆಗಳನ್ನು ಹೇಳಿಕೊಂಡು ಕರೆ ಮಾಡುತ್ತಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ ನಿಂದ ಗುಣಮುಖರಾದವರು ನಿಮ್ಹಾನ್ಸ್ ನ ಸಹಾಯವಾಣಿ (080-46110007)ಗೆ ಕರೆ ಮಾಡುತ್ತಾರೆ. ತಿಂಗಳಿಗೆ ಕನಿಷ್ಠ 500 ಕರೆಗಳು ಬರುತ್ತಿವೆ, ಜನರು ಹಲವು ಸಮಸ್ಯೆಗಳನ್ನು ಹೇಳಿಕೊಂಡು ಕರೆ ಮಾಡುತ್ತಾರೆ.

ಅವುಗಳಲ್ಲಿ ಕೋವಿಡ್ ನಿಂದ ಗುಣಮುಖರಾದವರು ನಿದ್ರಾಹೀನತೆ, ಆತಂಕ, ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್(ಒಸಿಡಿ) ಪ್ಯಾನಿಕ್ ಅಟ್ಯಾಕ್, ಆತ್ಮಹತ್ಯಾ ಆಲೋಚನೆಗಳು, ಕೆಲಸದಲ್ಲಿ ಆಸಕ್ತಿ ಇಲ್ಲ, ಕಿರಿಕಿರಿ, ಏಕಾಗ್ರತೆ ಕೊರತೆ, ಕೋಪ ಬರುವುದು, ನೆನಪು ಶಕ್ತಿ ಕುಂದುವಿಕೆ ಹೀಗೆ ಹಲವು ಸಮಸ್ಯೆಗಳಿಂದ ಅನೇಕ ಮಂದಿ ಬಳಲುತ್ತಿದ್ದಾರೆ.

ಇನ್ನು ಕೋವಿಡ್-19 ಸೋಂಕಿನ ಸಮಯದಲ್ಲಿ ಒತ್ತಡ, ಪ್ರತ್ಯೇಕವಾಗಿ ಉಳಿದುಕೊಳ್ಳುವ ಸಮಸ್ಯೆ, ಆಸ್ಪತ್ರೆಗೆ ದಾಖಲು, ಔಷಧಿಗಳ ಲಭ್ಯತೆ, ಆಮ್ಲಜನಕ ಮತ್ತು ಒಬ್ಬರ ಉಳಿವಿಗಾಗಿ ಹೋರಾಟ ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. “ಕೆಲವು ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಸಹ ತ್ಯಜಿಸಿದ್ದಾರೆ ಕೋವಿಡ್ ಸಮಯದಲ್ಲಿ ಉಂಟಾದ ಅವರ ಭಾವನಾತ್ಮಕ ಯಾತನೆಯನ್ನು ನಿಭಾಯಿಸಲು ಸಮಯ ಬೇಕಾಗುತ್ತಿದೆ. ಕೆಲಸಕ್ಕೆ ಸಂಬಂಧಿಸಿದ ಒತ್ತಡಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ಕೆಲಸ ತೊರೆದಿದ್ದಾರೆ. ಕೋವಿಡ್ ಸೋಂಕಿನಿಂದಾಗಿ ಕುಟುಂಬ ಸದಸ್ಯರನ್ನು ಆರೈಕೆ ಮಾಡಲು ಹಲವರು ಕೆಲಸ ತೊರೆದಿರುವ ಬಗ್ಗೆ ಕೂಡ ವರದಿಯಾಗಿವೆ ಎನ್ನುತ್ತಾರೆ ಮುಕ್ತ ಫೌಂಡೇಶನ್ ನ ಸ್ಥಾಪಕ ನಿರ್ದೇಶಕಿ ಅಶ್ವಿನಿ ಎನ್ ವಿ.

ಈ ತಲೆಮಾರಿನ ಹಿಂದೆಂದೂ ತಿಳಿದಿಲ್ಲದಂತಹ ದೀರ್ಘಕಾಲದ ಒತ್ತಡವನ್ನು ಜನರು ಅನುಭವಿಸುತ್ತಿದ್ದಾರೆ. ಹಿಂದೆಂದೂ ಕಂಡರಿಯದ ಆರೋಗ್ಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಸ್ಪಂದನ ಹೆಲ್ತ್ ಕೇರ್ ನಿರ್ದೇಶಕ ಮತ್ತು ಸ್ಥಾಪಕ ಡಾ.ಮಹೇಶ್ ಗೌಡ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com