ಔಷಧೀಯ ಅಂಶಗಳ ಆಗರ ಪುದೀನ ಸೊಪ್ಪು: ಇದರ ಅಸಂಖ್ಯಾತ ಆರೋಗ್ಯ ಪ್ರಯೋಜನಗಳು ಗೊತ್ತೇ?

ಪುದೀನ ಸೊಪ್ಪು, ಗೃಹಿಣಿಯರು ಅಡುಗೆ ಮನೆಯಲ್ಲಿ ದಿನನಿತ್ಯ ಬಳಕೆ ಮಾಡುವ ಪದಾರ್ಥವಾಗಿದ್ದು ಇದು ಹಲವು ಔಷಧಿಗಳ ಆಗರ. ಇದು ಪಾಲಿಫಿನಾಲ್‌ಗಳನ್ನು ಹೊಂದಿದ್ದು, ರೋಗ ನಿರೋಧಕಗಳಿಂದ ತುಂಬಿದ ಸೂಕ್ಷ್ಮ ಪೋಷಕಾಂಶಗಳಾಗಿವೆ.

Published: 03rd March 2021 01:50 PM  |   Last Updated: 03rd March 2021 02:07 PM   |  A+A-


Mint

ಪುದೀನಾ

Posted By : Sumana Upadhyaya
Source : The New Indian Express

ಪುದೀನಾ, ಗೃಹಿಣಿಯರು ಅಡುಗೆ ಮನೆಯಲ್ಲಿ ದಿನನಿತ್ಯ ಬಳಕೆ ಮಾಡುವ ಪದಾರ್ಥವಾಗಿದ್ದು ಇದು ಹಲವು ಔಷಧಿಗಳ ಆಗರ. ಇದು ಪಾಲಿಫಿನಾಲ್‌ಗಳನ್ನು ಹೊಂದಿದ್ದು, ರೋಗ ನಿರೋಧಕಗಳಿಂದ ತುಂಬಿದ ಸೂಕ್ಷ್ಮ ಪೋಷಕಾಂಶಗಳಾಗಿವೆ.

ಪುದೀನವನ್ನು ಚಹಾಗೆ ಹಾಕಿ ಕುಡಿಯುವುದು, ಚಟ್ನಿ ಮಾಡುವುದು, ಸಲಾಡ್, ಹಣ್ಣು, ಮೊಸರಿನೊಂದಿಗೆ ಸೇರಿಸಿ ತಿನ್ನುವ ಅಭ್ಯಾಸವಿರುತ್ತದೆ. ಪುದೀನವನ್ನು ಬಳಸಿ ಹಲವು ರೀತಿಯಲ್ಲಿ ಚಟ್ನಿ ಮಾಡುತ್ತಾರೆ. ಪುದೀನ ಎಲೆಗಳನ್ನು ಹಲವು ಪದಾರ್ಥಗಳಲ್ಲಿ ಬಳಸುತ್ತಾರೆ.

ಹಾಗಾದರೆ ಈ ಪುದೀನದಿಂದ ಸಿಗುವ  ಆರೋಗ್ಯ ಲಾಭಗಳೇನು ನೋಡೋಣ ಬನ್ನಿ: 
ಜೀರ್ಣಕಾರಿ: ಮೆಂಥಾಲ್ ಮತ್ತು ಫೈಟೊನ್ಯೂಟ್ರಿಯೆಂಟ್‌ಗಳು ಪುದೀನದಲ್ಲಿ ಸಮೃದ್ಧವಾಗಿರುವುದರಿಂದ ಇದು ಜೀರ್ಣಕಾರಿ ಕಿಣ್ವಗಳಿಗೆ ಆಹಾರವನ್ನು ಸಂಸ್ಕರಿಸಲು ಸಹಾಯ ಮಾಡುತ್ತದೆ. ಪುದೀನದಲ್ಲಿನ ಸಾರಭೂತ ತೈಲಗಳು ಬಲವಾದ ಆಂಟಿಬ್ಯಾಕ್ಟೀರಿಯಲ್ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದ್ದು ಅದು ಹೊಟ್ಟೆಯ ಸೆಳೆತವನ್ನು ಶಮನಗೊಳಿಸುತ್ತದೆ, ಆಮ್ಲೀಯತೆ ಮತ್ತು ವಾಯುವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಸ್ತಮಾಕ್ಕೆ ಉತ್ತಮ: ಪುದೀನ ನಿಯಮಿತ ಸೇವನೆಯು ಹೃದಯದ ಆರೋಗ್ಯಕ್ಕೆ ಉತ್ತಮ. ಇದರಲ್ಲಿರುವ ಮೆಥನಾಲ್ ರಕ್ತ ಹೆಪ್ಪುಗಟ್ಟುವ ಸಮಸ್ಯೆಗೆ ಕೆಲಸ ಮಾಡುತ್ತದೆ. ಶ್ವಾಸಕೋಶದಲ್ಲಿ ಸಂಗ್ರಹಿಸಿದ ಲೋಳೆಯ ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಇದು ಉತ್ತಮವಾಗಿ ಉಸಿರಾಡಲು ನಿಮಗೆ ಅನುವು ಮಾಡಿಕೊಡಲು ಮೂಗಿನಲ್ಲಿ ಪೊರೆಗಳನ್ನು ಕುಗ್ಗಿಸುತ್ತದೆ. ಹಾಗೆಂದು ಪುದೀನ ರಸವನ್ನು ಅತಿಯಾಗಿ ಮೂಗಿನಿಂದ ಸೇವಿಸಬೇಡಿ.

ತಲೆನೋವು ಶಮನ: ಪುದೀನದಲ್ಲಿರುವ ಮೆಂಥಾಲ್ ಸ್ನಾಯುಗಳನ್ನು ಸಡಿಲಗೊಳಿಸಲು ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಹಣೆಯ ಮೇಲೆ ಪುದೀನ ರಸವನ್ನು ಹಚ್ಚುವುದರಿಂದ ತಲೆನೋವಿನಿಂದ ಪರಿಹಾರ ಸಿಗುತ್ತದೆ. ಪುದೀನ ಮುಲಾಮುಗಳು ಮತ್ತು ತೈಲಗಳು ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡುವುದು: ಪರಿಮಳವನ್ನು ಅರೋಮಾಥೆರಪಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಪುದೀನ ಅಪೊಪ್ಟೊಜೆನಿಕ್ ಚಟುವಟಿಕೆಯು ರಕ್ತದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಅದು ಒತ್ತಡವನ್ನು ಕಡಿಮೆ ಮಾಡಲು ದೇಹದ ನೈಸರ್ಗಿಕ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಪುದೀನ ಸಾರಭೂತ ತೈಲವನ್ನು ಉಸಿರಾಡುವುದರಿಂದ ಸಿರೊಟೋನಿನ್ ಬಿಡುಗಡೆಯಾಗುತ್ತದೆ, ಇದು ಒತ್ತಡವನ್ನು ಸರಾಗಗೊಳಿಸುವ ಹೆಸರುವಾಸಿಯಾಗಿದೆ. ಚರ್ಮವನ್ನು ಆರೋಗ್ಯಕರವಾಗಿಸುತ್ತದೆ. ಪುದೀನವು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಅದು ಮೊಡವೆ ಮತ್ತು ಗುಳ್ಳೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದರ ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಸ್ಯಾಲಿಸಿಲಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ಮೊಡವೆಗಳನ್ನು ತಡೆಯುತ್ತದೆ. ಇದು ಪರಿಣಾಮಕಾರಿ ಚರ್ಮದ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ.

ಬಾಯಿಯ ಸ್ವಚ್ಛತೆ: ಪುದೀನ ಎಲೆಯನ್ನು ಜಗಿಯುವುದರಿಂದ ಬಾಯಿ ಸ್ವಚ್ಛವಾಗುವುದಲ್ಲದೆ ವಾಸನೆ ಬರುವುದನ್ನು ಕಡಿಮೆ ಮಾಡಬಹುದು, ಹಲ್ಲಿಗೆ ಸಹ ಪ್ರಯೋಜನಕಾರಿ. ಪೆಪ್ಪರ್ ಮಿಂಟ್ ತೈಲದ ಮೂಲಕ ಬಾಯಿ ತೊಳೆದು ಬ್ಯಾಕ್ಟೀರಿಯಾವನ್ನು ಕೊಲ್ಲಬಹುದು.

ನೆನಪು ಶಕ್ತಿಗೆ ಉತ್ತಮ: ಪುದೀನವು ನೆನಪುಶಕ್ತಿಯನ್ನು ಹೆಚ್ಚಿಸುತ್ತದೆ. ಮೆದುಳಿನ ಅರಿವಿನ ಕಾರ್ಯಕ್ಕೆ ಸಹಾಯ ಮಾಡುತ್ತದೆ. ಇದು ಜಾಗರೂಕತೆಯನ್ನು ಸುಧಾರಿಸುತ್ತದೆ. ನಮ್ಮ ದಿನಚರಿಯನ್ನು ಪುದೀನ ಎಲೆ ತಿನ್ನುವ ಮೂಲಕ ಚುರುಕಾಗಿ ಆರಂಭಿಸಬಹುದು. 

Stay up to date on all the latest ಜೀವನಶೈಲಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp